ವಾಟ್ಸ್ಆಪ್ ಹ್ಯಾಂಗ್ ಮಾಡುತ್ತಿವೆ ಚೆಂಡು, ಕಪ್ಪು ಚುಕ್ಕಿ, ಅಳುವ ಎಮೊಜಿ!!..ಕಾರಣ ಏನು ಗೊತ್ತಾ?
ವಾಟ್ಸ್ಆಪ್‌ನಲ್ಲಿ ಸುಳ್ಳು ಸಂದೇಶಗಳು ಹರಿದಾಡುವುದು ಸಾಮಾನ್ಯ ಎಂದು ಎಲ್ಲರಿಗೂ ತಿಳಿದಿದೆ. ಆದರೆ, ಕಳೆದ ಕೆಲ ದಿನಗಳಿಂದ "If you touch the black point then your WhatsApp will hang" ಎಂಬ ಮೆಸೇಜ್ನೊಂದಿಗೆ ಕಪ್ಪು ಚುಕ್ಕಿಯ ಮೆಸೇಜ್ ಫಾರ್ವರ್ಡ್ ಆಗುತ್ತಿದೆ. ಒಂದು ವೇಳೆ ಈ ಚುಕ್ಕೆಯನ್ನು ಒತ್ತಿದರೆ ನಿಮ್ಮ ಮೊಬೈಲ್ ಹ್ಯಾಂಗ್ ಆಗುತ್ತದೆ.!
"If you touch the black point then your WhatsApp will hang" ಎಂಬ ಮೆಸೇಜ್ಗೆ ಪೂರಕವೆಂಬಂತೆ ಚೆಂಡಿನ ಎಮೊಜಿ ಹಾಕಿರುವ ಮೆಸೇಜ್ ಕೂಡಾ ಇದೇ ರೀತಿ ಹ್ಯಾಂಗ್ ಮಾಡುತ್ತದೆ. ಕಿಡಿಗೇಡಿಗಳು ವಾಟ್ಸ್‌ಆಪ್ ಬಗ್ ಅನ್ನು ಇಟ್ಟುಕೊಂಡು ಈ ಮೇಸೆಜ್ ಅನ್ನು ಕ್ರಿಯೇಟ್ ಮಾಡಿ ವಾಟ್ಸ್ಆಪ್‌ನಲ್ಲಿ ಹಿಬಿಟ್ಟಿರುವುವ ಮೆಸೇಜ್ ವೈರಲ್ ಆಗಿದೆ.!

ಇದರೊಂದಿಗೆ ಚೆಂಡಿನ ಎಮೊಜಿ ಹಾಗೂ ನಗುವ ಚಿತ್ರವಿರುವ ಮೆಸೇಜ್ ಕೂಡಾ ವೈರಲ್ ಆಗಿದೆ. ಸದ್ಯ ಈ ಮೆಸೇಜ್ಗಳು ಆಂಡ್ರಾಯ್ಡ್ ಮತ್ತು ಆಪಲ್ ಆಪರೇಟಿಂಗ್ ಸಿಸ್ಟಂಗಳಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದು, ಎಲ್ಲಾ ತಂತ್ರಜ್ಞರು ಇದಕ್ಕೆ ಪರಿಹಾರ ಕಂಡು ಹುಡುಕಲು ಮುಂದಾಗಿದ್ದಾರೆ. ಹಾಗಾದರೆ, ಏನಿದು ವೈರಲ್ ಸ್ಟೋರಿ ಎಂಬ ಪೂರ್ಣ ಮಾಹಿತಿಯನ್ನು ಮುಂದೆ ತಿಳಿಯಿರಿ.

ವಾಟ್ಸ್‌ಆಪ್ ಕ್ರಾಷ್
ನೀವು ವಾಟ್ಸ್‌ಆಪ್ ಚಾಟ್ ನಲ್ಲಿ ಬಂದಂತಹ ಮೇಸೆಜ್ ಮೇಲೆ ಕ್ಲಿಕ್ ಮಾಡಿದ ಸಂದರ್ಭದಲ್ಲಿ ನಿಮ್ಮ ವಾಟ್ಸ್ ಆಪ್ ತೊಂದರೆಗೆ ಸಿಲುಕಿಕೊಳ್ಳಲಿದೆ. ಇದರಿಂದ ನೀವು ವಾಟ್ಸ್‌ಆಪ್ ಸರಿಯಾಗಿ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಆ ನಂತರ ಆಪ್ ಅನ್ನು ಕ್ಲೋಸ್ ಮಾಡಿ ಮತ್ತೆ ತೆರೆಯಬೇಕು.


