ಮಕ್ಕಳಿಗೆ ಮೊಬೈಲ್ ಕೊಡುವ ಪೋಷಕರನ್ನೇ ಬೆಚ್ಚಿಬೀಳಿಸಿದ ಆ ಒಂದು ಪತ್ರ!

  ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜಿನೀಶ್ ಅವರು ಸಿಐಡಿ ಇಲಾಖೆಗೆ ಬರೆದಿರುವ ಪತ್ರವೊಂದು ರಾಜ್ಯದ ಎಲ್ಲಾ ಪೋಷಕರನ್ನು ಬೆಚ್ಚಿಬೀಳಿಸಿದೆ. ಶಾಲೆಗೆ ಮೊಬೈಲ್ ತೆಗೆದುಕೊಂಡು ಹೋಗುವ ಮಕ್ಕಳು ಶಾಲೆಯಲ್ಲಿ ಕುಳಿತು ಮೊಬೈಲ್​ನಲ್ಲಿ ಅಶ್ಲೀಲ ಚಿತ್ರ ನೋಡುತ್ತಿರುವ ವಿಷಯದ ಬಗ್ಗೆ ಶಾಲಿನಿ ರಜಿನೀಶ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

  ಸಿಐಡಿ ವಿಭಾಗದ ಪೊಲೀಸ್ ನಿರ್ದೇಶಕರಾದ ಪ್ರವೀಣ್ ಸೂದ್ ಅವರಿಗೆ ಪ್ರತ್ರ ಬರೆದಿರುವ ಶಾಲಿನಿ ರಜಿನೀಶ್ ಅವರು, ವಿದ್ಯಾರ್ಥಿಗಳು ತರಗತಿಯಲ್ಲೇ ಅಶ್ಲೀಲ ವಿಡಿಯೋಗಳನ್ನು ನೋಡುತ್ತಿರುವುದು ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ವಿವರಿಸಿದ್ದಾರೆ. ರಾಜ್ಯದಲ್ಲಿನ ಎಲ್ಲಾ ಶಾಲೆಗಳು ದಿನದಿಂದ ದಿನಕ್ಕೆ ಎದುರಿಸುತ್ತಿರುವ ಹೊಸ ಹೊಸ ಸಮಸ್ಯೆಗಳನ್ನು ಬಿಚ್ಚಿಟ್ಟಿದ್ದಾರೆ.

  ಮಕ್ಕಳಿಗೆ ಮೊಬೈಲ್ ಕೊಡುವ ಪೋಷಕರನ್ನೇ ಬೆಚ್ಚಿಬೀಳಿಸಿದ ಆ ಒಂದು ಪತ್ರ!

  ವಿದ್ಯಾರ್ಥಿಗಳ ಮೊಬೈಲ್ ಬಳಕೆ ಬಗ್ಗೆ ಎಲ್ಲ ಶಾಲೆಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿರುವ ಬಗ್ಗೆ ತಿಳಿಸಿರುವ ಶಾಲಿನಿ ರಜಿನೀಶ್ ಅವರು, ಕೆಲ ಸಲಹೆ ಸೂಚನೆ ಅಥವಾ ಕ್ರಮ ಕೈಗೊಳ್ಳಲು ಸಿಐಡಿ ಡಿಜಿಪಿ ಪ್ರವೀಣ್ ಸೂದ್​ ಅವರಿಗೆ ಕೇಳಿಕೊಂಡಿದ್ದಾರೆ. ಹಾಗಾದರೆ, ಏನಿದು ಬೆಚ್ಚಿ ಬೀಳೀಸುವ ವರದಿ? ಮಕ್ಕಳಿಗೆ ಏಕೆ ಮೊಬೈಲ್ ಕೊಡಬಾರದು ಎಂಬುದನ್ನು ಮುಂದೆ ಓದಿ ತಿಳಿಯಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಬೆಚ್ಚಿಬಿದ್ದ ಪೋಷಕರು!

