ನಿಮ್ಮ ಹಣಕಾಸು ವ್ಯವಹಾರ ನೋಡಿಕೊಳ್ಳುವ ಅತ್ಯುತ್ತಮ ಐದು ಆಪ್‌ಗಳು!

|

ಇದು ಡಿಜಿಟಲ್‌ ಜಗತ್ತು. ಕೈ ಬೆರಳ ತುದಿಯಲ್ಲಿಯೇ ಇಡೀ ಜಗತ್ತನ್ನ ನೋಡಬಹುದಾದ ಜಮಾನ. ಈ ಜಮಾನದಲ್ಲಿ ಇಂಟರ್‌ನೆಟ್‌ ಒಂದು ಇದ್ದರೆ ಸಾಕು ಏನು ಬೇಕಾದರೂ ಮಾಡಬಹುದು. ಅಷ್ಟರ ಮಟ್ಟಿಗೆ ಇವತ್ತಿನ ಪ್ರಪಂಚ ಬದಲಾಗಿ ಹೋಗಿದೆ. ಅದರಲ್ಲೂ ಸ್ಮಾರ್ಟ್‌ಫೋನ್‌ಗಳು ಬಂದ್ಮೇಲೆ ಎಲ್ಲದಕ್ಕೂ ಸ್ಮಾರ್ಟ್‌ಫೋನ್‌ ಉತ್ತರವಾಗಿದೆ. ನಮ್ಮ ಕಷ್ಟ, ನಷ್ಟ, ಸುಖ ದುಃಖ ಎಲ್ಲವನ್ನೂ ಲೆಕ್ಕಹಾಕಿ ಉತ್ತರಿಸಬಲ್ಲ ಆಪ್‌ಗಳು ಇಂದು ನಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿದೆ.

ಹೌದು

ಹೌದು, ಇಂದು ಎಲ್ಲಾ ಮಾದರಿಯ ಆಪ್‌ಗಳನ್ನ ನಾವು ಕಾಣಬಹುದಾಗಿದೆ. ನಿಮ್ಮನ್ನು ಸಂತೋಷದಾಯಕವಾಗಿರಿಸುವ ಆಪ್‌ಗಳಿಂದ ಹಿಡಿದು ನಿಮ್ಮ ಜೀವನ ಕ್ರಮವನ್ನ ನಿರ್ಧರಿಸಬಲ್ಲ ಆಪ್‌ಗಳು ಕೂಡ ಲಭ್ಯವಿವೆ. ಸದ್ಯ ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ನಲ್ಲಿ ಹೆಚ್ಚಿನ ಪ್ರಮಾಣದ ಹಣಕಾಸು ವಹಿವಾಟು ನಡೆಯುತ್ತಿರೊದ್ರಿಂದ, ನಿಮ್ಮ ಹಣಕಾಸಿನ ಲೆಕ್ಕಾಚಾರ ತಿಳಿಸುವ ಹಾಗೂ ನಿಮ್ಮ ಹಣಕಾಸು ನಿರ್ವಹಣೆ ಹಾಗೂ ತೆರಿಗೆಗಳ ಲೆಕ್ಕಾಚಾರ ಹಾಕುವ ಆಪ್‌ಗಳು ಕೂಡ ಲಭ್ಯವಿದ್ದು, ಅಂತಹ ಅತ್ಯುತ್ತಮ ಐದು ಆಪ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಮೊನೆಫಿ (Monefy)

ಮೊನೆಫಿ (Monefy)

