ಈ ಅಪ್ಲಿಕೇಶನ್‌ಗಳು ನಿಮ್ಮ ಮೊಬೈಲ್‌ನಲ್ಲಿದ್ದರೆ ತಕ್ಷಣವೇ ಡಿಲೀಟ್‌ ಮಾಡಿ!

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಪ್ಲೇ ಸ್ಟೋರ್‌ನಲ್ಲಿರುವ ಮಾಲ್‌ವೇರ್‌ ಅಪ್ಲಿಕೇಶನ್‌ಗಳ ವಿರುದ್ದ ಕ್ರಮತೆಗೆದುಕೊಳ್ಳುತ್ತಲೇ ಬಂದಿದೆ. ಮಾಲ್‌ವೇರ್‌ ಒಳಗೊಂಡಿರುವ ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ ಡಿಲೀಟ್‌ ಮಾಡುತ್ತಾ ಬಂದಿದೆ. ಸದ್ಯ ಇದೀಗ ಮತ್ತೊಮ್ಮೆ ತನ್ನ ಪ್ಲೇ ಸ್ಟೋರ್‌ನಲ್ಲಿರುವ ಮಾಲ್‌ವೇರ್‌ ಸೊಂಕಿತ ಅಪ್ಲಿಕೇಶನ್‌ಗಳನ್ನು ಡಿಲೀಟ್‌ ಮಾಡಿದೆ. ಅದರಲ್ಲೂ ಸೈಬರ್ ಸೆಕ್ಯುರಿಟಿ ಟೆಕ್ನಾಲಜಿ ಕಂಪನಿ ಬಿಟ್‌ಡೆಫೆಂಡರ್ ಪ್ರಕಾರ, 35 ಜನಪ್ರಿಯ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳಲ್ಲಿ ಅಪಾಯಕಾರಿ ಮಾಲ್‌ವೇರ್ ಕಂಡುಬಂದಿದೆ.

ಗೂಗಲ್‌

ಹೌದು, ಗೂಗಲ್‌ ತನ್ನ ಪ್ಲೇ ಸ್ಟೋರ್‌ನಲ್ಲಿ ಮಾಲ್‌ವೇರ್‌ ಸೊಂಕನ್ನು ಒಳಗೊಂಡಿದ್ದ 35 ಅಪ್ಲಿಕೇಶನ್‌ಗಳನ್ನು ಪತ್ತೆ ಹಚ್ಚಿದೆ. ಒಂದು ವೇಳೆ ಈ ಅಪ್ಲಿಕೇಶನ್‌ಗಳನ್ನು ನೀವು ಹೊಂದಿದ್ದರೆ ಕೂಡಲೇ ಡಿಲೀಟ್‌ ಮಾಡುವುದು ಸೂಕ್ತವಾಗಿದೆ. ಏಕೆಂದರೆ ಈ ಅಪ್ಲಿಕೇಶನ್‌ಗಳನ್ನು ಬಳಕೆದಾರರು ಒಮ್ಮೆ ಇನ್‌ಸ್ಟಾಲ್‌ ಮಾಡಿದರೆ ಅದರ ಹೆಸರು ಬದಲಾಗುತ್ತದೆ. ಅಲ್ಲದೆ ಈ ಅಪ್ಲಿಕೇಶನ್ ಐಕಾನ್ ಡಿವೈಸ್‌ನಲ್ಲಿ ಮರೆಯಾಗಲಿದೆ. ಇದರಿಂದ ಬಳಕೆದಾರರ ಮಾಹಿತಿ ಕದಿಯಲಿವೆ ಎಂದು ಹೇಳಲಾಗಿದೆ. ಹಾಗಾದ್ರೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಪತ್ತೆ ಆಗಿರುವ ಮಾಲ್‌ವೇರ್‌ ಸೊಂಕಿತ 35 ಅಪ್ಲಿಕೇಶನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಸ್ಟೋರ್‌ನಲ್ಲಿ

