Home
ಸುದ್ದಿಜಾಲ

ವರ್ಕ್‌ಫ್ರಮ್‌ ಹೋಮ್‌ ಮಾಡಲು ನೀವು ಖರೀದಿಸಬಹುದಾದ 5 ಲ್ಯಾಪ್‌ಟಾಪ್‌ಗಳು!

ಇಡೀ ಜಗತ್ತು ಕೊರೊನಾ ವೈರಸ್‌ನಿಂದ ಬಳಲುತ್ತಿದೆ. ಕೋವಿಡ್‌-19 ಜಗತ್ತಿನೆಲ್ಲೆಡೆ ಹರುವುದಕ್ಕೆ ಶುರುವಾಗಿದ್ದೆ ತಡ ಬಹುತೇಕ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುಲು ಹೇಳಿವೆ. ಈಗಲೂ ಕೂಡ ಬಹುತೇಕ ರಾಷ್ಟ್ರಗಳ ಹಲವಾರು ಕಂಪೆನಿಗಳು ತಮ್ಮ ಉದ್ಯೊಗಿಗಳಿಂದ ಮನೆಯಿಂದಲೇ ಕಾರ್ಯನಿರ್ವಹಿಸುವಂತೆ ಸುಚನೆ ನೀಡಿವೆ. ಇಂತಹ ಸನ್ನಿವೇಶದಲ್ಲಿ ಮನೆಯಿಂದಲೇ ಕಾರ್ಯನಿರ್ವಹಿಸುವುದು ಅಂದರೆ ಸುಲಭದ ಮಾತಲ್ಲ. ನಾವುಕೆಲಸ ಮಾಡುವ ಕಚೇರಿಗಳ ವಾತಾವರಣಕ್ಕೂ ಮನೆಯಿಂದಲೇ ಕಾರ್ಯನಿರ್ವಹಿಸುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಅದರಲ್ಲೂ ಬಹುಮುಖ್ಯವಾಗಿ ಮನೆಯಿಮದ ಕಾರ್ಯನಿರ್ವಹಿಸುವಾಗ ಲ್ಯಾಪ್‌ಟಾಪ್‌ಗಲ ಬಗ್ಗ ಗಮನ ಕೊಡುವುದು ಕೂಡ ಮುಖ್ಯವೆನಿಸುತ್ತದೆ.

ಲ್ಯಾಪ್‌ಟಾಪ್

ಹೌದು, ಸದ್ಯದ ಪರಿಸ್ಥಿತಿಯಲ್ಲಿ ಮನೆಯಿಂದಲೇ ಕಾರ್ಯನಿರ್ವಹಿಸುತ್ತಿರುವುದರಿಂದ ಮನೆಯಿಂದ ಕೆಲಸ ಮಾಡಲು ಉತ್ತಮವಾದ ಲ್ಯಾಪ್‌ಟಾಪ್‌ಗಳು ಯಾವುವು ಅನ್ನೊ ಪ್ರಶ್ನೆ ಕಾಡುತ್ತೆ? ಮನೆಯಿಂದ ಕೆಲಸ ಮಾಡುವಾಗ ನಮ್ಮ ಕೆಲಸದ ದಕ್ಷತೆಯನ್ನು ಸುಧಾರಿಸುವ ಸಲುವಾಗಿ ಹೊಸ ಲ್ಯಾಪ್‌ಟಾಪ್ ಖರೀದಿಸಲು ಎಲ್ಲರಿಗೂ ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಸಹಜವಾಗಿಯೇ ಯಾವ ಲ್ಯಾಪ್‌ಟಾಪ್‌ಗಲು ಉತ್ತಮ ಅನ್ನೊ ಪ್ರಶ್ಮೆ ಕಾಡುತ್ತೆ. ಸದ್ಯ ನಾವೀಗ ಈ ಲೇಖನದಲ್ಲಿ ವರ್ಕ್‌ ಫ್ರಮ್‌ ಹೋಮ್‌ ಮಾಡಲು ಉತ್ತಮವಾದ ಲ್ಯಾಪ್‌ಟಾಪ್‌ಗಳು ಯಾವುವು ಅನ್ನೊದನ್ನ ತಿಳಿಸಿಕೊಡ್ತೀವಿ ಓದಿರಿ.

