ಕೇವಲ 399 ರುಪಾಯಿಯಲ್ಲಿ ನಿಮ್ಮ ಏಸಿಯನ್ನು ಏರ್ ಪ್ಯೂರಿಫೈಯರ್ ಮಾಡಿಕೊಳ್ಳಿ

By Gizbot Bureau
|

ಗಾಳಿ ಶುದ್ಧೀಕರಣ ಯಂತ್ರಗಳ ದುಬಾರಿ ಬೆಲೆಯನ್ನು ನಿಭಾಯಿಸುವ ಸಲುವಾಗಿ ಮತ್ತು ಒಳಾಂಗಣ ವಾಯುಮಾಲಿನ್ಯವನ್ನು ಪರಿಹರಿಸುವ ಸಲುವಾಗಿ ಹೆಚ್ಚು ಆರ್ಥಿಕ ಪರಿಹಾರ ನೀಡುವ ಉದ್ದೇಶದಿಂದ ದೆಹಲಿಯ ಐಐಟಿ ಸ್ಟಾರ್ಟ್ ಅಪ್ ನವರು ನ್ಯಾನೋ ಕ್ಲೀನ್ ಎಸಿ ಫಿಲ್ಟರ್ ನ್ನು ಪರಿಚಯಿಸಿದ್ದು ಇದು ಎಲ್ಲಾ ಎಸಿಯ ಗಾಳಿಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.

ಕೇವಲ 399 ರುಪಾಯಿಯಲ್ಲಿ ನಿಮ್ಮ ಏಸಿಯನ್ನು ಏರ್ ಪ್ಯೂರಿಫೈಯರ್ ಮಾಡಿಕೊಳ್ಳಿ

ಭಾರತದಲ್ಲಿ ಲಭ್ಯವಿರುವ ಯಾವುದೇ ಏಸಿ ಮಾಡೆಲ್ ನಲ್ಲಿ ಈ ನ್ಯಾನೋ ಕ್ಲೀನ್ ಫಿಲ್ಟರ್ ಗಳು ಕೆಲಸ ಮಾಡುತ್ತದೆ ಎಂದು ಕಂಪೆನಿ ತಿಳಿಸಿದೆ.

ಭಾರತದ ದೊಡ್ಡ ದೊಡ್ಡ ಸಿಟಿಗಳಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯದ ಸಮಸ್ಯೆ ಅಧಿಕವಾಗುತ್ತಲೇ ಇದೆ. ಒಳಾಂಗಣ ಬಳಕೆಗಾಗಿ ವಾಯು ಶುದ್ಧೀಕರಣದ ಯಂತ್ರಗಳನ್ನು ಜನರು ಬಯಸುತ್ತಿದ್ದಾರೆ. ಆದರೆ ಅದರ ದುಬಾರಿ ಬೆಲೆಯು ಖರೀದಿದಾರರು ಖರೀದಿಸುವುದಕ್ಕೆ ಹಿಂದೇಟು ಹಾಕುವಂತೆ ಮಾಡುತ್ತಿದೆ. ಅದೇ ಕಾರಣಕ್ಕಾಗಿ ದೇಶದ ಬಹುಪಾಲು ಸಿಟಿಗಳಲ್ಲಿ ಜನರು ಎದುರಿಸುವ ಬೇಸಿಗೆಯ ಬಿಸಿಗಾಗಿ ಏರ್ ಕಂಡೀಷನ್ ನ್ನು ಖರೀದಿಸುವುದಕ್ಕೆ ಮುಂದಾಗುತ್ತಾರೆ. ಐಐಟಿ ದೆಹಲಿ ಸ್ಟಾರ್ಟ್ ಅಪ್ ನವರು ಇದೀಗ ಈ ಎಸಿಯಲ್ಲಿ ಗಾಳಿ ಶುದ್ಧೀಕರಣದ ತಂತ್ರಗಾರಿಕೆಯನ್ನು ಕಡಿಮೆ ಬಜೆಟ್ ನಲ್ಲಿ ಅಳವಡಿಸುವುದಕ್ಕೆ ಮುಂದಾಗಿದ್ದಾರೆ.