ಮೊನೆಫಿ ಆಪ್‌ ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಲಭ್ಯವಿದ್ದು, ಈ ಆಪ್‌ ಬಳಕೆದಾರರ ಪರ್ಸನಲ್‌ ಫೈನ್ಯಾನ್ಶಿಯಲ್‌ ಮ್ಯಾನೆಜರ್‌ನಂತೆ ಕಾರ್ಯನಿರ್ವಹಿಸುತ್ತದೆ. ಇದು ಬಳಕೆದಾರರನ ಹಣಕಾಸು ಖರ್ಚು,ವೆಚ್ಚಗಳನ್ನು ಗ್ರಾಫ್ ಮತ್ತು ರೇಖಾಚಿತ್ರಗಳ ಸಹಾಯದಿಂದ ತೋರಿಸುತ್ತದೆ, ಇದರಿಂದಾಗಿ ಬಳಕೆದಾರನು ಅವನ ಅಥವಾ ಅವಳ ಹಣಕಾಸಿನ ಖರ್ಚುವೆಚ್ಚದ ಬಗ್ಗೆ ಸುಲಭವಾಗಿ ಅರ್ಥಮಾಡಿಕೊಳ್ಳ ಬಹುದಾಗಿದೆ. ಇದು ಇಂಟರ್‌ಕ್ಯಾಲ್ಕುಲೇಟರ್, ಬಜೆಟ್ ಮೋಡೆಮ್ ಮತ್ತು ಮಲ್ಟಿ ಕರೆನ್ಸಿ ಫೀಚರ್ಸ್‌ಗಳನ್ನ ಒಳಗೊಂಡಿದೆ.

ಗುಡ್‌ಬಜೆಟ್

ಗುಡ್‌ಬಜೆಟ್

ಈ ಆಪ್‌ ಆನ್‌ಲೈನ್‌ನಲ್ಲಿ ನಿಮ್ಮ ಹಣಕಾಸು ವ್ಯವಹಾರಗಳ ಮೇಲೆ ನಿಗಾ ವಹಿಸುತ್ತದೆ. ನಿರ್ದಿಷ್ಟ ಚಟುವಟಿಕೆಗಾಗಿ ಹಣವನ್ನು ಖರ್ಚು ಮಾಡಲು ಬಳಕೆದಾರರಿಗೆ ಈ ಅಪ್ಲಿಕೇಶನ್ ಸದಾ ಎಚ್ಚರಿಸುತ್ತಿರುತ್ತದೆ. ಉದಾಹರಣೆಗೆ ನೀವು ಈ ಆಪ್‌ನಲ್ಲಿ ಕೆಲವು ವಿಭಾಗಗಳನ್ನ ಮಾಡಿ ಅದರಲ್ಲಿ ಸಾರಿಗೆ ವೆಚ್ಚ, ರೇಷನ್‌ ವೆ್ಚ್ ಅಂತ ಭಾಗ ಮಾಡಿ ಅದರಲ್ಲಿ ಹಣಕಾಸಿನ ವಿವಿರ ನಮೋದಿಸಿ ಹಣವನ್ನ ಅಲ್ಲಿ ಇಡಬಹುದಾಗಿದೆ. ಇದರಿಂದ ನೀವು ಪ್ರತಿ ಚಟುವಟಿಕೆಗೆ ಖರ್ಚು ಮಾಡಲಾಗುತ್ತಿರುವ ಹಣದ ಬಗ್ಗೆ ನಿಗಾ ಇಡುವುದಕ್ಕೆ ಸುಲಭವಾಗುತ್ತದೆ.

ಎಕ್ಸ್‌ಪೆನ್ಸಿಫೈ (Expensify)

ಎಕ್ಸ್‌ಪೆನ್ಸಿಫೈ (Expensify)

ಇದು ಬಳಕೆದಾರನ ಟ್ರ್ಯಾಕ್ ರಶೀದಿಗಳನ್ನು ವಿಸ್ತರಿಸಿ ಮತ್ತು ಪ್ರಯಾಣದಲ್ಲಿರುವಾಗ ವೆಚ್ಚಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಕೆಲವು ಕಾರ್ಪೊರೇಟ್ ಕಾರ್ಡ್‌ಗಳು, ಸುಧಾರಿತ ತೆರಿಗೆ ಟ್ರ್ಯಾಕಿಂಗ್, ಸ್ವಯಂಚಾಲಿತ ಲೆಕ್ಕಪರಿಶೋಧಕ , ಖರ್ಚು ನಿಯಮಗಳು, ಲೆಕ್ಕಪರಿಶೋಧಕ ಫೀಚರ್ಸ್‌ಗಳಿದ್ದು, ಬಳಕೆದಾರರ ಹೇಗೆ ಹಣವನ್ನ ಖರ್ಚು ಮಾಡಬೇಕು ಅನ್ನೊ ಮಾಃಇತಿಯನ್ನ ನೀಡುತ್ತದೆ. ಪ್ರಯಾಣ ಮಾಡುವಾಗ ವ್ಯರ್ಥವಾಗಿ ಖರ್ಚು ಆಗೋದನ್ನ ತಪ್ಪಿಸುತ್ತದೆ.

