ಟೆಕ್ನಾಲಜಿ ಕ್ಷೇತ್ರದಲ್ಲಿ ಗುರುತಿಸಿಕೊಂಡ ಶ್ರೀಮಂತ ಮಹಿಳೆಯರು

By Gizbot Bureau
|

ಹಲವು ವರ್ಷಗಳು ಟೆಕ್ನಾಲಜಿ ಇಂಡಸ್ಟ್ರಿಯಲ್ಲಿ ಕೇವಲ ಪುರುಷರಿಂದ ಕೂಡಿತ್ತು. ಆದರೆ ಇದೀಗ ಕಾಲ ಬದಲಾಗುತ್ತಿದೆ. ಕಳೆದ ಹಲವು ವರ್ಷಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ಕಾಣಿಸಿಕೊಂಡಿದ್ದಾರೆ ಮತ್ತು ಫೋರ್ಬ್ಸ್ ನ ವಾರ್ಷಿಕ ಲಿಸ್ಟ್ ನಲ್ಲಿ ಆ ಮಹಿಳೆಯರು ಟೆಕ್ನಾಲಜಿ ಇಂಡಸ್ಟ್ರಿಯಲ್ಲಿರುವ ಅತ್ಯಂತ ಶ್ರೀಮಂತ ಮಹಿಳೆಯರು ಎಂದು ಗುರುತಿಸಿಕೊಂಡಿದ್ದಾರೆ. ನಾವಿಲ್ಲಿ ಆ ಬಿಲಿಯನ್ ಮೊತ್ತ ದುಡಿಯುವ ಶ್ರೀಮಂತ ಮಹಿಳೆಯರ ಪಟ್ಟಿಯನ್ನು ನಿಮಗೆ ನೀಡುತ್ತಿದ್ದೇವೆ.

ಜುಡಿ ಫಾಕ್ನರ್

ಜುಡಿ ಫಾಕ್ನರ್

ನಿವ್ವಳ ಆದಾಯ: $3.6 ಬಿಲಿಯನ್

ಜುಡಿ ಫಾಕ್ನರ್ ಅಮೇರಿಕಾದ ಪ್ರಮುಖ ಮೆಡಿಕಲ್ ಸಾಫ್ಟ್ ವೇರ್ ಪ್ರೊವೈಡರ್ ಆಗಿರುವ ಎಪಿಕ್ ಸಿಸ್ಟಮ್ ನ ಸಿಇಓ ಮತ್ತು ಸಂಸ್ಥಾಪಕಿ.

ಮೆಗಾ ವಿಟ್ಮನ್

ಮೆಗಾ ವಿಟ್ಮನ್

ನಿವ್ವಳ ಆದಾಯ: $3.4 ಬಿಲಿಯನ್

ಮೆಗ್ ವಿಟ್ನನ್ ಮಾಧ್ಯಮ ಕಂಪೆನಿ ಕ್ವಿಬಿಯ ಸಿಇಓ. ಇಬೇ ಸಂಸ್ಥೆ ಮತ್ತು ಹೆಲ್ವೆಟ್ ಪ್ಯಾಕರ್ಡ್ ನ ಮಾಜಿ ಸಿಇಓ ಕೂಡ ಹೌದು.ಹೆಚ್ಪಿಇ,ಪ್ಯಾಕ್ಟರ್ &ಗ್ಯಾಂಬಲ್ ಮತ್ತು ಡ್ರಾಪ್ ಬಾಕ್ಸ್ ಮಂಡಳಿಯಲ್ಲಿ ಸಹ ಈಕೆ ಇದ್ದಾರೆ.

ಝೌ ಕುನ್ಫೈ

ಝೌ ಕುನ್ಫೈ

ನಿವ್ವಳ ಆದಾಯ: 3 ಬಿಲಿಯನ್

ಝೌ ಕುನ್ಫೈ ಸ್ಮಾರ್ಟ್ ಫೋನ್ ಸ್ಕ್ರೀನ್ ಸಪ್ಲೈ ಮಾಡುವ ಸಂಸ್ಥೆ ಲೆನ್ಸ್ ಟೆಕ್ನಾಲಜಿಯ ಸಂಸ್ಥಾಪಕಿ ಮತ್ತು ಸಿಇಓ. ಈ ಸಂಸ್ಥೆ ಸ್ಯಾಮ್ ಸಂಗ್,ಎಲ್ ಜಿ, ಮೈಕ್ರೋಸಾಫ್ಟ್ ಮತ್ತು ನೋಕಿಯಾ ಸಂಸ್ಥೆಗಳಿಗೆ ಸಪ್ಲೈ ಮಾಡುತ್ತದೆ.

ಥಾಯ್ ಲೀ

ಥಾಯ್ ಲೀ

ನಿವ್ವಳ ಆದಾಯ: $2.1 ಬಿಲಿಯನ್

ಥಾಯ್ ಲೀ ಶೈ ಇಂಟರ್ನ್ಯಾಷನಲ್ ನ ಸಿಇಓ ಆಗಿದ್ದಾರೆ.ಇದು ಉತ್ತರ ಅಮೇರಿಕಾದಲ್ಲಿ ಅತೀ ದೊಡ್ಡ ಐಟಿ ಸಲ್ಯೂಷನ್ ಪ್ರೊವೈಡರ್ ಆಗಿದೆ.

