ನಾಯಿಗಳ ಭಾವನೆ ಅರಿಯಲು ಬಂತು ಹೊಸ ಸ್ಮಾರ್ಟ್‌ ಡಿವೈಸ್‌!

|

ನಾವು ಇಂದು ನಿಮಗೆ ತಿಳಿಸುವ ವಿಷಯವನ್ನ ನೀವು ಓದಿದ್ರೆ ನಿಮಗೆ ಆಶ್ಚರ್ಯವೆನಿಸದೆ ಇರೋದಿಲ್ಲ. ಹೇಳಿಕೇಳಿ ಇದು ಡಿಜಿಟಲ್‌ ಜಗತ್ತು, ತಾಂತ್ರಿಕವಾಗಿ ಸಾಕಷ್ಟು ಮುಂದುವರೆದಿದೆ. ಎಲ್ಲವೂ ಸ್ಮಾರ್ಟ್‌ ಆಗುತ್ತಿದೆ. ಹಾಗೇಯೆ ಎಲ್ಲವನ್ನ ತಿಳಿಸಯುವ ಮನುಷ್ಯನ ಕಾತುರ ಇನ್ನಷ್ಟು ಹೆಚ್ಚುತ್ತಲೇ ಇದೆ. ಹೌದು ನಿಮಗೆಲ್ಲಾ ಗೊತ್ತಿರುವ ಹಾಗೇ ನಾಯಿ ಹಾಗೂ ಮನುಷ್ಯನ ನಡುವೆ ಅವಿನಾಭಾವ ಸಂಬಂಧವಿದೆ. ನಾಯಿಗಳು ಮನುಷ್ಯನ ಜೊತೆ ಹೊಂದಿಕೊಳ್ಳಬಲ್ಲವು. ಇದೇ ಕಾರಣಕ್ಕೆ ನಾಯಿಗೆ ನಿಯತ್ತಿನ ಪ್ರಾಣಿ ಎನ್ನುತ್ತಾರೆ.

ಆದರೆ

ಆದರೆ ನಾಯಿಗಳು ಮನುಷ್ಯನ ಜೊತೆ ಇದ್ದಾಗಿಯೂ ನಾಯಿಗಳ ಭಾವನೆಗಳು ಮನುಷ್ಯನಿಗೆ ಸುಲಭವಾಗಿ ಅರ್ಥವಾಗುವುದಿಲ್ಲ. ಯಾಕಂದ್ರೆ ಮನುಷ್ಯನಂತೆ ಭಾವನೆಗಳನ್ನ ವ್ಯಕ್ತಪಡಿಸಲು ನಾಯಿಗಳಿಗೆ ಯಾವುದೇ ಭಾಷೆಯಿಲ್ಲ. ಮೂಕ ಪ್ರಾಣಿಯಾಗಿರೋ ನಾಯಿ ತನ್ನ ಭಾವನೆಗಳನ್ನ ವ್ಯಕ್ತಪಡಿಸುವುದಾದರೂ ಹೇಗೆ. ಆದರೆ ಇನ್ಮುಂದೆ ಇದನ್ನ ನಾವು ತಿಳಿಯಬಹುದಾಗಿದೆ. ನಾಯಿಗಳ ಭಾವನೆ ಅರಿಯುವುದಕ್ಕಾಗಿಯೇ ವಿಶೇಷ ಸಾಧನವೊಂದು ತಯಾರಾಗಿದ್ದು, ಇದರ ಮೂಲಕ ನಾಯಿ ಖುಷಿಯಾಗಿದೆಯಾ, ಇಲ್ಲವೇ ಎಂಬುದನ್ನ ಅರಿಯಬಹುದಂತೆ.

ಅಥವಾ

32,000 ವರ್ಷಗಳಿಂದಲೂ ಅಥವಾ ಅದಕ್ಕೂ ಹೆಚ್ಚಿನ ವರ್ಷಗಳಿಂದಲೂ ನಾಯಿಗಳು ಮನುಷ್ಯನ ಜೊತೆ ಹೊಂದಿಕೊಂಡಿವೆ. ಮನುಷ್ಯನ ನೆಚ್ಚಿನ ಸಾಕು ಪ್ರಾಣಿಗಳಲ್ಲಿ ಒಂದಾಗಿದೆ. ನಾಯಿಗಳನ್ನ ಸಾಕುವ ಶ್ವಾನಪ್ರಿಯರು ಅವುಗಳ ಜೊತೆ ಆಟ ತುಂಟಾಟ ಎಲ್ಲವನ್ನೂ ಆನಂಧಿಸುತ್ತಾರೆ. ಆದರೆ ನಿಮಗೆ ಆದಷ್ಟೇ ಖುಷಿ, ಸಂತೋಷ, ದುಃಖ, ನಿಜವಾಗಿಯೂ ಶ್ವಾನಗಳಿಗೆ ಆಗಿದೆಯಾ ಇಲ್ಲವೇ ಎಂಬುದನ್ನು ಆಳೆಯಲು ಜಪಾನಿನ Inupathy ಸಂಸ್ಥೆ ನಾಯಿಗೆ ತೊಡಿಸಬಹುದಾದ ಡಿವೈಸ್‌ ಒಂದನ್ನ ಪರಚಯಿಸಿದ್ದು ಇದರ ಮೂಲಕ ನಾಯಿಯ ಭಾವನೆಗಳನ್ನ ಅರಿಯಬಹುದಾಗಿದೆ.