ಸ್ಪ್ಲಿಟ್‌ವೈಸ್ (Splitwise)

ಸ್ಪ್ಲಿಟ್‌ವೈಸ್ (Splitwise)

ಸ್ಪ್ಲಿಟ್‌ವೈಸ್ ಒಂದು ಉತ್ತಮ ಹಣಕಾಸು ಮಾಗದರ್ಶಿ ಆಪ್‌ ಆಗಿದ್ದು, ಇದು ಎಲ್ಲಾ ಮಾದರಿಯ ಹಣಕಾಸು ವೆಚ್ಚಗಳನ್ನು ಸಂಯೋಜಿಸಿ ಲೆಕ್ಕ ಹಾಕುತ್ತದೆ. ಖರ್ಚುಗಳನ್ನು ಹೇಗೆ ವಿಭಾಗಿಸಬೇಕು, ವಿಭಾಗಿಸಿದ ನಂತರ ಹಣವನ್ನ ಹೇಗೆ ಹೊಂದಿಸಬೇಕು, ಹಾಗೂ ಹೇಗೆ ಅದನ್ನ ಪಾವತಿಸಬೇಕು ಅನ್ನೊದರ ಬಗ್ಗೆ ಮಾಹಿತಿಯನ್ನ ನೀಡುತ್ತದೆ. ಇದು ದಿನನಿತ್ಯ ಕೆಲಸ ಮಾಡುವವರಿಗೆ ಉತ್ತಮವಾದ ಹಣಕಾಸು ಮಾಗದರ್ಶಿ ಆಪ್‌ ಆಗಿದೆ.

ಮನಿ ಮ್ಯಾನೇಜರ್‌ ಎಕ್ಸಪೆನ್ಸ್‌ ಆಂಡ್‌ ಬಜೆಟ್‌

ಮನಿ ಮ್ಯಾನೇಜರ್‌ ಎಕ್ಸಪೆನ್ಸ್‌ ಆಂಡ್‌ ಬಜೆಟ್‌

ಈ ಆಪ್‌ ಬಳಕೆದಾರನ ವೈಯಕ್ತಿಕ ಹಣಕಾಸು ಮತ್ತು ಹಣಕಾಸಿನ ವಹಿವಾಟುಗಳನ್ನು ಇಲ್ಲಿ ಟ್ರ್ಯಾಕ್ ಮಾಡಬಹುದಾಗಿದೆ. ಇದೊಂದು ಮಾದರಿಯಲ್ಲಿ ನಿಮ್ಮ ಹಣಕಾಸಿನ ಬಜೆಟ್ ಮತ್ತು ವೆಚ್ಚಗಳನ್ನು ಗ್ರಾಫ್ ಮೂಲಕ ವಿಂಗಡಿಸುತ್ತದೆ. ಇದರಲ್ಲಿ ನಮೂದಿಸಿದ ಡೇಟಾವನ್ನು ಅವಲಂಬಿಸಿ, ವೆಚ್ಚವನ್ನು ನೋಡಬಹುದಾಗಿದ್ದು. ಹಣಕಾಸು ವ್ಯವಹಾರವನ್ನು ಸುರಕ್ಷಿತವಾಗಿ ನಿರ್ವಹಿಸಲು ಪಾಸ್‌ಕೋಡ್ ಮೂಲಕ ಈ ಅಪ್ಲಿಕೇಶನ್ ಅನ್ನು ನಿರ್ವಹಿಸಬಹುದಾಗಿದೆ.

Most Read Articles
Best Mobiles in India

English summary
Smartphone apps have made it easier to do just about anything financially related. Here’s a list of apps which will help you manage your finances better.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more