ನಿದ್ದೆ ಮಾಡುವುದಕ್ಕೆ ಒಂದು ಲಕ್ಷ ಸಂಬಳ ನೀಡಲಿರುವ ಬೆಂಗಳೂರು ಕಂಪೆನಿ

By Gizbot Bureau
|

ಈ ಸ್ಟೋರಿಯನ್ನು ಓದಿದ ಮೇಲೆ ಹೀಗೂ ಹಣ ಗಳಿಸಬಹುದಾ ಅಂದುಕೊಳ್ಳಬೇಡಿ. ಅರೆರೆ ನಿದ್ದೆ ಮಾಡೋದಕ್ಕೂ ಇಷ್ಟೊಂದು ದುಡ್ಡು ಕೊಡ್ತಾರಾ ಕೇಳಬೇಡಿ. ಥತ್ತೇರಿಕೆ! ಇದೆಂತ ಕೆಲಸವಪ್ಪ. ನಿಜಕ್ಕೂ ಈ ಕಂಪೆನಿ ಮಲ್ಕೊಳ್ಳೋಕೆ ಸಂಬಳ ಕೊಡೋದು ನಿಜನಾ ಅಂತ ಹುಬ್ಬೇರಿಸಬೇಡಿ.

ನಾವು ಹೇಳುತ್ತಿರುವುದು ಅಪ್ಪಟ ಸತ್ಯ. ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಕಂಪೆನಿಯೊಂದು ವಿಚಿತ್ರ ಅಧ್ಯಯನಕ್ಕೆ ಮುಂದಾಗುತ್ತಿದೆ. ಹಾಗಾಗಿ 100 ದಿನಗಳ ಟಾಸ್ಕ್ ವೊಂದನ್ನು ರಚಿಸಿದ್ದು ಅದರಲ್ಲಿ 9 ಘಂಟೆಗಳ ಕಾಲ ನಿದ್ರಿಸುವವರು ಅವರಿಗೆ ಬೇಕಾಗಿದ್ದಾರೆ.

ವೇಕ್ ಫಿಟ್ ಇನ್ನೋವೇಷನ್ ಪ್ರೈವೇಟ್ ಲಿಮಿಟೆಡ್ "ಸ್ಲೀಪ್ ಇಂಟರ್ನ್ ಶಿಪ್" ಹಮ್ಮಿಕೊಂಡಿದ್ದು ಜನರ ಮಲಗುವ ಮಾದರಿಯನ್ನು ಮೇಲ್ವಿಚಾರಣೆ ಮಾಡಿ ವರದಿ ಸಿದ್ಧಪಡಿಸುವುದಕ್ಕೆ ಮುಂದಾಗುತ್ತಿದೆ. ಈ ರೀತಿ ನಿದ್ದೆ ಮಾಡುವ ಕೆಲಸಕ್ಕೆ "ಪೈಜಾಮ" ಧರಿಸುವವರೇ ಬೇಕು ಎಂಬುದಾಗಿ ಕೆಲಸದ ಸಮಯದಲ್ಲಿ ಇರಬೇಕಾದ ಡ್ರೆಸ್ ಕೋಡ್ ಬಗ್ಗೆಯೂ ಕೂಡ ವೆಬ್ ಸೈಟ್ ನಲ್ಲಿ ಕಂಪೆನಿ ಹೇಳಿಕೊಂಡಿದೆ.

ಸ್ಲೀಪ್ ಇಂಟರ್ನ್ಶಿಪ್ ನಿದ್ದೆಯ ಆರೋಗ್ಯದ ಬಗ್ಗೆ ಗಮನವನ್ನು ತರುವ ಪ್ರಯತ್ನವಾಗಿದೆ ಮತ್ತು ಕೆಲಸ,ಜೀವನದ ಸಮತೋಲವನ್ನು ಕಾಪಾಡಿಕೊಳ್ಳುವಲ್ಲಿ ನಿದ್ದೆಯ ಪಾತ್ರವು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದರ ಬಗ್ಗೆ ತಿಳಿಸುವ ಮತ್ತೊಂದು ಹೆಜ್ಜೆ ಇದಾಗಿದೆ ಎಂದು ವೇಕ್ ಫಿಟ್ ನ ಡೈರೆಕ್ಟರ್ ಮತ್ತು ಕೋ-ಫೌಂಡರ್ ಆಗಿರುವ ಚೈತನ್ಯ ರಾಮಲಿಂಗೇಗೌಡ ತಿಳಿಸಿದ್ದಾರೆ.

ಸ್ಲೀಪ್ ಇಂಟರ್ನ್ ಶಿಪ್ ನಲ್ಲಿ ನೀವೇನು ಮಾಡಬೇಕು?

