ಭವಿಷ್ಯದ ಮಾನವರಹಿತ ಐರನ್ ಮ್ಯಾನ್ "ಡ್ರಾಗನ್ ಡ್ರೋಣ್"!
ತಂತ್ರಜ್ಞಾನ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಅದರಂತೆ ಇದ್ದ ತಂತ್ರಜ್ಞಾನಗಳು ಅಮೂಲಾಗ್ರ ಬದಲಾವಣೆಯೊಂದಿಗೆ ಹೊಸ ಆಯ್ಕೆಯನ್ನು ನೀಡುತ್ತಿವೆ. ವಿಜ್ಞಾನದ ಅಚ್ಚರಿಯ ಆವಿಷ್ಕಾರದಲ್ಲಿ ಒಂದಾದ ಡ್ರೋಣ್ ಕೂಡ ಹೊಸ ರೀತಿಯ ಅಪ್‌ಡೇಟ್‌ಗಳನ್ನು ಕಾಣುತ್ತಿದೆ. ಭಾರತದಲ್ಲಂತೂ ಡ್ರೋಣ್ ಮದುವೆಯ ವಿಡಿಯೋ ಶೂಟ್‌ನಿಂದಿಡಿದು ರೈಲ್ವೇ ಅಪಘಾತಗಳನ್ನು ತಪ್ಪಿಸುವವರೆಗೂ ಡ್ರೋಣ್ ಬಳಕೆಯಾಗುತ್ತಿದೆ.

ಹೌದು, ಇತ್ತೀಚೆಗೆ ತಾನೇ ರೂರ್ಕಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ ರೈಲ್ವೇ ಅಪಘಾತಗಳನ್ನು ಕಡಿಮೆ ಮಾಡಲು ಡ್ರೋಣ್ ಬಳಸುವ ಹೊಸ ಆಯ್ಕೆಯನ್ನು ಸೃಷ್ಟಿಸಿತ್ತು. ಭಾರತದಲ್ಲಿ ಇಷ್ಟೊಂದು ಅಭಿವೃದ್ಧಿ ಕಾಣುತ್ತಿರುವ ಡ್ರೋಣ್, ವಿದೇಶಗಳಲ್ಲಿ ಹೊಸ ಸಾಧ್ಯತೆಯನ್ನು ಹುಟ್ಟುಹಾಕಿದ್ದು, ನಾವೀನ್ಯವನ್ನು ಪಡೆಯುತ್ತಾ ಸಾಗಿದೆ. ವಿದೇಶದಲ್ಲೊಂದು ಡ್ರಾಗನ್ ಡ್ರೋಣ್ ತಯಾರಾಗಿದೆ. ಏನೆಲ್ಲಾ ವಿಶೇಷತೆ ಹೊಂದಿದೆ, ಎಲ್ಲಿ ತಯಾರಾಗಿದೆ ಎಂಬುದರ ವಿವರಣೆ ಮುಂದೆ ಇದೆ.

ಟೋಕಿಯೋ ವಿವಿಯಲ್ಲಿ ಸಂಶೋಧನೆ
ಟೋಕಿಯೋ ವಿಶ್ವವಿದ್ಯಾಲಯದ ಜೆಎಸ್‌ಕೆ ಲ್ಯಾಬ್‌ನಲ್ಲಿ ಸಂಶೋಧನಾರ್ಥಿಗಳು 'ಡ್ರಾಗನ್ ಡ್ರೋಣ್ ಅಭಿವೃದ್ಧಿಪಡಿಸಿದ್ದಾರೆ. ಹಲವು ಸಣ್ಣ ಡ್ರೋಣ್‌ಗಳನ್ನು ಬಳಸಿ ಹಾರಾಡುವಾಗ ಮೂಲ ಆಕಾರ ಬದಲಾಗುವಂತೆ ತಯಾರಿಸಲಾಗಿದೆ. ಈ ಡ್ರೋಣ್ ಕೇವಲ ಚೌಕ ಅಥವಾ ವಕ್ರ ರೇಖೆಯಂತೆ ತನ್ನ ಆಕಾರವನ್ನು ಬದಲಿಸದೆ ಸ್ಥಳಕ್ಕೆ ತಕ್ಕಂತೆ ತನ್ನ ಆಕಾರವನ್ನು ಬದಲಿಸುವ ಸಾಮರ್ಥ್ಯ ಹೊಂದಿದೆ.

