ಮೊಬೈಲ್ ನಂಬರ್ ಬದಲಿಸುವಾಗ ಹುಷಾರ್!..ಈ ಸುದ್ದಿ ಭಯ ಹುಟ್ಟಿಸುತ್ತಿದೆ!

|

ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ನಿಮ್ಮ ಮೊಬೈಲ್ ನಂಬರ್ ಅನ್ನು ಬದಲಾಯಿಸುವ ಮುನ್ನ ಈ ಲೇಖನವನ್ನು ಓದಲೇಬೇಕು. ಏಕೆಂದರೆ, ಬ್ಯಾಂಕ್ ಖಾತೆಗೆ ಲಿಂಕ್ ಆಗಿದ್ದ ಮೊಬೈಲ್ ನಂಬರ್ ಅನ್ನು ಬದಲಾಯಿಸಿದ ವ್ಯಕ್ತಿಯೋರ್ವರು ತಮ್ಮದೇ ತಪ್ಪಿನಿಂದ ಹಣ ಕಳೆದುಕೊಂಡಿರುವ ಘಟನೆ ನಡೆದಿದೆ. ಕೊಡಗು ಜಿಲ್ಲೆ ಕುಶಾಲನಗರ ಮೂಲದ ದುಬೈ ನಿವಾಸಿ ಅಶ್ರಫ್ ಎಂಬುವವರು ತನ್ನ ಬ್ಯಾಂಕ್ ಖಾತೆ ಮತ್ತು ಪೇಟಿಎಂ ವ್ಯಾಲೆಟ್​ಗೆ ಲಿಂಕ್ ಮಾಡಿದ್ದ ಮೊಬೈಲ್ ನಂಬರನ್ನು ಇತ್ತೀಚೆಗೆ ಸ್ಥಗಿತ ಮಾಡಿ ಹಣ ಕಳೆದುಕೊಂಡಿದ್ದಾರೆ.

ಮೊಬೈಲ್ ನಂಬರ್ ಬದಲಿಸುವಾಗ ಹುಷಾರ್!..ಈ ಸುದ್ದಿ ಭಯ ಹುಟ್ಟಿಸುತ್ತಿದೆ!

ಹೌದು, ಅಶ್ರಫ್ ಅವರು ತಮ್ಮ ಮೊಬೈಲ್ ನಂಬರ್ ಅನ್ನು ಕುಶಾಲನಗದ ಬ್ಯಾಂಕ್ ಒಂದರ ಖಾತೆಗೆ ಖಾತೆ ಮತ್ತು ಪೇಟಿಎಂ ವ್ಯಾಲೆಟ್​ಗೆ ಲಿಂಕ್ ಮಾಡಿದ್ದರು. ಇದಾದ ಕೆಲದಿನಗಳ ನಂತರ ಆ ಮೊಬೈಲ್ ನಂಬರ್ ಅನ್ನು ಬಳಸದೇ ಬಿಟ್ಟು, ಬೇರೊಂದು ಮೊಬೈಲ್ ನಂಬರ್ ಹೊಂದಿರುವ ಸಿಮ್ ಬಳಸಲು ಶುರು ಮಾಡಿದರು. ಹೀಗೆ ಮಾಡಿದಾಗ ಅಶ್ರಫ್ ಅವರ ಹಳೆ ಮೊಬೈಲ್ ನಂಬರ್ ಅನ್ನು ಮತ್ತೋರ್ವರಿಗೆ ನೀಡಿ ಟೆಲಿಕಾಂ ಸೇವಾ ಸಂಸ್ಥೆ ಕೈತೊಳೆದುಕೊಂಡಿದೆ. ಇದಾದ ನಂತರ ಅಶ್ರಫ್ ಅವರಿಗೆ ಸಮಸ್ಯೆಗಳು ಶುರುವಾಗಿವೆ.

ಅಶ್ರಫ್ ಅವರ ಹಳೆ ಮೊಬೈಲ್ ನಂಬರ್ ಅನ್ನು ಟೆಲಿಕಾಂ ಕಂಪೆನಿಯು ದಾವಣಗೆರೆಯ ಭರತ್ ಎಂಬ ಮತ್ತೋರ್ವ ವ್ಯಕ್ತಿಗೆ ನೀಡಿದೆ. ಈ ನಂಬರ್ ಅನ್ನು ಪಡೆದುಕೊಂಡಿರುವ ಭರತ್‌ ಹೊಸ ಸಿಮ್ ಹಾಕಿಕೊಂಡಾಗ ಆಶ್ರಫ್ ಬ್ಯಾಂಕಿಂಗ್ ಸಂದೇಶಗಳು ಮೊಬೈಲ್​ಗೆ ಬರುತ್ತಿದ್ದವು. ಇದನ್ನು ಬಳಸಿಕೊಂಡ ಭರತ್, ನಂತರ ಮೊಬೈಲ್​ಗೆ ಪೇಟಿಎಂ ವ್ಯಾಲೆಟ್ ಆಕ್ಟಿವ್ ಮಾಡಿಕೊಂಡಿದ್ದ. ಆಶ್ರಫ್ ಬ್ಯಾಂಕ್ ಖಾತೆ ದಕ್ಕೆ ಸಿಂಕ್ ಆಗಿತ್ತು. ಬಳಿಕ ಭರತ್ ಪೇಟಿಎಂ ವ್ಯಾಲೆಟ್​ನಿಂದ ತನ್ನ ಬ್ಯಾಂಕ್ ಖಾತೆಗೆ 4 ದಿನಗಳಲ್ಲಿ 79,994 ರೂ.ಗಳನ್ನು ವರ್ಗಾವಣೆ ಮಾಡಿಕೊಂಡಿದ್ದ.