  ಇಷ್ಟು ದಿನ ಮಕ್ಕಳು ಮೊಬೈಲ್​ನಲ್ಲಿ ಆಟ ಆಡ್ಕೊಂಡು ಕಾಲ ಕಳೆಯುತ್ತಿದ್ದಾರೆ ಎಂದು ತಿಳಿದಿದ್ದ ಪೋಷಕರಿಗೆ ಈ ಸುದ್ದಿ ಬೆಚ್ಚಿಬೀಳಿಸಿದೆ. ಇತ್ತೀಚಿಗಷ್ಟೇ ಮೊಬೈಲ್ ಬಳಕೆ ಮಾಡುವ ಮಕ್ಕಳು ಹೆಚ್ಚು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ ಎಂದು ವರದಿಯೊಂದು ಹೊರಬಿದ್ದಿತು. ಇದರ ಬೆನ್ನಲ್ಲಿಯೇ ವ ಶಾಲಿನಿ ರಜಿನೀಶ್ ಅವರು ಬರೆದಿರುವ ಪತ್ರ ಪೋಷಕರನ್ನು ಬೆಚ್ಚಿಬೀಳಿಸಿದೆ.

  ಪತ್ರದಲ್ಲಿ ಇರುವುದೇನು?

  ಮೊಬೈಲ್​ನಿಂದ ಮಕ್ಕಳಲ್ಲಿರುವ ಮುಗ್ಧ ಭಾವನೆಗಳು ಕೂಡ ಕಡಿಮೆಯಾಗ್ತಿವೆ. ಮೊಬೈಲ್‌ಗೆ ಅಡಿಕ್ಟ್ ಆಗಿರೋದ್ರಿಂದ ವಿದ್ಯಾಭ್ಯಾಸದಲ್ಲಿ ಹಿಂದುಳಿಯುತ್ತಿದ್ದಾರೆ. ಇದಲ್ಲದೇ ವಿದ್ಯಾರ್ಥಿಗಳು ಮೊಬೈಲ್ ಬಳಸಿ ಶಾಲಾ ಟಾಯ್ಲೆಟ್‌ಗಳಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಈ ಬಗ್ಗೆ ಪೋಷಕರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಶಾಲಿನಿ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

  ಮೊಬೈಲ್‌ನಿಂದ ನಿದ್ರಾ ವ್ಯವಸ್ಥೆಗೆ ತೊಂದರೆ.

  ಮಾನವನ ದೇಹಕ್ಕೆ ಅಗತ್ಯ ಪ್ರಮಾಣದಷ್ಟು ನಿದ್ರೆ ಬೇಕು. ಮಕ್ಕಳಿಗೆ ಇನ್ನು ಹೆಚ್ಚಿನ ನಿದ್ರೆ ಇದ್ದರೆ ಉತ್ತಮ. ಆದರೆ, ಹೆಚ್ಚು ಮೊಬೈಲ್ ಬಳಕೆ ಮಾಡುವ ಮಕ್ಕಳನಿದ್ರಾ ವ್ಯವಸ್ಥೆಯಲ್ಲಿ ಶೇ.50 ಪರ್ಸೆಂಟ್‌ಗಿಂತಲೂ ಹೆಚ್ಚು ಬದಲಾವಣೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. 10,000 ಕ್ಕೂ ಹೆಚ್ಚು ಜನರ ಮೇಲೆ ಅಧ್ಯಯನ ನಡೆಸಿ ಈ ಸಂಶೋಧನೆ ನಡೆಸಲಾಗಿದೆ.

  ಮಕ್ಕಳಲ್ಲಿ ನರಗಳ ಬೆಳವಣಿಗೆಯಲ್ಲಿ ತೊಂದರೆ.