ವಾಂಗ್ ಲೈಚುನ್

ವಾಂಗ್ ಲೈಚುನ್

ನಿವ್ವಳ ಆದಾಯ: $2 ಬಿಲಿಯನ್

ವಾಂಗ್ ಲೈಚುನ್ ಎಲೆಕ್ಟ್ರಾನಿಕ್ ಉತ್ಪಾದಕ ಸಂಸ್ಥೆ ಲಕ್ಶೇರ್ ನ ಮೂರರಲ್ಲಿ ಒಂದು ಭಾಗದ ಮಾಲೀಕತ್ವವನ್ನು ಹೊಂದಿದ್ದಾರೆ.ಆಪಲ್ ಗೆ ಎಲೆಕ್ಟ್ರಾನಿಕ್ ಕನೆಕ್ಟರ್ ಗಳನ್ನು ಈ ಕಂಪೆನಿ ನೀಡುತ್ತದೆ.

ಷೆರಿಲ್ ಸ್ಯಾಂಡ್ಬರ್ಗ್

ಷೆರಿಲ್ ಸ್ಯಾಂಡ್ಬರ್ಗ್

ನಿವ್ವಳ ಆದಾಯ: $ 1.6 ಬಿಲಿಯನ್

ಫೆರಿಲ್ ಸ್ಯಾಂಡ್ಬರ್ಗ್ ಸಾಮಾಜಿಕ ಜಾಲತಾಣ ಫೇಸ್ ಬುಕ್ ನ ಸಿಓಓ ಆಗಿದ್ದಾರೆ.

ಝೆಂಗ್ ಫಾಂಗ್ಕಿನ್

ಝೆಂಗ್ ಫಾಂಗ್ಕಿನ್

ನಿವ್ವಳ ಆದಾಯ: $1.6 ಬಿಲಿಯನ್

ಝಂಗ್ ಫಾಂಗ್ಕಿನ್ ಲಿಂಗೈ ಟೆಕ್ನಾಲಜಿಯ ಅಧ್ಯಕ್ಷೆಯಾಗಿದ್ದಾರೆ.ಸ್ಮಾರ್ಟ್ ಫೋನ್, ಟ್ಯಾಬ್ಲೆಟ್, ಲ್ಯಾಪ್ ಟಾಪ್ ಗಳಿಗೆ ಈ ಕಂಪೆನಿಯು ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರಾಟ ಮಾಡುತ್ತದೆ. ಹುವಾಯಿ ಮತ್ತು ಆಪಲ್ ಕಂಪೆನಿಗಳು ಇದರಲ್ಲಿ ಸೇರಿವೆ.

ಜಯಶ್ರೀ ಉಲ್ಲಲ್

ಜಯಶ್ರೀ ಉಲ್ಲಲ್

ನಿವ್ವಳ ಆದಾಯ: $1.2 ಬಿಲಿಯನ್

ಈ ಲಿಸ್ಟ್ ನಲ್ಲಿರುವ ಭಾರತೀಯ ಮೂಲದ ಮಹಿಳೆ ಈಕೆ. ಅರಿಸ್ಟಾ ನೆಟ್ ವರ್ಕ್ ನ ಸಿಇಓ ಆಗಿ ಜಯಶ್ರೀ ಉಲ್ಲಲ್ ಕಾರ್ಯ ನಿರ್ವಹಿಸುತ್ತಾರೆ.ಕ್ಲೌಡ್ ನೆಟ್ ವರ್ಕಿಂಗ್ ಸಲ್ಯೂಷನ್ ನ ಸಪ್ಲೈಯರ್ ಆಗಿ ಈ ಕಂಪೆನಿ ಕೆಲಸ ಮಾಡುತ್ತದೆ.

ಸಫ್ರಾ ಕ್ಯಾಟ್ಜ್

ಸಫ್ರಾ ಕ್ಯಾಟ್ಜ್

ನಿವ್ವಳ ಆದಾಯ: $1 ಬಿಲಿಯನ್

ಸಫ್ರಾ ಕ್ಯಾಟ್ಜ್ ಸಾಫ್ಟ್ ವೇರ್ ದೈತ್ಯ ಎಂದು ಕರೆಸಿಕೊಳ್ಳುವ ಓರಾಕಲ್ ಸಂಸ್ಥೆಯ ಕೋ-ಸಿಇಓ ಆಗಿದ್ದಾರೆ. ಸಿಲಿಕಾನ್ ವ್ಯಾಲಿಯಲ್ಲಿ ಅತೀ ಹೆಚ್ಚು ಸಂಬಳ ಪಡೆಯುವ ಮಹಿಳೆಯರಲ್ಲಿ ಈಕೆಯೂ ಒಬ್ಬರಾಗಿದ್ದಾರೆ.

Best Mobiles in India

Read more about:
English summary
These are the 9 richest women in technology industry

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X