Home
ಸುದ್ದಿಜಾಲ

ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯುತ್ತಮ ಫೋಲ್ಡಬಲ್‌ ಸ್ಮಾರ್ಟ್‌ಫೋನ್‌ಗಳು!

ಸ್ಮಾರ್ಟ್‌ಫೋನ್‌ ವಲಯದಲ್ಲಿ ಫೋಲ್ಡ್‌ಬಲ್‌ ಮತ್ತು ಡ್ಯುಯಲ್ ಸ್ಕ್ರೀನ್ ಸ್ಮಾರ್ಟ್‌ಫೋನ್‌ಗಳು ಹೆಚ್ಚು ಸಂಚಲನ ಸೃಷ್ಟಿಸಿವೆ. ಸ್ಮಾರ್ಟ್‌ಫೋನ್‌ ಮಾರುಕಟ್ಟೆಯ ವಿಸ್ಮಯ ಅಂತಾನೆ ಕರೆಯಲ್ಪಡುವ ಫೋಲ್ಡ್‌ಬಲ್‌ ಸ್ಮಾರ್ಟ್‌ಫೋನ್‌ಗಳು ಇಂದು ಮಾರುಕಟ್ಟೆಯಲ್ಲಿ ಹೆಚ್ಚು ಸೌಂಡ್‌ ಮಾಡುತ್ತಿವೆ. ಇದೇ ಕಾರಣಕ್ಕೆ ಸ್ಯಾಮ್‌ಸಂಗ್‌ ಮಾತ್ರವಲ್ಲದೆ ಇತರೆ ಕಂಪೆನಿಗಳು ಕೂಡ ಫೋಲ್ಡ್‌ಬಲ್‌ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸುವ ಪ್ರಯತ್ನ ನಡೆಸುತ್ತಲೆ ಇವೆ. ಇದರಲ್ಲಿ ಕೆಲವು ಕಂಪೆನಿಗಳು ಯಶಸ್ವಿ ಕೂಡ ಆಗಿವೆ.

ಫೋಲ್ಡ್‌ಬಲ್‌

ಹೌದು, ಫೋಲ್ಡ್‌ಬಲ್‌ ಸ್ಮಾರ್ಟ್‌ಫೋನ್‌ಗಳು ಇಂದು ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ಪ್ರಾರಂಭದಲ್ಲಿ ಇವುಗಳಿಗೆ ಭವಿಷ್ಯವಿಲ್ಲ ಎಂದು ಹೇಳಲಾಗ್ತಿತ್ತು, ಆದರೆ ಇಂದು ಈ ಸಾಧನಗಳು ನಿಧಾನವಾಗಿ ಹೆಚ್ಚು ಸಾಮಾನ್ಯವಾಗಿ ಮತ್ತು ವಾಣಿಜ್ಯಿಕವಾಗಿ ಲಭ್ಯವಾಗುತ್ತಿವೆ. ಅದರಲ್ಲೂ ಫೋಲ್ಡಿಂಗ್, ಅಥವಾ ಡ್ಯುಯಲ್ ಸ್ಕ್ರೀನ್ ಫೋನ್ ಫೋನ್‌ಗಳ ಬೆಲೆಗಳು ನಿಧಾನವಾಗಿ ಸಾಮಾನ್ಯ ಫ್ಲ್ಯಾಗ್‌ಶಿಪ್‌ಗಳಿಗೆ ಹತ್ತಿರವಾಗುತ್ತಿವೆ. ಹಾಗಾದ್ರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಫೋಲ್ಡಿಂಗ್‌ ಸ್ಮಾರ್ಟ್‌ಫೋನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 3

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 3

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫ್ಲಿಪ್ 3 ಅತ್ಯುತ್ತಮ ಫೋಲ್ಡಿಂಗ್ ಸ್ಮಾರ್ಟ್‌ಫೋನ್‌ ಎಂದು ಪರಿಗಣಿಸಲಾಗಿದೆ. ಇದು ಅತಿದೊಡ್ಡ ಸ್ಕ್ರೀನ್ ಅನ್ನು ಹೊಂದಿದೆ. ಗ್ಯಾಲಕ್ಸಿ Z ಫ್ಲಿಪ್ 3 ತಾಂತ್ರಿಕ ಆವಿಷ್ಕಾರ, ವಿಶೇಷಣಗಳು ಮತ್ತು ಬೆಲೆಯ ನಡುವೆ ಉತ್ತಮ ಸಮತೋಲನವನ್ನು ಹೊಂದುವುದು ಇದಕ್ಕೆ ಕಾರಣ. ಈ ಸ್ಮಾರ್ಟ್‌ಫೋನ್ 6.7-ಇಂಚಿನ AMOLED ಫೋಲ್ಡಬಲ್ ಸ್ಕ್ರೀನ್ ಅನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್‌ ಮತ್ತು 1200 ನಿಟ್‌ಗಳ ಗರಿಷ್ಠ ಹೊಳಪನ್ನು ಹೊಂದಿದೆ. ಇದು 1.9 ಇಂಚಿನ ಕವರ್ ಡಿಸ್‌ಪ್ಲೇ ಹೊಂದಿದೆ. ಈ ಫೋನ್ ಸ್ನ್ಯಾಪ್‌ಡ್ರಾಗನ್ 888 ಪ್ರೊಸೆಸರ್‌ ಅನ್ನು ಪಡೆದುಕೊಂಡಿದೆ. ಇದು 12 ಎಂಪಿ ಸಾಮರ್ಥ್ಯದ ಡ್ಯುಯಲ್‌ ರಿಯರ್‌ ಕ್ಯಾಮರಾ ಸೆಟಪ್ ಮತ್ತು 10 ಎಂಪಿ ಫ್ರಂಟ್ ಕ್ಯಾಮೆರಾ ಇದೆ.

