ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾದ ಟಾಪ್‌ 5 ಸ್ಮಾರ್ಟ್‌ಫೋನ್‌ಗಳು!

|

ಇತ್ತಿಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ ಮಾರುಕಟ್ಟೆ ಸಾಕಷ್ಟು ವಿಶಾಲವಾಗಿ ಬೆಳೆದಿದೆ. ಇಂದು ಪ್ರತಿಯೊಬ್ಬರ ಕೈ ನಲ್ಲೂ ಸ್ಮಾರ್ಟ್‌ಫೋನ್‌ಗಳು ರಿಂಗಣಿಸುತ್ತಿವೆ. ಯುವಕರಿಂದ ಹಿಡಿದು ಎಲ್ಲಾ ವಯೋಮಾನದವರು ಕೂಡ ಸ್ಮಾರ್ಟ್‌ಫೋನ್‌ ಅನ್ನು ಬಳಸುತ್ತಿದ್ದಾರೆ. ಇದೇ ಕಾರಣಕ್ಕೆ ಹಲವು ಕಂಪೆನಿಗಳು ತಮ್ಮ ವೈವಿಧ್ಯಮಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಗ್ರಾಹಕರ ಗಮನ ಸೆಳೆದಿವೆ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ ಇಲ್ಲದೆ ಮನೆಯಿಂದ ಹೋರಹೋಗುವುದೇ ಕಷ್ಟು ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ಸದ್ಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ಫೋನ್‌ ಪ್ರಿಯರ ಅಗತ್ಯಕ್ಕೆ ಅನುಗುಣವಾಗಿ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಎಂಟ್ರಿ ನೀಡುತ್ತಿವೆ. ಇನ್ನು ಟೆಕ್‌ ವಲಯದಲ್ಲಿ ಹಲವು ಕಂಪೆನಿಗಳು ಸ್ಮಾರ್ಟ್‌ಫೋನ್‌ಗಳನ್ನು ಹೊಸದಾಗಿ ಪರಿಚಯಿಸುತ್ತಿದ್ದರೂ, ಕೆಲವು ಕಂಪೆನಿಗಳು ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಸಾಧಿಸಿವೆ. ಹಾಗಾದ್ರೆ ಇತ್ತೀಚಿನ ದಿನಗಳಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಮಾರ್ಟ್‌ಫೋನ್‌

ಮಾರುಕಟ್ಟೆ ಸಂಶೋಧನಾ ಸಂಸ್ಥೆಯಾದ ಓಮ್ಡಿಯಾ 2020ರಲ್ಲಿ ವಿಶ್ವದಲ್ಲೇ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳ ಪಟ್ಟಿಯನ್ನು ಹೊರತಂದಿದೆ. ಸ್ಯಾಮ್‌ಸಂಗ್ ಮತ್ತು ಶಿಯೋಮಿ ಎಂಬ ಎರಡು ಕಂಪನಿಗಳೊಂದಿಗೆ ಆಪಲ್ ಈ ಪಟ್ಟಿಯಲ್ಲಿ ಪ್ರಾಬಲ್ಯ ಹೊಂದಿದೆ. ಸದ್ಯ ವಿಶ್ವದಲ್ಲೇ ಹೆಚ್ಚು ಮಾರಾಟವಾದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳ ಪಟ್ಟಿ ವಿವರ ಇಲ್ಲಿದೆ ಓದಿರಿ.

ಆಪಲ್ ಐಫೋನ್ 11

ಆಪಲ್ ಐಫೋನ್ 11

ಐಫೋನ್ 11 ಕಳೆದ ವರ್ಷ ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್ ಆಗಿ ಹೊರಹೊಮ್ಮಿದೆ. ಇನ್ನು 2020 ರಲ್ಲಿ ಆಪಲ್ 64.8 ಮಿಲಿಯನ್ ಐಫೋನ್ 11 ಅನ್ನು ಮಾರಾಟ ಮಾಡಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಐಫೋನ್ 11 ಪ್ರಸ್ತುತ 69,900 ರೂ.ಗಳ ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.