ಪ್ರಾಣಿ ಹೆಸರನ್ನು ಡ್ರೋಣ್‌ಗಿಟ್ಟಿಲ್ಲ
ಡ್ರೋಣ್ ಹೆಸರು ಡ್ರಾಗನ್ ಎಂದು ಯಾಕೆ ಇಟ್ಟಿದ್ದಾರೆ ಎಂದರೆ ಇದು ಪ್ರಾಣಿಯ ಹೆಸರಲ್ಲ, ಬದಲಾಗಿ ಡ್ರೋನ್ ಹೆಸರಿನ ಸಂಕ್ಷಿಪ್ತ ರೂಪವಷ್ಟೇ. "ಡ್ಯುಯಲ್-ರೋಟೋರ್ ಎಂಬೆಡೆಡದ ಮಲ್ಟಿಲಿಂಕ್ ರೋಬೋಟ್ ವಿಥ್ ದಿ ಎಬಿಲಿಟಿ ಆಫ್ ಮಲ್ಟಿ-ಡಿಗ್ರಿ-ಆಫ್-ಫ್ರೀಡಂ ಎರೀಯಲ್ ಟ್ರಾನ್ಸಫಾರ್ಮೆಷನ್" ಡ್ರಾಗನ್ (Dual-rotor embedded multilink Robot with the Ability of multi-deGree-of-freedom aerial transformatiON) DRAGON ಎಂದು ಸಂಕ್ಷಿಪ್ತವಾಗಿ ಕರೆಯಲಾಗುತ್ತಿದೆ. ಅದಲ್ಲದೇ ಡ್ರೋಣ್ ಮಾದರಿಯು ಸಹ ಸಾಂಪ್ರದಾಯಿಕ ಡ್ರಾಗನ್ ಶೈಲಿಯನ್ನು ಹೊಂದಿರುವುದರಿಂದ ಡ್ರಾಗನ್ ಎಂದು ಕರೆಯಲಾಗಿದೆ.

ಎಲ್ಲ ಡ್ರೋಣ್‌ಗಳು ಹೊಂದಿವೆ ಫ್ಯಾನ್
ಎಲ್ಲಾ ಸಣ್ಣ ಡ್ರೋಣ್‌ಗಳು ಒಂದು ಜತೆ ಫ್ಯಾನ್‌ಗಳನ್ನು ಹೊಂದಿದ್ದು, ಅವುಗಳನ್ನು ಯಾವುದೇ ದಿಕ್ಕಿಗೂ ಹೋಗುವಂತೆ ಬದಲಾಯಿಸಬಹುದಾಗಿದೆ. ಎಲ್ಲ ಡ್ರೋಣ್‌ಗಳನ್ನು ನಿಯಂತ್ರಿಸುವುದು ಇಂಟೇಲ್ ಯ್ಯೂಕ್ಲಿಡ್ ಡೇವ್ ಕಿಟ್ (Intel Euclid dev kit). ಮೂರು ನಿಮಿಷ ಹಾರಾಡುವ ಸಾಮರ್ಥ್ಯವನ್ನು ಬ್ಯಾಟರಿ ನೀಡುತ್ತಿದೆ.

