ಗಾಳಿಯಲ್ಲಿರುವ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವ ಸಾಧನ

  ಮನುಷ್ಯ ಜೀವಂತವಾಗಿ ಇರಬೇಕು ಅಂದರೆ ನೀರು ಅತ್ಯವಶ್ಯಕ. ಭೂಮಿಯ ಮುಕ್ಕಾಲು ಭಾಗ ನೀರೇ ತುಂಬಿಕೊಂಡಿದ್ದರೂ ಕುಡಿಯುವ ನೀರಿನ ಬವಣೆ ಮಾತ್ರ ಕೆಲವು ಪ್ರದೇಶಗಳಲ್ಲಿ ತಪ್ಪಿಲ್ಲ. ಭೂಮಿಯ ರಚನೆಯೇ ಹಾಗಿದೆ. ಒಂದೊಂದು ಕಡೆ ಅತ್ಯಧಿಕ ನೀರು, ಮತ್ತೂ ಕೆಲವು ಕಡೆ ಮಂಜು, ಇನ್ನು ಕೆಲವು ಕಡೆ ಕೇವಲ ಬರಡು ಭೂಮಿ.

  ಗಾಳಿಯಲ್ಲಿರುವ ನೀರನ್ನು ಕುಡಿಯುವ ನೀರಾಗಿ ಪರಿವರ್ತಿಸುವ ಸಾಧನ

  ಆದರೆ ಕುಡಿಯುವ ನೀರಿಗೂ ತತ್ಸಾರ ಪಡುವ ಜನರಿಗೆ ಹೇಗಾದರೂ ಮಾಡಿ ಕುಡಿಯುವ ನೀರು ಲಭ್ಯವಾಗುವಂತೆ ಮಾಡಬೇಕು ಎಂಬ ವಿಚಾರಕ್ಕಾಗಿ ವಿಜ್ಞಾನಿಗಳು ತಲೆ ಕೆಡಿಸಿಕೊಂಡಿದ್ದಾರೆ. ಇದೀಗ ಗಾಳಿಯಲ್ಲಿರುವ ನೀರಿನ ಅಂಶವನ್ನು ಕುಡಿಯುವ ನೀರಾಗಿ ಪರಿವರ್ತಿಸುವ ಸಾಧನವನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಗಾಳಿಯಲ್ಲಿನ ನೀರು ಕುಡಿಯುವ ನೀರಾಗಿ ಪರಿವರ್ತನೆ:

  ವಿಜ್ಞಾನಿಗಳು ಒಂದು ಸರಳವಾಗಿರುವ ಡಿವೈಸ್ ನ್ನು ತಯಾರಿಸಿದ್ದು ಅದು ಗಾಳಿಯಲ್ಲಿರುವ ನೀರನ್ನು ಕ್ಯಾಪ್ಚರ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಸೂರ್ಯನ ಶಾಖದಿಂದ ಬಿಸಿಗೊಳಿಸಿದಾಗ ಬಿಡುಗಡೆಗೊಳ್ಳುತ್ತದೆ.

  ಗಾಳಿಯಲ್ಲಿ ನೀರಿನ ಅಂಶ ಎಷ್ಟಿರುತ್ತೆ ಗೊತ್ತಾ?

  ಇದು ಶುಷ್ಕ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಲು ನೆರವಾಗುತ್ತದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.ಜಾಗತಿಕವಾಗಿ ಭೂಮಂಡಲದ ವಾಯುಪ್ರದೇಶದಲ್ಲಿ 13 ಟ್ರಿಲಿಯನ್ ನಷ್ಟು ನೀರಿದೆ.ಇದು ಶುದ್ಧ ಕುಡಿಯುವ ನೀರಿನ ನವೀಕರಿಸಬಹುದಾದ ಜಲಾಶಯವಾಗಿದೆ.

