ನಿಮ್ಮ ಮನೆಯ ಕರೆಂಟ್ ಬಿಲ್ ಕಡಿಮೆ ಬರಬೇಕಾ? ಹೀಗೆ ಮಾಡಿ ಸಾಕು!
ನಿಮ್ಮ ಮನೆಯ ಕರೆಂಟ್‌ಬಿಲ್ ಜಾಸ್ತಿಯಾಗ್ತಾ ಇದೆಯಾ, ಬೇರೆ ಬೇರೆ ಕಮಿಂಟ್‌ಮೆಂಟ್‌ಗಳಿಗೆ ಹೊಂದಿಕೊಂಡಿರುವ ನಿಮಗೆ ಕರೆಂಟ್ ಬಿಲ್‌ನ ಹೆಚ್ಚಳ ಹೊರೆ ಆಗ್ತಾ ಇದೆಯಾ. ಮನೆಯ ಕರೆಂಟ್ ಬಿಲ್ ಕಡಿಮೆ ಬರುವಂತೆ ಮಾಡೋದು ಹೇಗೆ ಅನ್ನೊ ಚಿಂತೆ ಕಾಡ್ತಾ ಇದೆಯಾ? ಇದಕ್ಕಾಗಿ ಚಿಂತಿಸಬೇಕಾದ ಅನಿವಾರ್ಯತೆಯಿಲ್ಲ. ನಾವು ಹೇಳುವ ಕೆಲವು ಟ್ರಿಕ್ಸ್‌ಗಳನ್ನು ಫಾಲೋ ಮಾಡಿದರೆ ಸಾಕು.
ಹೌದು, ಕರೆಂಟ್ ಬಿಲ್‌ನಲ್ಲಿ ತಿಂಗಳಿನಿಂದ ತಿಂಗಳಿಗೆ ಹೆಚ್ಚಾದರೆ ಸಾಕು ಒಂದು ರೀತಿಯ ಕಿರಿಕಿರಿ ಎನಿಸಲಿದೆ. ಆದರೆ ನೀವು ಕೆಲವು ಟ್ರಿಕ್ಸ್‌ಗಳನ್ನು ಫಾಲೋ ಮಾಡಿದರೆ ನಿಮ್ಮ ಮನೆಯ ಕರೆಂಟ್ ಬಿಲ್ ಅನ್ನು ಕಡಿಮೆ ಮಾಡಬಹುದಾಗಿದೆ. ಹಾಗಾದ್ರೆ ನಿಮ್ಮ ಮನೆಯ ಕರೆಂಟ್ ಬಿಲ್ ಅನ್ನು ಕಡಿಮೆ ಬರುವಂತೆ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬೇಸಿಗೆಯ ಕಾಲವಾಗಿರುವುದರಿಂದ ಮನೆಗಳಲ್ಲಿ ಫ್ಯಾನ್, ಫ್ರಿಡ್ಜ್, ಎಸಿ ಬಳಕೆ ಸಾಮಾನ್ಯವಾಗಿರುತ್ತದೆ. ಇದೇ ಕಾರಣಕ್ಕೆ ಮನೆಗಳಲ್ಲಿ ವಿದ್ಯುತ್ ಬಿಲ್ ಸಹಜವಾಗಿಯೇ ಏರಿಕೆಯಾಗಿರಲಿದೆ. ಇಂತಹ ಸನ್ನಿವೇಶದಲ್ಲಿ ಕೆಲವು ಹೊಂದಾಣಿಕೆ ಇರುವವರಿಗೆ ಕರೆಂಟ್ ಬಿಲ್ ಏರಿಕೆ ಶಾಕ್ ಹೊಡೆದಂತಾಗುತ್ತದೆ. ಆದರೆ ನೀವು ಬೇಸಿಗೆ ಕಾಲದಲ್ಲಿಯೂ ಕರೆಂಟ್ ಹೆಚ್ಚು ಬರದಂತೆ ಮಾಡಬೇಕಾದ್ರೆ ಈ ಕೆಳಗಿನ ಅಂಶಗಳನ್ನು ಅನುಸರಿಸುವುದು ಸೂಕ್ತವಾಗಿದೆ.
* ಬಳಕೆಯಲ್ಲಿಲ್ಲದಿದ್ದಾಗ ಉಪಕರಣಗಳನ್ನು ಆಫ್ ಮಾಡಿ
ನಿಮ್ಮ ಮನೆಯಲ್ಲಿ ಕರೆಂಟ್ ಬಿಲ್ ಕಡಿಮೆ ಮಾಡಬೇಕಾದರೆ ನೀವು ಮಾಡಬೇಕಾದ ಮೊದಲ ಕೆಲಸ ಅನಗತ್ಯವಾಗಿ ಬೆಳಗುವ ಲೈಟ್‌ಗಳನ್ನು ಸ್ವಿಚ್ ಆಫ್ ಮಾಡುವುದು. ಮನೆಯಲ್ಲಿರುವ ವಿದ್ಯುತ್ ದೀಪಗಳು, ಫ್ಯಾನ್‌ಗಳು, ಗೃಹೋಪಯೋಗಿ ವಸ್ತುಗಳು ಮತ್ತು ಇತರ ಎಲೆಕ್ಟ್ರಾನಿಕ್ ಡಿವೈಸ್‌ಗಳ ಬಳಕೆ ಅವಶ್ಯಕತೆಯಿಲ್ಲದಿದ್ದಾಗ ಆಫ್ ಮಾಡುವುದು ಉತ್ತಮ.