ಸ್ಲೀಪ್ ಇಂಟರ್ನ್ ಶಿಪ್ ನಲ್ಲಿ ನೀವೇನು ಮಾಡಬೇಕು?

ಇಂಟರ್ನ್ ಶಿಪ್ ಗೆ ತೆರಳುವ ವ್ಯಕ್ತಿಗಳು ಮಾಡಬೇಕಿರುವುದು ಕೇವಲ ನಿದ್ದೆ! ಹೌದು ಈ ಕೆಲಸಕ್ಕೆ ಸೇರಿರುವವರು ಮಾಡಬೇಕಾಗಿರುವುದು ಕೇವಲ ನಿದ್ದೆ ಅಷ್ಟೇ. ಕಂಪೆನಿಯೇ ನೀಡುವ ಹಾಸಿಗೆಯಲ್ಲಿ 100 ದಿನಗಳ ಕಾಲ ದಿನಕ್ಕೆ 9 ಘಂಟೆ ಅವರು ತಿಳಿಸುವ ಜಾಗದಲ್ಲಿ ನಿದ್ದೆ ಮಾಡಬೇಕು ಮತ್ತು 7 ರಾತ್ರಿಗಳನ್ನು ನಿಮ್ಮ ಮನೆಯಲ್ಲಿ ನಿದ್ರಿಸಬೇಕು.

ವೆಬ್ ಸೈಟ್ ನಲ್ಲಿ ಕೆಲಸದ ವಿವರ:

ವೆಬ್ ಸೈಟ್ ನಲ್ಲಿ ಕೆಲಸದ ವಿವರ:

ಇದೆಂತ ಕೆಲಸವಪ್ಪ ಅಂದುಕೊಳ್ಳಬೇಡಿ. ತಮ್ಮ ಕಂಪೆನಿಯ ಅಧಿಕೃತ ವೆಬ್ ಸೈಟ್ ನಲ್ಲಿ ಕೆಲಸದ ಕುರಿತ ವಿವರಣೆಯ್ನು ಕಂಪೆನಿ ನೀಡಿದೆ.

" ಜಸ್ಟ್ ನಿದ್ರಿಸಿ. ನಿಮಗೆ ಎಷ್ಟು ಹೊತ್ತು ಮಲಗಲು ಸಾಧ್ಯವೋ ಅಷ್ಟು ಹೊತ್ತು ಮಲಗಿ, ನಿಮಗೆ ಎಷ್ಟು ಆಳದ ನಿದ್ರೆಗೆ ಜಾರಲು ಸಾಧ್ಯವೋ ಅಷ್ಟು ಆಳವಾಗಿ ನಿದ್ರಿಸಿ, ಸಾಧ್ಯವಾದಷ್ಟು ಸ್ಪರ್ಧಾತ್ಮಕವಾಗಿ ನಿದ್ರಿಸಿ. ವಿರಾಮ ತೆಗೆದುಕೊಳ್ಳಿ. ಮತ್ತೆ ಉಳಿದದ್ದೆಲ್ಲವನ್ನು ನಮಗೆ ಬಿಟ್ಟು ಬಿಡಿ" ಎಂದು ಕಂಪೆನಿ ತಮ್ಮ ವೆಬ್ ಸೈಟ್ ನಲ್ಲಿ ಬರೆದುಕೊಂಡಿದೆ.

ಸ್ಲೀಪ್ ಟ್ರ್ಯಾಕರ್ ಮೂಲಕ ನಿದ್ದೆಯ ಮಾದರಿಯ ಪರೀಕ್ಷೆ:

ಸ್ಲೀಪ್ ಟ್ರ್ಯಾಕರ್ ಮೂಲಕ ನಿದ್ದೆಯ ಮಾದರಿಯ ಪರೀಕ್ಷೆ:

ಹಾಸಿಗೆಯನ್ನು ಬಳಸಿದ ನಂತರ ಮತ್ತು ಬಳಸುವ ಮುನ್ನದ ಅವರ ನಿದ್ದೆಯ ಮಾದರಿಯನ್ನು ಸ್ಲೀಪ್ ಟ್ರಾಕರ್ ಬಳಸಿ ಪರೀಕ್ಷೆ ಮಾಡಲಾಗುತ್ತದೆ. ವ್ಯಕ್ತಿಯ ಮಲಗುವ ಮಾದರಿಯನ್ನು ವರದಿ ಮಾಡಲಾಗುತ್ತದೆ. ಇದಕ್ಕಾಗಿ ಅವರಿಗೆ 100 ದಿನಗಳ ಅವಧಿಗೆ 1 ಲಕ್ಷ ರುಪಾಯಿ ಸಂಬಳವನ್ನೂ ನೀಡಲಾಗುತ್ತದೆ.