  ದುಬಾರಿಯಲ್ಲದ ಸಾಧನ ಸಂಶೋಧನೆಗೆ ಪ್ರಯತ್ನ :

  ಈ ರೀತಿಯ ನೀರಿನ ಮೂಲವನ್ನು ಬಳಕೆ ಮಾಡಲು ಹಲವು ವರ್ಷಗಳಿಂದ ಸಂಶೋಧನೆಗಳು ನಡೆದಿದೆ. ಹಲವಾರು ರೀತಿಯ ಪ್ರಯೋಗಗಳು, ಸಾಧನಗಳನ್ನು ತಯಾರಿಸಿದ್ದರೂ ಕೂಡ ಅದು ದುಬಾರಿ ಮತ್ತು ಪ್ರಾಯೋಗಿಕವಾಗಿ ಬಳಕೆ ಮಾಡಲು ಕಷ್ಟವಾಗುವಂತೆ ಇರುತ್ತಿತ್ತು..

  ಸೌದಿ ಅರೇಬಿಯಾ ವಿಜ್ಞಾನಿಗಳ ಸಾಧನೆ:

  ಸೌದಿ ಅರೇಬಿಯಾದ ಕಿಂಗ್ ಅಬ್ದುಲ್ಲಾ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಸಂಶೋಧಕರು ಇದೀಗ ಬಹಳ ಕಡಿಮೆ ಬೆಲೆಯ,ಸ್ಥಿರವಾಗಿರುವ,ನಾನ್ ಟಾಕ್ಸಿಕ್ ಸಾಲ್ಟ್ ಮತ್ತು ಕ್ಯಾಲ್ಸಿಯಂ ಕ್ಲೋರೈಡ್ ನ್ನು ಬಳಸಿ ಒಂದು ಮಾದರಿ ಡಿವೈಸ್ ನ್ನು ತಯಾರಿಸಿದ್ದಾರೆ.

  ಕೆಎಯುಎಸ್ ಟಿ ಯಲ್ಲಿನ ಪಿಹೆಚ್ಡಿ ವಿದ್ಯಾರ್ಥಿ ಆಗಿರುವ ರೆನಾನ್ ಲಿ ಹೇಳುವ ಪ್ರಕಾರ ಉಪ್ಪು ನೀರಿನ ಆಕರ್ಷಣೆಯನ್ನು ಹೆಚ್ಚು ಹೊಂದಿರುತ್ತದೆ ಮತ್ತು ಸುತ್ತಮುತ್ತಲಿನ ಗಾಳಿಯಿಂದ ಹೆಚ್ಚಿನ ದ್ರವರೂಪದ ಆವಿಯನ್ನು ಹೀರಿಕೊಳ್ಳುತ್ತದೆ ಮತ್ತು ಅಂತಿಮವಾಗಿ ದ್ರವರೂಪದ ಪೂಲ್ ನಂತೆ ಇರುತ್ತದೆ. ಕರಗುವ ಉಪ್ಪುಗಳು ಗಾಳಿಯಿಂದ ತೇವಾಂಶವನ್ನು ಹೀರಿಕೊಂಡು ಸ್ವತಃ ಕರಗಿಹೋಗುತ್ತವೆ.

  ಡಿವೈಸ್ ನ ಕೆಲಸ ಹೇಗೆ?

  ಕ್ಯಾಲ್ಸಿಯಂ ಕ್ಲೋರೈಡ್ ಉತ್ತಮ ನೀರಿನ ಕೊಯ್ಲು (ವಾಟರ್ ಹಾರ್ವೆಸ್ಟಿಂಗ್) ಸಾಮರ್ಥ್ಯವನ್ನು

  ಹೊಂದಿರುತ್ತದೆ. ಆದರೆ ವಾತಾವರಣದ ನೀರಿನ್ನು ತೆಗೆದುಕೊಂಡಾಗ ಅದರಲ್ಲಿರುವ ಉಪ್ಪು ಬೇರ್ಪಡಿಸಿದಾಗ ಘನ ರೂಪಕ್ಕೆ ತಿರುಗುತ್ತದೆ ಮತ್ತು ಈಗ ಕಂಡು ಹಿಡಿದಿರುವ ಡಿವೈಸ್ ನಲ್ಲಿರುವ ಪ್ರಮುಖ ಘಟ್ಟವೇ ಈ ಘನರೂಪವನ್ನು ಬೇರ್ಪಡಿಸಿ ನೀರಿಯುವ ನೀರಾಗಿ ಪರಿವರ್ತಿಸುವುದೇ ಡಿವೈಸ್ ಗೆ ಇರುವ ಸವಾಲು ಎಂದು ಅಭಿಪ್ರಾಯ ಪಡುತ್ತಾರೆ ಲೀ.

