ಸ್ಮಾರ್ಟ್‌ಫೋನ್‌ಗಳಲ್ಲಿರುವ ಅತ್ಯುತ್ತಮ ಪ್ರೊಡೆಕ್ಟಿವಿಟಿ ಆಪ್‌ಗಳು!

|

ಇದು ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ಗಳ ಜಮಾನ, ಪ್ರತಿಯೊಬ್ಬರು ಕೂಡ ಸ್ಮಾರ್ಟ್‌ಫೋನ್‌ಗಳನ್ನ ಹೊಂದುವುದಕ್ಕೆ ಬಯಸುತ್ತಾರೆ. ಇನ್ನು ಈಗಾಗ್ಲೆ ಸ್ಮಾರ್ಟ್‌ಫೋನ್‌ಗಳಲ್ಲಿ ಹಲವು ಮಾದರಿಯ ಫೀಚರ್ಸ್‌ಗಳು ದೊರಕುತ್ತಿದ್ದು, ಬಳಕೆದಾರರಿಗೆ ಉತ್ತಮ ಅನುಭವ ನೀಡುತ್ತಿದೆ. ಹಾಗೇಯೆ ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲ ಪ್ರೊಡಕ್ಟಿವಿಟಿ ಆಪ್ಲಿಕೇಶನ್‌ ಫಾಮೆರ್ಟ್‌ಗಳು ಕೂಡ ತಮ್ಮ ಮಲ್ಟಿಪಲ್‌ ವರ್ಕ್ ನಿಂದ ಬಳಕೆದಾರರಿಗೆ ಅನುಕೂಲ ಮಾಡಿಕೊಡುತ್ತವೆ.

ಹೌದು

ಹೌದು, ಸ್ಮಾರ್ಟ್‌ಫೋನ್‌ಗಳು ಮತ್ತು ಪ್ರೊಡಕ್ಟಿವಿಟಿ ಅಪ್ಲಿಕೇಶನ್‌ಗಳು ಪರಸ್ಪರ ಹೊಂದಾಣಿಕೆಯ ಮೇಲೆ ಕಾರ್ಯನಿರ್ವಹಿಸಲಿವೆ. ಇವು ಒಂದು ಆಪ್‌ ಆಗಿರಬಹುದು ಇಲ್ಲವೇ ಸಾಫ್ಟವೇರ್‌ ರೂಪದಲ್ಲಿ ಇರಬಹುದು, ಕಡಿಮೆ ಸಮಯದಲ್ಲಿ ಹೆಚ್ಚಿನ ಕೆಲಸ ಮಾಡುವುದರಿಂದ ಇವುಗಳನ್ನ ಪ್ರೊಡಕ್ಟಿವಿಟಿ ಆಪ್‌ ಎಂದು ಕರೆಯಲಾಗುತ್ತೆ. ಇಂತಹ ಅಪ್ಲಿಕೇಶನ್‌ಗಳು ಸ್ಮಾರ್ಟ್‌ಫೋನ್‌ಗಳಲ್ಲಿ ತುಂಬಾ ಉಪಯುಕ್ತವಾಗಿದ್ದು, ಬಳಕೆದಾರರಿಗೆ ಅನುಕೂಲವಾಗುವಂತೆ ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲವು ಅಪ್ಲಿಕೇಶನ್‌ಗಳಿವೆ. ಆ ಅಪ್ಲಿಕೇಶನ್‌ಗಳು ಯಾವುವು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ನೋಡಿ.

