Home
ಸುದ್ದಿಜಾಲ

ಶವ ಪೆಟ್ಟಿಗೆ ಹೊತ್ತು ಕುಣಿಯುತ್ತಿರುವ ಈ ವೈರಲ್‌ ವೀಡಿಯೋ ಎಲ್ಲಿಯದು ಗೊತ್ತಾ?

ನಿಮಗೆಲ್ಲಾ ಗೊತ್ತಿರುವ ಹಾಗೇ ಇಡೀ ಜಗತ್ತು ಇದೀಗ ಮಾರಕ ವೈರಸ್‌ ಕೋರೊನಾ ವೈರಸ್‌ನಿಂದ ತತ್ತರಿಸಿ ಹೋಗಿದೆ. ಚೀನಾದಲ್ಲಿ ಶುರುವಾದ ಕೊರೋನಾ ಯಾತ್ರೆ ಇದೀಗ ಇಡೀ ವಿಶ್ವವನ್ನೇ ಕಾಡುತ್ತಿದೆ. ಇದಕ್ಕೆ ಭಾರತವೂ ಕೂಡ ಹೊರತಾಗಿಲ್ಲ. ಸದ್ಯ ಕೊರೋನಾ ವೈರಸ್‌ ಹರಡದಂತೆ ತಡೆಗಟ್ಟಲು ಜನ ಎಚ್ಚರಿಕೆಯಿಂದ ಇರಬೇಕಾಗಿದ್ದು ಸಮಾಜಿಕ ಅಂತರ ಕಾಪಾಡಬೇಕಿದೆ. ಇದೇ ಕಾರಣಕ್ಕೆ ದೇಶದಲ್ಲಿ ಲಾಕ್‌ಡೌನ್‌ ಆದೇಶವನ್ನ ಘೋಷಿಸಲಾಗಿದೆ. ಇನ್ನು ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿ ಕುಳಿತಿರುವ ಮಂದಿ ಸಾಕಷ್ಟು ವೀಡಿಯೋಗಳನ್ನ ಕ್ರಿಯೆಟ್‌ ಮಾಡಿ ಸೊಶೀಯಲ್‌ ಮೀಡಿಯಾಗಳಲ್ಲಿ ಹರಿಬಿಡ್ತಿದ್ದಾರೆ. ಈ ನಡುವೆ ಕೊರೋನಾ ವೈರಸ್‌ ಕುರಿತ ಜಾಗೃತಿ ಮೂಡಿಸುವ ಸಾಕಷ್ಟು ವೀಡಿಯೋಗಳನ್ನ ನಾವು ನೊಡಬಹುದಾಗಿದೆ. ಇದರ ನಡುವೆ ಈ ಒಂದು ವೀಡಿಯೊ ಮಾತ್ರ ಸಾಕಷ್ಟು ವೈರಲ್‌ ಆಗುತ್ತಿದೆ.

ಹೌದು

ಹೌದು, ಕೋವಿಡ್ -19 ಜಗತ್ತಿನಾದ್ಯಂತ ಹರಡೋಕೆ ಶುರುವಾಗಿ ಲಾಕ್‌ಡೌನ್‌ ಆದೇಶ ಹೊರಬಿದ್ದ ನಂತರ ಈ ಒಂದು ವೀಡಿಯೋ ಸಾಕಷ್ಟು ವೈರಲ್‌ ಆಗುತ್ತಿದೆ. ಈ ವೀಡಿಯೋ ನೊಡಿದ ಪ್ರತಿಯೊಬ್ಬರು ಮೊದಲಿಗೆ ನಗುತ್ತಾರೆ, ಆದರೆ ಅಂತಿಮವಾಗಿ ಈ ವೀಡಿಯೊದಲ್ಲಿ ಒಂದು ಸಂದೇಶ ಕೂಡ ನಿಮಗೆ ಸಿಗಲಿದೆ. ಅಷ್ಟಕ್ಕೂ ಯಾವುದು ಈ ವೀಡಿಯೋ ಅಂದರೆ ಅದೇ ಶವ ಪೆಟ್ಟಿಗೆಯನ್ನ ಹೊತ್ತು ಡ್ಯಾನ್ಸ್‌ ಮಾಡುತ್ತಿರುವ ವೀಡಿಯೊ. ಈ ವೀಡಿಯೊವನ್ನ ನಿವು ಕೂಡ ನೋಡಿರುತ್ತೀರಾ, ಇಲ್ಲವೇ ಇತರರು ವೀಕ್ಷಿಸುವಾಗ ನಿವು ಕೂಡ ನೊಡಿ ನಕ್ಕು ಸುಮ್ಮನಾಗಿರುತ್ತೀರಾ, ಅಷ್ಟಕ್ಕೂ ಈ ವೀಡಿಯೋ ಎಲ್ಲಿಯದೂ ಯಾರು ಈ ರೀತಿ ಶವ ಪೆಟ್ಟಿಗೆ ಹೊತ್ತು ಕುಣಿಯುತ್ತಿರುವವರು ಅನ್ನೊದರ ಮಾಹಿತಿಯನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಯಾವುದು ಈ ವೀಡಿಯೋ?

