ವಾಟ್ಸಾಪ್‌ನಂತೆಯೆ ಕಾರ್ಯನಿರ್ವಹಿಸುವ ಇತರೆ ಟಾಪ್‌ 5 ಮೆಸೇಜಿಂಗ್‌ ಆಪ್‌ಗಳು!

|

ವಿಶ್ವದಲ್ಲಿಯೇ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಸೊಶೀಯಲ್‌ ಮೆಸೇಜಿಂಗ್‌‌ ಆಪ್‌ ಅಂದ್ರೆ ಅದು ವಾಟ್ಸಾಪ್‌. ಸದ್ಯ ಜಾಗತಿಕವಾಗಿ ಅತಿ ಹೆಚ್ಚು ಬಳಕೆದಾರರನ್ನ ಹೊಂದಿದ್ದು, ಬಳಕೆದಾರರಿಗೆ ಆಕರ್ಷಕ ಫೀಚರ್ಸ್‌ಗಳನ್ನ ಕಾಲಕಾಲಕ್ಕೆ ಪರಿಚಯಿಸೋ ಮೂಲಕ ತನ್ನ ಜನಪ್ರಿಯತೆಯನ್ನ ಇನ್ನಷ್ಟು ಹೆಚ್ಚಿಸಿಕೊಂಡಿದೆ. ಅಲ್ಲದೆ ಮೆಸೇಜ್ ಮಾಡಬೇಕಂದ್ರೆ ವಾಟ್ಸಾಪ್‌ ತೆರೆಯಬೇಕು ಅನ್ನೋ ಅಷ್ಟರ ಮಟ್ಟಿಗೆ ಜನಮಾನಸದಲ್ಲಿ ಉಳಿದುಬಿಟ್ಟಿದೆ. ಹಾಗಾದ್ರೆ ಮೆಸೇಜಿಂಗ್‌ ಆಪ್ ಅಂದ್ರೆ ವಾಟ್ಸಾಪ್‌ ಮಾತ್ರನಾ? ಖಂಡಿತ ಇಲ್ಲ ವಾಟ್ಸಾಪ್‌ನಂತೆಯೆ ಕಾರ್ಯನಿರ್ವಹಿಸಬಲ್ಲ ಆಪ್‌ಗಳು ಕೂಡ ಇಂದು ಲಭ್ಯವಿವೆ.

ಹೌದು

ಹೌದು, ಜಾಗತಿಕವಾಗಿ ಇಂದು ವಾಟ್ಸಾಪ್‌ ನಂಬರ್‌ಒನ್‌ ಸ್ಥಾನದಲ್ಲಿ ಗುರ್ತಿಸಿಕೊಂಡಿದೆ. 2009 ರಲ್ಲಿ ಆಂಡ್ರಾಯ್ಡ್‌ ಮತ್ತು ಐಫೋನ್‌ ನಲ್ಲ ಕಾಣಿಸಿಕೊಂಡ ಮೇಲೆ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಬಳಕೆದಾರರನ್ನ ಹೊಂದುವ ಮೂಲಕ ಮೆಸೇಜಿಂಗ್‌‌ ಆಪ್‌ಗಳಲ್ಲಿ ವಾಟ್ಸಾಪ್‌ ತನ್ನ ಸ್ಥಾನವನ್ನ ಇನ್ನಷ್ಟು ವಿಸ್ತರಿಸಿಕೊಂಡಿದೆ. ಈ ಮೂಲಕ ಮೆಸೇಜಿಂಗ್‌ ಆಪ್ಲಿಕೇಶನ್‌ ಪ್ಲಾಟ್‌ಫಾರ್ಮ್‌ಗಳಲ್ಲಿ ಇತರೆ ಆಪ್‌ಗಳಿಗೆ ಸೆಡ್ಡು ಹೊಡೆದು ನಿಂತಿದೆ. ಆದರೆ ವಾಟ್ಸಾಪ್‌ ಸಮನಾಗಿ ಕಾರ್ಯನಿರ್ವಹಿಸಬಲ್ಲ ಆಪ್‌ಗಳು ಕೂಡ ಇದ್ದು, ಅವುಗಳಲ್ಲಿ ಐದು ಅತ್ಯುತ್ತಮ ಆಪ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಕೊಡ್ತೀವಿ ಓದಿ.

