Home
ಸುದ್ದಿಜಾಲ

ಬುಕ್‌ ಮಾಡಿ ಎರಡೇ ಗಂಟೆಗೇ ಡೆಲಿವರ್ ಪಡೆಯರಿ.. ಅಮೆಜಾನ್‌ನಿಂದ ವೇಗದ ಸೇವೆ!

By Gizbot bureau

ವರ ಕೇಳಿದ ಕೂಡಲೇ ದೇವರು ಪ್ರತ್ಯಕ್ಷವಾಗಿ ಕೇಳಿದ ವರವನ್ನು ಕೈಯಲ್ಲಿಟ್ಟು ಮಾಯವಾಗಿ ಬಿಡುತ್ತಾನಲ್ಲ ಹಾಗೆ ಆ ಪೌರಾಣಿಕ ಕಥೆಗಳಲ್ಲಿ ನಡೆಯುತ್ತಿದ್ದ ಘಟನೆಗಳ ಕಾಲ ಮತ್ತೆ ಬಂದು ಬಿಡುತ್ತೋ ಏನೋ ತಿಳಿಯದು. ಸಂವಹನವೇ ದುಸ್ಸಾಹಸವಾದ ಕಾಲವೊಂದಿತ್ತು. ಒಂದು ಕುಶಲೋಪರಿ ಪತ್ರ ತಲುಪಬೇಕೆಂದರೆ ವಾರವೋ, 15 ದಿನವೋ, ತಿಂಗಳೋ ಬೇಕಾಗುತ್ತಿತ್ತು.

ಆದರೆ ಈಗ ಕಾಲ ಅದಲ್ಲ. ನೀವು ಬಯಸುವ ವಸ್ತು ಕಣ್ಣು ಮುಚ್ಚಿ, ಕಣ್ಣು ಬಿಡುವುದರೊಳಗೆ ನಿಮ್ಮ ಕೈ ಸೇರುವ ಕಾಲ ಸನ್ನಿಹಿತವಾಗುತ್ತಿದೆ. ಯಾಕೆಂದರೆ ಇ-ಕಾಮರ್ಸ್ ನ ಪ್ರಮುಖ ಮಾರಾಟ ಮಳಿಗೆ ಅಮೇಜಾನ್ ತನ್ನ ಡೆಲಿವರಿ ಸಮಯವನ್ನು ದಿನದಿಂದ ದಿನಕ್ಕೆ ಕುಗ್ಗಿಸಿಕೊಳ್ಳುತ್ತಿದೆ.

ಬುಕ್‌ ಮಾಡಿ ಎರಡೇ ಗಂಟೆಗೇ ಡೆಲಿವರ್ ಪಡೆಯರಿ.. ಅಮೆಜಾನ್‌ನಿಂದ ವೇಗದ ಸೇವೆ!

ಹೌದು ಅಮೇಜಾನ್ ಈಗ ಅಮೇಜಾನ್ ಪ್ರೊಡಕ್ಟ್ ಗಳಾದ ಫೈಯರ್ ಟಿವಿ, ಕಿಂಡಲ್ ಮತ್ತು ಈಕೋ ಡಿವೈಸ್ ಗಳನ್ನು ನೀವು ಆರ್ಡರ್ ಮಾಡಿದ ಕೇವಲ 2 ಗಂಟೆಗಳಲ್ಲೇ ನಿಮಗೆ ಡೆಲಿವರಿ ಮಾಡುತ್ತದೆ. ಹೌದು ಅಮೇಜಾನ್ ಪ್ರೈಮ್ ನೌ ಆಪ್ ನಲ್ಲಿ ಈ ಅಲ್ಟ್ರಾ ಫಾಸ್ಟ್ ಡೆಲವರಿ ಸೌಲಭ್ಯ ಲಭ್ಯವಿದೆ.

ಯಾರಿಗೆ ಈ ವಿಚಾರ ತಿಳಿದಿಲ್ಲವೋ ಅವರಿಗಾಗಿ ಪ್ರಸ್ತಾಪಿಸುತ್ತಿದ್ದೇವೆ, ಅಲ್ಟ್ರಾ ಫಾಸ್ಟ್ ಡೆಲವರಿ ಸರ್ವೀಸ್ ಗಳು ಪ್ರೈಮ್ ಸದಸ್ಯರಿಗಾಗಿ ಮಾತ್ರ ಲಭ್ಯವಿರುತ್ತದೆ ಮತ್ತು ಈ ಸೇವೆಯು ಬೆಂಗಳೂರು, ಮುಂಬೈ, ನವದೆಹಲಿ ಮತ್ತು ಹೈದ್ರಾಬಾದ್ ಗಳಲ್ಲಿ ಮಾತ್ರ ಲಭ್ಯವಿದೆ.

ಈ ನಾಲ್ಕು ನಗರಗಳಲ್ಲಿರುವ ಸದಸ್ಯರು ಅಮೇಜಾನ್ ಡಿವೈಸ್ ಗಳನ್ನು ಆರ್ಡರ್ ಮಾಡಿ ಶೇಕಡಾ 15 ರಷ್ಟು ರಿಯಾಯಿತಿಯನ್ನು ಪಡೆಯಬಹುದು. ಡಿವೈಸ್ ಗಳಾದ ಅಮೇಜಾನ್ ಫೈಯರ್ ಟಿವಿ ಸ್ಟಿಕ್, ದಿ ಆಲ್ ನ್ಯೂ ಕಿಂಡಲ್, ಕಿಂಡಲ್ ಪೆಪ್ಪರ್ ವೈಟ್, ಅಮೇಜಾನ್ ಈಕೋ ಡಾಟ್ ಮತ್ತು ಈಕೋ ಗಳನ್ನು ಪ್ರೈಮ್ ಆಪ್ ಮೂಲಕ ಖರೀದಿಸಬಹುದು ಮತ್ತು ಇದು ಕೆಲವು ದಿನಗಳ ವರೆಗೆ ಇರುವ ಆಫರ್ ಆಗಿರುತ್ತದೆ.