ಗೂಗಲ್‌ ತನ್ನ ಪ್ಲೇ ಸ್ಟೋರ್‌ನಲ್ಲಿ ಬಳಕೆದಾರರಿಗೆ ಸುರಕ್ಷತೆಯನ್ನು ನೀಡುವುದಕ್ಕೆ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಲೇ ಬಂದಿದೆ. ಇದೇ ಕಾರಣಕ್ಕೆ ಕಾಲಕಾಲಕ್ಕೆ ಫೇಕ್‌ ಆಪ್‌ಗಳನ್ನು ಡಿಲೀಟ್‌ ಮಾಡುತ್ತಾ ಬಂದಿದೆ. ಅಲ್ಲದೆ ಪ್ಲೇ ಸ್ಟೋರ್‌ನಿಂದ ಅವುಗಳಿಗೆ ಗೇಟ್‌ಪಾಸ್‌ ನೀಡುತ್ತಾ ಬಂದಿದೆ. ಈಗಲೂ ಕೂಡ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮಾಲ್‌ವೇರ್‌ ಸೊಂಕಿತ 35 ಅಪ್ಲಿಕೇಶನ್‌ಗಳನ್ನು ಪತ್ತೆ ಹಚ್ಚಿದೆ. ಈ ಅಪ್ಲಿಕೇಶನ್‌ಗಳು ನಿಮ್ಮ ಡಿವೈಸ್‌ನಲ್ಲಿದ್ದರೆ ಕೂಡಲೇ ಡಿಲೀಟ್‌ ಮಾಡಿರಿ ಎಂದು ಹೇಳಿದೆ.

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಸೈಬರ್‌ ಸೆಕ್ಯುರಿಟಿ ಸಂಸ್ಥೆಯು ಕಂಡುಹಿಡಿದ ಮಾಲ್‌ವೇರ್‌ ಸೊಂಕಿತ ಅಪ್ಲಿಕೇಶನ್‌ಗಳ ಲಿಸ್ಟ್‌ ಇಲ್ಲಿದೆ.

ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಸೈಬರ್‌ ಸೆಕ್ಯುರಿಟಿ ಸಂಸ್ಥೆಯು ಕಂಡುಹಿಡಿದ ಮಾಲ್‌ವೇರ್‌ ಸೊಂಕಿತ ಅಪ್ಲಿಕೇಶನ್‌ಗಳ ಲಿಸ್ಟ್‌ ಇಲ್ಲಿದೆ.

ವಾಲ್ಸ್‌ ಲೈಟ್‌- ವಾಲ್‌ಪೇಪರ್ಸ್‌ ಪ್ಯಾಕ್
ಬಿಗ್‌ ಎಮೋಜಿ - ಕೀಬೋರ್ಡ್
ಗ್ರಾಡ್ ವಾಲ್‌ಪೇಪಸ್‌ - 3D ಬ್ಯಾಕ್‌ಡ್ರಾಪ್‌ಗಳು
ಎಂಜಿನ್ ವಾಲ್‌ಪೇಪರ್‌ಗಳು - ಲೈವ್ ಮತ್ತು 3D
ಸ್ಟಾಕ್ ವಾಲ್‌ಪೇಪರ್ಸ್‌ - 4K & HD
ಎಫೆಕ್ಟ್‌ಮೇನಿಯಾ - ಫೋಟೋ ಎಡಿಟರ್‌
ಆರ್ಟ್ ಫಿಲ್ಟರ್ - ಡೀಪ್ ಫೋಟೋಎಫೆಕ್ಟ್
ಫಾಸ್ಟ್‌ ಎಮೋಜಿ ಕೀಬೋರ್ಡ್
ಕ್ರಿಯೆಟ್‌ ಸ್ಟಿಕ್ಕರ್‌ ಫಾರ್‌ ವಾಟ್ಸಾಪ್‌
ಮ್ಯಾಥ್‌ ಸಾಲ್ವರ್‌ - ಕ್ಯಾಮರಾ ಹೆಲ್ಪರ್‌