ಟೆಲಿಗ್ರಾಮ್

ಟೆಲಿಗ್ರಾಮ್

ಟೆಲಿಗ್ರಾಮ್ ವಾಟ್ಸಾಪ್‌ಗೆ ಪರ್ಯಾಯವಾಗಿ ಬಳಸಬಹುದಾದ ಮೆಸೇಜಿಂಗ್‌ ಆಪ್‌ಗಳಲ್ಲಿ ಅತ್ಯುತ್ತಮ ಆಪ್‌ಆಗಿದ್ದು, ಹೆಚ್ಚು ಕಡಿಮೆ ವಾಟ್ಸಾಪ್‌ನಂತೆಯೆ ಕಾರ್ಯನಿರ್ವಹಿಸಲಿದೆ. ಅಷ್ಟೇ ಅಲ್ಲ ವಾಟ್ಸಾಪ್‌ನ ಪ್ರತಿಸ್ಪರ್ಧಿಯಾಗಿ ಟೆಲಿಗ್ರಾಮ್‌ ಗುರ್ತಿಸಿಕೊಂಡಿದೆ. ವಾಟ್ಸಾಪ್‌ನಂತೆ, ಟೆಲಿಗ್ರಾಮ್ ಕೂಡ ಎಂಡ್-ಟು-ಎಂಡ್ ಎನ್‌ಕ್ರಿಪ್ಟೆಡ್‌‌ ಮೇಸೆಜ್‌ ಅನ್ನು ಬೆಂಬಲಿಸುತ್ತದೆ. ಅಲ್ಲದೆ ಈ ಆಪ್ಲಿಕೇಶನ್ ಕ್ಲೌಡ್-ಆಧಾರಿತ ಸರ್ವರ್‌ಗಳಲ್ಲೂ ಕಾರ್ಯನಿರ್ವಹಿಸುತ್ತದೆ, ಮಲ್ಟಿ ಟಾಸ್ಕಿಂಗ್‌ ಡಿವೈಸ್‌ನಲ್ಲೂ ಕೂಡ ಇದು ಬಳಕೆದಾರರು ಬಳಸಲು ಅವಕಾಶ ನೀಡುತ್ತದೆ. ಅಲ್ಲದೆ ಇದು ಸೆಲ್ಫ್ ಡಿಸ್ಟ್ರಾಕ್ಟ್‌, ಸಿಕ್ರೆಟ್‌ ಚಾಟ್, ಡಾರ್ಕ್ ಮೋಡ್ ಮತ್ತು ಚಾಟ್ ಕಸ್ಟಮೈಜ್ಡ್‌ ಫೀಚರ್ಸ್‌ಗಳನ್ನ ಒಳಗೊಂಡಿದ್ದು, ಟೆಲಿಗ್ರಾಮ್ ಆಂಡ್ರಾಯ್ಡ್, ಐಒಎಸ್, ವಿಂಡೋಸ್ ಫೋನ್, ವಿಂಡೋಸ್, ಲಿನಕ್ಸ್, ಮ್ಯಾಕೋಸ್‌ನಲ್ಲಿ ಲಭ್ಯವಿದೆ ಅಲ್ಲದೆ ಇದು ವೆಬ್ ಆವೃತ್ತಿಯನ್ನು ಸಹ ಹೊಂದಿದೆ.

