ನಿಮ್ಮ ಮೆದುಳಿಗೆ ಕೆಲಸ ಕೊಡುವ ಐದು ಅತ್ಯುತ್ತಮ ಮೊಬೈಲ್‌ ಗೇಮಿಂಗ್‌ ಅಪ್ಲಿಕೇಶನ್‌ಗಳು!

|

ಇತ್ತೀಚಿನ ದಿನಗಳಲ್ಲಿ ಟೆಕ್ನಾಲಜಿ ಆಧಾರಿತ ಮೊಬೈಲ್ ಗೇಮಿಂಗ್ ಅಪ್ಲಿಕೇಶನ್‌ಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಮುಂದುವರೆದ ಟೆಕ್ನಾಲಜಿಯ ಪರಿಣಾಮ ನಿವು ಕುಳಿತಲ್ಲೇ ನಿಮ್ಮ ಬೇಸರದ ಸಮಯ ಕಳೆಯುವ ಹಾಗೂ ನಿಮ್ಮ ಮೆದುಳಿಗೆ ಕೆಲಸ ನೀಡಬಲ್ಲ ಹಲವು ಗೇಮಿಂಗ್‌ ಅಪ್ಲಿಕೇಶನ್‌ಗಳು ಇಂದು ಲಭ್ಯವಿದೆ. ಅದರಲ್ಲೂ ಕಳೆದ ಕೆಲವು ವರ್ಷಗಳಲ್ಲಿ ಮೊಬೈಲ್‌ ಗೇಮಿಂಗ್‌ ಟೆಕ್ನಾಲಜಿ ಸಾಕಷ್ಟು ಮುಂದುವರೆದಿದ್ದು, ಮನರಂಜನೆಯ ಜೊತೆಗೆ ಮೆದುಳಿಗೆ ಕೆಲಸ ಕೊಡುವ ಗೇಮ್‌ ಅಪ್ಲಿಕೇಶನ್‌ಗಳು ಹೆಚ್ಚು ಬಿಡುಗಡೆ ಆಗುತ್ತಿವೆ.

ಮೊಬೈಲ್‌

ಹೌದು, ಮೊಬೈಲ್‌ ಗೇಮಿಂಗ್‌ ಅಪ್ಲಿಕೇಶನ್‌ಗಳು ಹೆಚ್ಚಿನ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಯುವಜನತೆಯೆ ಆಶಯಕ್ಕೆ ತಕ್ಕಂತೆ ಹೊಸ ಗೇಮಿಂಗ್‌ ಅಪ್ಲಿಕೇಶನ್‌ಗಳು ಕೂಡ ಎಂಟ್ರಿ ನೀಡುತ್ತಿವೆ. ಮನರಂಜನೆಯ ಜೊತೆಗೆ ನಿಮ್ಮ ಬುದ್ದಿಶಕ್ತಿಗೆ ಕೆಲಸ ನೀಡುವ ಗೇಮ್‌ಗಳು ಹೆಚ್ಚು ಗಮನ ಸೆಳೆಯುತ್ತಿವೆ. ಸದ್ಯ ಮೆದುಳಿಗೆ ಕೆಲಸ ನೀಡುವ ಮೊಬೈಲ್‌ ಗೇಮ್‌ಗಳು ಹೆಚ್ಚುಪ್ರಸಿದದ್ಧಿ ಪಡೆದುಕೊಂಡಿವೆ. ಹಾಗಾದ್ರೆ ಲಭ್ಯವಿರುವ 5 ಅತ್ಯುತ್ತಮ ಮೊಬೈಲ್ ಮೈಂಡ್‌ ಗೇಮಿಂಗ್‌ ಅಪ್ಲಿಕೇಶನ್‌ಗಳ ಬಗ್ಗೆ ತಿಳಿಸಿಕೊಡ್ತಿವಿ ಓದಿರಿ.

ಮೈಂಡ್ ಗೇಮ್ಸ್ - ಬ್ರೈನ್‌ ಟ್ರೈನಿಂಗ್‌ ಗೇಮ್ಸ್‌

ಮೈಂಡ್ ಗೇಮ್ಸ್ - ಬ್ರೈನ್‌ ಟ್ರೈನಿಂಗ್‌ ಗೇಮ್ಸ್‌

ಮೈಂಡ್ ಗೇಮ್ಸ್ - ಬ್ರೈನ್‌ ಟ್ರೈನಿಂಗ್‌ ಗೇಮ್ಸ್‌ ಅಪ್ಲಿಕೇಶನ್ ಅತ್ಯುತ್ತಮ ಮೊಬೈಲ್‌ ಬ್ರೈನ್‌ ಟ್ರೈನಿಂಗ್‌ ಗೇಮ್ಸ್‌ ಅಪ್ಲಿಕೇಶನ್‌ ಆಗಿದೆ. ಈ ಅಪ್ಲಿಕೇಶನ್‌ ಕೆಲವು ಫ್ರೀ ಗೇಮ್‌ಗಳನ್ನು ಒಳಗೊಂಡಿದೆ. ಆದರೆ ಉಳಿದ ಗೇಮ್‌ಗಳು ಆಡುವುದಕ್ಕೆ ಹಣ ಪಾವತಿಸಬೇಕಾಗುತ್ತದೆ. ಈ ಗೇಮ್‌ಗಳು ನಿಮ್ಮ ಗಮನ, ಮೈಂಡ್‌ಗೆ ಕೆಲಸ ನೀಡುವ ಸಾಮರ್ಥ್ಯವನ್ನು ಹೊಂದಿವೆ. ಅನುಕ್ರಮ ಕಂಠಪಾಠ, ಪದ ಕಂಠಪಾಠ ದಂತಹ ಲಕ್ಷಣಗಳನ್ನು ಒಳಗೊಂಡಿದೆ. ಇದು ನಿಮ್ಮ ಮೆಮೊರಿಗೆ ಕೆಲಸ ನೀಡಲಿದೆ. ಉಚಿತ ಆವೃತ್ತಿಯು ಸೀಮಿತವಾಗಿದ್ದರೂ ಸಹ, ಇದು ಐಒಎಸ್ ಮತ್ತು ಆಂಡ್ರಾಯ್ಡ್‌ನಲ್ಲಿ ಲಭ್ಯವಾಗಲಿದೆ.

ಪೀಕ್‌

ಪೀಕ್‌

ಪೀಕ್ ಗೇಮ್‌ ಅತ್ಯುತ್ತಮವಾದ ಬಳಕೆದಾರ ಇಂಟರ್ಫೇಸ್ ಅನ್ನು ಹೊಂದಿದೆ. ಇದರಲ್ಲಿ 40 ಕ್ಕೂ ಹೆಚ್ಚು ಗೇಮ್‌ಗಳನ್ನು ಆಡಬಹುದಾಗಿದೆ. ಈ ಗೇಮ್‌ಗಳು ಅಸಾಧಾರಣವಾಗಿದ್ದು, ಸಾಕಷ್ಟು ವಿನೋದಮಯವಾಗಿವೆ. ಇನ್ನು ಈ ಗೇಮಿಂಗ್ ಅಪ್ಲಿಕೇಶನ್‌ ನಿಮ್ಮ ಮೆದುಳಿಗೆ ಸಾಕಷ್ಟ ಕೆಲಸವನ್ನು ನೀಡಲಿದೆ. ಈ ಗೇಮ್‌ ಪ್ರತಿ ಹಂತದಲ್ಲೂ ಮೆಎದುಳಿಗೆ ಕೆಲಸ ನಿಡುತ್ತೆ.ನಿಮ್ಮ ಬುದ್ದಿಯನ್ನು ಚೆಕ್‌ ಮಾಡುತ್ತದೆ. ಇದಕ್ಕೆ ತಕ್ಕಂತೆ ನರವಿಜ್ಞಾನಿಗಳು ಮತ್ತು ಆಟದ ಅಭಿವರ್ಧಕರ ತಂಡ ಈ ಗೇಮ್‌ ಅನ್ನು ಅಭಿವೃದ್ಧಿಪಡಿಸಿದೆ. ಇನ್ನು ಈ ಪೀಕ್‌ ಗೇಮ್‌ನ ಅತ್ಯಂತ ಆಸಕ್ತಿದಾಯಕ ಫೀಚರ್ಸ್‌ ಎಂದರೆ "ವೈಯಕ್ತಿಕ ತರಬೇತುದಾರ" . ಇದು ಸರಿಯಾದ ಸಮಯದಲ್ಲಿ ಸರಿಯಾದ ವ್ಯಾಯಾಮವನ್ನು ಕಂಡುಹಿಡಿಯಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಪೀಕ್ ಬಳಕೆದಾರರ ಪ್ರಗತಿಯನ್ನು ಗಮನದಲ್ಲಿರಿಸಿಕೊಳ್ಳುತ್ತದೆ.

ಎಲಿವೇಟ್

ಎಲಿವೇಟ್

ಮೈಂಡ್‌ ಟ್ರೈನಿಂಗ್‌ ಗೇಮ್‌ಗಳಲ್ಲಿ ಎಲಿವೇಟ್‌ ಗೇಮ್‌ ಅಪ್ಲಿಕೇಶನ್‌ ಕೂಡ ಒಂದಾಗಿದೆ. ಇದು ನಿಮ್ಮ ಪ್ರಗತಿ, ವಿವರವಾದ ಕಾರ್ಯಕ್ಷಮತೆ ಟ್ರ್ಯಾಕಿಂಗ್ ಮತ್ತು 30 ಕ್ಕೂ ಹೆಚ್ಚು ಅರಿವಿನ ಆಟಗಳನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡಲಿದೆ. ಇನ್ನು ಎಲಿವೇಟ್ ಸಹ ಅನುಕೂಲಕರ ತಾಲೀಮು ಕ್ಯಾಲೆಂಡರ್ ಅನ್ನು ನೀಡುತ್ತದೆ. ಇನ್ನು ಈ ಗೇಮ್‌ನಲ್ಲಿ ಟ್ರೈನ್‌ಗಾಗಿ ಟ್ರ್ಯಾಕ್‌ ನಿರ್ಮಿಸುವ ಆಟವನ್ನು ಆಡಬಹುದು. ಇದಕ್ಕಾಗಿ ನೀವು ನಿಮ್ಮ ಮೆದುಳಿಗೆ ಕೆಲಸವನ್ನು ನೀಡಬೇಕಾಗುತ್ತೆ. ಈ ಗೇಮ್‌ನಲ್ಲಿ ತೀಕ್ಷ್ಣತೆ ಮತ್ತು ಬುದ್ದಿಮತ್ತೆಗೆ ಹೆಚ್ಚಿನ ಒತ್ತು ನೀಡಬೇಕಾಗುತ್ತೆ.

ಲುಮೋಸಿಟಿ

ಲುಮೋಸಿಟಿ

ಲುಮೋಸಿಟಿ ಅತ್ಯಂತ ಜನಪ್ರಿಯ ಬ್ರೈನ್‌ ಟ್ರೇನಿಂಗ್‌ ಗೇಮ್‌ಗಳಲ್ಲಿ ಒಂದಾಗಿದೆ. ಇದರಲ್ಲಿರುವ25 ಕ್ಕೂ ಹೆಚ್ಚು ಗೇಮ್‌ಗಳ ಸ್ಥಿರತೆಯು ನಿಮ್ಮ ವೈಯಕ್ತಿಕ ಕಾರ್ಯಕ್ಷಮತೆಗೆ ಹೊಂದಿಕೊಳ್ಳುತ್ತದೆ. ಇದು ಪ್ರತಿಯೊಬ್ಬ ಬಳಕೆದಾರರಿಗೂ ಕಸ್ಟಮ್-ಅನುಗುಣವಾದ ಮೆದುಳಿನ ತರಬೇತಿ ಅನುಭವವನ್ನು ಸೃಷ್ಟಿಸುತ್ತದೆ. ಎಲ್ಲಾ ರೀತಿಯ ವೇಳಾಪಟ್ಟಿಗಳಲ್ಲಿ ಜನರಿಗೆ ದೈನಂದಿನ ತರಬೇತಿ ಕಟ್ಟುಪಾಡುಗಳಲ್ಲಿ ಆಟಗಳನ್ನು ಸಂಯೋಜಿಸಲಾಗಿದೆ. ಕ್ಲಾಸಿಕ್ ಅರಿವಿನ ಮತ್ತು ನೆರೋಸೈಕೋಲಾಜಿಕಲ್ ಕಾರ್ಯಗಳನ್ನು ತೆಗೆದುಕೊಳ್ಳಲು ಲುಮಿನೊಸಿಟಿ ತಂಡವು ಪ್ರಪಂಚದಾದ್ಯಂತದ 40+ ವಿಶ್ವವಿದ್ಯಾಲಯ ಸಂಶೋಧಕರೊಂದಿಗೆ ಕೆಲಸ ಮಾಡುತ್ತಿದೆ.

ಫಿಟ್ ಬ್ರೈನ್ಸ್ ಟ್ರೈನರ್

ಫಿಟ್ ಬ್ರೈನ್ಸ್ ಟ್ರೈನರ್

ಫಿಟ್ ಬ್ರೈನ್ಸ್ ಟ್ರೈನರ್ ಗೇಮ್‌ ಬ್ರೈನ್‌ ಟ್ರೈನ್‌ ಗೇಮ್‌ಗಳಲ್ಲಿ ಅತ್ಯುತ್ತಮವಾದ ಅಪ್ಲಿಕೇಶನ್‌ ಆಗಿದೆ. ಇದರ ವಿನ್ಯಾಸವು ಹೆಚ್ಚು ಆಧುನಿಕ, ಆಕರ್ಷಕವಾಗಿದೆ. ಈ ಗೇಮ್‌ ನಿಮ್ಮ ಬುದ್ಧಿ ಶಕ್ತಿ ಪ್ರಗತಿಯನ್ನು ಪತ್ತೆಹಚ್ಚಲು, ಸಾಪ್ತಾಹಿಕ ಗುರಿಗಳನ್ನು ಹೊಂದಿಸಲು ಉತ್ತಮವಾಗಿದೆ. ಈ ಗೇಮ್‌ನ ಉಚಿತ ಆವೃತ್ತಿಯು 60+ ಆಟಗಳನ್ನು ಒಳಗೊಂಡಿದೆ, ಜೊತೆಗೆ 500+ ವರ್ಕೌಟ್‌ಗಳು ನಿಮ್ಮ ಮನಸ್ಸನ್ನು ಉತ್ತೇಜಿಸುತ್ತದೆ. ಆದರೆ ನಿಮ್ಮ ಐಕ್ಯೂನ ಪ್ರತಿಯೊಂದು ಹಂತವನ್ನು ತಲುಪಲು ಅಕ್ಷರಶಃ ನಿಮಗೆ ಸಹಾಯ ಮಾಡುತ್ತದೆ.

Best Mobiles in India

English summary
these five mobile games will help sharpen your mind.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X