Home
ಸುದ್ದಿಜಾಲ

1 ಗಂಟೆ ಸೈಕಲ್ ತುಳಿದರೆ 24 ಗಂಟೆ ವಿದ್ಯುತ್

By Suneel

ಬದಲಾದ ಜಾಗತಿಕ ವಿದ್ಯಮಾನದಲ್ಲಿ ಇಂದು ವಿದ್ಯುತ್‌, ನೀರಿನಷ್ಟೆ ಅತ್ಯಮೂಲ್ಯವಾಗಿದೆ. ವಿದ್ಯುತ್ ಕೊರತೆ ಬರಗಾಲ ಬಂದಾಗ ಉಂಟಾಗುತ್ತದೆ. ಮಳೆಗಾಲದಲ್ಲಿ ವಿದ್ಯುತ್‌ ಅನ್ನು ಚಾರ್ಜ್‌ ಮಾಡಿದರೆ ಅಪಾಯವಾಗಬಹುದೆಂದು ಪವರ್‌ಬ್ಯಾಂಕ್‌ ನವರು ಚಾರ್ಜ್‌ ಮಾಡುವುದಿಲ್ಲ. ಈ ಎರಡು ಸಮಯದಲ್ಲೂ ಸಹ ಜನರು ವಿದ್ಯುತ್‌ ಕೊರತೆಯನ್ನು ಎದುರಿಸುತ್ತಿದ್ದಾರೆ. ಆದರೆ ಅದಕ್ಕೆ ಈಗ ಭಾರತೀಯ ಮೂಲದ ಅಮೇರಿಕನ್‌ ಬಿಲಿಯನೇರ್ ಮನೋಜ್‌ ಭಾರ್ಗವ್‌ ಎಂಬುವವರು ಅದಕ್ಕೆ ಸಂಪೂರ್ಣ ಪರಿಹಾರವನ್ನು ಕಂಡುಹಿಡಿದಿದ್ದಾರೆ.

ಓದಿರಿ: 1 ಚಮಚ ಸಕ್ಕರೆಯಿಂದ ವಿದ್ಯುತ್‌ ಉತ್ಪಾದಿಸಿದ ಬಾಲಕ

ಮನೋಜ್‌ ಭಾರ್ಗವ್‌ ರವರು "ಸ್ಥಿರ ಬೈಸಿಕಲ್‌" ಒಂದನ್ನು ಅನಾವರಣಗೊಳಿಸಿದ್ದು, ಇದನ್ನು ಕೇವಲ 1 ಗಂಟೆ ತುಳಿದರೆ ದಿನದ 24 ಗಂಟೆ ವಿದ್ಯುತ್‌ ಬಳಸಿಕೊಳ್ಳಬಹುದಾಗಿದೆ. ದಿನನಿತ್ಯ ಜಿಮ್‌ ಕೇಂದ್ರಗಳಿಗೆ ಹೋಗಿ ಹಣಕೊಟ್ಟು ಅಲ್ಲಿ ಬೈಸಿಕಲ್‌ ತುಳಿಯುವವರು ಈ ಬೈಸಿಕಲ್‌ ತುಳಿದರೆ ಕರೆಂಟ್‌ ಬಿಲ್‌ ಸಹ ಉಳಿಯುತ್ತದೆ, ಹಾಗೆ ವ್ಯಾಯಾಮವು ಆಗುತ್ತದೆ. ಪ್ರಪಂಚದಲ್ಲಿ ವಿದ್ಯುತ್ ಕೊರತೆ ಅನುಭವಿಸುತ್ತಿರುವ ಎಲ್ಲಾ ಜನರು ಸಹ ಇದನ್ನು ಒಮ್ಮೆ ಮನೆಗೆ ಕೊಂಡ್ಯೊದರೆ ಸಾಕು. ಮನೆಯಲ್ಲಿ ವಿದ್ಯುತ್‌ನಿಂದ ಏನೇನು ಉಪಯೋಗ ಪಡೆಯುತ್ತಾ ಇದ್ರೋ ಆ ಎಲ್ಲಾ ಉಪಯೋಗವನ್ನು ಸಹ ಇದರಿಂದ ಪಡೆಯಬಹುದಾಗಿದೆ.

