ಬೆಸ್ತು ಬೀಳಿಸುವ ಐಫೋನ್ 10 ವಿಶೇಷತೆಗಳು
ನಾವೆಲ್ಲರೂ ಹೆಚ್ಚಾಗಿ ನಮ್ಮ ಐಫೋನ್‌ಗಳಿಗೆ ಹೆಚ್ಚು ಹತ್ತಿರದಲ್ಲಿರುತ್ತೇವೆ. ನಾವು ಪ್ರತೀ ದಿನ ಅದನ್ನು ಬಳಸುತ್ತಿರುತ್ತೇವೆ. ಆದರೆ ಈ ಐಫೋನ್‌ಗಳಿಂದ ಮಾಡಬಹುದಾದ ಚಮತ್ಕಾರೀ ಕ್ರಿಯೆಗಳ ಬಗ್ಗೆ ನೀವು ಅರಿತುಕೊಂಡಿರಿ ಎಂದಾದಲ್ಲಿ ನಿಜಕ್ಕೂ ನೀವು ಬೆಸ್ತು ಬೀಳುತ್ತೀರಿ. ನಿಮ್ಮ ಐಫೋನ್ ಏನೆಲ್ಲಾ ಕಮಾಲುಗಳನ್ನು ಮಾಡುತ್ತದೆ ಎಂಬುದನ್ನು ಅರಿತುಕೊಳ್ಳುವುದು ನಿಮ್ಮಾಸೆಯೇ.
ಇದನ್ನೂ ಓದಿ: ಐಫೋನ್ 6 ಮೇಲೆ ಭರ್ಜರಿ ದರಕಡಿತ ಇಂದೇ ಖರೀದಿಸಿ!!!
ಹಾಗಿದ್ದರೆ ಕೆಳಗಿನ ಸ್ಲೈಡರ್‌ನಲ್ಲಿ ನಾವು ನಮೂದಿಸಿರುವ ಅಂಶಗಳನ್ನು ನೀವು ಓದಲೇಬೇಕು.

ಫೋನ್ ಅನ್‌ಲಾಕ್ ಮಾಡದೆಯೇ ಪಠ್ಯ ಸಂದೇಶಗಳಿಗೆ ಉತ್ತರಿಸುವುದು
ಅಧಿಸೂಚನೆಯನ್ನು ಕೆಳಕ್ಕೆ ಎಳೆಯುವ ಮೂಲಕ ನಿಮ್ಮ ಲಾಕ್ ಸ್ಕ್ರೀನ್‌ನಲ್ಲಿಯೇ ಪಠ್ಯ ಸಂದೇಶಗಳಿಗೆ ನೀವು ಉತ್ತರಿಸಬಹುದು. ನಿಮಗಿಲ್ಲಿ ರಿಪ್ಲೈ ಆಯ್ಕೆ ಕಂಡುಬರುತ್ತದೆ.

ನೀವು ಅಪ್ಲಿಕೇಶನ್‌ನಲ್ಲಿರುವಾಗ ಪಠ್ಯಕ್ಕೆ ಉತ್ತರಿಸುವುದು
ನೀವು ಅಪ್ಲಿಕೇಶನ್ ಬಳಸುತ್ತಿರುವಾಗ, ಕೆಳಕ್ಕೆ ಸ್ವೈಪ್ ಮಾಡುವ ಮೂಲಕ ನೋಟಿಫಿಕೇಶನ್ ಡ್ರಾವರ್‌ಗೆ ನೀವು ಪ್ರವೇಶಿಸಬಹುದು ಮತ್ತು ಉತ್ತರಿಸಬಹುದು.

ಯಾವ ಅಪ್ಲಿಕೇಶನ್ ಹೆಚ್ಚು ಬ್ಯಾಟರಿ ಬಳಸುತ್ತಿದೆ
ಸೆಟ್ಟಿಂಗ್ಸ್ > ಜನರಲ್ > ಯೂಸೇಜ್ > ಬ್ಯಾಟರಿ ಯೂಸೇಜ್ ಇದಕ್ಕೆ ಹೋಗಿ. ಯಾವ ಅಪ್ಲಿಕೇಶನ್ ಹೆಚ್ಚು ಬ್ಯಾಟರಿ ಬಳಸುತ್ತಿದೆ ಎಂಬುದನ್ನು ಇದು ನಿಮಗೆ ತಿಳಿಸುತ್ತದೆ.

ಪ್ರತೀ ಫೋಟೋ ವೀಕ್ಷಣೆ
ನೀವು ಬೇರೆಯವರಿಗೆ ಕಳುಹಿಸಿದ ಫೋಟೋ ಮತ್ತು ವೀಡಿಯೊ ವೀಕ್ಷಿಸಲು ಸರಳ ವಿಧಾನವಿದೆ. ಮೆಸೇಜಸ್ ಅಪ್ಲಿಕೇಶನ್‌ನಲ್ಲಿ ಮೆಸೇಜ್ ಥ್ರೆಡ್ ಅನ್ನು ತೆರೆಯಿರಿ ಮತ್ತು ಮೇಲ್ಭಾಗದ ಬಲ ಮೂಲೆಯಲ್ಲಿರುವ 'ಡೀಟೈಲ್ಸ್' ಬಟನ್ ಒತ್ತಿರಿ.

ಆಡಿಯೊ ವೀಡಿಯೊ ಸಂದೇಶಗಳನ್ನು ಕಳುಹಿಸುವುದು
ಸೆಟ್ಟಿಂಗ್ಸ್ > ಸಂದೇಶಗಳು ಮತ್ತು ಕೆಳಕ್ಕೆ ಸ್ಕ್ರಾಲ್ ಮಾಡಿ, ಆಡಿಯೊ ಹಾಗೂ ವೀಡಿಯೊ ಸಂದೇಶಗಳಿಗಾಗಿ ಒಂದು ವಿಭಾಗವನ್ನು ನಿಮಗೆ ಗಮನಿಸಬಹುದು.

ಸ್ನೇಹಿತರೊಂದಿಗೆ ಪ್ರಸ್ತುತ ಸ್ಥಾನ ಹಂಚಿಕೊಳ್ಳುವುದು
ನೀವು ಎಲ್ಲಿದ್ದೀರಿ ಎಂಬುದನ್ನು ತಿಳಿಸಲು ನಿಮಗೆ ಸಾಧ್ಯವಾಗಲಿಲ್ಲ ಎಂದಾದಲ್ಲಿ, ನೀವಿರುವ ಸ್ಥಾನವನ್ನು ಮೆಸೇಜ್ ಮೂಲಕ ಇನ್ನೊಬ್ಬ ವ್ಯಕ್ತಿಗೆ ಕಳುಹಿಸಬಹುದಾಗಿದೆ.

ನೀವು ಎಲ್ಲಿಗೆ ಹೋಗುತ್ತಿದ್ದೀರಿ ಎಂಬುದನ್ನು ಸ್ನೇಹಿತರಿಗೆ ಟ್ರ್ಯಾಕ್ ಮಾಡಲು
ನೀವು ಎಲ್ಲಿದ್ದೀರಿ ಎಂಬುದನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೆ ಟ್ರ್ಯಾಕ್ ಮಾಡಲು " ಶೇರ್ ಮೈ ಲೊಕೇಶನ್" ಅನ್ನು ಆರಿಸಬೇಕಾಗುತ್ತದೆ. ಒಂದು ಗಂಟೆಗಾಗಿ ನಿಮ್ಮ ಲೊಕೇಶನ್ ಅನ್ನು ನಿಮಗೆ ಶೇರ್ ಮಾಡಬಹುದಾಗಿದೆ.

ಪಠ್ಯ ಸಂದೇಶಗಳನ್ನು ಮ್ಯೂಟ್ ಮಾಡಲು
ಏಕೈಕ ಸಂಪರ್ಕಗಳು ಹಾಗೂ ಸಂವಾದಗಳಿಗಾಗಿ ಪಠ್ಯ ಸಂದೇಶ ಅಧಿಸೂಚನೆಗಳನ್ನು ನಿಮಗೆ ಮ್ಯೂಟ್ ಮಾಡಬಹುದಾಗಿದೆ. ನಿಮ್ಮ ಮೆಸೇಜ್ ಬಾಕ್ಸ್‌ಗೆ ಹೋಗಿ ಇಲ್ಲಿ "ಡು ನಾಟ್ ಡಿಸ್ಟರ್ಬ್"ಗೆ ಬದಲಿಸಿ.

ಗುಂಪು ಸಂವಾದ
ಗುಂಪು ಸಂವಾದವನ್ನು ನೀವು ತ್ಯಜಿಸಲು ಬಯಸುತ್ತೀರಿ ಎಂದಾದಲ್ಲಿ, ಗುಂಪು ಸಂವಾದದ ಮೇಲ್ಭಾಗದ ಬಲ ಮೂಲೆಯಲ್ಲಿ "ಡೀಟೈಲ್ಸ್" ಬಟನ್ ಸ್ಪರ್ಶಿಸಿ ಮತ್ತು "ಲೀವ್ ಕಾನ್ವರ್ಸೇಶನ್" ಆಯ್ಕೆಮಾಡಿ.

ಗುಂಪು ಸಂವಾದಕ್ಕೆ ಹೆಸರಿಡುವುದು
ಒಂದೇ ಗುಂಪಿನೊಂದಿಗೆ ನೀವು ಆಗಾಗ್ಗೆ ಚಾಟ್ ಮಾಡುತ್ತೀರಿ ಎಂದಾದಲ್ಲಿ ಇದಕ್ಕೆ ಹೆಸರಿಡುವುದು ಸೂಕ್ತವಾಗಿರುತ್ತದೆ. ಮೆಸೇಜ್ ಬಾಕ್ಸ್‌ನಲ್ಲಿ ಡೀಟೈಲ್ಸ್‌ಗೆ ಹೋಗಿ ಮತ್ತು "ಗ್ರೂಪ್ ನೇಮ್ ಫೀಲ್ಡ್" ಭರ್ತಿ ಮಾಡಿ.


Click it and Unblock the Notifications