ಬುಕ್‌ ಮಾಡಿ ಎರಡೇ ಗಂಟೆಗೇ ಡೆಲಿವರ್ ಪಡೆಯರಿ.. ಅಮೆಜಾನ್‌ನಿಂದ ವೇಗದ ಸೇವೆ!

ಅಮೇಜಾನ್ ಹೇಳಿರುವಂತೆ ಯಾರು ಆರ್ಡರ್ ಮಾಡುತ್ತಾರೋ ಅವರಿಗೆ ಕೇವಲ ಎರಡೇ ಗಂಟೆಗಳಲ್ಲಿ ತಮ್ಮ ಮನೆಯ ಬಾಗಿಲ ಮುಂದೆ ವಸ್ತುವನ್ನು ಇರಿಸಲಾಗುತ್ತಂತೆ. ಬೆಳಿಗ್ಗೆ 6 ಗಂಟೆಯಿಂದ 12 ಗಂಟೆಯವರೆಗೆ ಈ ಸೇವೆಯು ಲಭ್ಯವಿರಲಿದೆ. ಅಮೇಜಾನ್ ಪ್ರೈಮ್ ನೌ ಆಪ್ ಸದ್ಯ ಆಂಡ್ರಾಯ್ಡ್ ಮತ್ತು ios ಡಿವೈಸ್ ಗಳೆರಡರಲ್ಲೂ ಲಭ್ಯವಿದೆ ಮತ್ತು ತಮ್ಮ ಆಪ್ ಸ್ಟೋರ್ ಗಳಲ್ಲಿ ಬಳಕೆದಾರರು ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ.

ಇದರ ಬಿಡುಗಡೆಯ ಸಂದರ್ಬದಲ್ಲಿ ಮಾತನಾಡಿದ ಅಮೇಜಾನ್ ಡಿವೈಸ್ ನ ಡೈರೆಕ್ಟರ್ ಆಗಿರುವ ಜಯಶ್ರೀ ಗುರುರಾಜ್, ಪ್ರೈಮ್ ನೌ ಮೂಲಕ ಅಮೇಜಾನ್ ಡಿವೈಸ್ ಗಳನ್ನು ವೇಗವಾಗಿ ಮತ್ತು ಬಹಳ ಅನುಕೂಲಕರವಾದ ವಿತರಣೆಯನ್ನು ಮಾಡಲಾಗುತ್ತದೆ. ಈಗ ನೀವು ನಿಮ್ಮ ಅಗತ್ಯದ ಅಮೇಜಾನ್ ವಸ್ತುಗಳನ್ನು ಕಡಿಮೆ ಸಮಯದಲ್ಲೇ ಖರೀದಿಸಬಹುದು ಎಂದು ತಿಳಿಸಿದ್ದಾರೆ.

ಪ್ರೈಮ್ ನೌ ಆಪ್ ನ ಭಾರತೀಯ ಕಛೇರಿಯ ಹೆಡ್ ಆಗಿರುವ ಸಿದ್ದಾರ್ಥ್ ನಂಬಿಯಾರ್ ಮಾತನಾಡಿ ನಾವು ಫೈಯರ್ ಟಿವಿ ಸ್ಟಿಕ್, ಕಿಂಡಲ್ ಮತ್ತು ಇಕೋ ರೇಂಜ್ ಸೇರಿದಂತೆ ಸುಮಾರು 10,000 ವಸ್ತುಗಳು ಕೇವಲ ಎರಡೇ ಗಂಟೆಗಳಲ್ಲಿ ಪ್ರೈಮ್ ನೌ ಆಪ್ ಮೂಲಕ ಲಭ್ಯವಾಗಲಿದೆ. ಮತ್ತು ಕೆಲವೇ ದಿನಗಳವರೆಗೆ ಈ ವಸ್ತುಗಳ ಮೇಲೆ 15 ಶೇಕಡಾ ರಿಯಾಯಿತಿ ದರವನ್ನು ನೀಡಲಾಗುತ್ತದೆ ಎಂಬ ವಿಚಾರವನ್ನು ತಿಳಿಸಿದ್ದಾರೆ.

ಮೇ ತಿಂಗಳಲ್ಲಿ ಅಮೇಜಾನ್ ಈ ವೇಗದ ಡೆಲವರಿ ಆಯ್ಕೆಯನ್ನು ಅಮೇಜಾನ್ ನೌ ಆಪ್ ಮೂಲಕ ಕರುಣಿಸಿದೆ ಮತ್ತು ಅಮೇಜಾನ್ ಪ್ರೈಮ್ ನೌ ಎಂದು ಅದಕ್ಕೆ ಹೆಸರಿಸಲಾಗಿದೆ. ಅಮೇಜಾನ್ ನ ಈ ಪ್ರೈಮ್ ನೌ ಆಪ್ ನಲ್ಲಿ ಹಣ್ಣುಗಳು ಮತ್ತು ತರಕಾರಿಗಳು, ದಿನಬಳಕೆ ಆಹಾರ ಪದಾರ್ಥಗಳು, ಮಾಂಸ, ಮನೆ ಮತ್ತು ಅಡುಗೆ ಮನಗೆ ಅಗತ್ಯವಿರುವ ವಸ್ತುಗಳು ಕೂಡ ಸೇರಿವೆ. ಒಟ್ಟಿನಲ್ಲಿ ಅಮೇಜಾನ್ ನ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ.

Best Mobiles in India

English summary
These Amazon devices can now be delivered in two-hours. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+