  ತಂತ್ರಗಾರಿಕೆ

  ಈ ಸಮಸ್ಯೆಯಿಂದ ಹೊರಬರಲು ಸಂಶೋಧಕರು ಉಪ್ಪಿಗೆ ಒಂದು ರೀತಿಯ ಹೈಡ್ರೋಜಲ್ ನ್ನು ಸೇರಿಸಿ ಅದು ಘನರೂಪದಲ್ಲಿಯೇ ಇರುವಾಗ ನೀರನ್ನು ಬೇರ್ಪಡಿಸಿಕೊಳ್ಳುವ ತಂತ್ರಗಾರಿಕೆಯನ್ನು ಅಳವಡಿಸಿದ್ದಾರೆ. ಸಣ್ಣ ಮೊತ್ತದ ಕಾರ್ಬನ್ ನ್ಯಾನೋಟ್ಯೂಬ್ಸ್ ಗಳನ್ನು ಅವರು ಸೇರಿಸಿದ್ದಾರೆ ಅದು 0.42% ತೂಕದ್ದಾಗಿದೆ ಮತ್ತು ಇದು ಗಾಳಿಯಿಂದ ವಶಪಡಿಸಿಕೊಂಡಿರುವ ನೀರಿನ ಆವಿಯು ಬಿಡುಗಡೆಯಾಗುತ್ತಿದೆ ಎಂಬುದನ್ನು ಖಾತ್ರಿಪಡಿಸುತ್ತದೆಯಂತೆ. ಕಾರ್ಬನ್ ನ್ಯಾನೇಟ್ಯೂಬ್ ಗಳು ಸೂರ್ಯನ ಕಿರಣಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಹೀರಿಕೊಳ್ಳುತ್ತದೆ ಮತ್ತು ಸೆರೆ ಹಿಡಿದಿರುವ ಶಕ್ತಿಯನ್ನು ಶಾಖವಾಗಿ ಪರಿವರ್ತಿಸುತ್ತದೆ.

  35 ಗ್ರಾಂನಷ್ಟು ಸಾಮಗ್ರಿಗಳನ್ನು ಮೂಲ ಮಾದರಿ ಸಾಧನಗಳಾಗಿ ಬಳಸಿದೆ. ರಿಲೇಟಿವ್ ಹ್ಯುಮಿಡಿಟಿ 60 ಶೇಕಡಾ ಇದ್ದಾಗ ರಾತ್ರಿ ಈ ಡಿವೈಸ್ ನ್ನು ಹೊರಗಡೆ ಇಟ್ಟರೆ 37 ಗ್ರಾಂನಷ್ಟು ನೀರನ್ನು ಇದು ಕ್ಯಾಪ್ಚರ್ ಮಾಡಬಲ್ಲದು. ಬೆಳಿಗ್ಗೆ 2.5 ಘಂಟೆಗಳ ಕಾಲ ಪ್ರಾಕೃತಿಕ ಸನ್ ಲೈಟ್ ನಲ್ಲಿ ಇಟ್ಟರೆ, ಹೆಚ್ಚಿನ ನೀರಿನಂಶವು ಡಿವೈಸ್ ನ ಒಳಗಡೆ ಕುಡಿಯುವ ನೀರಾಗಿ ಪರಿವರ್ತಿತವಾಗಿರುತ್ತದೆ. ಇದರಲ್ಲಿ ಹೈಡ್ರೊಜೆಲ್ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಮತ್ತು ಅತ್ಯಂತ ಕಡಿಮೆ ಬೆಲೆಯುಳ್ಳದ್ದಾಗಿರುತ್ತದೆ. ಹಾಗಾಗಿ ಡಿವೈಸ್ ಬೆಲೆ ಕೂಡ ಕಡಿಮೆ ಆಗಿರುತ್ತದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  Read more about:
  English summary
  This device may capture drinking water from air
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more