  ಮಕ್ಕಳ ನರಮಂಡಲದ ರಚನೆ ಇನ್ನೂ ಬೆಳವಣಿಗೆ ಹಂತದಲ್ಲಿರುವಾಗ ಮೊಬೈಲ್ ಬಳಕೆ ಮಾಡಿದರೆ ನರಗಳು ಶಕ್ತಿಹೀನವಾಗುತ್ತವೆ. ಇದರಿಂದಾಗಿ ಮುಂದೆ ಸ್ಮರಣ ಶಕ್ತಿ ಮತ್ತು ದೃಷ್ಟಿ ಮೇಲೆ ಸಮಸ್ಯೆಗಳು ತಲೆದೂರಬಹುದು ಎಂದು ಇತ್ತೀಚಿನ ಸಂಶೋಧನೆಯೊಂದು ತಿಳಿಸಿದೆ. ಇದು ಅವರ ಭವಿಷ್ಯಕ್ಕೆ ಖಂಡಿತವಾಗಿಯೂ ಮಾರಕವಾಗಲಿದೆ ಎಂದು ಸಂಶೋಧನೆ ಹೇಳಿದೆ.

  ಮೊಬೈಲ್‌ನಿಂದ ಮಾನಸಿಕ ಒತ್ತಡ.

  ಮಕ್ಕಳು ಸಾಮಾಜಿಕ ಮಾಧ್ಯಮಗಳಿಂದ ದೂರವಿದ್ದಷ್ಟು ಒಳ್ಳೆಯದು ಎನ್ನುತ್ತದೆ ಈ ವರದಿ. ಸಾಮಾಜಿಕ ಮಾಧ್ಯಮಗಳಿಂದ ಹರಡುವ ಸುದ್ದಿಗಳು, ಇತರ ಜೀವನದ ಫ್ಯಾಶನ್, ಜಾಹಿರಾತುಗಳು ಮಕ್ಕಳ ಮನಸ್ಸಿನ ಮೇಲೆ ಒತ್ತಡ ತರುತ್ತವೆ ಎಂದು ಎಲ್ಲಾ ವರದಿಗಳು ಹೇಳುತ್ತವೆ. ಹಾಗಾಗಿ, ಈ ಬಗ್ಗೆ ಪೋಷಕರು ಎಚ್ಚರಿಕೆಯಿಂದ ಇದ್ದರೆ ಒಳಿತು.

  ಪೋಷಕರ ಪ್ರೀತಿಯೇ ಔಷದ.

  ಮಕ್ಕಳ ಮೇಲೆ ಮೊಬೈಲ್ ಹಾಗೂ ಸಾಮಾಜಿಕ ಮಾಧ್ಯಮಗಳು ಬೀರುತ್ತಿರುವ ಕೆಟ್ಟ ಪ್ರಬಾವವನ್ನು ತಡೆಯಲು ಪ್ರೀತಿಗಿಂತ ಬೇರೊಂದು ಲಸಿಕೆ ಇಲ್ಲ ಎಂದು ಎಲ್ಲಾ ವರದಿಗಳು ಹೇಳುತ್ತವೆ. ಮಕ್ಕಳಿಗೆ ಪ್ರೀತಿಯ ಜೊತೆಗೆ ವಾಸ್ತವ ಪ್ರಪಂಚದ ಬಗ್ಗೆ ಅರಿವು ಮೂಡಿಸುವ ಕಾರ್ಯ ಪೋಷಕರಿಂದ ಆಗಬೇಕಿದೆ. ಇದು ಅವರ ಭವಿಷ್ಯದ ಪ್ರಶ್ನೆ ಕೂಡ ಆಗಿದೆ.

  ಜಿಯೋ, ಮೈಕ್ರೋಮ್ಯಾಕ್ಸ್‌ನಿಂದ ಸಂಚಾರ ಕ್ರಾಂತಿ..! 50 ಲಕ್ಷ ಸ್ಮಾರ್ಟ್‌ಫೋನ್‌ ವಿತರಣೆ..!

  ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋದ ದಿಗ್ವಿಜಯದ ಓಟ ಮುಂದುವರದಿದ್ದು, ಟೆಲಿಕಾಂ ವಲಯಷ್ಟೇ ಅಲ್ಲದೇ ವಿವಿಧ ಕ್ಷೇತ್ರಗಳಲ್ಲೂ ತನ್ನ ಛಾಪನ್ನು ಮೂಡಿಸುತ್ತಿದೆ. ಈಗ ಸರ್ಕಾರದ ಯೋಜನೆಗಳ ಜತೆ ಕಾರ್ಯನಿರ್ವಹಿಸುವ ಮೂಲಕ ಇನ್ನೊಂದು ಸ್ಥರದ ಸ್ಪರ್ಧೆಗೆ ವೇದಿಕೆಯನ್ನು ಅಣಿ ಮಾಡಿದೆ. ಹೌದು ಛತ್ತೀಸ್‌ಗರ್‌ ರಾಜ್ಯ ಸರ್ಕಾರ ಯೋಜನೆಯೊಂದನ್ನು ರೂಪಿಸಿದ್ದು, ತನ್ನ ರಾಜ್ಯದ ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ 50 ಲಕ್ಷ ಸ್ಮಾರ್ಟ್‌ಫೋನ್‌ ವಿತರಿಸುವ ಗುರಿ ಹೊಂದಿದೆ.

  ಛತ್ತೀಸ್‌ಗರ್‌ ಸರ್ಕಾರದ ಜತೆ ಮೈಕ್ರೋಮ್ಯಾಕ್ಸ್‌ 1,500 ಕೋಟಿ ರೂ. ಮೌಲ್ಯದ ಒಪ್ಪಂದ ಮಾಡಿಕೊಂಡಿದ್ದು, ಈ ಯೋಜನೆಯಲ್ಲಿ ಬಳಸುವ ಸ್ಮಾರ್ಟ್‌ಫೋನ್‌ಗಳಿಗೆ ರಿಲಾಯನ್ಸ್‌ ಜಿಯೋ ಸಿಮ್ ಅಳವಡಿಸಲಾಗುತ್ತಿದೆ. ಈ ಮೂಲಕ ಜಿಯೋ ಮತ್ತು ಮೈಕ್ರೋಮ್ಯಾಕ್ಸ್‌ 50 ಲಕ್ಷ ಸ್ಮಾರ್ಟ್‌ಫೋನ್‌ ವಿತರಣೆಯ ಹೊಣೆ ಹೊತ್ತುಕೊಂಡಿವೆ. ಸ್ಕೈ ಎಂದು ಕರೆಯಲ್ಪಡುತ್ತಿರುವ ಸ್ಮಾರ್ಟ್‌ಫೋನ್‌ ವಿತರಣೆ ಯೋಜನೆಯಲ್ಲಿ ವಿತರಣೆ ಕೂಡ ಪ್ರಾರಂಭವಾಗಿದ್ದು, ಯೋಜನೆ ಯಶಸ್ವಿಯಾಗುವ ಹಂತದಲ್ಲಿದೆ.

  ಮಹಿಳೆಯರಿಗೆ 45 ಲಕ್ಷ ಸ್ಮಾರ್ಟ್‌ಫೋನ್‌

  ಛತ್ತೀಸ್‌ಗರ್‌ ಸರ್ಕಾರದ ಹೊಸ ಯೋಜನೆಯಲ್ಲಿ 50 ಲಕ್ಷ ಸ್ಮಾರ್ಟ್‌ಫೋನ್‌ ವಿತರಿಸುವ ಗುರಿ ಹೊಂದಲಾಗಿದ್ದು, ಇದರಲ್ಲಿ 45 ಲಕ್ಷ ಸ್ಮಾರ್ಟ್‌ಫೋನ್‌ಗಳನ್ನು ಮಹಿಳೆಯರಿಗೆ ಹಾಗೂ ಉಳಿದ 5 ಲಕ್ಷ ಸ್ಮಾರ್ಟ್‌ಫೋನ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು ಎಂದು ಮೈಕ್ರೋಮ್ಯಾಕ್ಸ್‌ ಸಹ ಸಂಸ್ಥಾಪಕ್ ವಿಕಾಸ್‌ ಜೈನ್ ಹೇಳಿದ್ದಾರೆ.

