ಜೂಮ್‌‌ಗೆ ಬದಲಿ ಆಪ್‌ ನಿರ್ಮಿಸಲು 5 ಸ್ಟಾರ್ಟ್‌ಅಪ್‌ ಆಯ್ಕೆ ಮಾಡಿದ ಕೇಂದ್ರಸರ್ಕಾರ!

|

ವೀಡಿಯೊ ಕಾನ್ಫೆರೆನ್ಸಿಂಗ್‌ ಆಪ್ಲಿಕೇಶನ್‌ ಜೂಮ್‌ನಲ್ಲಿ ಲೋಪದೋಷವಿದ್ದು, ಸುರಕ್ಷತೆಯ ದೃಷ್ಟಿಯಿಂದ ಇದರ ಬಳಕೆ ಸೂಕ್ತವಲ್ಲ ಎಂದು ಈಗಾಗಲೇ ಸರ್ಕಾರ ಬಲಕೆದಾರರಿಗೆ ಸೂಚಿಸಿತ್ತು. ಇದೀಗ ಜೂಮ್‌ ಆಪ್‌ ಬದಲಿಗೆ ಮತ್ತೊಂದು ಆಪ್‌ ಡೆವಲಪ್‌ ಮಾಡುವುದಕ್ಕಾಗಿ ಕೆಲವು ಸ್ಟಾರ್ಟ್‌ಆಪ್‌ಗಳನ್ನ ಆಯ್ಕೆ ಮಾಡಿದೆ. ಸದ್ಯ ಈಗಾಗಲೇ ಭಾರತದಲ್ಲಿ ಆತ್ಮಾನಿರ್ಭರ್‌ ಭಾರತ್‌ ಆಪ್‌ ಇನೋವೇಶನ್‌ ಅಡಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಹೊಸ ಆಪ್‌ಗಳನ್ನ ಡೆವಲಪ್‌ ಮಾಡುವವರಿಗೆ ಭಾರತ ಸರ್ಕಾರ ಭರ್ಜರಿ ಉಡುಗೊರೆಯನ್ನ ಘೋಷಿಸಿದೆ.

ಪರ್ಯಾಯ ಆಪ್

ಹೌದು, ಜೂಮ್‌ ಆಪ್‌ಗೆ ಪರ್ಯಾಯ ಆಪ್‌ ಅನ್ನು ಅಭಿವೃದ್ದಿ ಪಡಿಸುವುದಕ್ಕಾಗಿ ಭಾರತ ಸರ್ಕಾರ ಮುಂದಾಗಿದ್ದು, ಇದಕ್ಕಾಗಿ ಹಲವು ಸ್ಮಾರ್ಟ್‌ಆಪ್‌ಗಳನ್ನು ಆಯ್ಕೆ ಮಾಡಿದೆ. ಈ ಮೂಲಕ ಸ್ವದೇಶಿ ಆಪ್‌ಗಳನ್ನ ಅಭಿವೃದ್ದಿ ಪಡಿಸಲು ಉತ್ತೇಜಿಸಲು ಮುಂದಾಗಿದೆ. ಸದ್ಯ ಇದೀಗ ಭಾರತ ಸರ್ಕಾರ ಜೂಮ್‌ ಬದಲಿಗೆ ಮತ್ತೊಂದು ಆಪ್‌ ಅನ್ನು ಅಭಿವೃದ್ದಿ ಪಡಿಸಲು ಯಾವ್ಯಾವ ಸ್ಟಾರ್ಟ್‌ಅಪ್‌ಗಳನ್ನ ಆಯ್ಕೆ ಮಾಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.

ತಂತ್ರಜ್ಞಾನ

ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಈ ವರ್ಷದ ಏಪ್ರಿಲ್ ಆರಂಭದಲ್ಲಿ ಜೂಮ್‌ ಆಪ್‌ ಬದಲಿಗೆ ಸ್ಥಳೀಯ ತಂತ್ರಜ್ಞಾನ ಬಳಸಿ ಸುರಕ್ಷಿತ ವಿಡಿಯೋ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್ ನಿರ್ಮಿಸಲು ಆಹ್ವಾನ ನೀಡಿತು. ಅಲ್ಲದೆ ಇದಕ್ಕಾಗಿ ಕಳೆದ ತಿಂಗಳು ಸರ್ಕಾರ 10 ಭಾರತೀಯ ಸ್ಟಾರ್ಟ್‌ಅಪ್‌ಗಳನ್ನು ಶಾರ್ಟ್‌ಲಿಸ್ಟ್ ಮಾಡಿತು, ಇದೀಗ ಅದು ಐದು ಸ್ಟಾರ್ಟ್‌ಅಪ್‌ಗಳಿಗೆ ಇಳಿದಿದೆ. ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಹೈದರಾಬಾದ್‌ನ ಪೀಪಲ್‌ಲಿಂಕ್ ಯೂನಿಫೈಡ್ ಕಮ್ಯುನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್, ಜೈವ್, ಟೆಕ್ಜೆನ್ಸಿಯಾ ಸಾಫ್ಟ್‌ವೇರ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಆಲಪ್ಪುಹ್ಜಾ, ಇನ್‌ಸ್ಟ್ರೈವ್ ಸಾಫ್ಟ್‌ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್, ಚೆನ್ನೈ, ಮತ್ತು ಹೈದರಾಬಾದ್‌ನ ಸೋಲ್‌ಪೇಜ್ ಐಟಿ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸರ್ಕಾರ ಆಯ್ಕೆ ಮಾಡಿದ ಮೊದಲ ಐದು ಆರಂಭಿಕ ಉದ್ಯಮಗಳಾಗಿವೆ.

ಸ್ಟಾರ್ಟ್ಅಪ್

ಇವುಗಳಲ್ಲಿ, ವಿಡಿಯೋ ಕಾನ್ಫರೆನ್ಸಿಂಗ್ ಸ್ಟಾರ್ಟ್ಅಪ್ ನಿರ್ಮಿಸಲು ಅಗ್ರ ಮೂರು ಸ್ಟಾರ್ಟ್‌ಅಪ್‌ಗಳಿಗೆ ತಲಾ ₹ 20 ಲಕ್ಷ ನೀಡಲಾಗಿದೆ. ಪೀಪಲ್‌ಲಿಂಕ್ ಯೂನಿಫೈಡ್ ಕಮ್ಯುನಿಕೇಷನ್ಸ್ ಪ್ರೈವೇಟ್ ಲಿಮಿಟೆಡ್, ಸರ್ವ್ ವೆಬ್ಸ್ ಪ್ರೈವೇಟ್ ಲಿಮಿಟೆಡ್, ಮತ್ತು ಟೆಕ್ಜೆನ್ಸಿಯಾ ಸಾಫ್ಟ್‌ವೇರ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮೊದಲ ಮೂರು ಆರಂಭಿಕ ಉದ್ಯಮಗಳಾಗಿವೆ. ಉತ್ಪನ್ನವನ್ನು ಅಭಿವೃದ್ಧಿಪಡಿಸಲು ಇತರ ಎರಡು ಸ್ಟಾರ್ಟ್‌ಅಪ್‌ಗಳಿಗೆ ತಲಾ ₹ 15 ಲಕ್ಷ ನೀಡಲಾಗಿದೆ.

ಡೇಟಾ

ವೀಡಿಯೊ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್‌ಗಳ ಅಂತಿಮ ಮತ್ತು ಸ್ಥಿರ ಆವೃತ್ತಿಗಳು ಈ ತಿಂಗಳ ಅಂತ್ಯದ ವೇಳೆಗೆ ಹೊರಬರುವ ನಿರೀಕ್ಷೆಯಿದೆ. ಅಲ್ಲದೆ ಈ ಮಾದರಿಯಲ್ಲಿ ಹೋಂ ಗ್ರೋನ್ ವಿಡಿಯೋ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಅಭಿವೃದ್ಧಿಪಡಿಸುವ ಪ್ರಮುಖ ಉದ್ದೇಶ ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆ. ಹೊಸ ಮತ್ತು ಸಂಭಾವ್ಯ ಜೂಮ್ ಪ್ರತಿಸ್ಪರ್ಧಿಗಳು ಆಡಿಯೋ, ವಿಡಿಯೋ ಮತ್ತು ಫೈಲ್‌ಗಳು ಸೇರಿದಂತೆ ಎಲ್ಲಾ ಡೇಟಾಗೆ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಹೊಂದಿರುತ್ತವೆ ಎನ್ನಲಾಗಿದೆ. ಅಲ್ಲದೆ ಡೇಟಾವನ್ನು ಕ್ಲೌಡ್‌ ಮೇಲೆ ಸಂಗ್ರಹಿಸಲಾಗುತ್ತದೆ ಮತ್ತು ಬಳಕೆದಾರರಿಗೆ ಬಹು ಅಂಶ ದೃಡೀಕರಣಗಳನ್ನು ಒದಗಿಸಲಾಗುತ್ತದೆ ಎನ್ನಲಾಗ್ತಿದೆ.

ಸ್ಟಾರ್ಟ್‌ಆಪ್‌

ಸದ್ಯ ಜೂಮ್‌ಗೆ ಪರ್ಯಾಯ ಆಪ್‌ ಅನ್ನು ಅಭಿವೃದ್ದಿ ಪಡಿಸಲು ಸರ್ಕಾರ ಐದು ಸ್ಟಾರ್ಟ್‌ಆಪ್‌ಗಳನ್ನ ಆಯ್ಕೆ ಮಾಡಿದೆ. ಹೊಸ ಆಪ್‌ಗಳನ್ನ ಡೆವಲಪ್‌ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಾಲ್ಕು ವರ್ಷಗಳಿಗೆ ನಿಯೋಜಿಸಲಾಗಿದೆ. ಇದರಲ್ಲಿ ಸಕ್ಸಸ್‌ ಟೀಂ ಡೆವಲಪ್‌ ಮಾಡುವ ವೀಡಿಯೊ ಕಾನ್ಫರೆನ್ಸಿಂಗ್ ಪ್ಲಾಟ್‌ಫಾರ್ಮ್‌ಗೆ ₹ 1 ಕೋಟಿ, ಮತ್ತು ಪ್ಲಾಟ್‌ಫಾರ್ಮ್ ಅನ್ನು ನಿರ್ವಹಿಸಲು ಮತ್ತು ನಿರ್ವಹಿಸಲು ಮೂರು ವರ್ಷಗಳವರೆಗೆ ವರ್ಷಕ್ಕೆ ಆಡಿಷನಲ್‌ ಆಗಿ 10 ಲಕ್ಷವನ್ನು ಹೆಚ್ಚುವರಿಯಾಗಿ ನೀಡಲಾಗುತ್ತದೆ ಎನ್ನಲಾಗ್ತಿದೆ.

Best Mobiles in India

English summary
Among the ten startups selected last month, the government has finalised on five startups to build a more secure rival to Zoom in India.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X