ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಅತ್ಯುತ್ತಮ 5ಸ್ಮಾರ್ಟ್‌ಫೋನ್‌ಗಳು!
ಈಗಂತೂ ಸ್ಮಾರ್ಟ್‌ಫೋನ್‌ಗಳದ್ದೇ ಜಮಾನ ಪ್ರತಿಯೊಬ್ಬರೂ ಕೂಡಾ ಆಂಡ್ರಾಯ್ಡ್ ಚಾಲಿತ ಸ್ಮಾರ್ಟ್‌ಫೋನ್ ಖರೀದಿಸಬೇಕೆಂದು ಹಂಬಲಿಸುತ್ತಿರುತ್ತಾರೆ. ಆದರೆ ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿದ ರೀತಿಯ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದನ್ನು ಖರೀದಿಸಿದರೆ ಉತ್ತಮ ಎಂದು ಗೊಂದಲಕ್ಕೊಳಗಾಗುತ್ತಾರೆ. ಏಕೆಂದರೆ ಇಂದು ದಿನ ನಿತ್ಯಾ ಒಂದಲ್ಲ ಒಂದು ನೂತನ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆ ಪ್ರವೇಶಿಸುತ್ತಿರುವುದರಿಂದ ಗ್ರಾಹಕರಿಗೆ ಯಾವ ಸ್ಮಾರ್ಟ್‌ಪೋನ್ ಖರೀದಿಸುವುದು ಅನ್ನೊ ಗೊಂದಲ ಸಾಮಾನ್ಯವಾಗಿ ಬಿಟ್ಟಿದೆ.