  10 ಸಾವಿರ ಕ್ಯಾಂಪ್ ಪ್ರಾರಂಭ

  ಯೋಜನೆಯಡಿ ಹೀಗಾಗಲೇ ವಿವಿಧ ಸ್ಥಳಗಳಲ್ಲಿ 10 ಸಾವಿರ ಕ್ಯಾಂಪ್‌ಗಳನ್ನು ಪ್ರಾರಂಭಿಸಿದ್ದು, ವಿತರಣೆಯನ್ನು ಹೀಗಾಗಲೇ ಪ್ರಾರಂಭಿಸಲಾಗಿದೆ. ಪ್ರತಿಯೊಬ್ಬ ಫಲಾನುಭಯನ್ನು ಸ್ವತಃ ರಾಜ್ಯ ಸರ್ಕಾರ ಆಯ್ಕೆ ಮಾಡಲಿದ್ದು, ಆಯ್ಕೆಗೊಂಡ ಫಲಾನುಭವಿಗಳಿಗೆ ರಿಲಾಯನ್ಸ್‌ ಜಿಯೋ ಸಂಪರ್ಕದೊಂದಿಗೆ ಸ್ಮಾರ್ಟ್‌ಫೋನ್‌ನ್ನು ವಿತರಿಸಲಾಗುತ್ತಿದೆ. ಇಲ್ಲಿ ಆಧಾರ್‌ ಮೂಲಕ ಅಥಂಟಿಕೇಷನ್‌ ಮಾಡುವುದರಿಂದ ಯೋಜನೆಯ ದುರ್ಬಳಕೆ ಅಸಾಧ್ಯ ಎಂದು ವಿಕಾಸ್‌ ಹೇಳಿದ್ದಾರೆ.

  15 ವೇರ್‌ಹೌಸ್‌ ಸ್ಥಾಪನೆ

  ಯೋಜನೆಯು ರಾಜ್ಯದ ದೊಡ್ಡ ಜನ ಸಮೂಹಕ್ಕೆ ತಲುಪುತ್ತಿರುವುದರಿಂದ ಸ್ಮಾರ್ಟ್‌ಫೋನ್ ವಿತರಣೆಯಲ್ಲಿ ಯಾವುದೇ ಸಮಸ್ಯೆಯಾಗದಿರಲಿ ಎಂದು ಮೈಕ್ರೋಮ್ಯಾಕ್ಸ್‌ ಕಂಪನಿ ವಿವಿಧ ಸ್ಥಳಗಳಲ್ಲಿ 15 ವೇರ್‌ ಹೌಸ್‌ಗಳನ್ನು ಸ್ಥಾಪಿಸಿದೆ. 2011ರ ಜನಗಣತಿಯಂತೆ ಛತ್ತೀಸ್‌ಗರ್ ರಾಜ್ಯ 2.5 ಕೋಟಿ ಜನಸಂಖ್ಯೆಯನ್ನು ಹೊಂದಿದ್ದು, ಈ ಯೋಜನೆ 50 ಲಕ್ಷ ಜನರನ್ನು ತಲುಪುತ್ತಿದೆ ಎಂದು ಜೈನ್ ವಿವರಿಸಿದ್ದಾರೆ.

  ವರ್ಷದ ಆರಂಭದಲ್ಲಿಯೇ ಒಪ್ಪಂದ

  ಈ ಯೋಜನೆಗೆ ಮೈಕ್ರೋಮ್ಯಾಕ್ಸ್‌ ಮತ್ತು ಜಿಯೋ ವರ್ಷದ ಆರಂಭದಲ್ಲಿಯೇ ಸಹಿ ಹಾಕಿದ್ದು, ಜುಲೈ ಅಂತ್ಯದಿಂದ ಸ್ಮಾರ್ಟ್‌ಫೋನ್ ವಿತರಣೆಯನ್ನು ಪ್ರಾರಂಭಿಸಲಾಗಿದೆ. ಇದಕ್ಕಾಗಿ 2000 ದಿಂದ 2500 ಸಿಬ್ಬಂದಿಗಳನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗಿದೆ. ಕೆಲವೇ ವಾರಗಳಲ್ಲಿ ಎಲ್ಲಾ ಫಲಾನುಭವಿಗಳಿಗೆ ಸ್ಮಾರ್ಟ್‌ಫೋನ್‌ ವಿತರಿಸಲಾಗುವುದು ಎಂದು ಕಂಪನಿ ಹೇಳಿಕೊಂಡಿದೆ.

