ಅಂತು ಇಂತು ಬಂತು ಮನುಷ್ಯರ ವ್ಯಕ್ತಿತ್ವ ಹೇಳುವ ಅಪ್ಲಿಕೇಶನ್
ತಂತ್ರಜ್ಞಾನ ಕ್ಷೇತ್ರದಲ್ಲಿ ಇನ್ನು ಯಾವ ಯಾವ ಅಪ್ಲಿಕೇಶನ್‌ಗಳು ಬರುತ್ತವೋ ಗೊತ್ತಿಲ್ಲ ರೀ. ಇಷ್ಟುದಿನ ಮಾನಸಿಕ ತಪಾಸಣೆಗಾಗಿ ಜನರು ಮನೋವೈದ್ಯರ ಬಳಿಗೆ ಹೋಗುತ್ತಿದ್ದರು. ಇನ್ನುಮುಂದೆ ಜನರ ಮಾನಸಿಕ ಸ್ಥಿತಿಗತಿ ತಿಳಿಯಲು ಅಪ್ಲೀಕೇಶನ್ ಒಂದು ತಯಾರಾಗಿದೆ. ಈ ಅಪ್ಲಿಕೇಶನ್ ಜನರ ಮಾನಸಿಕ ಸ್ಥಿತಿ ಹೇಳಲು ಫೇಸ್‌ಬುಕ್ ಬಳಕೆದಾರರ ಇಷ್ಟಗಳನ್ನು ಬಳಸಿಕೊಳ್ಳುತ್ತದೆಯಂತೆ.

ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸಂಶೋಧಕರುಗಳು ಈ ಅಪ್ಲಿಕೇಶನ್ ಅಭಿವೃದ್ಧಿ ಪಡಿಸಿದ್ದು, ಫೇಸ್‌ಬುಕ್ ಬಳಕೆದಾರರ ಲೈಕ್ಸ್‌ಗಳ ಆಧಾರದ ಮೇಲೆ ಮನುಷ್ಯನ ಸಂಪೂರ್ಣ ವ್ಯಕ್ತಿಚಿತ್ರವನ್ನು ನೀಡಲಿದೆಯಂತೆ. ಈ ಅಪ್ಲಿಕೇಶನ್ ಹೆಸರು "ಅಪ್ಲೇ ಮ್ಯಾಜಿಕ್ ಸಾಸ್". ಜನರ ಬುದ್ದಿವಂತಿಕೆ, ರಾಜಕೀಯ ಮತ್ತು ಧಾರ್ಮಿಕ ಇಚ್ಛಾಶಕ್ತಿಗಳು, ಜೀವನ ತೃಪ್ತಿಕರ ಅಂಶಗಳು ಮತ್ತು ಲೈಂಗಿಕ ಆಸಕ್ತಿ ವಿಷಯಗಳ ಬಗ್ಗೆ ವಿವರಗಳನ್ನು ನೀಡುತ್ತದೆಯಂತೆ.