ಹೌದು

ಹೌದು ಜಪಾನ್‌ ಕಂಪೆನಿ ಪರಿಚಯಿಸಿರೋ ಡಿವೈಸ್‌ನಲ್ಲಿ ಸಣ್ಣ ಹೃದಯ ಬಡಿತ ಮಾನಿಟರ್, ಆನ್‌ಬೋರ್ಡ್ ಪ್ರೊಸೆಸರ್ ಮತ್ತು ಎಲ್ಇಡಿ ಡಿಸ್‌ಪ್ಲೇ ಅನ್ನು ಅಳವಡಿಸಲಾಗಿದೆ, ಇದು ಚಿಹೋವಾಸ್‌ನಿಂದ ಸೇಂಟ್ ಬರ್ನಾರ್ಡ್ಸ್‌ವರೆಗಿನ ಎಲ್ಲ ನಾಯಿಗಳಿಗೂ ಹೊಂದಿಕೊಳ್ಳುತ್ತದೆ. ಈ ಸಾಧನವು ನಿಮ್ಮ ನಾಯಿಯ ಭಾವನಾತ್ಮಕ ಸ್ಥಿತಿಗಳನ್ನು ಮೇಲ್ವಿಚಾರಣೆ ಮಾಡುತ್ತದೆ, ಮತ್ತು ವಿಶ್ಲೇಷಿಸುತ್ತದೆ.

ನಾಯಿ

ನಾಯಿಯು ತುಂಬಾ ಒತ್ತಡಕ್ಕೊಳಗಾದಾಗ ಅಥವಾ ಆತಂಕಕ್ಕೊಳಗಾದಾಗ ನಾಯಿಗಳ ಹೃದಯ ಬಡಿತ ಹೆಚ್ಚಾಗುವುದರಿಂದ - ಅದರ ಮನಸ್ಥಿತಿಯ ಮುನ್ಸೂಚಕ ಸೂಚಿಯನ್ನು ತಿಳಿಯಬಹುದಾಗಿದೆ. ಅಷ್ಟೇ ಅಲ್ಲ ನಾಯಿಯ ಪ್ರಸ್ತುತ ಮನಸ್ಥಿತಿಯನ್ನು ಎಲ್ಇಡಿ ಪ್ರದರ್ಶನದ ಮೂಲಕ ನೋಡಬಹುದಾಗಿದ್ದು, ಎಲ್‌ಇಡಿಯಲ್ಲಿ ಹಸಿರು ಬಣ್ಣ ಬಂದರೆ ನಾಯಿ ವಿಶ್ರಾಂತಿಯಲ್ಲಿದೆಯೆಂದು, ಕೆಂಪು ಬಣ್ಣ ಕಂಡು ಬಂದರೆ ನಾಯಿ ತುಂಬಾ ಒತ್ತಡಕ್ಕೆ ಒಳಗಾಗಿದೆ ಎಂದು, ಕಾಮನಬಿಲ್ಲಿನ ಬಣ್ಣ ಕಂಡು ಬಂದರೆ ತುಂಬಾ ಸಂತೋಷವಾಗಿದೆಯೆಂದು ತಿಳಿಯಬಹುದಾಗಿದೆ. ಇನ್ನು ಈ ಡಿವೈಸ್‌ ಅನ್ನ ಸಂಬಂಧಿತ ಐಫೋನ್ ಅಥವಾ ಆಂಡ್ರಾಯ್ಡ್ ಅಪ್ಲಿಕೇಶನ್ ಮೂಲಕ ಕಾರ್ಯನಿರ್ವಹಿಸಬಹುದಾಗಿದೆ.

Most Read Articles
Best Mobiles in India

Read more about:
English summary
Despite spending the last 32,000 or so years adapting and evolving to become our most loyal companions, a dog's mood can still occasionally prove inscrutable to their human's understanding. Is Fifi yipping because she's excited or scared? With the help of Inupathy's upcoming device, you'll soon be able to tell.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more