ಹಾಗಾದರೆ ಈ ಲೇಖನ ಓದಿ ಕೊಳ್ಳುವುದು ಎಲ್ಲಿ, ಬೆಲೆ ಎಷ್ಟು , ಉಪಯೋಗ ಏನು/ಹೇಗೆ ಎಂಬುದನ್ನು ತಿಳಿಯಿರಿ.

ಹಳ್ಳಿ ಮನೆಗಳಿಗೆ 24 ಗಂಟೆ ವಿದ್ಯುತ್‌ ನೀಡುವ ಬೈಸಿಕಲ್‌

ಹಳ್ಳಿ ಮನೆಗಳಿಗೆ 24 ಗಂಟೆ ವಿದ್ಯುತ್‌ ನೀಡುವ ಬೈಸಿಕಲ್‌

ಭಾರತೀಯ ಮೂಲದ ಅಮೇರಿಕನ್‌ ಬಿಲಿಯನೇರ್‌ ಮನೋಜ್‌ ಭಾರ್ಗವ ಎಂಬುವವರು ಸ್ಥಿರ ಬೈಸಿಕಲ್ ಅನಾವರಣ ಮಾಡಿದ್ದು, ಇದು ಮನೆಗಳಿಗೆ ವಿದ್ಯುತ್‌ ಅನ್ನು ಒದಗಿಸುತ್ತದೆ.

 ಸ್ಥಿರ ಬೈಸಿಕಲ್‌

ಸ್ಥಿರ ಬೈಸಿಕಲ್‌

ಸ್ಥಿರ ಬೈಸಿಕಲ್‌ ಅನ್ನು ತುಳಿಯುವುದರಿಂದ ಜನರೇಟರ್‌ನ ಚಕ್ರಗಳು ತಿರುಗಿ ಜನರೇಟರ್‌ಗೆ ಹೊಂದಿಸಿರುವ ಬ್ಯಾಟರಿ ಚಾರ್ಜ್‌ ಆಗುತ್ತದೆ ಎಂದು ಸ್ಥಿರ ಬೈಸಿಕಲ್‌ ಅನಾವರಣ ಮಾಡಿದ ಮನೋಜ್‌ ಭಾರ್ಗವ್‌ ಹೇಳಿದ್ದಾರೆ.

ಸ್ಥಿರ ಬೈಸಿಕಲ್‌ ಉಪಯೋಗ

ಸ್ಥಿರ ಬೈಸಿಕಲ್‌ ಉಪಯೋಗ

ಸ್ಥಿರ ಬೈಸಿಕಲ್‌ ಅನ್ನು ಕೇವಲ ಒಂದು ಗಂಟೆ ಸಮಯ ತುಳಿಯುವುದರಿಂದ ಹಳ್ಳಿಗಳ ಮನೆಗಳು 24 ಗಂಟೆ ಸಮಯ ವಿದ್ಯುತ್‌ ಪಡೆಯಬಹುದಾಗಿದೆ. ಬೆಳಕನ್ನು ಪಡೆಯಲು, ಫ್ಯಾನ್‌ಗಾಗಿ, ಫೋನ್‌ಗಳ ಬ್ಯಾಟರಿ ಚಾರ್ಜ್‌ ಮಾಡಲು ಬಳಸಬಹುದಾಗಿದೆ.

ಸ್ಥಿರ ಬೈಸಿಕಲ್‌ ಬೆಲೆ

ಸ್ಥಿರ ಬೈಸಿಕಲ್‌ ಬೆಲೆ

ಮನೋಜ್‌ ಭಾರ್ಗವ್ ಇದರ ಬೆಲೆಯನ್ನು ಅಂದಾಜು 12000 ರೂಪಾಯಿಯಿಂದ 15000 ರೂಪಾಯಿ ಆಗಬಹುದು ಎಂದು ಹೇಳಿದ್ದಾರೆ.