ಹಲವು ಮನೋವಿಜ್ಞಾನಿಗಳು ಹೇಳುವಂತೆ ಈ ಅಪ್ಲಿಕೇಶನ್ ಐದು ದೊಡ್ಡ ವ್ಯಕ್ತಿತ್ವಗಳಾದ ಮುಕ್ತತೆ, ಮನಸಾಕ್ಷಿ, ಬಹಿರ್ಮುಖತೆ, ಒಪ್ಪಿಕೊಳ್ಳುವಿಕೆ ಹಾಗೂ ನರವ್ಯಾಧಿಯ ಬಗ್ಗೆ ಮೌಲ್ಯಮಾಪನ ಮಾಡುತ್ತದೆ. ಅಲ್ಲದೆ ಫೇಸ್‌ಬುಕ್‌ಗೆ ತನ್ನ ಬಳಕೆದಾರರ ಬಗ್ಗೆ ಏನು ತಿಳಿದಿದೆಯೋ, ಬಳಕೆದಾರರು ಜಾಲತಾಣದಲ್ಲಿ ವೈಯಕ್ತಿಕವಾಗಿ ಏನನ್ನು ಸೂಚಿಸುತ್ತಾರೋ ಅದರ ಆಧಾರದ ಮೇಲೆ ಇದು ತನ್ನ ಉತ್ತರ ನೀಡುತ್ತದೆ. ಕೆಲವೊಮ್ಮೆ ಇದರ ಗುರುತು ತಪ್ಪಲಿದ್ದು, ಸ್ನೇಹಿತರು ಮತ್ತು ಸಹೋದ್ಯೋಗಿಗಳು ಊಹಿಸುವುದಕ್ಕಿಂತ ನಿಖರವಾಗಿ ಭವಿಷ್ಯ ಹೇಳಲಿದೆಯಂತೆ. ಅಪ್ಲಿಕೇಶನ್ 6 ಮಿಲಿಯನ್ ಇತರೆ ವ್ಯಕ್ತಿಗಳಿಗೆ ಹೋಲಿಸಿ ಕಾರ್ಯ ನಿರ್ವಹಿಸಲಿದ್ದು, ಅದಕ್ಕಾಗಿ ಫೇಸ್‌ಬುಕ್ ಬಳಕೆದಾರರು API ಗೆ ತಮ್ಮ ಖಾತೆಯಲ್ಲಿ ಪ್ರವೇಶ ನೀಡಬೇಕಿದೆಯಂತೆ.

ಈ ಮಾಹಿತಿಯನ್ನು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸೈಕೋಮೆಟ್ರಿಕ್ಸ್‌ಕೇಂದ್ರದ ಉಪ ನಿರ್ದೇಶಕ ಹಾಗೂ ಸಂಶೋಧನೆಯ ಸಂಶೋಧಕರಾದ ಡಾ|| ಡೇವಿಡ್ ಸ್ಟಿಲ್‌ವೆಲ್ ಆನ್‌ಲೈನ್ ವರ್ತನೆಗಳನ್ನು ಸಂಗ್ರಹಿಸಿದ ನಂತರ ಆನ್‌ಲೈನ್ ಮೇಲ್‌ನಲ್ಲಿ ಹೇಳಿದ್ದಾರೆ. ಹಾಗೂ ಇವರು ಹೇಳಿರುವ "ಆಧುನಿಕ ಆನ್‌ಲೈನ್‌ನ ಸವಾಲ್ ಎಂದರೇ ಮಾಹಿತಿ ಸಂಗ್ರಹಿಸಿ ಭವಿಷ್ಯವನ್ನು ಹೇಳಲಾಗುತ್ತದೆ.
ಆದರೆ ಇದರ ಹಿಂದೆ ಫೇಸ್‌ಬುಕ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ನೋಡಲು ಸಾಧ್ಯವಾಗುತ್ತಿಲ್ಲ'' ಎಂಬ ಸಾಲನ್ನು ಆನ್‌ಲೈನ್ ಮೇಲ್‌ನಲ್ಲಿ ಉಲ್ಲೇಖಿಸಲಾಗಿದೆ.
ಫೇಸ್‌ಬುಕ್‌ನಿಂದ ತಿಳಿಯಬಹುದಾದ ಈ ಮಾಹಿತಿಯನ್ನು ನಾವು ಜನರಿಗೆ ತೋರಿಸಲು ಇಷ್ಟಪಡುತ್ತೇವೆ ಎಂದು ಡಾ|| ಡೇವಿಡ್ ಹೇಳಿದ್ದಾರೆ. ಅಪ್ಲೇ ಮ್ಯಾಜಿಕ್ ಸಾಸ್ ಈಗಾಗಲೇ ವ್ಯವಹಾರ ಕ್ಷೇತ್ರಕ್ಕೆ ಉತ್ತಮ ವ್ಯಕ್ತಿಗಳನ್ನು ಸೇರ್ಪಡೆ ಮಾಡಿಕೊಳ್ಳಲು ಮಾನಸಿಕ ಮೌಲ್ಯಮಾಪನ ಮಾಡಲು ಮಾರಾಟವಾಗಿದೆಯಂತೆ.


Click it and Unblock the Notifications








