Subscribe to Gizbot

ಇಂಟರ್ನೆಟ್ ಬಳಕೆಗೆ ಕಡಿವಾಣ ಹಾಕುವುದು ಹೇಗೆ?

Written By:

ಸ್ಮಾರ್ಟ್‌ಫೋನ್ ಯುಗದಲ್ಲಿ ಇಂಟರ್ನೆಟ್ ಎಂಬುದು ಫೋನ್‌ನ ಜೀವಾಳವಾಗಿದೆ. ಆದರೆ ಮಿತದರದಲ್ಲಿ ಮುಗಿಯಬೇಕಾಗಿದ್ದ ಇಂಟರ್ನೆಟ್ ಹೆಚ್ಚಿನ ದರವನ್ನು ವಿನಿಯೋಗಿಸುತ್ತಿದೆ ಎಂದಾದಲ್ಲಿ ಇದರ ಕಡೆಗೆ ನೀವು ಗಮನ ನೀಡುವುದು ಅತ್ಯವಶ್ಯಕವಾಗಿದೆ. ಇಂದಿನ ಲೇಖನದಲ್ಲಿ ಹೆಚ್ಚು ದರದ ಇಂಟರ್ನೆಟ್‌ಗೆ ಕಡಿವಾಣ ಹಾಕುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.

ಓದಿರಿ: ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವೈಫೈ ಬಳಸಿ

ಮೊಬೈಲ್ ಡೇಟಾ ಬಳಸದಿರಿ

ನಿಮ್ಮ ಪ್ರದೇಶದಲ್ಲಿ ಮೊಬೈಲ್ ಡೇಟಾದ ಬದಲಿಗೆ ವೈಫೈ ಲಭ್ಯವಿದೆ ಎಂದಾದಲ್ಲಿ ವೈಫೈ ಬಳಸಿ. ನೀವು ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಹೆಚ್ಚು ಡೇಟಾ ಖರ್ಚಾಗಬಹುದು. ವೈಫೈ ಫೈಂಡರ್ ಅಪ್ಲಿಕೇಶನ್ ಬಳಸಿ ವೈಫೈ ಎಲ್ಲೆಲ್ಲಿ ಲಭ್ಯವಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ

ಅಪ್‌ಲೋಡ್ ಮಾಡದಿರಿ

ನೀವು ಹೊರಗಿದ್ದಾಗ ಸ್ನ್ಯಾಪ್‌ಗಳನ್ನು ಮತ್ತು ಕ್ಲಿಪ್‌ಗಳನ್ನು ಅಪ್‌ಲೋಡ್ ಮಾಡದಿರಿ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್6 ಫೋನ್‌ನಲ್ಲಿ 14 ಎಮ್‌ಪಿ ಕ್ಯಾಮೆರಾ ಇದ್ದು ಇಂತಹ ಹೆಚ್ಚುವರಿ ಫೋಟೋಗಳನ್ನು ಅಪ್‌ಲೋಡ್ ಮಾಡುವುದು ಡೇಟಾ ಶಕ್ತಿಯನ್ನು ಹೆಚ್ಚು ವಿನಿಯೋಗಿಸಬಹುದು.

ಸ್ಟ್ರೀಮ್ ಮಾಡಬೇಡಿ

ವಿಷಯಗಳನ್ನು ಸ್ಟ್ರೀಮ್ ಮಾಡಬೇಡಿ

ಹಾಡು ಅಥವಾ ಚಲನಚಿತ್ರಗಳನ್ನು ನೀವು ನಿರಂತರವಾಗಿ ಸ್ಟ್ರೀಮ್ ಮಾಡುತ್ತಿದ್ದೀರಿ ಎಂದಾದಲ್ಲಿ ಇದು ಫೋನ್‌ನ ಡೇಟಾವನ್ನು ಹೆಚ್ಚು ಮುಗಿಸಬಹುದು. ಪೂರ್ಣ ಎಚ್‌ಡಿಯಲ್ಲಿ ನೀವು ವೀಡಿಯೊಗಳನ್ನು ಸ್ಟ್ರೀಮ್ ಮಾಡುತ್ತಿದ್ದೀರಿ ಎಂದಾದಲ್ಲಿ 15 ಎಮ್‌ಬಿಗಾಗಿ ನಿಮಿಷಗಳನ್ನು ತೆಗೆದುಕೊಳ್ಳಬಹುದು.

ಸಂವಹನ ಮಾಡುವುದು

ಎಮೋಜಿಯಲ್ಲಿ ಸಂವಹನ ಮಾಡುವುದು

ವಾಟ್ಸಾಪ್ ಅಥವಾ ಸ್ಕೈಪ್‌ನಲ್ಲಿ ತ್ವರಿತ ಸಂದೇಶಗಳನ್ನು ಮಾಡುವುದು ವೀಡಿಯೊ ಕರೆಗಳನ್ನು ಮಾಡುವುದರಿಂದ ದೂರವಿರಿ. ಇಂಟರ್ನೆಟ್ 5 ನಿಮಿಷದ ವಾಯ್ಕ್ ಕರೆಗೆ 3 ಎಮ್‌ಬಿಯನ್ನು ಬಳಸುತ್ತದೆ.

ಡೌನ್‌ಲೋಡ್ ಮಾಡದಿರಿ

ನಿಮಗೆ ಬೇಡಾವಾಗಿರುವುದನ್ನು ಡೌನ್‌ಲೋಡ್ ಮಾಡದಿರಿ

ನಿಮಗೆ ಅತ್ಯವಶ್ಯಕ ಎಂದೆನಿಸುವ ವೀಡಿಯೊಗಳು ಅಥವಾ ಫೈಲ್‌ಗಳ ಡೌನ್‌ಲೋಡ್ ಅನ್ನು ಮಾಡದಿರಿ. ಕೆಲವೊಂದು ಅಪ್ಲಿಕೇಶನ್‌ಗಳು ಹಿನ್ನಲೆಯಲ್ಲಿ ರನ್ ಆಗಿರುತ್ತವೆ ಆದ್ದರಿಂದ ಇದರ ಬಗ್ಗೆ ಕಾಳಜಿ ವಹಿಸಿ.

ಉಚಿತ ಅಪ್ಲಿಕೇಶನ್‌

ಉಚಿತ ಅಪ್ಲಿಕೇಶನ್‌ಗಳನ್ನು ಆರಿಸಿ

ಆದಷ್ಟು ನಿಮ್ಮ ಪೋನ್‌ನಲ್ಲಿ ಉಚಿತ ಅಪ್ಲಿಕೇಶನ್‌ಗಳನ್ನು ಬಳಸಿ. ಇನ್ನು ಜಾಹೀರಾತು ಉಳ್ಳ ಅಪ್ಲಿಕೇಶನ್‌ಗಳು ಹೆಚ್ಚುವರಿ ಡೇಟಾವನ್ನು ಬಳಸುತ್ತವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
If you don’t want, can’t get or can’t afford truly unlimited mobile data, every unnecessary upload or download could end up costing you money. Here’s how to lower your smartphone data consumption.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot