ಆನ್‌ಲೈನ್‌ ಕ್ಲಾಸ್‌ಗಾಗಿ ಸ್ಮಾರ್ಟ್‌ಫೋನ್‌ ಖರೀದಿಸಲು ಈಕೆ ಮಾಡಿದ ಸಾಹಸ ರೋಚಕ!

|

ದೇಶದ ಹೆಚ್ಚಿನ ಭಾಗಗಳಲ್ಲಿ ಕೊರೊನಾ ಕಾರಣದಿಂದಾಗಿ ಒಂದೂವರೆ ವರ್ಷದಿಂದ ಶಾಲೆಗಳು ಮುಚ್ಚಲ್ಪಟ್ಟಿದ್ದರಿಂದ, ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ತರಗತಿಗಳನ್ನು ನಡೆಸಲಾಗುತ್ತಿದೆ. ಆದರೆ ಇನ್ನೂ ಕೂಡ ಅನೇಕ ಮಕ್ಕಳು ಆನ್‌ಲೈನ್‌ ತರಗತಿಯಲ್ಲಿ ಭಾಗವಹಿಸಲು ಸೂಕ್ತ ಸ್ಮಾರ್ಟ್‌ಫೋನ್‌ ಇಲ್ಲದೆ ಪರದಾಡುವಂತಹ ಪರಿಸ್ಥಿತಿ ಕೂಡ ಇದೆ. ಇಂತಹದ್ದೆ ಪರಿಸ್ಥಿತಿ ಎದುರಿಸುತ್ತಿದ್ದ ಜಮ್‌ಶೆಡ್‌ಪುರದ ಬಾಲಕಿಯೊಬ್ಬಳು ಕೇವಲ 12 ಮಾವಿನ ಹಣ್ಣನ್ನು ಮಾರಾಟ ಮಾಡಿ ಸ್ಮಾರ್ಟ್‌ಫೋನ್‌ ಖರೀದಿ ಮಾಡಿದ್ದಾಳೆ.

ಸ್ಮಾರ್ಟ್‌ಫೋನ್‌

ಹೌದು, ಆನ್‌ಲೈನ್‌ ಕ್ಲಾಸ್‌ನಲ್ಲಿ ಭಾಗವಹಿಸಲು ಸ್ಮಾರ್ಟ್‌ಫೋನ್‌ ಖರೀದಿಸಲು ಜಮ್‌ಶೆಡ್‌ಪುರದ ಹನ್ನೊಂದು ವರ್ಷದ ತುಳಸಿ ಕುಮಾರಿ ಮಾವಿನ ಹಣ್ಣು ಮಾರಾಟಕ್ಕೆ ಮುಂದಾಗಿದ್ದಾಳೆ. ರಸ್ತೆ ಬದಿಯಲ್ಲಿ ಮಾವಿನ ಹಣ್ಣು ಮಾರಾಟ ಮಾಡುತ್ತಿದ್ದ ಈ ಬಾಲಕಿಯ ಉದ್ದೇಶ ಅರಿತ ಮುಂಬೈ ಮೂಲದ ವ್ಯಾಲ್ಯೂಯಬಲ್ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕಿ ಅಮೆಯಾ ಹೆಟೆ ಆಕೆಯಿಂದ ಮಾವಿನ ಹಣ್ಣು ಖರೀದಿಸಿ ಸ್ಮಾರ್ಟ್‌ಫೋನ್‌ ಖರೀದಿಸಲು ಹಣ ನೀಡಿದ್ದಾರೆ. ಅದು ಕೂಡ ತಲಾ 10,000ರೂ ನಂತೆ 12 ಮಾವಿನಹಣ್ಣುಗಳನ್ನು ಖರೀದಿಸಿದ್ದಾರೆಂದು ವರದಿಯಾಗಿದೆ. ಹಾಗಾದ್ರೆ ಈ ಘಟನೆ ನಡೆದಿದ್ದು ಯಾವಾಗ ಇದರ ವಿವರ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಒದಿರಿ.

ಸ್ಮಾರ್ಟ್‌ಫೋನ್‌

ಆನ್‌ಲೈನ್‌ ಕ್ಲಾಸ್‌ಗಾಗಿ ಸ್ಮಾರ್ಟ್‌ಫೋನ್‌ ಖರೀದಿಸಲು ತುಳಸಿ ಮಾವಿನ ಹಣ್ಣು ಮಾರಾಟ ಮಾಡಲು ಮುಂದಾಗಿದ್ದಾಳೆ. ರಸ್ತೆ ಬದಿ ಕುಳಿತು ಮಾರಾಟ ಮಾಡುತ್ತಿದ್ದ ಬಾಲಕಿಯ ಕೆಲಸಕ್ಕೆ ಮೆಚ್ಚಿ ಅಮೆಯಾ ಆಕೆಯಿಂದ ಮಾವಿನ ಹಣ್ಣು ಖರೀದಿಸಿದ್ದಾರೆ ಅದು ಕೂಡ ತಲಾ ಒಂದು ಮಾವಿನ ಹಣ್ಣಿಗೆ 10,000ರೂ ನಂತೆ ಖರೀದಿಸಿರೋದು ಇನ್ನೂ ವಿಶೇಷ. ಸದ್ಯ ಹಣವನ್ನು ಆಕೆಯ ತಂದೆ ಶ್ರೀಮಲ್ ಕುಮಾರ್ ಅವರ ಖಾತೆಗೆ ವರ್ಗಾಯಿಸಲಾಗಿದೆ. ಈ ಮೂಲಕ ಬಾಲಕಿಯ ಶಿಕ್ಷಣ ