ಸಿಇಎಸ್ 2020ರ 5ಅತ್ಯುತ್ತಮ ಸ್ಮಾರ್ಟ್‌ ಫಿಟ್‌ನೆಸ್ ಉತ್ಪನ್ನಗಳು!

|

ಇದು ತಂತ್ರಜ್ಞಾನ ಯುಗ, ಇಲ್ಲಿ ಎಲ್ಲವೂ ತಾಂತ್ರಿಕವಾಗಿ ಬದಲಾಗುತ್ತಿವೆ. ಮನುಷ್ಯನ ಆರೋಗ್ಯವನ್ನ ನಿಯಂತ್ರಿಸುವ, ಆರೋಗ್ಯದ ಮಟ್ಟ ಸೂಚಿಸುವ ಅದೆಷ್ಟೋ ಫಿಟ್ನೆಸ್‌ ಬ್ಯಾಂಡ್‌ಗಳು ಕೂಡ ಇಂದು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಸದ್ಯ ಈ ಫಿಟ್ನೆಸ್‌ ಬ್ಯಾಂಡ್‌ಗಳಿಗೆ ಎಲ್ಲೆಡೆ ಬೇಡಿಕೆ ಇದ್ದು, ಲಾಸ್‌ವೇಗಸ್‌ನಲ್ಲಿ ನಡೆದ ಕನ್ಶ್ಯೂಮರ್‌ ಎಲೆಕ್ಟ್ರಾನಿಕ್‌ ಶೋ-2020ರ ಮೇಳದಲ್ಲಿ ಇನ್ನು ಹೆಚ್ಚಿನ ಹೊಸ ಮಾದರಿಯ ಫಿಟ್ನೆಸ್‌ ಸ್ಮಾರ್ಟ್‌ ಡಿವೈಸ್‌ಗಳು ಅನಾವರಣಗೊಂಡಿವೆ.

ಹೌದು

ಹೌದು, ಟೆಕ್ ವಲಯದಲ್ಲಿ ಹೊಸತನದ ಫಿಟ್ನೆಸ್‌ ಆಧಾರಿತ ಸ್ಮಾರ್ಟ್‌ ಡಿವೈಸ್‌ಗಳು ಎಂಟ್ರಿ ಕೊಟ್ಟಿವೆ. ಕೆಲ ಅಚ್ಚರಿಯ ಸ್ಮಾರ್ಟ್‌ ಡಿವೈಸ್‌ಗಳ ಜೊತೆಗೆ ಸುಧಾರಿತ ಡಿವೈಸ್‌ಗಳು ಕೂಡ ಲಾಸ್ ವೇಗಸ್‌ನಲ್ಲಿ ನಡೆದ CES 2020 ಕಾರ್ಯಕ್ರಮದಲ್ಲಿ ಪ್ರದರ್ಶನ ಕಂಡಿವೆ. ಇನ್ನು ಈ ಮೇಳದಲ್ಲಿ ಪ್ರದರ್ಶನಗೊಂಡ ಅತ್ಯುತ್ತಮ ಪಿಟ್ನೆಸ್‌ ಸ್ಮಾರ್ಟ ಡಿವೈಸ್‌ಗಳು ಯಾವುದು ಅನ್ನೊ ಕುತೂಹಲ ಇದ್ದೇ ಇರುತ್ತೆ, ನಿಮ್ಮ ಕುತೂಹಲಕ್ಕೆ ಉತ್ತರವನ್ನ ಇಂದಿನ ಈ ಲೇಖನದಲ್ಲಿ ನಾವು ತಿಳಿಸಿಕೊಡ್ತೀವಿ ಓದಿ.

ಅಮೇಜ್‌ ಫಿಟ್‌ ಹೋಮ್‌ ಸ್ಟುಡಿಯೋ

ಅಮೇಜ್‌ ಫಿಟ್‌ ಹೋಮ್‌ ಸ್ಟುಡಿಯೋ

ಅಮೇಜ್‌ ಫಿಟ್‌ ಹೋಮ್‌ ಸ್ಟುಡಿಯೋ ಅನ್ನೊ ಹೆಸರಿನ ಈ ಪಿಟ್ನೆಸ್‌ ಪ್ರಾಡಕ್ಟ್‌ ಸ್ಲ್ಯಾಟ್ ಬೆಲ್ಟ್ ಮತ್ತು ಸ್ಟುಡಿಯೋ ಮಾದರಿಯನ್ನ ಒಳಗೊಂಡಿದೆ. ಇನ್ನು ಈ ಟ್ರೆಡ್‌ಮಿಲ್ 12mph ವೇಗದ ಸಾಮರ್ಥ್ಯ ಹೊಂದಿದೆ. ಜೊತೆಗೆ ಸ್ಮಾರ್ಟ್ ಜಿಮ್ ಹಬ್ ಎಂದು ಕರೆಯಲ್ಪಡುವ 43 ಇಂಚಿನ ಎಚ್‌ಡಿ ಡಿಸ್‌ಪ್ಲೇ ನೀಡಲಾಗಿದ್ದು, ಹೋಮ್‌ಸ್ಟೂಡಿಯೋ 3D ಸ್ಕ್ಯಾನರ್ ಡಿಸ್‌ಪ್ಲೆಯನ್ನ ಹೊಂದಿದೆ. ಇದು ಯೋಗ, ಶಿಲ್ಪಕಲೆ, ರನ್ನಿಂಗ್‌, ಇತರೆ ದಿನಚರಿಗಳ ಮಾಹಿತಿಯನ್ನ ನೀಡುತ್ತದೆ. ಪ್ರತಿ ತಾಲೀಮಿನ ನಂತರ ಟ್ರೆಡ್‌ಮಿಲ್ ಅಂಶವನ್ನು ನೋಡುವ ಬದಲು ಇ ಸ್ಟುಡಿಯೋದಲ್ಲಿಯೇ ನೋಡಿಕೊಳ್ಳುವುದರಿಂದ ಕಸರತ್ತು ಮಾಡಲು ಇನ್ನಷ್ಟು ಹುಮ್ಮಸು ಬರಲಿದೆ.

ಜಬ್ರಾ ಎಲೈಟ್ ಆಕ್ಟಿವ್ 75 ಟಿ

ಜಬ್ರಾ ಎಲೈಟ್ ಆಕ್ಟಿವ್ 75 ಟಿ

ಪಿಟ್ನೆಸ್‌ ಆಧಾರಿತ ವರ್ಕೌಟ್‌ ಸ್ಮಾರ್ಟ್‌ ಪ್ರಾಡಕ್ಟ್‌ಗಳಲ್ಲಿ ಜಬ್ರಾ ಎಲೈಟ್ ಆಕ್ಟಿವ್ 75 ಟಿ ಕೂಡ ಒಂದಾಗಿದೆ. ಜಬ್ರಾ ಕಂಪೆನಿಯ ವೈರ್‌ಲೆಸ್‌ ಇಯರ್‌ಬಡ್‌ ನ ಹೊಸ ಆವೃತ್ತಿಯಾದ ಎಲೈಟ್ ಆಕ್ಟಿವ್ 75 ಟಿ ವರ್ಕೌಟ್‌ ಮಾಡುವಾಗ ಬಳಸಲು ಉತ್ತಮವಾದ ಪ್ರಾಡಕ್ಟ್‌ ಆಗಿರಲಿದೆ. ಫಿಟ್, ಸೌಂಡ್ ಕ್ವಾಲಿಟಿ, ಬ್ಯಾಟರಿ ಬಾಳಿಕೆ ಮತ್ತು ಬಾಳಿಕೆ ಯಲ್ಲಿ ಉತ್ತಮ ಗುಣಮಟ್ಟವನ್ನು ಹೊಂದಿದ್ದು. ಇದು ಸಣ್ಣ, ಅಥವಾ ವಿಭಿನ್ನ ಗಾತ್ರದ ಕಿವಿಗಳನ್ನು ಹೊಂದಿದ್ದರೂ ಸಹ ಸೂಕ್ತವಾದ ಫಿಟ್‌ನೊಂದಿಗೆ ಬರಲು ಸುಧಾರಿತ ಅಲ್ಗಾರಿದಮ್ ಅನ್ನು ಅಭಿವೃದ್ಧಿಪಡಿಸಿದೆ. ಇದರಿಂದಾಗಿ ತಾಲೀಮುಗಳ ಅತ್ಯಂತ ಕಠಿಣ ಸಮಯದಲ್ಲಿಯೂ ಸಹ ಅವು ಕುಸಿಯುವುದಿಲ್ಲ. ಮಳೆಯಲ್ಲಿ ಓಡುವಾಗ ಅಥವಾ ಬೈಕಿಂಗ್ ಮಾಡುವಾಗಲೂ ಕೂಡ ಈ ಇಯರ್‌ಬಡ್‌ಗಳನ್ನ ಬಳಸಬಹುದಾಗಿದೆ.

ಸುಂಟೊ7

ಸುಂಟೊ7

ಸುಂಟೊ7 ಇದೊಂದು ಪಿಟ್ನೆಸ್‌ ಸಂಬಂಧಿತ ಸ್ಮಾರ್ಟ್‌ ವಾಚ್‌ ಆಗಿದೆ, ಸಿಇಎಸ್‌ ಸಮ್ಮೆಳನದಲ್ಲಿ ಪ್ರದರ್ಶನಗೊಂಡ ಅತ್ಯುತ್ತಮ ಪಿಟ್ನೆಸ್‌ ಸ್ಮಾರ್ಟ್‌ವಾಚ್‌ಗಳಲ್ಲಿ ಇದು ಒಂದಾಗಿದೆ. ಇದು ಹೃದಯ ಬಡಿತ ಮಾನಿಟರ್, ಹೆಡ್ಫೋನ್ ಸಿಂಕ್ ಮತ್ತು 50 ಮೀಟರ್ ವರೆಗೆ ನೀರಿನ-ಪ್ರತಿರೋಧವನ್ನು ಹೊಂದಿದೆ. ಇದು ಗೂಗಲ್-ಚಾಲಿತ ಆಪರೇಷನ್ ಸಿಸ್ಟಮ್, ವಾಚ್ಓಎಸ್ ಅನ್ನು ಹೊಂದಿದ್ದು, ಇದು ಗೂಗಲ್ ಪೇ, ಗೂಗಲ್ ಅಸಿಸ್ಟೆಂಟ್, ಗೂಗಲ್ ಫಿಟ್ ಮತ್ತು ಗೂಗಲ್ ಪ್ಲೇ ಸ್ಟೋರ್‌ಗೆ ಅವಕಾಶವನ್ನು ನೀಡಿದೆ. ಇದು ರನ್ನಿಂಗ್‌, ಬೈಕಿಂಗ್, ಸ್ವಿಮ್ಮಿಂಗ್‌, ಚಟುವಟಿಕೆಗಳನ್ನ ಟ್ರ್ಯಾಕ್‌ ಮಾಡಲಿದೆ. ಅಲ್ಲದೆ ಗೂಗಲ್‌ ಮ್ಯಾಪ್‌, ನಕ್ಷೆಗಳು, ಮತ್ತು ಪ್ರತ್ಯೇಕ ಹಾದಿಗಳಂತಹ ಭೂಪ್ರದೇಶದ ವಿವರಗಳನ್ನು ಸಹ ಒಳಗೊಂಡಿರುತ್ತವೆ. ಇದರಿಂದ ತಾಲಿಮು ಮಾಡುವಾಗ ಉತ್ತಮ ಸಹಾಯಕನಾಗಿ ಕಾರ್ಯ ನಿರ್ವಹಿಸಬಲ್ಲದು.

ಮಾಂಟಾ5 ಹೈಡ್ರೋಫಾಯಿಲ್ ಬೈಕ್

ಮಾಂಟಾ5 ಹೈಡ್ರೋಫಾಯಿಲ್ ಬೈಕ್

ಸಿಇಎಸ್‌ನಲ್ಲಿ ಪ್ರದರ್ಶನಗೊಂಡ ಪಿಟ್ನೆಸ್‌ ಸ್ಮಾರ್ಟ್ ಪ್ರಾಡಕ್ಟ್‌ಗಳಲ್ಲಿ ಮಾಂಟಾ5 ಹೈಡ್ರೋಫಾಯಿಲ್‌ಬೈಕ್‌ ಕೂಡ ಒಂದಾಗಿದೆ. ಇದು ನೀರಿನ ಮೇಲೆ ಪೆಡಲ್‌ ಮಾಡಬಹುದಾದ ಸೈಕಲ್‌ ಮಾದರಿಯ ಪ್ರಾಡಕ್ಟ್‌ ಆಗಿದ್ದು, ನೀರಿನ ಮೇಲೆ ಸುಲಭವಾಗಿ ಪೆಡಲ್ ಮಾಡಬಹುದಾಗಿದೆ. ಮನಶಾಂತಿಗಾಗಿ ನೀರಿನ ಮೇಲೆ ಪೆಡೆಲ್‌ ಮಾಡ ಬಯಸುವವರಿಗೆ ಇದು ಉತ್ತಮ ಆಯ್ಕೆಯಾಗಿದೆ. ಇನ್ನು ಈ ಪ್ರಾಡಕ್ಟ್‌ ಅಮೆರಿಕದ ಸಾಯಿಲ್‌ ಬೋಟ್‌ ಅಮೆರಿಕ ಕಪ್‌ ತಂತ್ರಜ್ಞಾನವನ್ನು ಒಳಗೊಂಡಿದೆ. ಇದರಿಂದ ನೀರಿನ ಸೆಳೆತದ ನಡುವೆ ಪೆಡಲ್‌ ಮಾಡಿದಾಗ, ಮಾನಸಿಕ ಒತ್ತಡವನ್ನ ಕಡಿಮೆ ಮಾಡಬಹುದಾಗಿದೆ.

ಎರ್ಗಟ್ಟಾ ಡಿಜಿಟಲ್ ರೋವರ್

ಎರ್ಗಟ್ಟಾ ಡಿಜಿಟಲ್ ರೋವರ್

ಎರ್ಗಟ್ಟಾ ಡಿಜಿಟಲ್ ರೋವರ್ 17.3-ಇಂಚಿನ ಟಚ್‌ಸ್ಕ್ರೀನ್ ಮಾನಿಟರ್ ಹೊಂದಿರುವ ಟ್ರೆಡ್‌ಮಿಲ್‌ ಆಗಿದೆ. ಇದು ಬಳಕೆದಾರರ ರೋಯಿಂಗ್ ಅಂಕಿಅಂಶಗಳು ಮತ್ತು ಲಭ್ಯವಿರುವ ಜೀವನಕ್ರಮಗಳನ್ನ ಹೊಂದಿದ್ದು, ನಿಮ್ಮ ದಿನಚರಿಯನ್ನು ಕಸ್ಟಮೈಸ್ ಮಾಡಲು ನಿಮಗೆ ಅನುಮತಿಸುವ ಮೂಲಕ ಮನೆಯಲ್ಲಿಯೇ ಗುಣಮಟ್ಟದ ತಾಲೀಮು ಅನುಭವವನ್ನು ನೀಡುತ್ತದೆ. ಇನ್ನು ಈ ರೋವರ್ ಅನ್ನ ವಾಟರ್‌ರೋವರ್ ಮೂಲಕ ವಿನ್ಯಾಸಗೊಳಿಸಲಾಗಿದ್ದು, ಬಳಕೆದಾರರ ಬೆನ್ನಿನ ವ್ಯಾಯಾಮ ಸುಲಭವಾಗುವಂತೆ ಸುಗಮ ಪ್ರತಿರೋಧವನ್ನು ತಲುಪಿಸಲು ಇದು ವಾಟರ್ ಫ್ಲೈವೀಲ್ ತಂತ್ರಜ್ಞಾನವನ್ನು ಒಳಗೊಂಡಿದೆ.

Most Read Articles
Best Mobiles in India

English summary
With the popularity of both Peloton's bike and treadmill growing at a rapid clip, other companies have done their best to emulate the success. The latest attempt comes from a joint project via the wearable company Huami and fitness brand Studio called the Amazfit HomeStudio.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more