ಏಸರ್ ಸ್ವಿಫ್ಟ್ 3

ಏಸರ್ ಸ್ವಿಫ್ಟ್ 3

ಏಸರ್ ಸ್ವಿಫ್ಟ್ 3 ಈ ಲ್ಯಾಪ್‌ಟಾಪ್ ವರ್ಕ್‌ ಫ್ರಮ್‌ ಹೋಮ್‌ ಮಾಡುವುದಕ್ಕೆ ಉತ್ತಮವಾದ ಲ್ಯಾಪ್‌ಟಾಪ್‌ಗಳಲ್ಲಿ ಒಂದಾಗಿದೆ. ಇನ್ನು ಈ ಲ್ಯಾಪ್‌ಟಾಪ್ 1920x1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 14 ಇಂಚಿನ ಫುಲ್‌ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಇದು ಐಪಿಎಸ್ ಡಿಸ್‌ಪ್ಲೇ ವಿನ್ಯಾಸವನ್ನ ಒಳಗೊಂಡಿದೆ. ಇನ್ನು ಈ ಲ್ಯಾಪ್‌ಟಾಪ್‌ AMD ರೈಜೆನ್ 4000 ಸರಣಿ ಪ್ರೊಸೆಸರ್ ಹೊಂದಿದೆ. ಅಲ್ಲದೆ ಇದು 16GB RAM ಮತ್ತು 512GB PCIE ಜೆನ್ 3NV, SSD ಸಂಗ್ರಹವನ್ನು ಹೊಂದಿದೆ. ಜೊತೆಗೆ ಈ ಲ್ಯಾಪ್‌ಟಾಪ್‌ ವೈ-ಫೈ 6, ಬ್ಲೂಟೂತ್ ವಿ 5.0, ಯುಎಸ್‌ಬಿ ಟೈಪ್-ಸಿ ಪೋರ್ಟ್, ಪವರ್-ಆಫ್ ಚಾರ್ಜಿಂಗ್ ಬೆಂಬಲದೊಂದಿಗೆ ಯುಎಸ್‌ಬಿ 3.2 ಜನ್ 1 ಪೋರ್ಟ್, ಮತ್ತು ಎಚ್‌ಡಿಎಂಐ ಪೋರ್ಟ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಈ ಲ್ಯಾಪ್‌ಟಾಪ್ 48Wh ಬ್ಯಾಟರಿ ಪ್ಯಾಕ್‌ಅಪ್‌ ಹೊಂದಿದ್ದು, ಏಸರ್ ವೇಗದ ಚಾರ್ಜಿಂಗ್ ಟೆಕ್ನಾಲಜಿಯನ್ನ ಹೊಂದಿದ್ದು, ನಾಲ್ಕು ಗಂಟೆಗಳ ಬ್ಯಾಟರಿ ಅವಧಿಯನ್ನು ಒದಗಿಸಲು 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿದೆ. ಇನ್ನು ಈ ಲ್ಯಾಪ್‌ಟಾಪ್‌ ಬೆಲೆ 59,999 ರೂ ಆಗಿದೆ.

HP 14s(2020)

HP 14s(2020)

