ಇದೇ ವರ್ಷ ಬಿಡುಗಡೆಯಾಗುವ ಆಪಲ್ ಐಫೋನ್ ಹೆಸರು ಗೊತ್ತಾ..?

By GizBot Bureau
|

ಆಪಲ್ ನ ಹೊಸ ಡಿವೈಸ್ ಬಿಡುಗಡೆಯಾಗುವ ದಿನ ಹತ್ತಿರವಾಗುತ್ತಿದ್ದಂತೆ, ಇಂಟರ್ನೆಂಟ್ ನಲ್ಲಿ ಈ ಬಗ್ಗೆ ಸುದ್ದಿಗಳು ಮತ್ತು ಗಾಸಿಪ್ ಗಳ ಸುರಿಮಳೆಯೇ ಆಗುತ್ತಿದೆ. ಮುಂದಿನ ತಿಂಗಳು ಆಪಲ್ ನ ಹೊಸ ಐಫೋನ್ ಬಿಡುಗಡೆಯಾಗಲಿದೆ. ಈ ವರ್ಷ ಒಟ್ಟು ಮೂರು ಐಫೋನ್ ಗಳನ್ನು ಆಪಲ್ ಬಿಡುಗಡೆಗೊಳಿಸುವ ಸಾಧ್ಯತೆ ಇದ್ದು ಅದರಲ್ಲಿ ಒಂದು ಬಜೆಟ್ ಐಫೋನ್ ಆಗಿರಲಿದೆ ಎಂದು ಹೇಳಲಾಗಿದೆ.

ಸದ್ಯ ಆನ್ ಲೈನ್ ನಲ್ಲಿ ಹೊಸದಾಗಿ ಬಿಡುಗಡೆಗೊಳ್ಳುವ ಐಫೋನ್ ಗಳ ಹೆಸರು ಏನು ಎಂಬ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ಮೊಬೈಲ್ ಫನ್ ವರದಿಯು ಹೇಳುವಂತೆ 2018 ರ ಐಫೋನ್ ಮಾಡೆಲ್ ಗಳ ಹೆಸರು ಐಫೋನ್ 2018, ಐಫೋನ್ ಎಕ್ಸ್ಎಸ್ ಮತ್ತು ಐಫೋನ್ ಎಕ್ಸ್ಎಸ್ ಪ್ಲಸ್.

ಇದೇ ವರ್ಷ ಬಿಡುಗಡೆಯಾಗುವ ಆಪಲ್ ಐಫೋನ್ ಹೆಸರು ಗೊತ್ತಾ..?

ಈ ವರದಿಯು ಹೇಳುವಂತೆ ಐಫೋನ್ ಎಕ್ಸ್ಎಸ್ ಪ್ಲಸ್ 6.5 ಇಂಚಿನ ಐಫೋನ್ ಆಗಿದೆ ಐಫೋನ್ 2018 ಮತ್ತು ಐಫೋನ್ ಎಕ್ಸ್ಎಸ್ 6.1 ಇಂಚು ಹಾಗೂ 5.8 ಇಂಚಿನ ಸ್ಕ್ರೀನ್ ಸೈಜ್ ನ್ನು ಕ್ರಮವಾಗಿ ಹೊಂದಿದೆ.. ವೆಬ್ ಸೈಟ್ ನಲ್ಲಿ ಡಮ್ಮಿ ಐಫೋನ್ ಗಳ ಡಿಸೈನ್ ನ್ನೂ ಕೂಡ ನೀಡಲಾಗಿದೆ.

ಸದ್ಯ ಬಿಡುಗಡೆಗೊಂಡಿರುವ ವೀಡಿಯೋ ಅನುಸಾರ ಐಫೋನ್ ನಾಚ್ ಸ್ಕ್ರೀನ್ ನ್ನು ಐಫೋನ್ ಎಕ್ಸ್ ನಂತೆಯೇ ಹೊಂದಿರುತ್ತದೆ. ಐಫೋನ್ ಎಕ್ಸ್ಎಸ್ ಮತ್ತು ಐಫೋನ್ ಎಕ್ಸ್ಎಸ್ ಪ್ಲಸ್ ಎರಡೂ ಕೂಡ ಹಿಂಭಾಗದಲ್ಲಿ ಡುಯಲ್ ಕ್ಯಾಮರಾ ಸೆಟ್ ಅಪ್ ಹೊಂದಿರುತ್ತದೆ. 3ಡಿ ಫೇಸ್ ಸ್ಕ್ಯಾನಿಂಗ್ ನ್ನು ಒಳಗೊಂಡಿರುವ ಟ್ಯೂಡೆಪ್ತ್ ಇರುವ ಕ್ಯಾಮರಾವು ಇರುವ ಸಾಧ್ಯತೆ ಇದ್ದು ಟಚ್ ಐಡಿಗೆ ಸವಾಲೊಡ್ಡುವಂತೆ ಇರುವ ಸಾಧ್ಯತೆ ಇದೆ .

ಈಗಾಗಲೇ ಹಬ್ಬಿದ್ದ ಗಾಸಿಪ್ ಪ್ರಕಾರವೇ ಹೇಳುವುದಾದರೆ ಐಫೋನ್ ಗಳು ಐಓಎಸ್ 12 ರಲ್ಲಿ ರನ್ ಆಗುತ್ತದೆ ಮತ್ತು ಕಪ್ಪು, ಬಿಳಿ, ಬೂದು, ನೀಲ, ಕೆಂಪು ಮತ್ತು ಕೇಸರಿ ಬಣ್ಣಗಳ ಆವೃತ್ತಿಯು ಇದರಲ್ಲಿ ಲಭ್ಯವಾಗುತ್ತದೆ. ಐಫೋನ್ ಎಕ್ಸ್ಎಸ್ ಪ್ಲಸ್ ನ ಬೆಲೆ ಹೆಚ್ಚು ಕಡಿಮೆ 1000 ಡಾಲರ್, ಐಫೋನ್ ಎಕ್ಸ್ಎಸ್ ಮತ್ತು ಐಫೋನ್ 2018 ನ ಬೆಲೆ ಕ್ರಮವಾಗಿ 800 ಮತ್ತು 700 ಡಾಲರ್ ಆಗಿರುವ ಸಾಧ್ಯತೆ ಇದೆ.

ಇತ್ತೀಚೆಗೆ ಐಡಿಸಿ ಜಾಗತಿಕ ಸ್ಮಾರ್ಟ್ ಫೋನ್ ಶಿಪ್ ಮೆಂಟ್ ನ 2018 ರ ಎರಡನೇ ತ್ರೈಮಾಸಿಕದ ವರದಿಯನ್ನು ಬಿಡುಗಡೆಗೊಳಿಸಿದೆ. ಈ ವರದಿಯಲ್ಲಿ ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿ ಹುವಾಯಿ ಆಪಲ್ ಗೆ ಆಶ್ಚರ್ಯವನ್ನುಂಟು ಮಾಡಿದ್ದು, ಜಗತ್ತಿನ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿಗಳಲ್ಲಿ ಹುವಾಯಿ ಎರಡನೇ ಸ್ಥಾನದಲ್ಲಿದೆ.

Best Mobiles in India

English summary
These may be the names of the iPhones launching in September 2018. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X