12 ಮಾದರಿಯ ಡ್ರೋಣ್
ಸಣ್ಣ ಮತ್ತು ಸೂಕ್ಷ್ಮ ಜಾಗಗಳಲ್ಲಿ ಕಾರ್ಯನಿರ್ವಹಿಸಲು ಈ ಡ್ರೋಣ್ ಅಭಿವೃದ್ಧಿಪಡಿಸಿದ್ದರು, ಡ್ರಾಗನ್ ಡ್ರೋಣ್ ಅಭಿವೃದ್ಧಿಯಲ್ಲಿ ನಿರತವಾಗಿರುವ ತಂಡ ಮಾತ್ರ ಬೃಹತ್ ಕನಸಿನೊಂದಿಗೆ ಕಾರ್ಯನಿರ್ರವಹಿಸುತ್ತಿದೆ. ಡ್ರಾಗನ್ ಡ್ರೋಣ್ 12 ಮಾದರಿ ಹೊಂದಿದ್ದು, ಹಾರುವ ಕೈ ತರ ವಸ್ತುಗಳೊಂದಿಗೆ ಸಂವಹನ ನಡೆಸುವ, ಚಲಿಸುವ ರೀತಿ ಕಾರ್ಯನಿರ್ವಹಿಸುವಂತೆ ಮಾಡುತ್ತೇವೆ ಅಥವಾ ಪಿನ್ಸರ್ ರೀತಿ ಎರಡು ತುದಿಗಳಿಂದ ವಸ್ತುಗಳನ್ನು ಎತ್ತಿಕೊಳ್ಳುವ ಡ್ರೋಣ್ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಜೆಎಸ್‌ಕೆ ಲ್ಯಾಬ್ ಮೂಲಗಳು ಹೇಳಿವೆ.

ರಕ್ಷಣಾ ಕಾರ್ಯಗಳಲ್ಲಿ ಬಳಸಬಹುದಾದ ಸಾಧ್ಯತೆ
ಈ ರೀತಿಯ ಡ್ರೋಣ್‌ಗಳನ್ನು ಬಳಸುವ ಕುರಿತು ಅಸ್ಪಷ್ಟತೆ ಕಾಣುತ್ತಿದೆ. ಆದರೆ, ಇಲ್ಲಿನ ತಂತ್ರಜ್ಞಾನ ಮಾತ್ರ ಅದ್ಭುತವಾಗಿದ್ದು, ಕೈಗಾರಿಕೆಗಳಲ್ಲಿ ಬಳಸಬಹುದಾದ ಮತ್ತು ಹುಡುಕಾಟ ಹಾಗೂ ರಕ್ಷಣಾ ಕಾರ್ಯಗಳಲ್ಲಿ ಬಳಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಮಾನವ ರಹಿತ ಐರನ್ ಮ್ಯಾನ್ ಸೃಷ್ಟಿಯ ಕನಸು
ಟೋಕಿಯೋ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಮೊಜು ಝ್ಯಾವ್ ಹೇಳುವಂತೆ ನಾವು ಮುಂದೆ ಬೇಸಿಕ್ ಲಿಂಕ್ ಮಾದರಿಯೊಂದಿಗೆ ಬಹುಕಾಲಿನ ಮಾದರಿಯನ್ನು ತಯಾರಿಸಲು ಎದುರು ನೋಡುತ್ತಿದ್ದೇವೆ. ಈ ರೋಬೋಟ್ ಕೇವಲ ಹಾರಾಡುವುದಿಲ್ಲ, ನೆಲದ ಮೇಲೆ ನಡೆಯುತ್ತದೆ ಕೂಡ. ಇಂಧನ ದಕ್ಷತೆಗೆ ಇದು ಪ್ರಯೋಜನಕಾರಿಯಾಗುತ್ತದೆ. ನಮ್ಮ ಬೃಹತ್ ಕನಸೆಂದರೆ ಮಾನವ ರಹಿತ ಐರನ್ ಮ್ಯಾನ್ ಸೃಷ್ಟಿಸುವುದು ಎಂದು ಹೇಳಿದ್ದಾರೆ.


Click it and Unblock the Notifications