  ಯಾವುದೇ ರಾಜಕೀಯ ಒತ್ತಡವಿಲ್ಲ

  ಈ ಯೋಜನೆಯನ್ನು ಪಡೆಯಲು ಮೈಕ್ರೋಮ್ಯಾಕ್ಸ್‌ ಮತ್ತು ಜಿಯೋ ಯಾವುದೇ ರಾಜಕೀಯ ಅಸ್ತ್ರವನ್ನು ಬಳಸಿಲ್ಲ ಎಂದು ಮೈಕ್ರೋಮ್ಯಾಕ್ಸ್‌ ಹೇಳಿಕೊಂಡಿದೆ. ಈ ಯೋಜನೆಯು ಎಲ್ಲರನ್ನೂ ಒಳಗೊಂಡಿದ್ದು ಬಹಳ ತಿಂಗಳುಗಳ ಕಾಲ ಯೋಜನೆಯನ್ನು ರೂಪಿಸಲು ತೆಗೆದುಕೊಂಡಿದೆ. ಟೆಂಡರ್ ಮೂಲಕ ಈ ವರ್ಷದ ಆರಂಭದಲ್ಲಿ ಯೋಜನೆಯನ್ನು ನಾವು ಪಡೆದಿದ್ದೇವೆ ಎಂದು ಮೈಕ್ರೋಮ್ಯಾಕ್ಸ್‌f ಸಹ ಸಂಸ್ಥಾಪಕ ವಿಕಾಸ್‌ ಜೈನ್‌ ಅನುಮಾನಗಳಿಗೆ ಸ್ಪಷ್ಟನೆ ನೀಡಿದ್ದಾರೆ.

  ಏನೀದು ಯೋಜನೆ..?

  ಛತ್ತೀಸ್‌ಗರ್ ಸರ್ಕಾರವು ಮೈಕ್ರೋಮ್ಯಾಕ್ಸ್‌ ಸಹಭಾಗಿತ್ವದಲ್ಲಿ ಸಂಚಾರ ಕ್ರಾಂತಿ ಯೋಜನೆ (Sanchar Kranti Yojana- SKY)ಯನ್ನು ಪ್ರಾರಂಭಿಸಿದ್ದು, ನಗರ ಹಾಗೂ ಗ್ರಾಮೀಣದ ಬಿಪಿಎಲ್‌ ಕುಟುಂಬದ ಮಹಿಳೆಯರು ಹಾಗೂ ವಿದ್ಯಾರ್ಥಿಗಳಿಗೆ ಸ್ಮಾರ್ಟ್‌ಫೋನ್‌ ನೀಡುವ ಮೂಲಕ .ಅವರಿಗೆ ಜಾಗತಿಕ ಡಿಜಿಟಲ್‌ ಅನುಭವವನ್ನು ನೀಡುವ ಉದ್ದೇಶವನ್ನು ಯೋಜನೆ ಹೊಂದಿದೆ ಎಂದು ಛತ್ತೀಸ್‌ಗರ್‌ ಇನ್ಫೋಟೆಕ್‌ ಪ್ರೊಮೋಷನ್‌ ಸೊಸೈಟಿ ಸಿಇಒ ಅಲೆಕ್ಸ್‌ ಪಾಲ್‌ ಮೆನನ್ ಹೇಳಿದ್ದಾರೆ.