ಮೊಬೈಲ್ ನಂಬರ್ ಬದಲಿಸುವಾಗ ಹುಷಾರ್!..ಈ ಸುದ್ದಿ ಭಯ ಹುಟ್ಟಿಸುತ್ತಿದೆ!

ಇದರಿಂದ ಗಾಬರಿಗೊಂಡ ಆಶ್ರಫ್ ಅವರು ತಕ್ಷಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಮೊಬೈಲ್ ನಂಬರ್ ಆಧಾರದ ಮೇಲೆ ಭರತ್​ನನ್ನು ಬಂಧಿಸಿದ್ದಾರೆ. ಆದರೆ, ಎಲ್ಲ ಪ್ರಕರಣದಲ್ಲೂ ಆರೋಪಿ ಹೀಗೆ ಸಿಕ್ಕಿಕೊಳ್ಳುವುದು ಕಷ್ಟವೇ ಸರಿ. ಹಾಗಾಗಿ, ಸಿಮ್ ಜತೆಗೆ ಲಿಂಕ್ ಆಗಿರುವ ಎಲ್ಲಾ ಖಾತೆಗಳ ಬಗ್ಗೆ ಎಚ್ಚರ ವಹಿಸಿ ಎಂದು ಪೊಲೀಸರು ಸಲಹೆ ನೀಡಿದ್ದಾರೆ. ಸಿಮ್ ಜತೆಗೆ ಲಿಂಕ್ ಆಗಿರುವ ಎಲ್ಲ ಸಂಪರ್ಕವನ್ನು ಕಡಿತ ಮಾಡಿ ಬಳಿಕವೇ ಹೊಸ ಗ್ರಾಹಕನಿಗೆ ಮಾರಾಟ ಮಾಡಬೇಕು ಎಂಬ ಕಾನೂನನ್ನು ತರಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

21,999 ರೂ.ಗೆ ಪಾಪ್‌ಅಪ್ ಸೆಲ್ಫೀ ಕ್ಯಾಮೆರಾ ಫೋನ್ 'ರೆಡ್‌ಮಿ ಕೆ20' ರಿಲೀಸ್!21,999 ರೂ.ಗೆ ಪಾಪ್‌ಅಪ್ ಸೆಲ್ಫೀ ಕ್ಯಾಮೆರಾ ಫೋನ್ 'ರೆಡ್‌ಮಿ ಕೆ20' ರಿಲೀಸ್!

ಸೈಬರ್ ಅಪರಾಧ ತಡೆಗಟ್ಟಲು ಮತ್ತು ಭದ್ರತೆ ಸಲುವಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಲಿಂಕ್ ಆದೇಶ ನೀಡಿ ಸುತ್ತೋಲೆ ಹೊರಡಿಸಿದೆ. ಹಾಗಾಗಿ, ಇಂಟರ್​ನೆಟ್ ಬ್ಯಾಂಕಿಂಗ್, ಮೊಬೈಲ್ ವ್ಯಾಲೆಟ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇರಿದಂತೆ ಇನ್ನಿತರ ಬ್ಯಾಂಕಿಂಗ್ ಸೇವೆಗೆ ಮೊಬೈಲ್ ನಂಬರ್ ಕಡ್ಡಾಯ.ಈ ಸೇವೆಗಳನ್ನು ಪಡೆಯುವಾಗ ಮೊಬೈಲ್​ಗೆ ಬರುವ ಒನ್ ಟೈಮ್ ಪಾಸ್​ವರ್ಡ್(ಒಟಿಪಿ) ಅತಿ ಮುಖ್ಯವಾಗಿರುತ್ತವೆ. ಇದರ ಮೇಲೆ ನೀವು ನಿಗಾ ವಹಿಸದೆ ಇದ್ದರೆ ಬ್ಯಾಂಕ್ ಖಾತೆ ಖಾಲಿ ಆಗಲಿದೆ. ಹಾಗಾಗಿ, ನೀವು ಎಚ್ಚರ.!

ಭಾರತೀಯರಿಗೆ ಶಾಕಿಂಗ್ ನ್ಯೂಸ್ ನೀಡಿದ ಆಪಲ್!ಭಾರತೀಯರಿಗೆ ಶಾಕಿಂಗ್ ನ್ಯೂಸ್ ನೀಡಿದ ಆಪಲ್!

Best Mobiles in India

English summary
be aware of mobile scam. Thinking of changing your phone number? Read this first!. to know morw visi to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X