ಪ್ರಸ್ತುತ ದಿನದಲ್ಲಿ ಯಾವ ಸ್ಮಾರ್ಟ್‌ಫೋನ್ ಕಂಪೆನಿಯು ಸಹ ಹಿಂದೆ ಉಳಿಯುಲು ಬಯಸುವುದಿಲ್ಲ. ಬಹಳಷ್ಟು ಬ್ರಾಂಡ್‌ಗಳು ಗ್ರಾಹಕರಿಗೆ ಸಾಧ್ಯವಾದಷ್ಟು ಕಡಿಮೆ ಬೆಲೆಗೆ ಸ್ಮಾರ್ಟ್‌ಫೋನ್‌ಗಳನ್ನ ನೀಡಲು ಬಯಸುತ್ತವೆ. ಅಂದಹಾಗೆ ನೀವು 10,000 ರೂ. ದರದಿಂದ 20,000 ರೂ. ದರದಲ್ಲಿ ಸ್ಮಾರ್ಟ್‌ಫೋನ್ ಖರೀದಿಸ ಬೆಕೆಂದಿದ್ದೀರಾ ಹಾಗಿದ್ದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ರೂ. 20,000 ಸಾವಿರ ದರದ ಒಳಗೆ ಲಭ್ಯವಿರುವ ಟಾಪ್ 5 ಸ್ಮಾರ್ಟ್‌ಫೋನ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ವಿವೋ Z1x
ವಿವೋZ1 ಎಕ್ಸ್ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಇನ್ನು ಈ ಸ್ಮಾರ್ಟ್‌ಫೋನ್ 2340 x 1080 ರೆಸಲ್ಯೂಶನ್ ಹೊಂದಿರುವ 6.38-ಇಂಚಿನ ಸೂಪರ್ ಅಮೋಲ್ಡ್ ಡಿಸ್‌ಪ್ಲೇಯನ್ನ ಹೊಂದಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 712 ಪ್ರೊಸೆಸರ್ ಹೊಂದಿದ್ದು ಓಎಸ್ ಆಂಡ್ರಾಯ್ಡ್ 9 ಪೈ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.ಅಲ್ಲದೆ 6GB RAM + 64GB ಶೇಖರಣಾ ಸಾಮರ್ಥ್ಯವನ್ನ ಹೊಂದಿದೆ. ಇನ್ನು ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಆಪ್ ಹೊಂದಿದ್ದು ಮುಖ್ಯ ಕ್ಯಾಮೆರಾ 48MP ಎರಡನೇ ಕ್ಯಾಮೆರಾ 8MP ಮೂರನೇ ಕ್ಯಾಮೆರಾ 2MP ಸೆನ್ಸಾರೆ್ ಹೊಂದಿದ್ದು ಸೆಲ್ಫಿ ಕ್ಯಾಮೆರಾ 32ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇನ್ನು 4,500mAh ಬ್ಯಾಟರಿ ಪ್ಯಾಕಪ್ ಹೊಂದಿದ್ದು ಇದರ ಬೆಲೆ 15,990 ರೂ, ಆಗಿದೆ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 50,
ಇನ್ನು ಕಡಿಮೆ ಬಜೆಟ್ ನಲ್ಲಿ ಸಿಗುವ ಅತ್ಯುತ್ತಮ ಸ್ಮಾರ್ಟ್‌ಫೋನ್ ಗಳಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ 50 ಸ್ಮಾರ್ಟ್‌ಫೋನ್ ಕೂಡ ಅತ್ಯುತ್ತಮ ಆಯ್ಕೆಯಾಗಿದೆ. ಈ ಸ್ಮಾರ್ಟ್‌ಫೋನ್ 6.4-ಇಂಚಿನ ಫುಲ್ ಎಚ್‌ಡಿ ಸೂಪರ್ ಅಮೋಲ್ಡ್ ಡಿಸ್‌ಪ್ಲೇ ಹೊಂದಿದ್ದು, ಎಕ್ಸಿನೋಸ್ 9610 ಆಕ್ಟಾ-ಕೋರ್ ಪ್ರೊಸೆಸರ್ ಹೊಂದಿದ್ದು ಓಎಸ್ ಆಂಡ್ರಾಯ್ಡ್ 9 ಪೈ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. 4GB RAM + 64GB ಶೇಖರಣಾ ಸಾಮರ್ಥ್ಯವನ್ನ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಆಪ್ ಹೊಂದಿದ್ದು, ಸೆಲ್ಫಿ ಕ್ಯಾಮೆರಾ 25 ಎಂಪಿ ಆಗಿದೆ. ಇದು 4,000mAh ಬ್ಯಾಟರಿ ಪ್ಯಾಕಪ್ ಹೊಂದಿದ್ದು ಇದರ ಬೆಲೆ 16990ರೂ,ಆಗಿದೆ

ನೋಕಿಯಾ 7.2
ನೋಕಿಯಾ 7.2 ಸ್ಮಾರ್ಟಫೋನ್ ಕೂಡ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದ್ದು, 6.3-ಇಂಚಿನ ಪೂರ್ಣ ಎಚ್ಡಿ + ಎಲ್ಸಿಡಿ ಡಿಸ್‌ಪ್ಲೇಯನ್ನ ಹೊಂದಿದೆ. 500 ನಿಟ್‌ಗಳ ಹೆಚ್ಚಿನ ಬ್ರೈಟ್‌ನೆಸ್ ಮತ್ತು ಎಚ್‌ಡಿಆರ್ ಬೆಂಬಲದ ಪ್ಯೂರ್ ಡಿಸ್‌ಪ್ಲೇ ತಂತ್ರಜ್ಞಾನ ಹೊಂದಿದೆ.ಇನ್ನು ಈ ಸ್ಮಾರ್ಟ್‌ಫೋನ್ ಸ್ನಾಪ್‌ಡ್ರಾಗನ್ 660 SoC ಪ್ರೊಸೆಸರ್ ಹೊಂದಿದ್ದು, 4GB ಅಥವಾ 6GB RAM ಮತ್ತು 64GB ಶೇಖರಣಾ ಸಾಮರ್ಥ್ಯವನ್ನ ಹೊಂದಿದೆ. ಇದು ಕೂಡ ಟ್ರಿಪಲ್ ರಿಯರ್ ಕ್ಯಾಮೆರಾ ಹೊಂದಿದ್ದು, ಫೇಸ್ ಡಿಟೆಕ್ಷನ್ ಆಟೋಫೋಕಸ್ ಹೊಂದಿರುವ 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. 3,500mAh ಬ್ಯಾಟರಿ ಪ್ಯಾಕಪ್ ಹೊಂದಿದ್ದು ಇದರ ಬೆಲೆ ಭಾರತದಲ್ಲಿ 16,599 ರೂ.ಆಗಿದೆ