ನ್ಯಾಸೋಫಿಲ್ಟರ್ ನ್ಯಾನೇ ಕ್ಲೀನ್ ಎಸಿ ಫಿಲ್ಟರ್ ನ ಬೆಲೆ, ವೈಶಿಷ್ಟ್ಯತೆಗಳು ಮತ್ತು ಕಾರ್ಯವಿಧಾನ

ನ್ಯಾಸೋಫಿಲ್ಟರ್ ನ್ಯಾನೇ ಕ್ಲೀನ್ ಎಸಿ ಫಿಲ್ಟರ್ ನ ಬೆಲೆ, ವೈಶಿಷ್ಟ್ಯತೆಗಳು ಮತ್ತು ಕಾರ್ಯವಿಧಾನ

ಒಂದು ನ್ಯಾನೋ ಕ್ಲೀನ್ ಎಸಿ ಫಿಲ್ಟರ್ ನಲ್ಲಿ ಎರಡು ಫಿಲ್ಟರ್ ಗಳಿದ್ದು ಅದರಲ್ಲಿ ಒಂದು ಫಿಲ್ಟರ್ ಎಸಿಯಾಗಿ ಕೆಲಸ ಮಾಡುತ್ತದೆ. ಇದರ ಬೆಲೆ ಕೇವಲ 399 ರುಪಾಯಿಗಳು. ಕಂಪೆನಿಯ ಸ್ವಂತ ವೆಬ್ ಸೈಟ್ ಮತ್ತು ಅಮೇಜಾನ್ ಇಂಡಿಯಾ ವೆಬ್ ಸೈಟ್ ಗಳಲ್ಲಿ ಲಭ್ಯವಿದೆ. ಸದ್ಯಅಮೇಜಾನ್ ಕೋಂಬೋ ಪ್ಯಾಕ್ ನಲ್ಲಿ ಮಾರಾಟ ಮಾಡುತ್ತಿದ್ದು ಮೂರು ಯುನಿಟ್ ಗಳಿಗೆ ಎರಡು ಯುನಿಟ್ ಗಳ ಬೆಲೆ ಅಂದರೆ 899 ರುಪಾಯಿಗೆ ಮಾರಾಟ ಮಾಡುತ್ತಿದೆ. ದೇಶದ ಹಲವಾರು ಔಷಧಾಲಯಗಳ ಅಂಗಡಿಗಳಲ್ಲಿ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ವಸ್ತುಗಳ ಅಂಗಡಿಗಳಲ್ಲಿ ಈ ಫಿಲ್ಟರ್ ಗಳನ್ನು ಖರೀದಿಸಬಹುದಾಗಿದೆ.

ಇದರ ಕಾರ್ಯವಿಧಾನ ಬಹಳ ಸರಳವಾಗಿದೆ. ಪ್ರತಿಯೊಂದು ಎಸಿಯು ಕೂಡ ಪ್ಲಾಸ್ಟಿಕ್ ಪರದೆಯನ್ನು ಹೊಂದಿದ್ದು ಗಾಳಿಯನ್ನು ಶುದ್ಧೀಕರಿಸುತ್ತದೆ. ಎರಡು ಬದಿಗಳಲ್ಲಿರುವ ಟೇಪ್ ನ ಸಹಾಯದಿಂದ ಈ ಪ್ಲಾಸಿಕ್ ಮೆಷ್ ನಲ್ಲಿ ನ್ಯಾನೋ ಕ್ಲೀನ್ ಎಸಿ ಫಿಲ್ಟರ್ ನ್ನು ಅಂಟಿಸಬೇಕಾಗುತ್ತದೆ. ಹಾಗಂತ ಈ ಎಸಿಯಿಂದ ಗಾಳಿಯ ಪ್ರಸರಣಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಜೊತೆಗೆ ನಿಮಗೆ ಹೆಚ್ಚುವರಿ ವಿದ್ಯುತ್ ಬಿಲ್ ಬರುತ್ತದೆ ಎಂಬ ತಲೆನೋವು ಕೂಡ ಬೇಡ. ಯಾಕಂದರೆ ಇದು ಹೆಚ್ಚುವರಿ ವಿದ್ಯುತ್ ನ್ನು ಬಯಸುವುದಿಲ್ಲ.

