ಜನವರಿ ತಿಂಗಳಲ್ಲಿ ಲಾಂಚ್ ಆಗಲಿರುವ ಟಾಪ್5 ಸ್ಮಾರ್ಟ್‌ಫೋನ್‌ಗಳು!
2019ಕ್ಕೆ ಬಾಯ್ ಹೇಳಿ 2020ಕ್ಕೆ ಹಾಯ್ ಹೇಳಿ ಸ್ವಾಗತ ಮಾಡಿದ್ದೇವೆ. ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ 2019ರಲ್ಲಿ ಸಾಕಷ್ಟು ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಿ ವಿಭಿನ್ನ ಫೀಚರ್ಸ್‌ಗಳನ್ನ ಸ್ಮಾರ್ಟ್‌ಫೋನ್ ಪ್ರಿಯರಿಗೆ ಪರಿಚಯಿಸಲಾಗಿತ್ತು. ಇದೀಗ 2020 ಶುರುವಾಗಿದ್ದು ಈ ಬಾರಿಯು ಸಾಕಷ್ಟು ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಹಾಕಲಿವೆ. ಅದರಲ್ಲೂ ಹೊಸವರ್ಷದ ಮೊದಲ ತಿಂಗಳಾದ ಜನವರಿಯಲ್ಲಿ ಹಲವಾರು ಸ್ಮಾರ್ಟ್‌ಫೋನ್ ಕಂಪೆನಿಗಳು ತಮ್ಮ ಹೊಸ ಆವೃತ್ತಿಯ ಸ್ಮಾರ್ಟ್‌ಫೋನ್‌ಗಳನ್ನ ಲಾಂಚ್ ಮಾಡಲಿವೆ.

ಹೌದು, ಇದೇ ಜನವರಿ ತಿಂಗಳಲ್ಲಿ ಸಾಕಷ್ಟು ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ಅದರಲ್ಲೂ ಫೆಬ್ರವರಿ ಅಂತ್ಯದಲ್ಲಿ ನಡೆಯಲಿರುವ ಎಂಡಬ್ಲ್ಯೂಸಿ ಸಮ್ಮೇಳನಕ್ಕೂ ಮೊದಲು ಚೀನಾ, ವಿಯೆಟ್ನಾಂ ಮತ್ತು ಭಾರತೀಯ ಟೆಕ್ ಮಾರುಕಟ್ಟೆಯಲ್ಲಿ ಕೆಲವು ಟಾಪ್ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ. ಅಷ್ಟಕ್ಕೂ 2020 ರ ಜನವರಿಯಲ್ಲಿ ಬಿಡುಗಡೆಯಾಗಲಿರುವ ಟಾಪ್ ಸ್ಮಾರ್ಟ್‌ಫೋನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ರಿಯಲ್‌ಮಿ 5i
ರಿಯಲ್‌ಮಿ ಸ್ಮಾರ್ಟ್‌ಫೋನ್ ಕಂಪೆನಿಯ ರಿಯಲ್‌ಮಿ5i ಸ್ಮಾರ್ಟ್‌ಫೋನ್ ಇದೇ ಜನವರಿ 6 ರಲ್ಲಿ ವಿಯೆಟ್ನಾಂನಲ್ಲಿ ಲಾಂಚ್ ಆಗಲಿದೆ ಎನ್ನಲಾಗ್ತಿದೆ. ಈ ಸ್ಮಾರ್ಟ್‌ಫೋನ್ 4GB RAM ಮತ್ತು 64GB ಶೇಖರಣಾ ಸಾಮರ್ಥ್ಯವನ್ನ ಹೊಂದಿದ್ದು, ಕ್ವಾಲ್‌ಕಾಮ್ ಸ್ನಾಪ್‌ಡ್ರಾಗನ್ 665 SoC ಪ್ರೊಸೆಸರ್‌ಹೊಂದಿದ್ದು ಆಂಡ್ರಾಯ್ಡ್ ಪೈ ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ರಿಯಲ್‌ಮಿ 5i ಸ್ಮಾರ್ಟ್‌ಫೋನ್ ಬೆಲೆ VND 4.29 ದಶಲಕ್ಷ( ಸುಮಾರು 13,200 ರೂ) ಇರಲಿದೆ ಎಂದು ಅಂದಾಜಿಸಲಾಗಿದ್ದು. ಬ್ಲೂ ಮತ್ತು ಗ್ರೀನ್ ಕಲರ್‌ನಲ್ಲಿ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ.

ರಿಯಲ್‌ಮಿ X50
2020ರ ಜನವರಿಯಲ್ಲಿ ಬಿಡುಗಡೆಯಾಗಲಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ರಿಯಲ್‌ಮಿ X50ಸ್ಮಾರ್ಟ್‌ಫೋನ್‌ಕೂಡ ಒಂದಾಗಿದ್ದು. ಈ ಸ್ಮಾರ್ಟ್‌ಫೋನ್ ಪಂಚ್-ಹೋಲ್ ಕ್ಯಾಮೆರಾ ಡಿಸ್‌ಪ್ಲೇ ಮಾದರಿಯನ್ನ ಒಳಗೊಂಡಿರಲಿದೆ. ರಿಯಲ್‌ಮಿ X50 5G ಫೋನ್ ಸ್ನಾಪ್‌ಡ್ರಾಗನ್ 765G SoC ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ, ಡ್ಯುಯಲ್-ಚಾನೆಲ್ ವೈ-ಫೈ ಮತ್ತು 5G ಸಂಪರ್ಕ ಬೆಂಬಲದೊಂದಿಗೆ ಬರಲಿದೆ. ಅಲ್ಲದೆ ಈ ಸ್ಮಾರ್ಟ್‌ಫೋನ್ ಎರಡು ಸೆಲ್ಫಿ ಕ್ಯಾಮೆರಾಗಳೊಂದಿಗೆ ಪಂಚ್ ಹೋಲ್ ಡಿಸ್‌ಪ್ಲೇ ವಿನ್ಯಾಸದಲ್ಲಿ ಗ್ರಾಹಕರ ಕೈಸೇರಲಿದೆ.

ವಿವೋ ಎಸ್ 1 ಪ್ರೊ
ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪೆನಿ ವಿವೋ ಜನವರಿ 4 ರಂದು ಭಾರತದಲ್ಲಿ ವಿವೋ ಎಸ್ 1 ಪ್ರೊ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುವುದಾಗಿ ಟ್ವಿಟರ್‌ನಲ್ಲಿ ಬಹಿರಂಗಪಡಿಸಿದೆ. ಚೀನಾ ಮಾರುಕಟ್ಟೆಯಲ್ಲಿ ವಿವೋ ಎಸ್1ಪ್ರೊ 6.39-ಇಂಚಿನ ಎಫ್‌ಹೆಚ್‌ಡಿ + ಸೂಪರ್ ಅಮೋಲೆಡ್ ಡಿಸ್‌ಪ್ಲೇಯನ್ನ ಹೊಂದಿರಲಿದ್ದು, ಭಾರತದಲ್ಲಿ, ವಿವೋ ಎಸ್1ಪ್ರೊ 6.38-ಇಂಚಿನ ಪೂರ್ಣ-ಎಚ್ಡಿ + ಪಂಚ್-ಹೋಲ್ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್ ಆಗಿದೆ. ಇದರ ಬೆಲೆ 19,990 ರೂ.ಇರಲಿದೆ ಎಂದು ಅಂದಾಜಿಸಲಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 10 ಲೈಟ್
ಗ್ಯಾಲಕ್ಸಿ S10E ಯಶಸ್ಸಿನ ನಂತರ, ಜನಪ್ರಿಯ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್ ಕಂಪೆನಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 10ಲೈಟ್ ಸ್ಮಾರ್ಟ್‌ಫೋನ್ ಅನ್ನ ಪರಿಚಯಿಸಲು ಮುಂದಾಗಿದೆ. ಗ್ಯಾಲಕ್ಸಿ ಎಸ್ 10 ಲೈಟ್ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ 855 ಪ್ರೊಸೆಸರ್ ಹೊಂದಿದ್ದು ಆಂಡ್ರಾಯ್ಡ್ 10 ಆಧಾರಿತ ಒನ್ ಯುಐ 2.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ ಗ್ಯಾಲಕ್ಸಿ 10 ಲೈಟ್‌ನಲ್ಲಿ 8GB RAM ಮತ್ತು 128GB ಶೇಖರಣಾ ಸಾಮರ್ಥ್ಯವನ್ನ ಹೊಂದಿದ್ದು, ಮೆಮೊರಿ ಕಾರ್ಡ್ ಮೂಲಕ ಶೇಖರಣಾ ಸಾಮರ್ಥ್ಯವನ್ನ 1TB ವರೆಗೂ ವಿಸ್ತರಿಸಬಹುದಾಗಿದೆ. 6.7 ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್ ಇದಾಗಿರಲಿದ್ದು ಬಾರಿ ನಿರೀಕ್ಷೆಯನ್ನ ಹುಟ್ಟುಹಾಕಿದೆ.

ಶಿಯೋಮಿ ಮಿ ನೋಟ್ 10
ಇನ್ನು ಇದೇ ಜನವರಿಯಲ್ಲಿ ಜನಪ್ರಿಯ ಸ್ಮಾರ್ಟ್‌ಫೋನ್ ಕಂಪೆನಿ ಶೀಯೋಮಿ ಕೂಡ 108 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್ ಅನ್ನ ಪರಿಚಯಿಸಲು ಮುಂದಾಗಿದೆ. ಈ ಸ್ಮಾರ್ಟ್‌ಫೋನ್ ಪೆಂಟಾ ಕ್ಯಾಮೆರಾ ಸೆಟ್‌ಅಪ್ ಒಳಗೊಂಡಿದ್ದು, 5,260mAh ಬ್ಯಾಟರಿ ಲೈಫ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಜೊತೆಗೆ 8GB RAM ಮತ್ತು 256GB ಸ್ಟೋರೇಜ್ ಆಯ್ಕೆಯು ಪ್ಲಸ್ ಪಾಯಿಂಟ್ ಆಗಿದೆ.


Click it and Unblock the Notifications