* ಸ್ಟ್ಯಾಂಡ್‌ಬೈ ಮೋಡ್‌ನಲ್ಲಿ ಉಪಕರಗಳ ಬಳಕೆ ಮಾಡುವುದನ್ನು ತಪ್ಪಿಸಿ
ಇನ್ನು ನೀವು ಮನೆಯ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡಲು, AC, ವಾಷಿಂಗ್ ಮೆಷಿನ್ ಮತ್ತು ಇತರೆ ವಿದ್ಯುತ್ ಚಾಲಿತ ಉಪಕರಣಗಳನ್ನು ಸ್ಟ್ಯಾಂಡ್‌ಬೈ ಮೋಡ್‌ನಲ್ಲಿಡುವುದನ್ನು ತಪ್ಪಿಸುವುದು ಸೂಕ್ತವಾಗಲಿದೆ. ಅಂದರೆ ಟಿವಿಯನ್ನು ಸಂಪೂರ್ಣವಾಗಿ ಆಫ್ ಮಾಡಿ, ವಾಷಿಂಗ್ ಮೆಷಿನ್ ಸೇರಿದಂತೆ ಸ್ಟ್ಯಾಂಡ್‌ಬೈ ಮೋಡ್‌ನಲ್ಲಿಡುವ ಉಪಕರಣಗಳಿಗೆ ಇದು ಅನ್ವಯಿಸಲಿದೆ.
* 5-ಸ್ಟಾರ್ ರೇಟಿಂಗ್ ಹೊಂದಿರುವ ಪ್ರಾಡಕ್ಟ್‌ಗಳನ್ನು ಖರೀದಿಸಿ
ನಿಮ್ಮ ಮನೆಯಲ್ಲಿ ಹೆಚ್ಚಿನ ಪವರ್ ದಕ್ಷತೆಯ ರೇಟಿಂಗ್ ಪಡೆದಿರುವ ಪ್ರಾಡಕ್ಟ್‌ಗಳು ಕಡಿಮೆ ಪವರ್ ಅನ್ನು ಬಳಸುತ್ತವೆ. ಆದರಿಂದ ನೀವು 5-ಸ್ಟಾರ್ ರೇಟಿಂಗ್ ಹೊಂದಿರುವ ಪ್ರಾಡಕ್ಟ್‌ಗಳನ್ನು ಖರೀದಿಸುವುದು ಸೂಕ್ತ. ಇದು ನಿಮ್ಮ ಮನೆಯ ರೆಫ್ರಿಜರೇಟರ್‌ಗಳು, ವಾಷಿಂಗ್ ಮೆಷಿನ್‌ಗಳು ಮತ್ತು ಟಿವಿಗಳಿಗೆ ಅನ್ವಯಿಸಲಿದೆ.

* ಸ್ಮಾರ್ಟ್ ಹೋಮ್ ಡಿವೈಸ್‌ಗಳನ್ನು ಬಳಸಿ
ಮನೆಯಲ್ಲಿ ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವುದಕ್ಕೆ ಸ್ಮಾರ್ಟ್ ಹೋಮ್ ಡಿವೈಸ್‌ಗಳನ್ನು ಬಳಸಬೇಕಾಗುತ್ತದೆ. ಸ್ಮಾರ್ಟ್ ಲೈಟ್‌ಗಳು, ಸ್ಮಾರ್ಟ್ ಪ್ಲಗ್, ಸ್ಮಾರ್ಟ್ ಸ್ವಿಚ್‌ಗಳು ಮನೆಯಲ್ಲಿ ಕರೆಂಟ್ ಹೆಚ್ಚು ಬರದಂತೆ ತಡೆಯಲಿವೆ. ಅಂದರೆ ಸ್ಮಾರ್ಟ್ ಹೋಮ್ ಡಿವೈಸ್‌ಗಳು ನಿಮಗೆ ಅವಶ್ಯಕತೆಯಿಲ್ಲ ಸಂದರ್ಭದಲ್ಲಿ ಅಟೊಮ್ಯಾಟಿಕ್ ಆಫ್ ಆಗುವ ಸಾಮರ್ಥ್ಯವನ್ನು ಪಡೆದಿವೆ. ಗೀಸರ್‌ಗಳು, ಮೋಟಾರ್‌ಗಳು, ರೂಮ್ ಹೀಟರ್‌ಗಳಿಗೆ ಇವುಗಳನ್ನು ಅನ್ವಯಿಸಬಹುದು.
* ವಿದ್ಯುತ್ ಬಳಕೆಯನ್ನು ಮೇಲ್ವಿಚಾರಣೆ ಮಾಡಿ
ಸ್ಮಾರ್ಟ್ ಹೋಮ್ ಡಿವೈಸ್‌ಗಳ ರೀತಿಯಲ್ಲಿಯೇ ನಿಮ್ಮ ಮನೆಯ ವಿದ್ಯುತ್ ಬಿಲ್ ಕಡಿಮೆ ಮಾಡುವುದಕ್ಕೆ ವೈಫೈ ಆಧಾರಿತ ಡಿವೈಸ್‌ಗಳು ಕೂಡ ಸಹಾಯ ಮಾಡಲಿವೆ. ಇದಕ್ಕಾಗಿ ನೀವು ನಿಮ್ಮ ಮನೆಯಲ್ಲಿ ಸ್ಮಾರ್ಟ್ ಮೀಟರ್‌ಗಳನ್ನು ಬಳಸಬಹುದು. ಇದು ಬಳಕೆದಾರರಿಗೆ ಸಂಪೂರ್ಣ ಮನೆಗೆ ವಿದ್ಯುತ್ ಬಳಕೆಯನ್ನು ಅಳೆಯಲು ಅನುಮತಿಸುತ್ತದೆ.


Click it and Unblock the Notifications