ಇದು ವಾಟ್ಸ್ಆಪ್ ಬಗ್
ಕೆಲವು ಕಿಡಿಗೇಡಿಗಳು ವಾಟ್ಸ್‌ಆಪ್ ಬಗ್ ಅನ್ನು ಇಟ್ಟುಕೊಂಡು ಈ ಮೇಸೆಜ್ ಅನ್ನು ಕ್ರಿಯೇಟ್ ಮಾಡಿ ಗ್ರೂಪ್ ಗಳಲ್ಲಿ ಮತ್ತು ವಾಟ್ಸ್ಆಪ್ ಚಾಟ್ ಗಳಲ್ಲಿ ಹರಿ ಬಿಟ್ಟಿದ್ದಾರೆ. ಮಾಹಿತಿಗಳ ಪ್ರಕಾರ, ಟೆಕ್ಕಿಗಳು ಈ ಸಮಸ್ಯೆಗೆ ಕಾರಣ ಹುಡುಕಿದ್ದು ಈ ಮೆಸೇಜ್ಗಳಲ್ಲಿ ಆರ್ಎಲ್ಎಮ್ ಅಥವಾ ASCII ಎಂಬ ಕೋಡ್ ಬಳಸಲಾಗಿದೆ ಎಂದು ಹೇಳಲಾಗಿದೆ.

ವಾಟ್ಸ್ಆಪ್ ಹ್ಯಾಂಗ್ ಆಗುವುದುದೇಕೆ?
ಹರಿಬಿಟ್ಟಿರುವ ಎಮೊಜಿ ಅಥವಾ ಕಪ್ಪು ಚುಕ್ಕೆಯಲ್ಲಿ ಕೋಡರ್ಗಳು ಸಹಸ್ರಾರು ಪದಗಳನ್ನು ASCIIಗೆ ಕನ್ವರ್ಟ್ ಮಾಡಿ ದಾಖಲು ಮಾಡಿರುತ್ತಾರೆ. ಬಳಿಕ ಈ ಮೆಸೇಜ್ನನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಾರೆ. ಮೆಸೇಜ್ ಓದಿ ಬಳಿಕ ಈ ಕಪ್ಪು ಚುಕ್ಕೆಯನ್ನು ಒತ್ತಿದರೆ ಅದು ಎಕ್ಸ್ಪೋರ್ಟ್ ಆಗಲು ಮುಂದಾಗುತ್ತದೆ. ಈ ವೇಳೆ ವಾಟ್ಸಾಪ್ ಹ್ಯಾಂಗ್ ಆಗಬಹುದು.

ಶೀಘ್ರವೇ ಸರಿಯಾಗುಲಿದೆ.
ವಾಟ್ಸ್‌ಆಪ್ ನಲ್ಲಿ ಬರುತ್ತಿರುವ ಬಗ್ ಅನ್ನು ಸರಿಪಡಿಸಲು ತಜ್ಞರ ತಂಡವು ಯತ್ನಿಸುತ್ತಿದ್ದು, ಶೀಘ್ರವೇ ಪರಿಹಾರವನ್ನು ನೀಡಲಿದ್ದಾರೆ ಎನ್ನಲಾಗಿದೆ. ಅಲ್ಲಿಯವರೆಗೂ ನೀವು ವಾಟ್ಸ್‌ಆಪ್‌ನಲ್ಲಿ ಬರುವಂತಹ ಮೇಸೆಜ್ ಅನ್ನು ತೆರೆಯಬೇಡಿ ಮತ್ತು ಮ್ಮ ಸ್ನೇಹಿತರಿಗೂ ಅದನ್ನು ಕಳುಹಿಸಬೇಡಿ.


Click it and Unblock the Notifications