ಇನ್ನು hp ಕಂಪೆನಿಯು ಹಲವಾರು ಉತ್ತಮ ಲ್ಯಾಪ್‌ಟಾಪ್‌ಗಳನ್ನ ಬಿಡುಗಡೆ ಮಾಡಿದ್ದು. ಇದರಲ್ಲಿ 10 ನೇ ತಲೆಮಾರಿನ ಇಂಟೆಲ್ ಕೋರ್ I3 ಅಥವಾ ಕೋರ್ i5 ಪ್ರೊಸೆಸರ್ ಹೊಂದಿರುವ HP 14s(2020) ಅನ್ನು ಆಯ್ಕೆ ಮಾಡಬಹುದಾಗಿದೆ. ಇನ್ನು ಈ ಲ್ಯಾಪ್‌ಟಾಪ್‌ 8GB RAM ಮತ್ತು 256GB ಇಂಟರ್‌ ಸ್ಟೋರೆಜ್‌ ಅನ್ನು ಸಹ ಹೊಂದಿದೆ. ಜೊತೆಗೆ ಈ ಲ್ಯಾಪ್‌ಟಾಪ್‌ ಇಂಟೆಲ್ ಎಕ್ಸ್‌ಎಂಎಂ 7360 4 ಜಿ ಎಲ್‌ಟಿಇ 6 ಮೋಡೆಮ್‌ಅನ್ನು ಹೊಂದಿದೆ, ಇದು 4 ಜಿ ಸಂಪರ್ಕವನ್ನು ಶಕ್ತಗೊಳಿಸುತ್ತದೆ. ಇತರ ಆಯ್ಕೆಗಳಲ್ಲಿ ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ ವಿ 5.0, ಯುಎಸ್ಬಿ ಟೈಪ್-ಸಿ ಪೋರ್ಟ್, ಎಚ್ಡಿಎಂಐ 1.4 ಬಿ, ಮತ್ತು ಎರಡು ಯುಎಸ್ಬಿ ಟೈಪ್-ಎ ಪೋರ್ಟ್‌ಗಳು ಸೇರಿವೆ. 41Wh ಲಿಥಿಯಂ-ಐಯಾನ್ ಬ್ಯಾಟರಿ ಇದ್ದು ಉತ್ತಮ ಬಾಳಿಕೆ ಬರಲಿದೆ. ಇಂಟೆಲ್ ಕೋರ್ I3 ಪ್ರೊಸೆಸರ್ ಆಯ್ಕೆಯಲ್ಲಿ 44,999 ರೂ ಗೆ ಲಬ್ಯವಾಗಲಿದೆ.

ಆಸುಸ್ ವಿವೋಬುಕ್ 14

ಆಸುಸ್ ವಿವೋಬುಕ್ 14

ಅಗ್ಗದ ಬೆಲೆಯಲ್ಲಿ ಲ್ಯಾಪ್‌ಟಾಪ್‌ ಹುಡುಕುತ್ತಿದ್ದರೆ ಆಸುಸ್ ವಿವೋಬುಕ್ 14 ಉತ್ತಮ ಆಯ್ಕೆಯಾಗಿದೆ. ಇನ್ನು ಈ ಲ್ಯಾಪ್‌ಟಾಪ್ 14 ಇಂಚಿನ ಫುಲ್‌ ಹೆಚ್‌ಡಿ ಆಂಟಿ-ಗ್ಲೇರ್ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಇದು 10 ನೇ ತಲೆಮಾರಿನ ಇಂಟೆಲ್ ಕೋರ್ I3 ಪ್ರೊಸೆಸರ್ ಅನ್ನು ಸಹ ಹೊಂದಿದೆ. ಜೊತೆಗೆ ಈ ಲ್ಯಾಪ್‌ಟಾಪ್‌ 4GB RAM ಮತ್ತು 256GB ಸಂಗ್ರಹ ಸಾಮರ್ಥ್ಯವನ್ನ ಹೊಂದಿದೆ. ಅಲ್ಲದೆ ಇದು ಬ್ಯಾಕ್‌ಲಿಟ್ ಕೀಬೋರ್ಡ್ ‌ಮತ್ತು ಸ್ಟಿರಿಯೊ ಸ್ಪೀಕರ್‌ಗಳನ್ನು ಒಳಗೊಂಡಿದೆ. ಇದಲ್ಲದೆ, ಆಸುಸ್ ಮಾದರಿಯು ಸಂಪರ್ಕ ಆಯ್ಕೆಗಳಾದ ವೈ-ಫೈ 802.11 ಎಸಿ, ಬ್ಲೂಟೂತ್ ವಿ 4.2, ಎಚ್‌ಡಿಎಂಐ ಪೋರ್ಟ್, ಯುಎಸ್‌ಬಿ 3.2 ಜನ್ 1 ಪೋರ್ಟ್ ಮತ್ತು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಸಹ ಬೆಂಬಲಿಸಲಿದೆ. ಇನ್ನು ಇದರ ಬೆಲೆ 35,990 ರೂ ಆಗಿದೆ.