ಯಾವುದು ಈ ವೀಡಿಯೋ?

ಸದ್ಯ ಪ್ರಪಂಚದಾದ್ಯಂತದ ಲಕ್ಷಾಂತರ ಜನರು ಲಾಕ್‌ಡೌನ್ ಅಡಿಯಲ್ಲಿದ್ದರೆ,ಕೆಲವರು ಆನ್‌ಲೈನ್‌ನಲ್ಲಿ ಕಿರು ವೀಡಿಯೋಗಳ ಶೇರ್‌ ಮಾಡುವ ಮೂಲಕ ಕೆಲವರನ್ನ ನಗಿಸುವ ಪ್ರಯತ್ನವನ್ನ ಸಹ ಮಾಡುತ್ತಿದ್ದಾರೆ. ಇನ್ನು ಕೆಲವು ವೀಡಿಯೋಗಳು ಸಾಕಷ್ಟು ವೈರಲ್‌ ಆಗಿವೆ. ಇವುಗಳಲ್ಲಿ ಘಾನಾದ ಡಿ ಡ್ಯಾನ್ಸಿಂಗ್ ಪಾಲ್‌ಬೀರರ್‌ಗಳು ಮಾಡಿರುವ ಡ್ಯಾನ್ಸ್‌ ಎಲ್ಲಡೆ ವೈರಲ್‌ ಆಗಿದೆ. ಘಾನಾದ ಡೆಮಾಗಳು ತಮ್ಮ ಭುಜದ ಮೇಲೆ ಶವಪೆಟ್ಟಿಗೆಯನ್ನ ಹೊತ್ತು ವಿಚಿತ್ರವಾಗಿ ನರ್ತಿಸುತ್ತಾ ಸಾಗುವ ಈ ವೀಡಿಯೋವನ್ನ ಸಾಕಷ್ಟು ವೈರಲ್‌ ಮಾಡಲಾಗ್ತಿದೆ. ಡೆನ್ ಅವರ ಈ ವೀಡಿಯೋ ಕೊರೊನಾವೈರಸ್ ಸೆನ್ಸಿಟೈಸೇಶನ್ ಮೆಸೇಜ್ ಡಿ ವರ್ಲ್ಡ್ ಅಂತಾನೇ ಹೇಳಬಹುದು.

ಯಾರು ಈ ಡ್ಯಾನ್ಸಿಂಗ್‌ ಪಾಲ್‌ಬೀರರ್‌

ಯಾರು ಈ ಡ್ಯಾನ್ಸಿಂಗ್‌ ಪಾಲ್‌ಬೀರರ್‌

ಇನ್ನು ವಿಶ್ವದೆಲ್ಲೆಡೆ ವಯರಲ್‌ ಆಗಿರುವ ಪಾಲ್‌ಬೀರರ್‌ ಬಹಳ ವಿಚಿತ್ರವಾಗಿ ನರ್ತಿಸುತ್ತಾ ಶವಪೆಟ್ಟೆಗಯನ್ನ ಹೆಗಲ ಮೇಲೆ ಹೊತ್ತು ಸಾಗುತ್ತಿರುತ್ತಾರೆ. ಸಾಮಾನ್ಯವಾಗಿ ಶವಯಾತ್ರೆ ಸಂದರ್ಭದಲ್ಲಿ ನಿರವ ಮೌನ ಮೆರವಣಿಗೆ ನಡೆಯುತ್ತೆ. ಆದರೆ ಈ ಪಾಲ್‌ಬೀರರ್‌ ಮಾತ್ರ ಶವವನ್ನ ಹೊತ್ತು ನರ್ತಿಸುತ್ತಾರೆ. ಇದೇ ಕಾರಣಕ್ಕೆ ಈ ವೀಡಿಯೋ ವೈರಲ್‌ ಆಗಿರೋದು. ಕೊರೋನಾ ಹೆಮ್ಮಾರಿ ಬಂದು ಅಟ್ಕಾಯಿಸಿಕೊಂಡ್ರೆ ನಿಮ್ಮನ್ನು ನಾವು ಹೀಗೆ ಹೊತ್ತು ಸಾಗುತ್ತೇವೆ ಅನ್ನೊ ಸಮದೇಶ ಈ ವೀಡಿಯೋದಲ್ಲಿ ನೊಡಬಹುದಾಗಿದೆ.

ಹೇಗೆಲ್ಲಾ ವೈರಲ್‌ ಆಗ್ತಿದೆ.

ಹೇಗೆಲ್ಲಾ ವೈರಲ್‌ ಆಗ್ತಿದೆ.