ಆಪಲ್ ಐಫೋನ್ SE (2020)

ಆಪಲ್ ಐಫೋನ್ SE (2020)

ಇನ್ನು ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ ಪಟ್ಟಿಯಲ್ಲಿರುವ ಮತ್ತೊಂದು ಆಪಲ್‌ ಐಫೋನ್‌ SE(2020) ಕೂಡ ಸೇರಿದೆ. ಸದ್ಯ ಆಪಲ್‌ ಐಫೋನ್‌ SE(2020) ಕಳೆದ ವರ್ಷ 24.2 ಮಿಲಿಯನ್ ಯುನಿಟ್ ಮಾರಾಟವಾಗಿದೆ. ಇನ್ನು ಭಾರತದಲ್ಲಿ, ಐಫೋನ್ SE 37,900 ರೂ. ಬೆಲೆಯನ್ನು ಹೊಂದಿದೆ.

ಐಫೋನ್ 12

ಐಫೋನ್ 12

ಐಫೋನ್ 11 ರ ಉತ್ತರಾಧಿಕಾರಿ, ಐಫೋನ್ 12 2020 ರಲ್ಲಿ ಅತಿ ಹೆಚ್ಚು ಮಾರಾಟವಾದ ಫೋನ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನು ವರದಿಯ ಪ್ರಕಾರ, ಆಪಲ್ ಈ ಹ್ಯಾಂಡ್‌ಸೆಟ್‌ನ 23.3 ಮಿಲಿಯನ್ ಯುನಿಟ್‌ಗಳನ್ನು ರವಾನಿಸಿದೆ. ಸದ್ಯ ಭಾರತದಲ್ಲಿ 83,400 ರೂ.ಬೆಲೆಯನ್ನು ಹೊಂದಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A51

ಸ್ಯಾಮ್‌ಸಂಗ್ ಗ್ಯಾಲಕ್ಸಿ A51

ಇನ್ನು ಕಳೆದ ವರ್ಷ ಅತಿ ಹೆಚ್ಚು ಮಾರಾಟವಾದ ಸ್ಮಾರ್ಟ್‌ಫೋನ್‌ಗಳ ಪಟ್ಟಿಯಲ್ಲಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ A51 ಸ್ಮಾರ್ಟ್‌ಫೋನ್‌ 4 ನೇ ಸ್ಥಾನದಲ್ಲಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ A51 ಸ್ಮಾರ್ಟ್‌ಫೋನ್‌ 23.2 ಮಿಲಿಯನ್ ಮಾರಾಟವನ್ನು ಹೊಂದಿದೆ. ಇದು 2020ರಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಮಾರಾಟವಾದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಆಗಿದೆ. ಸದ್ಯ ಈ ಸ್ಮಾರ್ಟ್‌ಫೋನ್‌ ಪ್ರಸ್ತುತ ಆರಂಭಿಕ ಬೆಲೆಯಲ್ಲಿ 20,999 ರೂಗಳಲ್ಲಿ ಲಭ್ಯವಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ A21S

ಸ್ಯಾಮ್‌ಸಂಗ್ ಗ್ಯಾಲಕ್ಸಿ A21S

ಈ ಪಟ್ಟಿಯಲ್ಲಿರುವ ಸ್ಯಾಮ್‌ಸಂಗ್‌ನ ಮತ್ತೊಂದು ಗ್ಯಾಲಕ್ಸಿ ಎ ಸರಣಿ ಸ್ಮಾರ್ಟ್‌ಫೋನ್ ಗ್ಯಾಲಕ್ಸಿ A21s ಸೇರಿದೆ. ಸ್ಯಾಮ್‌ಸಂಗ್ ಈ ಸ್ಮಾರ್ಟ್‌ಫೋನ್‌ ಅನ್ನು 19.4 ಮಿಲಿಯನ್ ಯುನಿಟ್‌ಗಳನ್ನು 2020 ರಲ್ಲಿ ರವಾನಿಸಿದೆ ಎಂದು ವರದಿಯಾಗಿದೆ. ಸದ್ಯ ಇದು 13,999 ರೂ.ಗಳಲ್ಲಿ ಖರೀದಿಸಬಹುದು.

Most Read Articles
Best Mobiles in India

English summary
These are bestselling smartphones in the world right now.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X