ಇನ್ಫಿನಿಕ್ಸ್ ಹಾಟ್ 8
ಈ ಇನ್ಫಿನಿಕ್ಸ್ ಸ್ಮಾರ್ಟ್‌ಫೋಣ್ ಕೂಡ ಕಡಿಮೆ ಬಜೆಟ್‌ನಲ್ಲಿ ಲಭ್ಯವಿರುವ ಸ್ಮಾರ್ಟ್‌ಫೋನ್ ಆಗಿದೆ. ಈ ಸ್ಮಾರ್ಟ್‌ಫೋನ್ 6.5-ಇಂಚಿನ HD + ಡಿಸ್‌ಪ್ಲೇ ಹೊಂದಿದ್ದು, ಮೀಡಿಯಾಟೆಕ್ ಹೆಲಿಯೊ ಪಿ 22 SoC ಪ್ರೊಸೆಸರ್ ಒಳಗೊಂಡಿದ್ದು ಓಎಸ್ ಆಂಡ್ರಾಯ್ಡ್ 9 ಪೈ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಆಪ್ ಹೊಂದಿದ್ದು, 8ಮೆಗಾಫಿಕ್ಸೆಲ್ ಸೆನ್ಸಾರ್ ಒಳಗೊಂಡ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. 4GB RAM ಮತ್ತು 64GB ಶೇಖರಣಾ ಸಾಮರ್ಥ್ಯವಿದ್ದು, 5,000mAh ಬ್ಯಾಟರಿ ಪ್ಯಾಕಪ್ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಬೆಲೆ 6,999 ರೂ. ಆಗಿದೆ.

ಒಪ್ಪೋ ಎ 9 2020
ಒಪ್ಪೋ ಎ 9 2020 ಆಕರ್ಷಕ ವಿನ್ಯಾಸವುಳ್ಳ ಸ್ಮಾರ್ಟ್‌ಫೋನ್ ಆಗಿದೆ. ಈ ಸ್ಮಾರ್ಟ್‌ಫೋನ್ 6.5-ಇಂಚಿನ ಫುಲ್ ಹೆಚ್‌ಡಿ ಡಿಸ್‌ಪ್ಲೇಯನ್ನ ಹೊಂದಿದ್ದು, ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 665 SoC ಪ್ರೊಸೆಸರ್‌ನೊಂದಿಗೆ ಆಂಡ್ರಾಯ್ಡ್ 9 ಪೈ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು ಕ್ವಾಡ್ ಕ್ಯಾಮೆರಾ ಸೆಟ್‌ಆಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಎರಡನೇ ಕ್ಯಾಮೆರಾ 8ಮೆಗಾ ಪಿಕ್ಸೆಲ್ ಮೂರನೇ ಮತ್ತು ನಾಲ್ಕನೇ ಕ್ಯಾಮೆರಾ 2ಮೆಗಾ ಪಿಕ್ಸೆಲ್ ಸೆನ್ಸಾರ್ ಒಳಗೊಂಡಿದೆ. ಸೆಲ್ಫಿ ಕ್ಯಾಮೆರಾ 16ಮೆಗಾ ಪಿಕ್ಸೆಲ್ ಹೊಂದಿದೆ. 5000mAh ಬ್ಯಾಟರಿ ಪ್ಯಾಕ್‌ಆಪ್ ಹೊಂದಿದ್ದು, ಇದರ ಬೆಲೆ 15,990 ರೂ ಆಗಿದೆ.


Click it and Unblock the Notifications