Google ಡ್ರೈವ್

Google ಡ್ರೈವ್

ಗೂಗಲ್‌ ಡ್ರೈವ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದು ಪ್ರೊಡಕ್ಟಿವಿಟಿ ಅಪ್ಲಿಕೇಶನ್‌ ಆಗಿ ಕಾರ್ಯನಿರ್ವಹಿಸಲಿದೆ. ಇದು ಎಲ್ಲರ ಅರಿವಿಗೂ ಬಂದಿರುತ್ತೆ. ಆದರೂ ಹೆಚ್ಚಿನ ಮಂದಿಗೆ ವಿಶೇಷತೆ ತಿಳಿದಿರೋದಿಲ್ಲ. ಹೌದು ಗೂಗಲ್ ಡ್ರೈವ್ ಗೂಗಲ್ ಡಾಕ್ಸ್, ಶೀಟ್‌ಗಳು ಮತ್ತು ಸ್ಲೈಡ್‌ಗಳನ್ನು ಕ್ಲೌಡ್ ಸ್ಟೋರೇಜ್‌ ಮಾಡುತ್ತದೆ. ಅಲ್ಲದೆ ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನ ಓಪನ್‌ ಮಾಡಲು ಈ ಅಪ್ಲಿಕೇಶನ್ ಗೂಗಲ್ ಕೀಪ್ ಟಿಪ್ಪಣಿಯ ಜೊತೆಗೆ ಪಿಡಿಎಫ್ ರೀಡರ್‌ ಅನ್ನು ತೆರೆದುಕೊಳ್ಳುವಂತೆ ಮಾಡುತ್ತದೆ. ಅಲ್ಲದೆ ಬಳಕೆದಾರರು 15GB ಸ್ಟೋರೇಜ್‌ ಸ್ಪೇಸ್‌ ನೀಡಲಿದ್ದು. ದಾಖಲೆ ಸಂಗ್ರಹಕ್ಕೆ ಉತ್ತಮ ಅಪ್ಲಿಕೇಶನ್‌ ಇದಾಗಿದೆ.

IFTTT (ವೆಬ್‌ ಆಧಾರಿತ ಸೇವೆಗಳು)

IFTTT (ವೆಬ್‌ ಆಧಾರಿತ ಸೇವೆಗಳು)

ಸ್ಮಾರ್ಟ್‌ಫೋನ್‌ಗಳಲ್ಲಿನ ಹೆಚ್ಚು ಇಂಟರೆಸ್ಟಿಂಗ್‌ ಅಪ್ಲಿಕೇಶನ್‌ಗಳಲ್ಲಿ ಒಂದಾದ IFTTT( free web-based service) ಎಲ್ಲಾ ಅಪ್ಲಿಕೇಶನ್‌ಗಳು, ಸೇವೆಗಳು ಮತ್ತು ಡಿವೈಸ್‌ಗಳನ್ನು ಪರಸ್ಪರ ಸಂಪರ್ಕಿಸಲು ಸಹಾಯ ಮಾಡುತ್ತದೆ. ನಂತರ ವಾಯ್ಸ್‌ ಆಲರ್ಟ್‌ ಮೂಲಕ ಈ ಅಪ್ಲಿಕೇಶನ್‌ಗಳನ್ನು ನಿಯಂತ್ರಿಸಬಹುದಾಗಿದೆ. IFTTT ಯಾವುದೇ ಕೆಲಸವನ್ನು ಬೇಕಾದರೂ ಮಾಡುತ್ತದೆ ಮತ್ತು ನೀವು ಸೂಚನೆ ನೀಡಿದರೆ ಬೇಕಾದವರಿಗೆ ಕರೆ ಮಾಡುತ್ತದೆ. ಟ್ವಿಟರ್, ಟೆಲಿಗ್ರಾಮ್, ಗೂಗಲ್ ಡ್ರೈವ್, ಟ್ವಿಚ್, ವೆದರ್ ಅಂಡರ್‌ಗ್ರೌಡ್, ಡ್ರಾಪ್‌ಬಾಕ್ಸ್, ಸ್ಲಾಕ್, ಮತ್ತು ಗೂಗಲ್ ಹೋಮ್ ಮತ್ತು ಅಮೆಜಾನ್ ಅಲೆಕ್ಸಾ ಮುಂತಾದ ಸಾಧನಗಳು ಐಎಫ್‌ಟಿಟಿಯೊಂದಿಗೆ ಕಾರ್ಯನಿರ್ವಹಿಸುತ್ತವೆ.

ಕ್ಯಾಲೆಂಡರ್

ಕ್ಯಾಲೆಂಡರ್

ಈ ಅಪ್ಲಿಕೇಶನ್ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲೂ ಲಭ್ಯವಿದ್ದು, ಇದು ಸ್ವಯಂಚಾಲಿತವಾಗಿ ವಿಮಾನ, ಹೋಟೆಲ್, ರೆಸ್ಟೋರೆಂಟ್ ಮತ್ತು ರಿಸರ್ವ್‌ ಮಾಡುವುದು ಸೇರಿದಂತೆ, Gmail ನಿಂದ ನೀವು ಆಯ್ಕೆ ಮಾಡಿದ ಈವೆಂಟ್‌ಗಳನ್ನ ನೋಟಿಫೀಕೇಶನ್‌ ನೀಡುತ್ತದೆ. ಕ್ಯಾಲೆಂಡರ್‌ನಲ್ಲಿ, ನೀವು ಸಮಯವನ್ನು ಆಯ್ಕೆ ಮಾಡಬಹುದು ಮತ್ತು ಅಪ್ಲಿಕೇಶನ್‌ನಿಂದ ನೇರವಾಗಿ ಸಭೆಯನ್ನು ಕಾಯ್ದಿರಿಸಬಹುದು.

ಸ್ಲಾಕ್‌

ಸ್ಲಾಕ್‌

ನೀವು ನಡೆಸುವ ಪ್ರತಿಯೊಂದು ಸಂಭಾಷಣೆಯನ್ನು ಹುಡುಕಬಹುದಾದ ಅಪ್ಲಿಕೇಶನ್‌ ಇದಾಗಿದ್ದು. ಇದೊಂದು ಕಮ್ಯೂನಿಕೇಶನ್‌ ಅಪ್ಲಿಕೇಶನ್‌ ಆಗಿದೆ. ಇದು ಯಾವುದೇ ಡಿವೈಸ್‌ನಲ್ಲೂ ಬೇಕಾದರೂ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನ ಹೊಂದಿದೆ. ಇದು ನೀವು ಕಾರ್ಯನಿರ್ವಹಿಸುವ ಸಂಸ್ಥೆ ಅಥವಾ ಒಂದು ಯೂನಿಟ್‌ನಿಂದ ನಿಮಗೆ ಸಂವಹನ ನಡೆಸಲು ಅನುಕೂರವಾಗಿದೆ. ಇದು ಇಮೇಲ್‌ಗಿಂತ ಸ್ವಲ್ಪ ಭಿನ್ನವಾಗಿದ್ದು, ಇದರಲ್ಲಿ ಯಾಔಉದೇ ರೀತಿಯ ತೊಡಕು ಕಂಡುಬರುವುದಿಲ್ಲ. ಪರಸ್ಪರ ಡಾಕ್ಯುಮೆಂಟ್‌ಗಳು, ವಿಡಿಯೋ ಚಾಟ್‌ಗಳು ಮತ್ತು ಜಿಐಎಫ್‌ಗಳನ್ನು ಸಹ ಹಂಚಿಕೊಳ್ಳಬಹುದು.

ಫಾರೆಸ್ಟ್‌

ಫಾರೆಸ್ಟ್‌

ಈ ಅಪ್ಲಿಕೇಶನ್ ನಿಮಗೆ ಸದಾ ಆಲರ್ಟ್‌ ಮಾಡುತ್ತಿರುತ್ತದೆ. ಇದು ನಿಮ್ಮನ್ನು ಸ್ಮಾರ್ಟ್‌ಫೋನ್‌ಗಳನ್ನು ಕಡಿಮೆ ಬಳಸುವಂತೆ ವಾರ್ನಿಂಗ್‌ ನಿಡುತ್ತಿರುತ್ತದೆ. ಇದು ನಿಮ್ಮನ್ನು ಅರಣ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಹೊಂದುವಂತೆ ಮಾಡುತ್ತದೆ. ಅಲ್ಲದೆ ಪ್ರತಿ ಬಾರಿ ಫೋನ್ ಬಳಸುವಾಗ ಈ ಆಪ್ಲಿಕೇಶನ್‌ ಮರೆಯಾಗುತ್ತದೆ. ಸ್ವಲ್ಪ ಸಮಯದ ನಂತರ ಮತ್ತೆ ಕಾಣಸಿಗುತ್ತದೆ. ಇದು ಒಂದು ರೀತಿಯಲ್ಲಿ ಡಿಜಿಟಲ್ ಯೋಗಕ್ಷೇಮ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ.

Most Read Articles
Best Mobiles in India

English summary
A productivity app is any piece of software that allows one to get more work done in less time.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X