ಸಿಗ್ನಲ್‌

ಸಿಗ್ನಲ್‌

ಸಿಗ್ನಲ್‌ ಇದು ಕೂಡ ಒಂದು ಎನ್‌ಕ್ರಿಪ್ಟೆಡ್‌ ಮೆಸೇಜಿಂಗ್‌‌ ಆಪ್ಲಿಕೇಶನ್‌ ಆಗಿದ್ದು, ವಾಟ್ಸಾಪ್‌, ಟೆಲಿಗ್ರಾಮ್‌ನಂತೆಯ ಕಾರ್ಯನಿರ್ವಹಿಸಲಿದೆ. ಇದನ್ನ ಸಿಗ್ನಲ್‌ ಪೌಂಡೆಷನ್ ಮತ್ತು ಸಿಗ್ನಲ್‌ ಮೆಸೆಂಜರ್‌ ಕಂಪೆನಿ ಹುಟ್ಟುಹಾಕಿದ್ದು, ನಿಮ್ಮ ಸಂದೇಶಗಳ ಸಂಭಾಷಣೆಯನ್ನ ಸುರಕ್ಷಿತವಾಗಿಡಲು ಶ್ರಮಿಸುತ್ತೇವೆ ಅನ್ನೊದು ಕಂಪೆನಿಯ ಮಾತಾಗಿದೆ. ಇನ್ನು ಆಪ್ಲಿಕೇಶನ್‌ಗಳಲ್ಲಿ ಮೇಸೆಜ್‌, ವಿಡಿಯೋ,ವಾಯ್ಸ್‌ ಮೆಸೇಜ್‌ ಎಲ್ಲವನ್ನೂ ಕಳಿಸಬಹುದಾಗಿದ್ದು ವಾಟ್ಸಾಪ್‌ನ ಪರ್ಯಾಯ ಆಪ್ಲಿಕೇಶನ್‌ ಆಗಿ ಬಳಸಬಹುದಾಗಿದೆ. ಅಷ್ಟೇ ಅಲ್ಲ ಸಿಗ್ನಲ್‌ ಮೇಸೆಜ್‌ಗಳಿಗಾಗಿ ಡಿಫಾಲ್ಟ್‌ ಮೆಸೇಜಿಂಗ್‌ ಆಪ್ಲಿಕೇಶನ್‌ ಅನ್ನ ಬದಲಾಯಿಸಬಹುದಾಗಿದೆ. ಇನ್ನು ಈ ಆಪ್ಲಿಕೇಶನ್‌ ಆಂಡ್ರಾಯ್ಡ್‌,ಐಒಎಸ್‌ ಹಾಗೂ ಡೆಸ್ಕಟಾಪ್‌ಗಳಲ್ಲಿ ಬಳಸಬಹುದು.

ವೈರ್‌

ವೈರ್‌

ವೈರ್‌ ಇದು ಯೂರೋಪಿಯನ್‌ ಡೇಟಾ ಲಾವನ್ನು ಒಳಗೊಂಡಿರುವ ಮೆಸೇಜಿಂಗ್‌ ಆಪ್ಲಿಕೇಶನ್‌ ಆಗಿದ್ದು, ಉತ್ತಮ ಭದ್ರತಾ ವ್ಯವಸ್ಥೆ ಹೊಂದಿರುವ ಆಪ್ಲಿಕೇಶನ್‌ ಇದಾಗಿದೆ.
ಮೆಸೆಂಜರ್, ವಾಯ್ಸ್, ವಿಡಿಯೋ, ಕಾನ್ಫರೆನ್ಸ್ ಕಾಲ್‌, ಫೈಲ್-ಶೇರ್‌ ಎಲ್ಲವನ್ನು ಒಳಗೊಂಡ ಮೆಸೇಜಿಂಗ್‌ ಆಪ್‌ ಇದಾಗಿದ್ದು, ಥೇಟ್‌ ವಾಟ್ಸಾಪ್‌ನಂತೆಯೆ ಕಾರ್ಯನಿರ್ವಹಿಸುತ್ತದೆ. ಆದರೆ ಈ ಮೆಸೇಜಿಂಗ್ ಅಪ್ಲಿಕೇಶನ್‌ ಬಳಸಬೇಕಾದರೆ ಶುಲ್ಕಪಾವತಿ ಮಾಡಬೇಕಾಗುತ್ತದೆ. ವೈರ್ ಪ್ರೊ ಮತ್ತು ವೈರ್ ಎಂಟರ್‌ಪ್ರೈಸ್ ಎಂಬ ಮೆಸೇಜಿಂಗ್‌ ಆಪ್ಲಿಕೇಶನ್‌ಗಳಿದ್ದು, ಇವುಗಳ ಬೆಲೆ ಕ್ರಮವಾಗಿ 4 ಯುರೋ(315ರೂ)ಗಳು ಮತ್ತು 8ಯುರೋ(631ರೂ)ಗಳಾಗಿವೆ. ಪ್ರಾರಂಭದ ಮೊದಲ ತಿಂಗಳು ಬಳಕೆದಾರರಿಗೆ ಫ್ರಿ ಟಯಲ್‌ ಆಗಿ ಬಳಸಲು ಅವಕಾಶ ನೀಡಲಾಗಿದೆ. ಇದು ಆಂಡ್ರಾಯ್ಡ್, ಐಒಎಸ್, ಮ್ಯಾಕೋಸ್, ಲಿನಕ್ಸ್, ವಿಂಡೋಸ್ ಮತ್ತು ವೆಬ್ ಬ್ರೌಸರ್‌ಗಳಲ್ಲಿ ವೈರ್ ಲಭ್ಯವಿದೆ.