 ಸ್ಥಿರ ಬೈಸಿಕಲ್‌ ಯಾವಾಗ ಪಡೆಯಬಹುದು

ಸ್ಥಿರ ಬೈಸಿಕಲ್‌ ಯಾವಾಗ ಪಡೆಯಬಹುದು

ಸ್ಥಿರ ಬೈಸಿಕಲ್‌ ಅನ್ನು 2016 ಮಾರ್ಚ್‌ನಿಂದ ಕೊಳ್ಳಬಹುದು ಎಂದು ಮನೋಜ್‌ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮನೋಜ್‌ ಮಾತುಕತೆ

ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮನೋಜ್‌ ಮಾತುಕತೆ

ಮನೋಜ್‌ ರವರು ಸರ್ಕಾರಿ ಇಲಾಖೆಗಳೊಂದಿಗೆ ಜತೆಗೂಡಲು ಉತ್ಸಾಹ ಇಲ್ಲಿದಿದ್ದರೂ ಸಹ ನರೇಂದ್ರ ಮೋದಿಯವರೊಂದಿಗೆ ಸ್ಥಿರ ಬೈಸಿಕಲ್‌ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.

 ಮನೋಜ್‌ ಭಾರ್ಗವ್‌ ಹೇಳಿದ್ದೇನು

ಮನೋಜ್‌ ಭಾರ್ಗವ್‌ ಹೇಳಿದ್ದೇನು

"ನಾನು ಸರ್ಕಾರಿ ಇಲಾಖೆಗಳಿಗೆ ಹೋಗಬಹುದು, ಅಲ್ಲಿನ ಜನರೇನು ಕೆಟ್ಟವರಲ್ಲ. ಆದರೆ ಕಾರ್ಯ ದಕ್ಷತೆಯ ಮೌಲ್ಯ ಶೂನ್ಯ ವಾಗಿರುತ್ತದೆ. ನನಗೆ ಯಾವ ಸರ್ಕಾರಿ ಇಲಾಖೆ ಸಹಾಯ ಮಾಡುತ್ತದೆ ಎಂಬುದನ್ನು ತೀರ್ಮಾನಿಸಲು 6 ತಿಂಗಳು ಸಮಯ ಬೇಕಾಗಿದೆ ಎಂದಿದ್ದಾರೆ".

ಸ್ಥಿರ ಬೈಸಿಕಲ್‌ ಮಾರಾಟ ಎಲ್ಲಿ ?

ಸ್ಥಿರ ಬೈಸಿಕಲ್‌ ಮಾರಾಟ ಎಲ್ಲಿ ?

ಮನೋಜ್‌ ರವರು ಹೇಳಿರುವ ಪ್ರಕಾರ ಸ್ಥಿರ ಬೈಸಿಕಲ್‌ ಅನ್ನು ಉತ್ತರಖಂಡದಲ್ಲಿ ಮೊದಲು ಮಾರಾಟ ಮಾಡುವುದಾಗಿ ಹೇಳಿದ್ದಾರೆ. ನಂತರದಲ್ಲಿ ಕೌಟುಂಬಿಕ ಮಾರುಕಟ್ಟೆಯಲ್ಲಿ ಮಾರುವುದಾಗಿ ಹೇಳಿದ್ದಾರೆ.

ಸ್ಥಿರ ಬೈಸಿಕಲ್‌ ತಯಾರಿಕೆ

ಸ್ಥಿರ ಬೈಸಿಕಲ್‌ ತಯಾರಿಕೆ

ಸ್ಥಿರ ಬೈಸಿಕಲ್‌ ಅನ್ನು ಭಾರತದ ಕೆಲವು ಕೈಗಾರಿಕೆಗಳ ಸೌಲಭ್ಯದಿಂದ ತಯಾರಿಸಲಾಗುವುದು, ಅದೇ ರೀತಿ ಅಮೇರಿಕಾದಲ್ಲೂ ತಯಾರಿಸಲಾಗುವುದು ಎಂದು ಮನೋಜ್‌ ಹೇಳಿದ್ದಾರೆ.

ಸ್ಥಿರ ಬೈಸಿಕಲ್ ಉಪಯೋಗ

ಸ್ಥಿರ ಬೈಸಿಕಲ್ ಉಪಯೋಗ

ಪ್ರಪಂಚದಾದ್ಯಂತ ವಿದ್ಯುತ್‌ ಕೊರತೆ ಎದುರಿಸುತ್ತಿರುವ ಸುಮಾರು 1.3 ಬಿಲಿಯನ್‌ ಜನರಿಗೆ ಇದು ಉಪಯೋಗವಾಗಲಿದೆ ಎಂದು ಹೇಳಿದ್ದಾರೆ.

Best Mobiles in India

English summary
Indian-American billionaire philanthropist Manoj Bhargava on Friday unveiled a stationary bicycle that can generate electricity and help rural households meet their energy needs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+