  ಡಿಜಿಟಲ್ ಛತ್ತೀಸ್‌ಗರ್‌ಗೆ ಬಲ

  ಸಂಚಾರ ಕ್ರಾಂತಿ ಯೋಜನೆಯಿಂದ ಡಿಜಿಟಲ್‌ ಇಂಡಿಯಾದ ಜತೆಗೆ ಡಿಜಿಟಲ್ ಛತ್ತೀಸ್‌ಗರ್‌ಗೂ ಬಲ ಬರಲಿದ್ದು, ಸರ್ಕಾರದ ಅನೇಕ ಯೋಜನೆಗಳನ್ನು ಡಿಜಿಟಲ್ ಮಾಡಲು ಸಹಾಯವಾಗುತ್ತದೆ. ಹಾಗೂ ಡಿಜಿಟಲ್ ಬ್ಯಾಂಕಿಂಗ್‌ಗೆ ಸ್ಕೈ ಯೋಜನೆ ಸಹಾಯಕವಾಗಲಿದೆ ಎಂದು ಅಲೆಕ್ಸ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  ಹೇಗಿರಲಿವೆ ಸ್ಮಾರ್ಟ್‌ಫೋನ್‌..?

  ಸಂಚಾರ ಕ್ರಾಂತಿ ಯೋಜನೆಯನ್ವಯ ವಿತರಿಸುತ್ತಿರುವ ಸ್ಮಾರ್ಟ್‌ಫೋನ್‌ಗಳು ಉತ್ತಮ ಫೀಚರ್‌ಗಳನ್ನು ಹೊಂದಿವೆ. ಮಹಿಳೆಯರಿಗೆ ವಿತರಿಸುತ್ತಿರುವ ಸ್ಮಾರ್ಟ್‌ಫೋನ್‌ಗಳು ಮೈಕ್ರೋಮ್ಯಾಕ್ಸ್‌ ಭಾರತ್‌ 2+ ಮಾಡೆಲ್ ಆಗಿದ್ದು, 4 ಇಂಚ್‌ ಡಿಸ್‌ಪ್ಲೇ ಜತೆಗೆ 1GB RAM / 8GB ಮೆಮೊರಿ ಹೊಂದಿರಲಿವೆ. ವಿದ್ಯಾರ್ಥಿಗಳಿಗೆ ಮೈಕ್ರೋಮ್ಯಾಕ್ಸ್‌ ಭಾರತ್ 4 ಮಾಡೆಲ್ ವಿತರಿಸಲಾಗುತ್ತಿದ್ದು, 5 ಇಂಚಿನ್ ಡಿಸ್‌ಪ್ಲೇನೊಂದಿಗೆ 2GB RAM / 16GB ಮೆಮೊರಿ ಹೊಂದಿದ್ದು, ಉತ್ತಮವಾಗಿರಲಿವೆ.

  ಜಿಯೋಗೆ ಸಂತಸ

  ಸಂಚಾರ ಕ್ರಾಂತಿ ಯೋಜನೆಯು ಅಭಿವೃದ್ಧಿಯ ಪರಿಕಲ್ಪನೆ ಹೊಂದಿದ್ದು, ಡಿಜಿಟಲ್‌ ಜಗತ್ತನ್ನು ಅಂಗೈಗೆ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅದಲ್ಲದೇ ಛತ್ತೀಸ್‌ಗರ್‌ದ ಇ-ಆಡಳಿತ ಹಾಗೂ ವೇಗದ ಆರ್ಥಿಕ ಬೆಳವಣಿಗೆಗೆ ಸ್ಕೈ ಯೋಜನೆ ಸಹಾಯಕವಾಗಿದೆ. ಈ ಯೋಜನೆಯ ಮೂಲಕ ಅಸಂಪರ್ಕಿತ ಜನರನ್ನು ಸ್ಮಾರ್ಟ್‌ಫೋನ್‌ನಿಂದ ಬೆಸೆದು ಡಿಜಿಟಲ್ ಜಗತ್ತಿನ ಕಡೆ ಕರೆದೊಯ್ಯಲು ಜಿಯೋ ಸಂತಸ ಪಡುತ್ತಿದೆ ಎಂದು ರಿಲಾಯನ್ಸ್‌ ಜಿಯೋ ಹೇಳಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Giving your child a smartphone is like giving them a gram of cocaine. to know more visit to kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more