ಆಪಲ್ ಮ್ಯಾಕ್ಬುಕ್ ಏರ್

ಆಪಲ್ ಮ್ಯಾಕ್ಬುಕ್ ಏರ್

ಇದು 13.3-ಇಂಚಿನ ರೆಟಿನಾ ಡಿಸ್‌ಪ್ಲೇ ಹೊಂದಿರುವ ಲ್ಯಾಪ್‌ಟಾಪ್‌ ಆಗಿದ್ದು, ಇದು 5 ನೇ ತಲೆಮಾರಿನ ಇಂಟೆಲ್ ಕೋರ್ I5 ಪ್ರೊಸೆಸರ್ ಅನ್ನು ಹೊಂದಿದೆ. ಅಲ್ಲದೆ ಈ ಲ್ಯಾಪ್‌ಟಾಪ್‌ 8GB RAM ಮತ್ತು ಇಂಟೆಲ್ HD ಗ್ರಾಫಿಕ್ಸ್ 6000 ಅನ್ನು ಹೊಂದಿದೆ. ಅಲ್ಲದೆ ಈ ಮ್ಯಾಕ್ಬುಕ್ ಏರ್ 128 GB ಆನ್ಬೋರ್ಡ್ ಸಂಗ್ರಹವನ್ನು ಹೊಂದಿದೆ. ಅಲ್ಲದೆ ಉತ್ತಮ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ 10 ಗಂಟೆಗಳ ಬ್ಯಾಟರಿ ಅವಧಿಯನ್ನು ನಿಡಲಿದೆ. ಇದರ ಬೆಲೆ 65,990 ರೂ ಆಗಿದೆ.

ಎಂಎಸ್ಐ ಮಾಡರ್ನ್ 14

ಎಂಎಸ್ಐ ಮಾಡರ್ನ್ 14

ವಿಂಡೋಸ್ ಬಳಕೆದಾರರು 14 ಇಂಚಿನ ಐಪಿಎಸ್ ಡಿಸ್ಪ್ಲೇ ಹೊಂದಿರುವ ಲ್ಯಾಪ್‌ಟಾಪ್‌ ಅನ್ನು ಆಯ್ಕೆಮಾಡಬಹುದಾಗಿದೆ. ಇದು 10 ನೇ ತಲೆಮಾರಿನ ಇಂಟೆಲ್ ಕೋರ್ I7 ಪ್ರೊಸೆಸರ್ ಹೊಂದಿದ್ದು, ಎಂಎಸ್‌ಐ ಮಾಡರ್ನ್ 14 ಅನ್ನು ಆಯ್ಕೆ ಮಾಡಬಹುದು, ಇದರೊಂದಿಗೆ ಈ ಲ್ಯಾಪ್‌ಟಾಪ್‌ 8GB RAM ಮತ್ತು 512GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನ ಹೊಂದಿದೆ. ಅಲ್ಲದೆ ಈ ಲ್ಯಾಪ್‌ಟಾಪ್‌ ಬ್ಯಾಕ್ಲಿಟ್ ಕೀಬೋರ್ಡ್‌ ಅನ್ನು ಹೊಂದಿದ್ದು, 50Wh ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, ಸಿಂಗಲ್‌ ಚಾರ್ಜಿಂಗ್‌ನಲ್ಲಿ 10 ಗಂಟೆಗಳ ಬ್ಯಾಟರಿ ಅವಧಿಗೆ ರೇಟ್ ಮಾಡಲಾಗುತ್ತದೆ. ಇದರ ಬೆಲೆ 54,990 ರೂ ಆಗಿದೆ.

Best Mobiles in India

English summary
All you need is an efficient hardware with a battery life that can help you survive even in a power cut situation.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+