ಪ್ರವಾಸಕ್ಕೆ ಹೊರಟಾಗ ಫೋಟೋ ಸುಂದರವಾಗಿ ಸೆರೆಹಿಡಿಯಲು ಇಲ್ಲಿವೆ ಬೆಸ್ಟ್ ಟಿಪ್ಸ್!
ಪ್ರವಾಸಕ್ಕೆಂದು ಹೊದ ಸ್ಥಳಗಳಲ್ಲಿ ನೆನಪಿಗಾಗಿ ಫೋಟೋ ತೆಗೆದುಕೊಳ್ಳುವುದ ಸಾಮಾನ್ಯವಾಗಿದೆ. ಅದರಲ್ಲೂ ಕೆಲವು ಪ್ರೇಕ್ಷಣೀಯ ಸ್ಥಳಗಳಿಗೆ ಫೋಟೋ ಶೂಟ್‌ಗಾಗಿಯೇ ಪ್ರವಾಸಕ್ಕೆ ಹೊರಡುತ್ತಾರೆ. ಸದ್ಯ ಸ್ಮಾರ್ಟ್‌ಫೋನ್‌ಗಳಲ್ಲಿಯೇ ಅತ್ಯುತ್ತಮ ಕ್ಯಾಮೆರಾ ಲೆನ್ಸ್ ಲಭ್ಯವಿರುವುದರಿಂದ ಕ್ಯಾಮೆರಾಗಳನ್ನು ಕೊಂಡೊಯ್ಯಬೇಕಾದ ಅನಿವಾರ್ಯತೆಯಿಲ್ಲ.
ಹೌದು, ಫೋಟೋ ಸೆರೆಹಿಡಿಯುವುದಕ್ಕೆ ಕ್ಯಾಮೆರಾ ಬದಲಾಗಿ ಸ್ಮಾರ್ಟ್‌ಫೋನ್ ಕ್ಯಾಮೆರಾ ಬಳಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಆದರೆ ನಿಮ್ಮ ಫೋನ್‌ನ ಫೋಟೋಗಳು ಹೇಗೆ ಇರಲಿದೆ ಅನ್ನೊದು ಮುಖ್ಯವಾಗುತ್ತದೆ. ಆದರಿಂದ ನಿಮ್ಮ ಸ್ಮಾರ್ಟ್‌ಫೋನ್ ಕ್ಯಾಮೆರಾದಲ್ಲಿ ಫೋಟೋ ಸೆರೆಹಿಡಿಯುವ ಮುನ್ನ ನೀವು ಕೆಲವು ಟ್ರಿಕ್ಸ್‌ಗಳನ್ನು ಫಾಲೋ ಮಾಡುವುದು ಸೂಕ್ತ. ಮೊಬೈಲ್ ಕ್ಯಾಮೆರಾದಲ್ಲಿ ಅತ್ಯುತ್ತಮ ಫೋಟೋ ಸೆರೆಹಿಡಿಯುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಮೊಬೈಲ್ ಕ್ಯಾಮೆರಾ ಬಗ್ಗೆ ತಿಳಿದುಕೊಳ್ಳಿ
ಬೆಸ್ಟ್ ಫೋಟೋ ಸೆರೆಹಿಡಿಯಬೇಕಾದರೆ ಮೊದಲಿಗೆ ನಿಮ್ಮ ಮೊಬೈಲ್ ಕ್ಯಾಮೆರಾಗಳ ಬಗ್ಗೆ ತಿಳಿದಿರಬೇಕು. ನಿಮ್ಮ ಫೋನ್ ಕ್ಯಮೆರಾ ಕ್ಯಾಪಸಿಟಿ ಎಷ್ಟಿದೆ ಎಂಬುದರ ಬಗ್ಗೆ ಅರಿವಿರಬೇಕು. ಪ್ರಸ್ತುತ ದಿನಗಳಲ್ಲಿ ಬರುವ ಸ್ಮಾರ್ಟ್‌ಫೋನ್‌ಗಳು ಮಲ್ಟಿಪಲ್ ಲೆನ್ಸ್ ಕ್ಯಾಮೆರಾ ಸೆಟ್‌ಅಪ್ ಹೊಂದಿರುತ್ತವೆ. ಇದರಲ್ಲಿ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್, ಟೆಲಿಫೋಟೋ ಲೆನ್ಸ್, ಡೆಡಿಕೇಟೆಡ್ ಪೋಟ್ರೇಟ್ ಲೆನ್ಸ್, ಮ್ಯಾಕ್ರೋ ಲೆನ್ಸ್ಗಳು ಸೇರಿದ್ದು, ನಿಮ್ಮ ಅಗತ್ಯಕ್ಕೆ ತಕ್ಕ ಲೆನ್ಸ್ ಮೂಲಕ ಫೋಟೋ ಸೆರೆಹಿಡಿಯಬಹುದಾಗಿದೆ.
ಕ್ಯಾಮೆರಾ ಲೆನ್ಸ್ ಸ್ವಚ್ಛಗೊಳಿಸಿರಿ
ಸ್ಮಾರ್ಟ್‌ಫೋನ್ ಕ್ಯಾಮೆರಾ ಲೆನ್ಸ್ ಶುದ್ಧವಾಗಿದ್ದರೆ ನಿಮ್ಮ ಫೋಟೋ ಕೂಡ ಉತ್ತಮವಾಗಿ ಮೂಡಿಬರಲಿದೆ. ಆದರಿಂದ ನಿಮ್ಮ ಕ್ಯಾಮೆರಾ ಲೆನ್ಸ್‌ಗಳನ್ನು ಸ್ವಚ್ಛಗೊಳಿಸುವುದು ಉತ್ತಮ. ಇದರಿಂದ ಸುಂದರವಾದ ಫೋಟೋಗಳನ್ನು ಸೆರೆಹಿಡಿಯಲು ಸಾಧ್ಯವಾಗಲಿದೆ.
ಹೆಚ್ಚುವರಿ ಟೂಲ್ಸ್
ಸ್ಮಾರ್ಟ್‌ಫೋನ್ ಕ್ಯಾಮೆರಾ ಮೂಲಕ ಅತ್ಯುತ್ತಮ ಫೋಟೋ ಸೆರೆಹಿಡಿಯುವುದಕ್ಕೆ ಹೆಚ್ಚುವರಿ ಟೂಲ್ಸ್‌ಗಳನ್ನು ಬಳಸಬಹುದು. ಇದಕ್ಕಾಗಿ ಟ್ರೈಪಾಡ್, ರಿಂಗ್ ಲೈಟ್ ಮತ್ತು ಹೆಚ್ಚುವರಿ ಲೆನ್ಸ್ಗಳನ್ನು ಬಳಸಿಕೊಳ್ಳಬಹುದು. ಅದರಲ್ಲೂ ನೀವು ಟ್ರೈಪಾಡ್ ಅನ್ನು ಲೋ ಲೈಟ್ ಸಂದರ್ಭಗಳಲ್ಲಿ ಬಳಸಿದರೆ ಬೆಸ್ಟ್ ಫೋಟೋಗಳನ್ನು ಸೆರೆಹಿಡಿಯಲು ಸಾದ್ಯವಾಗಲಿದೆ.

ಪೋರ್ಟಬಲ್ ರಿಂಗ್ ಲೈಟ್ಸ್
ವೀಡಿಯೊಗಳನ್ನು ರೆಕಾರ್ಡ್ ಮಾಡುವಾಗ ರಿಂಗ್ ಲೈಟ್ ಬಳಸಿದರೆ ಅತ್ಯುತ್ತಮವಾಗಿ ಮೂಡಿಬರಲಿದೆ. ಇದಲ್ಲದೆ ಕೆಲವು ಪೋರ್ಟಬಲ್ ಆಯ್ಕೆಗಳನ್ನು ಕೂಡ ಬಳಸಬಹುದಾಗಿದೆ.
ಫೋಕಲ್ ಲೆಂತ್ ಮತ್ತು ಆಂಗಲ್ಸ್
ಉತ್ತಮ ಫೋಟೋವನ್ನು ಸೆರೆಹಿಡಿಯಲು ಫೋಕಲ್ ಲೆಂತ್ ಮತ್ತು ಆಂಗಲ್ಸ್ ಕೂಡ ಬೆಟರ್ ಎನಿಸಿಕೊಂಡಿದೆ.
ನಿಮ್ಮ ಕಂಟೆಂಟ್ ಮೇಲೆ ಗಮನಹರಿಸಿ
ಫೋಟೋ ತೆಗೆಯುವಾಗ ಕಂಟೆಂಟ್ ಮೇಲೆ ಗಮನವಿಡುವುದು ಬೆಟರ್ ಎನಿಸಿದೆ. ಇದರಿಂದ ನೀವು ತೆಗೆಯಬೇಕಾದ ಫೋಟೋ ಸುಂದರವಾಗಿ ಮೂಡಿಬರಲಿದೆ. ಇದು ಫೋಟೋಗೆ ಸ್ಪಷ್ಟವಾದ ದೃಷ್ಟಿಕೋನವನ್ನು ನೀಡುತ್ತದೆ.
ಅಲ್ಟ್ರಾ-ವೈಡ್ ಫೋಟೋ ಕ್ಯಾಪ್ಚರ್ ಮಾಡಿ
ಅಲ್ಟ್ರಾ-ವೈಡ್ ಆಂಗಲ್‌ನಲ್ಲಿ ಬೆಟ್ಟ ಇಲ್ಲವೇ ಸರೋವರದ ಫೋಟೋ ಕ್ಯಾಪ್ಚರ್ ಸುಂದರವಾಗಿ ಬರಲಿದೆ.
ಸಂಜೆ ಸಮಯದಲ್ಲಿ ಫೋಟೋ ಸೆರೆಹಿಡಿಯುವುದು ಬೆಟರ್
ನೀವು ಫೋಟೋ ತೆಗೆಯುವಾಗ ಆಂಗಲ್‌ವ್ಯೂಗಿಂತ ಸಮಯವೂ ಕೂಡ ಬೆಟರ್ ಎನಿಸಿಕೊಂಡಿದೆ. ಅದರಲ್ಲೂ ಪೋರ್ಟ್ರೇಟ್ ಫೋಟೋಗಳನ್ನು ಸೆರೆಹಿಡಿಯುವುದಕ್ಕೆ ಸಂಜೆ ಸಮಯ ಸೂಕ್ತವಾಗಿದೆ. ಇನ್ನು ಮುಂಜಾನೆ ಸಮಯದಲ್ಲಿಯೂ ಸಹ ಫೋಟೋ ಸೆರೆಹಿಡಿಯುವುದರಿಂದ ಫೋಟೋಗಳನ್ನು ಸುಂದರವಾಗಿ ಕಾಣುವಂತೆ ಮಾಡಲಿದೆ.
ನಿಮ್ಮ ಫೋಟೋಗಳನ್ನು ಎಡಿಟ್ ಮಾಡಿ
ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಫೋಟೋ ಸೆರೆಹಿಡಿದ ನಂತರ ಅದರಲ್ಲಿ ಕೆಲವು ಎಡಿಟ್‌ಗಳನ್ನು ಮಾಡುವುದು ಉತ್ತಮವಾಗಿದೆ. ಇನ್ನು ಫೋನ್‌ನ ಕ್ಯಾಮೆರಾ ಎಷ್ಟೇ ಉತ್ತಮವಾಗಿದ್ದರೂ, ಫೋಟೋಗಳಲ್ಲಿ ಎಡಿಟ್ ಮಾಡುವುದರಿಂದ ಬಹಳಷ್ಟು ವ್ಯತ್ಯಾಸವನ್ನು ಮಾಡಬಹುದಾಗಿದೆ. ನಿಮ್ಮ ಫೋಟೋಗಳನ್ನು ನಿಮ್ಮ ಆಯ್ಕೆಗೆ ತಕ್ಕಂತೆ ಎಡಿಟ್ ಮಾಡುವುದರಿಂದ ಸುಂದರವಾಗಿ ಕಾಣುವಂತೆ ಮಾಡಬಹುದು.


Click it and Unblock the Notifications