ವೀಚಾಟ್

ವೀಚಾಟ್

ಚೀನಾ ಮೂಲದ ಟೆನ್ಸೆಂಟ್‌ ಕಂಪೆನಿ ಅಭಿವೃದ್ದಿ ಪಡಿಸಿರುವ ವೀಚಾಟ್ ಚೀನಾದಲ್ಲಿ ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ಜಾಗತಿಕವಾಗಿ 1.15 ಶತಕೋಟಿ ಮಾಸಿಕ ಸಕ್ರಿಯ ಬಳಕೆದಾರರನ್ನು ಹೊಂದಿರುವ ಈ ಅಪ್ಲಿಕೇಶನ್. ವಾಟ್ಸಾಪ್‌ನಷ್ಟೇ ಪ್ರಾಮುಖ್ಯತೆಯನ್ನ ಇಂದು ಪಡೆದುಕೊಂಡಿದ್ದು, ವಿಶ್ವದಲ್ಲಿ ಅತಿ ಹೆಚ್ಚು ಜನರು ಬಳಸುವ ಆಪ್ಲಿಕೇಶನ್‌ಗಳಲ್ಲಿ ಇದು ಕೂಡ ಒಂದಾಗಿದೆ. ಈ ಆಪ್ಲಿಕೇಶನ್‌ ನ ವೈಶಿಷ್ಯತೆಯೆನೆಂದರೆ ಇದು ಕೇವಲ ಮೆಸೇಜಿಂಗ್‌ ಆಪ್ಲಿಕೇಶನ್‌ ಆಗಿ ಗುರ್ತಿಸಿಕೊಂಡಿಲ್ಲ, ಈ ಅಪ್ಲಿಕೇಶನ್‌ನಲ್ಲಿ ಡಿಜಿಟಲ್‌ ಪೇಮೆಂಟ್‌ ಹಾಗೂ ಗೇಮಿಂಗ್‌ ಅವಕಾಶವನ್ನು ಸಹ ನೀಡಲಾಗಿದೆ. ಇನ್ನು ವೀಚಾಟ್‌ ಐಒಎಸ್, ಆಂಡ್ರಾಯ್ಡ್, ವಿಂಡೋಸ್, ಮ್ಯಾಕೋಸ್ ಮತ್ತು ವೆಬ್ ಬ್ರೌಸರ್‌ಗಳಲ್ಲಿ ಲಭ್ಯವಿದೆ.

ಸ್ನ್ಯಾಪ್‌ಚಾಟ್

ಸ್ನ್ಯಾಪ್‌ಚಾಟ್

ಇದು ಮಲ್ಟಿಮೀಡಿಯಾ ಮೆಸೇಜಿಂಗ್‌ ಆಪ್‌ ಆಗಿದ್ದು, ಬಳಕೆದಾರರಿಗೆ ಉತ್ತಮ ಅನುಭವ ನೀಡುತ್ತದೆ. ಈ ಆಪ್ಲಿಕೇಶನ್‌ನಲ್ಲಿ ನೀವು ವಾಯ್ಸ್‌, ವಿಡಿಯೋ, ಫೈಲ್‌, ಸಮದೇಶಗಳನ್ನ ಕಳುಹಿಸಬಹುದಾಗಿದ್ದು, ಬಾರಿ ಜನಪ್ರಿಯತೆ ಪಡೆದುಕೊಂಡಿರುವ ಆಪ್‌ಗಳಲ್ಲಿ ಇದು ಕೂಡ ಒಂದಾಗಿದೆ. ಈ ಆಪ್ಲಿಕೇಶನ್‌ ವಿಶೇಷತೆಯೆಂದರೆ ನಿಮ್ಮ ಸಂದೇಶವನ್ನ ಯಾರಾದರೂ ಸ್ಕ್ರೀನ್‌ಶಾಟ್‌ತೆಗೆದುಕೊಂಡರೆ ತಕ್ಷಣ ನಿಮಗೆ ತಿಳಿಯುವಂತೆ ಮಾಡುತ್ತದೆ. ಸದ್ಯ ಈ ಆಪ್ಲಿಕೇಶನ್‌ ಆಂಡ್ರಾಯ್ಡ್‌ ಮತ್ತು ಐಒಎಸ್‌ ಆದಾರಿತ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿದೆ.

Best Mobiles in India

English summary
WhatsApp continues to be the most popular messaging app globally, but if you’re one of those who wish to switch or try an alternative, here’s a list.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X