ಸ್ವಿಫ್ಟ್‌ನೊಂದಿಗೆ ಫ್ಲಾಪಿ ಬರ್ಡ್ ಕ್ಲೋನ್ ಗೇಮಿಂಗ್ ಆಪಲ್ ಚಮತ್ಕಾರ

Written By:

ಆಪಲ್ ಡೆವಲಪರ್‌ಗಳು ಕಂಪೆನಿಯ ಹೊಸ ಪ್ರೊಗ್ರಾಮಿಂಗ್ ಭಾಷೆ ಸ್ವಿಫ್ಟ್ ಅನ್ನು ಆಪಲ್ ಡಬ್ಲ್ಯೂಡಬ್ಲ್ಯೂಡಿಸಿ ಯಲ್ಲಿ ಘೋಷಿಸಿ ನಮನ್ನು ಬೆರಗುಗೊಳಿಸಿದ್ದು ಇನ್ನು ಹೊಸತಾಗಿ ಇರುವಂತೆಯೇ, ಫ್ಲಾಪಿ ಬರ್ಡ್ ಕ್ಲೋನ್ ಗೇಮ್ ಅನ್ನು ಅದರೊಂದಿಗೆ ರಚಿಸಲಾಗಿದ್ದು ಇನ್ನೊಮ್ಮೆ ನಮ್ಮನ್ನು ಚಕಿತಗೊಳಿಸುವ ಕಾಯಕಕ್ಕೆ ಕಂಪೆನಿ ಮುಂದಾಗಿದೆ.

ಆಪಲ್ ಡೆವಲಪರ್ ನೇಟ್ ಮುರ್ರೆ ಫ್ಲಾಪಿ ಸ್ವಿಫ್ಟ್ ಅನ್ನು ರಚಿಸಿದ್ದು ಇದರಿಂದ ಪ್ರೊಗ್ರಾಮಿಂಗ್ ಭಾಷೆಯನ್ನು ರಚಿಸುವುದು ಎಷ್ಟು ಸುಲಭವೆಂಬುದನ್ನು ತೋರಿಸಿದ್ದಾರೆ. ಇಷ್ಟಲ್ಲದೆ ಐಒಎಸ್ 8 ನೊಂದಿಗೆ ಸಂಯೋಜಿಸಲ್ಪಡುವ ಗಿಟ್ ಹಬ್ ಎಂಬ ಗೇಮ್‌ಗೆ ಒಂದು ಫೋರಮ್ ಸೈಟ್ ಅನ್ನು ಸಾಫ್ಟ್‌ವೇರ್ ಡೆವಲಪರ್‌ಗಳಿಗಾಗಿ ಅವರು ನವೀಕರಿಸಿದ್ದಾರೆ.

ಪ್ರೊಗ್ರಾಮಿಂಗ್ ಭಾಷೆ ಸ್ವಿಫ್ಟ್‌ನಲ್ಲಿ ಫ್ಲಾಪಿ ಬರ್ಡ್‌ ಕ್ಲೋನ್

ತನ್ನ ವಿಶ್ವ ಡೆವಲಪರ್ ಕಾನ್ಫರೆನ್ಸ್‌ನಲ್ಲಿ ಕಂಪೆನಿ ಈಗಾಗಲೇ ಸ್ವಿಫ್ಟ್ ಅನ್ನು ಘೋಷಿಸಿದ್ದು, ಅದರ ಆಗಮನ ಪ್ರತಿಯೊಬ್ಬರಿಗೂ ಪುಳಕವನ್ನುಂಟು ಮಾಡಿದೆ. ಹೆಚ್ಚು ಮಾಡರ್ನ್ ಮತ್ತು ಕ್ರಿಯಾತ್ಮಕವಾಗಿ ಇದನ್ನು ವಿನ್ಯಾಸಗೊಳಿಸಲಾಗಿದ್ದು, ಐಓಎಸ್ ಮತ್ತು ಓಎಸ್ ಎಕ್ಸ್ ಅನ್ನು ಅಭಿವೃದ್ಧಿ ಮಾಡುವುದಕ್ಕಾಗಿ ಆಪಲ್‌ನ ಪ್ರಮಾಣಿತ ಭಾಷೆಯಾಗಿರುವ ಆಬ್ಜೆಕ್ಟೀವ್ - ಸಿ ಗೆ ಪರ್ಯಾಯವಾಗಿ ಇದನ್ನು ಆಪರೇಟ್ ಮಾಡುವಂತೆ ಸ್ವಿಫ್ಟ್ ಅನ್ನು ರಚಿಸಲಾಗಿದೆ. ಜನಪ್ರಿಯ ಕೋಕಾ ಮತ್ತು ಕೋಕಾ ಟಚ್ ಫ್ರೇಮ್‌ವರ್ಕ್‌ಗಳಿಗೆ ಸ್ವಿಫ್ಟ್ ಸ್ಥಳೀಯವಾಗಿದೆ.

ಮೂಲ ಫ್ಲಾಪಿ ಬರ್ಡ್ ರಚನೆಕಾರರು ಹೇಳುವಂತೆ ಆಪ್ ಸ್ಟೋರ್ ಮತ್ತು ಗೂಗಲ್ ಪ್ಲೇಗೆ ಈ ಗೇಮಿಂಗ್ ಅನ್ನು ಹಿಂದಕ್ಕೆ ತರಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಡಾಂಗ್ ನ್ಯೂ ಜನ್ ಈ ಎರಡೂ ಸ್ಥಳದಿಂದ ಈ ಹಿಂದೆ ಫ್ಲಾಪಿ ಬರ್ಡ್ ಅನ್ನು ತೆಗೆದುಹಾಕಿತ್ತು.

ಸ್ವಿಫ್ಟ್‌ನೊಂದಿಗೆ ಕಾರ್ಯನಿರ್ಹಿಸುವುದು ಹೇಗೆಂಬುದನ್ನು ತಿಳಿಸಿಕೊಡಲು ಆಪಲ್ ಉಚಿತ ಐಬುಕ್ ಅನ್ನು ಹೊರತರಲಿದ್ದು, ನೀವನ್ನು ಇಲ್ಲಿ ನೋಡಬಹುದು.

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot