ಆಂಡ್ರಾಯ್ಡ್ ಡಿವೈಸ್‌ನಲ್ಲಿ ಲಭ್ಯವಿರುವ ಟಾಪ್ 5 ಕೀಬೋರ್ಡ್ ಅಪ್ಲಿಕೇಶನ್‌ಗಳು
ಇದು ಟೆಕ್ನಾಲಜಿಯ ಜಮಾನ, ಟೆಕ್ನಾಲಜಿ ಮುಂದುವರೆದಂತೆ ಇಂದು ಇಡೀ ಜಗತ್ತಿನೆಲ್ಲೆಡೆ ಸ್ಮಾರ್ಟ್‌ಫೋನ್‌ಗಳ ಭರಾಟೆ ಜೋರಾಗಿಯೇ ನಡೆಯುತ್ತಿದೆ. ಸ್ಮಾರ್ಟ್‌ಫೋನ್‌ಗಳಿಗೂ ಮುನ್ನ ಕಿ ಪ್ಯಾಡ್ ಮೊಬೈಲ್ ಅನ್ನು ಉಪಯೋಗಿಸುತ್ತಿದ್ದ ಜನ ಇಂದು ಸ್ಮಾರ್ಟ್‌ಫೋನ್‌ಗಳ ಮೊರೆ ಹೋಗಿದ್ದಾರೆ. ಆದರೆ ಏನಂತೆ ಸ್ಮಾರ್ಟ್‌ಫೋನ್‌ನಲ್ಲಿ ಕಿ ಪ್ಯಾಡ್ ಇಲ್ಲ ನಿಜ ಆದರೆ ಪಠ್ಯ ಟೈಪ್ ಮಾಡಲು ಕೀ ಬೋರ್ಡ್ ಅಪ್ಲಿಕೇಶನ್‌ಗಳ ಅಗತ್ಯವಂತೂ ಇದ್ದೇ ಇದೆ.

ಹೌದು, ಟಚ್‌ಸ್ಕ್ರೀನ್ ಸ್ಮಾರ್ಟ್‌ಫೋನ್‌ಗಳು ಇಂದು ಭಾರಿ ಜನಪ್ರಿಯತೆಗೊಂಡಿವೆ. ಇನ್ನು ಈ ಟಚ್‌ಸ್ಕ್ರೀನ್ ಆಧಾರಿತ ಸ್ಮಾರ್ಟ್‌ಫೋನ್‌ಗಳಲ್ಲಿ ನೀವು ಯಾರಿಗಾದರೂ ಸಂದೇಶ ಕಳುಹಿಸಬೇಕಾದರೆ ಕಿಬೋರ್ಡ್ ಸಾಫ್ಟ್‌ವೇರ್ ಅಗತ್ಯವಾಗಿ ಬೇಕೆ ಬೇಕು. ಇದಕ್ಕಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ ಸಾಫ್ಟ್‌ವೇರ್ ಆಧಾರಿತ ಕೀಬೋರ್ಡ್‌ಗಳನ್ನ ನೀಡಲಾಗಿರುತ್ತದೆ. ಅಷ್ಟೇ ಯಾಕೆ ಇತ್ತೀಚಿನ ದಿನಗಳಲ್ಲಿ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ನೊಂದಿಗೆ, ನಮಗೆ ಬೇಕಾದಾಗ ನಮ್ಮ ಕೀಬೋರ್ಡ್ ವಿನ್ಯಾಸವನ್ನು ಬದಲಾಯಿಸುವ ಅವಕಶವೂ ಸಹ ಇದೆ. ಹಾಗಾದ್ರೆ ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಲ್ಲಿ ನೀವು ಉಪಯೋಗಿಸಬಹುದಾದ ಟಾಪ್ 5 ಕೀಬೋರ್ಡ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಗೂಗಲ್‌ನ ಜಿಬೋರ್ಡ್
ಗೂಗಲ್‌ನ ಜಿಬೋರ್ಡ್ ಪ್ರಸ್ತುತ ಭಾರತದ ಅತ್ಯಂತ ಜನಪ್ರಿಯ ಕೀಬೋರ್ಡ್ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಇದು ಉತ್ತಮ ಸಲಹೆಗಳೊಂದಿಗೆ ಉತ್ತಮ ಕೀಬೋರ್ಡ್‌ನಂತೆ ಕಾರ್ಯನಿರ್ವಹಿಸುತ್ತದೆಯಾದರೂ, ಇದು ಹಲವಾರು ಫೀಚರ್ಸ್‌ಗಳನ್ನು ಸಹ ಹೊಂದಿದೆ. ಗೂಗಲ್‌ನ ವಾಯ್ಸ್ -ಟೆಕ್ಸ್ಟ್, ಅನುವಾದ ಮತ್ತು ತ್ವರಿತ ವೆಬ್ ಹುಡುಕಾಟಗಳನ್ನು ಒಳಗೊಂಡಿವೆ. ಇನ್ನು ಈ ಕೀಬೋರ್ಡ್ ಇನ್ಸಟಂಟ್ ಎಮೋಜಿ ಸರ್ಚ್, ಭಾಷೆಗಳನ್ನು ಬದಲಾಯಿಸುವ ಸಾಮರ್ಥ್ಯವನ್ನು ಸಹ ಹೊಂದಿದೆ. ಇನ್ನು ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ ಎರಡರಲ್ಲೂ ಉಚಿತವಾಗಿ ಲಭ್ಯವಿದೆ.

ಮೈಕ್ರೋಸಾಫ್ಟ್ ಸ್ವಿಫ್ಟ್ಕೀ
ಟಚ್‌ಟೈಪ್ ಅಭಿವೃದ್ಧಿಪಡಿಸಿದ ಮತ್ತೊಂದು ಜನಪ್ರಿಯ ಕೀಬೋರ್ಡ್ ಅಪ್ಲಿಕೇಶನ್ ಸ್ವಿಫ್ಟ್ ಕೀ ಕೀಬೋರ್ಡ್. ಈ ಅಪ್ಲಿಕೇಶನ್ ಸದ್ಯ ಮೈಕ್ರೋಸಾಫ್ಟ್ ಸ್ವಾಧೀನದಲ್ಲಿದೆ. ಇನ್ನು ಈ ಕೀಬೋರ್ಡ್ ನ ವಿಶೇಷವೆಂದರೆ ಇದರಲ್ಲಿರುವ ದೊಡ್ಡ ಥೀಮ್ ಲೈಬ್ರರಿ. ಬಳಕೆದಾರರು ತಮ್ಮ ಆಯ್ಕೆಯ ಹಿನ್ನೆಲೆ ಚಿತ್ರಗಳೊಂದಿಗೆ ಕಸ್ಟಮ್ ಥೀಮ್‌ಗಳನ್ನು ರಚಿಸಲು ಸಹ ಇದು ಅನುಮತಿಸುತ್ತದೆ.

ಫ್ಲೆಕ್ಸಿ
ಇನ್ನು ಲಭ್ಯವಿರುವ ಉತ್ತಮ ಕೀಬೋರ್ಡ್‌ಗಳಲ್ಲಿ ಫ್ಲೆಕ್ಸಿ ಕೀಬೋರ್ಡ್ ಕೂಡ ಒಂದಾಗಿದೆ. ಇನ್ನು ಈ ಕೀಬೋರ್ಡ್ ಗೆಸ್ಚರ್ ಬೇಸ್ ಟೈಪಿಂಗ್ ಅನುಭವವನ್ನು ಸಂಪೂರ್ಣ ವಿಭಿನ್ನ ಹಂತಕ್ಕೆ ಕೊಂಡೊಯ್ಯುತ್ತದೆ. ಟೈಪ್ ಮಾಡಲು ಸ್ವೈಪ್ ಮಾಡಲು ಬಳಕೆದಾರರಿಗೆ ಅವಕಾಶ ನೀಡುವುದರ ಹೊರತಾಗಿ, ಪದಗಳು, ಬ್ಯಾಕ್‌ಸ್ಪೇಸ್ ಮತ್ತು ಪದ ಸಲಹೆಗಳ ಮೂಲಕ ಟಾಗಲ್ ಮಾಡಲು ಗೆಸ್ಚರ್‌ಗಳನ್ನು ಸಹ ಈ ಅಪ್ಲಿಕೇಶನ್ ಬೆಂಬಲಿಸುತ್ತದೆ.

ಬಬಲ್ ಕೀಬೋರ್ಡ್
ಬಬಲ್ ಕೀಬೋರ್ಡ್ ಅನ್ನು ಭಾರತದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಸದ್ಯ ಈ ಅಪ್ಲಿಕೇಶನ್‌ನಲ್ಲಿನ ಯಾವುದೇ ಖರೀದಿ ಮತ್ತು ಪ್ಯಾಕ್‌ಗಳಿಂದ ಈ ಫೀಚರ್ಸ್ ಉಚಿತವಾಗಿದೆ. ಇನ್ನು ಈ ಅಪ್ಲಿಕೇಶನ್ ಟನ್ ಎಮೋಜಿಗಳು, ಮೇಮ್ಸ್ ಮತ್ತು ಸ್ಟಿಕ್ಕರ್‌ಗಳನ್ನು ಬೆಂಬಲಿಸುತ್ತದೆ. ಇದನ್ನು ಪ್ರತ್ಯೇಕಿಸುವ ಫೀಚರ್ಸ್ ಎಂದರೆ ಬಳಕೆದಾರರು ತಮ್ಮ ಸೆಲ್ಫಿಯೊಂದಿಗೆ ಕಾರ್ಟೂನ್ ‘ಬಾಬಲ್' ರಚಿಸಲು ಸಹ ಇದರಲ್ಲಿ ಅವಕಾಶ ನೀಡಲಾಗಿದೆ.

ಗ್ರಾಮರ್ ಕೀಬೋರ್ಡ್
ಗ್ರಾಮರ್ ಕೀಬೋರ್ಡ್ Google Chrome ಬ್ರೌಸರ್‌ನಲ್ಲಿ ಹೆಚ್ಚಿನ ಜನರು ಬಳಸುವ ಜನಪ್ರಿಯ ಸಾಧನವಾಗಿದೆ. ಬಳಕೆದಾರರು ಬ್ರೌಸರ್‌ನಲ್ಲಿ ಎಲ್ಲಿ ಟೈಪ್ ಮಾಡಿದರೂ ಯಾವುದೇ ವ್ಯಾಕರಣ ದೋಷಗಳನ್ನು ಕಂಡುಹಿಡಿಯಲು ಈ ಕೀಬೋರ್ಡ್ ಸಹಾಯ ಮಾಡುತ್ತದೆ.


Click it and Unblock the Notifications