ದುಬಾರಿ ಎಸಿ

ದುಬಾರಿ ಎಸಿ

ಎಸಿಯಿಂದ ತಣ್ಣನೆಯ ಗಾಳಿಯು ಮುಚ್ಚಿರುವ ಕೋಣೆಯನ್ನು ತಂಪಾಗಿಸುತ್ತದೆ. ಈ ಫಿಲ್ಟರ್ ನಲ್ಲಿ PM2.5 ಮತ್ತು ಇತರ ಸೂಕ್ಷ್ಮ ಕಣಗಳ ಮಾಲಿನ್ಯಕಾರಕಗಳನ್ನು ಬಲೆಗೆ ಬೀಳಿಸುತ್ತದೆ. ಸುಮಾರು 90% ಗಾಳಿಯನ್ನು ಒಂದು ಕೋಣೆಯಲ್ಲಿ ಒಂದು ಘಂಟೆಯೊಳಗೆ ಶುದ್ಧೀಕರಿಸುವ ಸಾಮರ್ಥ್ಯವನ್ನು ಇದು ಹೊಂದಿದೆ ಎಂದು ಕಂಪೆನಿ ತಿಳಿಸಿದೆ.

ಸದ್ಯ ಲಭ್ಯವಿರುವ ದುಬಾರಿ ಎಸಿಗಿಂತ ಕೇವಲ 5 ನಿಮಿಷ ಹೆಚ್ಚುವರಿ ಸಮಯವನ್ನು ಇದು ತೆಗೆದುಕೊಳ್ಳುತ್ತದೆ. ಅಂದರೆ ದುಬಾರಿ ಏಸಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಾಗುವ ಈ ಎಸಿ ಖರೀದಿಸುವುದರಲ್ಲಿ ಅರ್ಥವಿದೆ. ನಿಮ್ಮ ಹಣವನ್ನು, ವಿದ್ಯುತ್ ಬಿಲ್ ಮತ್ತು ರೂಮಿನ ಜಾಗ ಎಲ್ಲವನ್ನೂ ಉಳಿಸುವುದಕ್ಕೆ ಇದು ನೆರವು ನೀಡುತ್ತದೆ.

ಪ್ರಮುಖ ವಿಚಾರವೆಂದರೆ ನ್ಯಾನೋ ಕ್ಲೀನ್ ಎಸಿ ಫಿಲ್ಟರ್ ಗಳನ್ನು ತೊಳೆಯುವುದಕ್ಕೆ ಸಾಧ್ಯವಿಲ್ಲ. ಮಾಲಿನ್ಯದ ಆಧಾರದಲ್ಲಿ ಫಿಲ್ಟರ್ ಗಳು ಸ್ವಯಂಚಾಲಿತವಾಗಿ ಕಪ್ಪು ವರ್ಣಕ್ಕೆ ತಿರುಗುತ್ತದೆ. ಬಳಕೆದಾರರು ಇದನ್ನು ಪರೀಕ್ಷಿಸುತ್ತಾ ಇರಬೇಕು. ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ದುಬಾರಿ ಗಾಳಿ ಶುದ್ಧೀಕರಿಸುವ ಫಿಲ್ಟರ್ ಗಳನ್ನು ಕೂಡ ಪ್ರತಿ ಮೂರು ತಿಂಗಳಿಗೆ ಬದಲಾಯಿಸುತ್ತಾ ಇರಬೇಕಾಗುತ್ತದೆ.