ವಿಚಿತ್ರ ಅಂದ್ರೆ ಈ ಟೆಕ್ನಾಲಜಿ ಯುಗದಲ್ಲಿ ಯಾವ ವೀಡಿಯೊಗಳನ್ನ ಬೇಕದ್ರೂ ಸಂದರ್ಭಕ್ಕೆ ತಕ್ಕಂತೆ ಎಡಿಟ್‌ ಮಾಡಬಹುದಾಗಿದೆ. ಈ ವೀಡಿಯೊದಲ್ಲಿ ಕೂಡ ಇದೇ ಆಗಿದೆ. ಇದು ಘಾನ ದೇಶದ ವಿಡಿಯೊ ಆದರೆ ಇದನ್ನ ಪ್ರಸ್ತುತತಗೆ ಸಂಬಂದಪಟ್ಟಂತೆ ತಮ್ಮ ಸಿನಿಮಾ ಡೈಲಾಗ್‌ಗಳಿಗೆ ಎಡಿಟ್‌ ಮಾಡಿ ಹರಿಬಿಡಲಾಗುತ್ತಿದೆ. ಈ ಮೂಲಕ ವೀಡಿಯೋ ಇನ್ನು ಕೂಡ ವೈರಲ್‌ ಆಗುತ್ತಿದೆ. ಇನ್ನು ಈ ವೀಡಿಯೋವನ್ನ ಇಟ್ಟುಕೊಂಡು ಈಗಾಗಲೇ ಸೋಶಿಯಲ್ ಮೀಡಿಯಾ ಬಳಕೆದಾರರು ಸಾಕಷ್ಟು ಇಂಟರ್ನೆಟ್ ಮೇಮ್‌ಗಳನ್ನು ರಚಿಸಿದ್ದಾರೆ. ಕೊರೋನಾ ವೈರಸ್‌ ಕುರಿತು ನಿರ್ಲಕ್ಷ್ಯ ಮಾಡಿದರೆ ಈ ರೀತಿಯ ಶವಯಾತ್ರೆಯಲ್ಲಿ ಹೋಗುತ್ತಾರೆ ಎನ್ನುವ ವಿಶಿಷ್ಟ ಸಂದೇಶ ಹೊತ್ತ ವಿಡಿಯೊಗಳನ್ನ ಹರಿಬಿಡಲಾಗಿದೆ. ಕೊರೋನಾ ವೈರಸ್‌ನಿಂದ ಸತ್ತವರನ್ನ ಈ ರೀತಿ ಯಾತ್ರೆ ಮಾಡಲಾಗುತ್ತೆ ಎಂಬುದಾಗಿಯೂ ಸಾಕಷ್ಟು ವೀಡಿಯೋಗಳನ್ನ ಕ್ರಿಯೆಟ್‌ ಮಾಡಿ ಡಿ ಡ್ಯಾನ್ಸಿಂಗ್ ಪಾಲ್‌ಬೀರರ್‌ಡ್ಯಾನ್ಸ್‌ ಅನ್ನು ಕ್ರಿಯೆಟ್‌ ಮಾಡುತ್ತಿದ್ದಾರೆ.

ಘಾನದ ಡಿ ಪಾಲ್‌ ಬೀರರ್‌

ಘಾನದ ಡಿ ಪಾಲ್‌ ಬೀರರ್‌

ಸದ್ಯ ಗಾನಾದ ಡಿ ಪಾಲ್‌ಬೀರರ್‌ ಡ್ಯಾನ್ಸ್‌ನ ಹಿಂದಿನ ಸಂದೇಶವು ಸರಳವಾಗಿದೆ "ಮನೆಯಲ್ಲೇ ಇರಿ ಅಥವಾ ಇಲ್ಲವೇ ಶವ ಪೆಟ್ಟಿಗೆಯ ಜೊತೆ ನೃತ್ಯ ಮಾಡಿ ಎಂಬ ಸಂದೇಶ ನಿಡಲಾಗಿದೆ. ಬ್ರೆಜಿಲ್‌ನಂತಹ ಕೆಲವು ದೇಶಗಳು ಡಿ ಪಾಲ್‌ಬೀರರ್‌ಗಳ ಮೂಲಕ ಜಾಗೃತಿ ಮುಡಿಸುವ ಪ್ರಯತ್ನವನ್ನ ಮಾಡುತ್ತಿದ್ದಾರೆ. ಇನ್ನು ಈ ರೀತಿ ನೃತ್ಯ ಮಾಡಿಉರವ ಪಾಲ್‌ಬೀರರ್‌ಗಳು ತಮ್ಮದೇ ಆದ ಸಂಸ್ಥೆಯನ್ನ ಹೊಂದಿದ್ದು, ಇದು ಘಾನ ಡ್ಯಾನ್ಸಿಂಗ್‌ ಪಾಲ್‌ಬೀರರ್‌ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇನ್ನು ವೈರಲ್‌ ಆಗಿರುವ ಈ ನೃತ್ಯದ ಡಿ ಡ್ಯಾನ್ಸಿಂಗ್ ಪಾಲ್‌ಬೀರರ್‌ಗಳ ನಾಯಕ ಬೆಂಜಮಿನ್ ಐಡೂ ನಾನು ನೃತ್ಯ ಸಂಯೋಜನೆಯನ್ನು ಮಾಡಲಿದ್ದೇವೆ. ಇದರ ಮೂಲಕ ಜನರಿಗೆ ಜಾಗೃತಿ ಮುಡಿಸುವ ಕಾರ್ಯವನ್ನ ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

Best Mobiles in India

English summary
This dancing video by pallbearers has turned into sensation amidst covid 19.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+