ಒಂದು ಷರತ್ತಿದೆ:

ಒಂದು ಷರತ್ತಿದೆ:

ಒಂದು ಪ್ರಮುಖ ಷರತ್ತನ್ನು ಕಂಪೆನಿ ಹಾಕಿದೆ. ಈ ಕೆಲಸಕ್ಕೆ ಸೇರುವವರು ಕೆಲಸದ ಅವಧಿಯಲ್ಲಿ ಲ್ಯಾಪ್ ಟಾಪ್ ನ್ನು ಬಳಸುವಂತಿಲ್ಲ. ಆಯ್ಕೆಯಾದ ಕೆಲಸಗಾರರಿಗೆ 100 ದಿನಗಳ ಅವಧಿಯಲ್ಲಿ ಪ್ರತಿ ದಿನ 9 ತಾಸು ನಿದ್ರಿಸುವುದಕ್ಕೆ 1 ಲಕ್ಷ ರುಪಾಯಿ ಸಂಬಳವನ್ನು ನೀಡಲಾಗುತ್ತದೆ. ಆದರೆ ಅವರು ನೀಡಲಾಗುವ ನಿದ್ರಿಸುವ ಟಾಸ್ಕ್ ನ್ನು ಸಂಪೂರ್ಣಗೊಳಿಸಬೇಕಾಗುತ್ತದೆ.

ಸ್ಲೀಪ್ ಇಂಟರ್ನ್ಶಿಪ್ ಗೆ ಆಯ್ಕೆಯಾಗುವುದಕ್ಕೆ ಅಗತ್ಯವಿರುವ ಕೌಶಲ್ಯಗಳು ಯಾವುವು?

ಸ್ಲೀಪ್ ಇಂಟರ್ನ್ಶಿಪ್ ಗೆ ಆಯ್ಕೆಯಾಗುವುದಕ್ಕೆ ಅಗತ್ಯವಿರುವ ಕೌಶಲ್ಯಗಳು ಯಾವುವು?

ಕಂಪೆನಿಯ ವೆಬ್ ಸೈಟ್ ತಿಳಿಸುವಂತೆ ಈ ಕೆಲಸಕ್ಕೆ ಸೇರುವವರಿಗೆ ಬೇಕಾಗಿರುವುದು ಒಂದೇ ಒಂದು ಪ್ರಮುಖ ಕೌಶಲ್ಯ. ಅದುವೇ ನಿದ್ದೆ ಮಾಡುವುದು. ಅವಕಾಶ ಸಿಕ್ಕಾಗಲೆಲ್ಲಾ ನಿದ್ರಿಸುವ ಚಾಳಿ ಇರಬೇಕು. ನಿದ್ದೆಯ ಬಗ್ಗೆ ಅಪಾರವಾದ ವ್ಯಾಮೋಹವಿರಬೇಕು. ಮತ್ತೊಂದು ಪ್ರಮುಖ ಕೌಶಲ್ಯವೆಂದರೆ ನಿಮ್ಮದೇ ನಿದ್ದೆಯ ರೆಕಾರ್ಡ್ ನ್ನು ನೀವೇ ಬ್ರೇಕ್ ಮಾಡುವ ವಿಶೇಷ ನಿದ್ದೆಯ ಆಸಕ್ತಿ ನಿಮ್ಮಲ್ಲಿರಬೇಕು. ಅಷ್ಟೇ ಅಲ್ಲ ಈಗಾಗಲೇ ತಿಳಿಸಿರುವಂತೆ ಈ ಕೆಲಸದ ಡ್ರೆಸ್ ಕೋಡ್ ಪೈಜಾಮ ಆಗಿರುವುದರಿಂದಾಗಿ ನಿಮಗೆ ಪೈಜಾಮ ಧರಿಸುವುದಕ್ಕೆ ಯಾವುದೇ ಅಭ್ಯಂತರವಿರಬಾರದು.

ಖಂಡಿತ ಇದು ಯಾರಿಗುಂಟು ಯಾರಿಗಿಲ್ಲ ಆಫರ್ ಅಲ್ಲವೇ? ನಿಮಗೂ ಕೂಡ ಯದ್ವಾತದ್ವಾ ನಿದ್ದೆಯ ಬಗ್ಗೆ ಆಸಕ್ತಿ ಇದ್ದಲ್ಲಿ ಅಥವಾ ನಿದ್ದೆಯ ವ್ಯಾಮೋಹವಿದ್ದಲ್ಲಿ ಖಂಡಿತ ಈ ಕೆಲಸಕ್ಕೆ ಸೇರುವ ಪ್ರಯತ್ನ ನಡೆಸಬಹುದು.

Best Mobiles in India

Read more about:
English summary
This Company Will Pay Rs. 1 Lakh For Those Who Can Sleep For Nine Hours A Day

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X