ಗ್ಯಾಲಕ್ಸಿ Z ಫೋಲ್ಡ್ 3

ಗ್ಯಾಲಕ್ಸಿ Z ಫೋಲ್ಡ್ 3

ಇಂದು ಭಾರತದಲ್ಲಿ ಲಭ್ಯವಿರುವ ಆಯ್ಕೆಗಳಲ್ಲಿ ಫೋಲ್ಡಿಂಗ್ ಸ್ಮಾರ್ಟ್‌ಫೋನ್‌ಗಳಲ್ಲಿ ಗ್ಯಾಲಕ್ಸಿ Z ಫೋಲ್ಡ್ 3 ಕೂಡ ಒಂದಾಗಿದೆ. ಇದು ಕಂಪನಿಯ ಅತ್ಯಾಧುನಿಕ ಫೋಲ್ಡಬಲ್ ಸ್ಮಾರ್ಟ್‌ಫೋನ್-ಟ್ಯಾಬ್ಲೆಟ್ ಹೈಬ್ರಿಡ್ ಆಗಿದೆ. ಈ ಸ್ಮಾರ್ಟ್‌ಫೋನ್‌ 7.6 ಇಂಚಿನ AMOLED ಒಳ ಡಿಸ್‌ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ರೇಟ್‌ ಮತ್ತು 1200 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್‌ 6.2-ಇಂಚಿನ ಹೊರ ಡಿಸ್‌ಪ್ಲೇ ಇದ್ದು ಇದು 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಈ ಫೋನ್ ಸ್ನಾಪ್‌ಡ್ರಾಗನ್ 888 ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಟ್ರಿಪಲ್ ರಿಯರ್‌ ಕ್ಯಾಮೆರಾ ಹೊಂದಿದೆ. ಜೊತೆಗೆ ಎರಡು ಫ್ರಂಟ್ ಕ್ಯಾಮೆರಾಗಳು ಇವೆ.

ಗ್ಯಾಲಕ್ಸಿ Z ಫೋಲ್ಡ್ 2

ಗ್ಯಾಲಕ್ಸಿ Z ಫೋಲ್ಡ್ 2

ಸ್ಯಾಮ್‌ಸಂಗ್ ಗ್ಯಾಲಕ್ಸಿ Z ಫೋಲ್ಡ್ 2 ಕೂಡ ಒಂದು ಉತ್ತಮ ಸಾಧನವಾಗಿದೆ. ಇದು ಎಸ್-ಪೆನ್ ಬೆಂಬಲವನ್ನು ಹೊಂದಿದೆ. ಇದು ಒಳಭಾಗದಲ್ಲಿ 7.6-ಇಂಚಿನ 120Hz ಅಮೋಲೆಡ್ ಡಿಸ್‌ಪ್ಲೇ ಮತ್ತು 6.23-ಇಂಚಿನ ಕವರ್ ಡಿಸ್‌ಪ್ಲೇ ನೀಡುತ್ತದೆ. ಈ ಫೋನ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 965ಪ್ರೊಸೆಸರ್‌ ಅನ್ನು ಹೊಂದಿದೆ. ಇದರಲ್ಲಿ ನೀವು ಪ್ರತಿ ಎರಡು ಡಿಸ್‌ಪ್ಲೇಗಳಲ್ಲಿ ಎರಡು ಮುಂಭಾಗದ ಕ್ಯಾಮರಾಗಳನ್ನು ಹಾಗೂ 12MP ಟ್ರಿಪಲ್ ರಿಯರ್ ಕ್ಯಾಮೆರಾವನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಮೈಕ್ರೋಸಾಫ್ಟ್ ಸರ್ಫೇಸ್ ಡ್ಯುಯೊ

ಮೈಕ್ರೋಸಾಫ್ಟ್ ಸರ್ಫೇಸ್ ಡ್ಯುಯೊ

ಮೈಕ್ರೋಸಾಫ್ಟ್ ಸರ್ಫೇಸ್ ಡ್ಯುಯೊ ಭಾರತದಲ್ಲಿ ಇನ್ನೂ ಪ್ರಾರಂಭಿಸಲಾಗಿಲ್ಲ, ಆದರೆ ಅಮೆಜಾನ್ ನಲ್ಲಿ ಅನಧಿಕೃತವಾಗಿ ಖರೀದಿಸಲು ಲಭ್ಯವಿದೆ. ಫೋನ್ ಗಿಂತ ಹೆಚ್ಚಿನ ಟ್ಯಾಬ್ಲೆಟ್, ಸರ್ಫೇಸ್ ಡ್ಯುಯೊ ಒಂದು ಸಿಮ್ ಕಾರ್ಡ್‌ಗೆ ಅವಕಾಶ ಕಲ್ಪಿಸುತ್ತದೆ ಮತ್ತು ಫೋನ್‌ನಿಂದ ಸಾಧ್ಯವಿರುವ ಎಲ್ಲವನ್ನೂ ಮಾಡಬಹುದು. ಈ ಸಾಧನವು ಎರಡು 1800 × 1350 5.6-ಇಂಚಿನ ಸ್ಕ್ರೀನ್‌ಗಳನ್ನು ಹೊಂದಿದ್ದು ಅದು ದೊಡ್ಡ 8.1 ಇಂಚಿನ ಡಿಸ್‌ಪ್ಲೇಯನ್ನು ತೆರೆಯುತ್ತದೆ.

Best Mobiles in India

English summary
Foldable and dual screen smartphones have been around for a while, even if they seem like a new trend today.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+