ಬ್ರ್ಯಾಂಡ್ ಟೈ ಅಪ್ ಮತ್ತು ದೊಡ್ಡ ರಫ್ತು ಮಾಡುವ ಪ್ಲಾನ್

ಬ್ರ್ಯಾಂಡ್ ಟೈ ಅಪ್ ಮತ್ತು ದೊಡ್ಡ ರಫ್ತು ಮಾಡುವ ಪ್ಲಾನ್

ನ್ಯಾಸೋಫಿಲ್ಟರ್ ಕಳೆದ ವರ್ಷವೇ ಹೆಡ್ ಲೈನ್ ಸುದ್ದಿಯಾಗಿತ್ತು. ಅತ್ಯಂತ ಕಡಿಮೆ ಬೆಲೆಯಲ್ಲಿ ಜನರ ಕೈಗೆಟುಕುವ ನಾಸಲ್ ಫಿಲ್ಟರ್ ನ್ನು ಅವರು ಪರಿಚಯಿಸಿದ್ದರು. ಆದರೆ ವಯಕ್ತಿಕವಾಗಿ ಕಂಪೆನಿಯು ಕೈಗೆಟುಕುವ ಬೆಲೆಯಲ್ಲಿ ಗಾಳಿ ಸುದ್ದಿಕರಿಸುವ ಆ ಮೂಲಕ ವಾಯುಮಾಲಿನ್ಯವನ್ನು ಟ್ಯಾಕಲ್ ಮಾಡುವ ತಂತ್ರಗಾರಿಕೆಯನ್ನು ಬಿಡುಗಡೆಗೊಳಿಸುವುದಕ್ಕೆ ಪ್ಲಾನ್ ಮಾಡಿದ್ದರು. ಜಗತ್ತಿನಾದ್ಯಂತ ಸುಮಾರು 30 ದೇಶಗಳಿಗೆ ಈ ಏರ್ ಫಿಲ್ಟರ್ ಗಳನ್ನು ರಫ್ತು ಮಾಡಲಾಗುತ್ತಿದೆ ಮತ್ತು ಮಧ್ಯ ಏಷ್ಯಾ ದೇಶಗಳಲ್ಲಿ ಸದ್ಯ ಬಹಳ ಬೇಡಿಕೆ ಇದೆ ಎಂದು ನ್ಯಾಸೋಫಿಲ್ಟರ್ ನ ಸಿಓಓ ಆಗಿರುವ ಜತಿನ್ ಕೆವ್ಲಾನಿ ತಿಳಿಸಿದ್ದಾರೆ.

ಕುತೂಹಲಕಾರಿ ವಿಚಾರವೇನೆಂದರೆ ಸಾಂಪ್ರದಾಯಿಕ ಭಾರತೀಯ ಮಾರುಕಟ್ಟೆಯ ಎಸಿ ಬ್ರ್ಯಾಂಡ್ ಕಂಪೆನಿಗಳು ಕೂಡ ಇವರ ಜೊತೆಗೆ ಕೈಜೋಡಿಸುವುದಕ್ಕೆ ಆಸಕ್ತಿ ತೋರಿಸುತ್ತಿದ್ದಾರೆ. ಹೊಸ ರೇಂಜಿನ ಎಸಿಗಳಲ್ಲಿ ನ್ಯಾನೋಕ್ಲೀನ್ ಎಸಿ ಫಿಲ್ಟರ್ ನ್ನು ಅಳವಡಿಸುವುದಕ್ಕೆ ಈ ಕಂಪೆನಿಗಳು ಆಸಕ್ತಿ ತೋರಿಸುತ್ತಿದೆ. ಈಗಾಗಲೇ ಈ ನಿಟ್ಟಿನಲ್ಲಿ ಮಾತುಕತೆಗಳು ಕೂಡ ನಡೆಯುತ್ತಿದೆ ಎಂದು ನ್ಯಾಸೋಫಿಲ್ಟರ್ ನ ಸಿಇಓ ಆಗಿರುವ ಪ್ರತೀಕ್ ಶರ್ಮಾ ತಿಳಿಸಿದ್ದಾರೆ.

Best Mobiles in India

Read more about:
English summary
This device from IIT Delhi startup can convert your AC into an air purifier for Rs. 399

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X