ಎಮೋಜಿ

ಫೋಟೋಪಿಕ್ಸ್ ಎಫೆಕ್ಟ್ಸ್ - ಆರ್ಟ್ ಫಿಲ್ಟರ್
ಲೆಡ್ ಥೀಮ್ - ಕಲರ್‌ಫುಲ್‌ ಕೀಬೋರ್ಡ್
ಕೀಬೋರ್ಡ್ - ಫನ್‌ ಎಮೋಜಿ, ಸ್ಟಿಕ್ಕರ್
ಸ್ಮಾರ್ಟ್ ವೈಫೈ
ಮೈ GPS ಲೊಕೇಶನ್‌
ಇಮೇಜ್ ವಾರ್ಪ್ ಕ್ಯಾಮೆರಾ
ಆರ್ಟ್ ಗರ್ಲ್ಸ್ ವಾಲ್‌ಪೇಪರ್ ಎಚ್‌ಡಿ
ಕ್ಯಾಟ್ ಸಿಮ್ಯುಲೇಟರ್
ಸ್ಮಾರ್ಟ್ QR ಕ್ರಿಯೇಟರ್
ಕಲರೈಜ್‌ ಒಲ್ಡ್‌ ಫೋಟೋ

ಲೊಕೇಶನ್‌

GPS ಲೊಕೇಶನ್‌ ಫೈಂಡರ್‌
ಗರ್ಲ್ಸ್ ಆರ್ಟ್ ವಾಲ್‌ಪೇಪರ್
ಸ್ಮಾರ್ಟ್ QR ಸ್ಕ್ಯಾನರ್
GPS ಲೊಕೇಶನ್‌ ಮ್ಯಾಪ್ಸ್‌
ಸಿಕ್ರೆಟ್‌ ಹಾರೊಸ್ಕೋಪ್‌
ಸ್ಮಾರ್ಟ್ ಜಿಪಿಎಸ್ ಲೊಕೇಶನ್‌
ಅನಿಮೇಟೆಡ್ ಸ್ಟಿಕ್ಕರ್ ಮಾಸ್ಟರ್
ಪರ್ಸನಾಲಿಟಿ ಚಾರ್ಜಿಂಗ್ ಶೋ
ಸ್ಲೀಪ್ ಸೌಂಡ್ಸ್
QR ಕ್ರಿಯೇಟರ್
ಮೀಡಿಯಾ ವಾಲ್ಯೂಮ್ ಸ್ಲೈಡರ್
ಸಿಕ್ರೆಟ್‌ ಅಸ್ಟ್ರೋಲಾಜಿ
ಕಲರೈಜ್‌ ಫೋಟೋಸ್‌
ಫಿ 4K ವಾಲ್‌ಪೇಪರ್ - ಅನಿಮೆ HD

ಮಾಲ್‌ವೇರ್‌

ಮಾಲ್‌ವೇರ್‌ ಅಪ್ಲಿಕೇಶನ್‌ಗಳು ನಿಮ್ಮ ಡಿವೈಸ್‌ನಲ್ಲಿ ಡೌನ್‌ಲೋಡ್‌ ಆಗದಂತೆ ತಡೆಯುವುದಕ್ಕೆ ನೀವು ಕೆಲವು ಕ್ರಮ ಅನುಸರಿಸಬೇಕಾಗುತ್ತದೆ. ಇದಕ್ಕಾಗಿ ನೀವು ಮೊದಲು ಅಪ್ಲಿಕೇಶನ್‌ ಡೆವಲಪರ್ ಹೆಸರನ್ನು ಪರಿಶೀಲಿಸಬೇಕಾಗುತ್ತದೆ. ನಂತರ ಮೂಲ ಡೆವಲಪರ್ ಅಭಿವೃದ್ಧಿಪಡಿಸಿದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡುವುದು ಸೂಕ್ತ. ಇದಲ್ಲದೆ ನಿಮ್ಮ ಮೊಬೈಲ್‌ನಲ್ಲಿ ಯಾವುದೇ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡುವ ಮುನ್ನ ರೇಟಿಂಗ್‌ ಅನ್ನು ಪರಿಶೀಲಿಸುವುದು ಉತ್ತಮವಾಗಿದೆ.

Best Mobiles in India

Read more about:
English summary
These 35 Android apps are infected with dangerous malware, delete them ASAP

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X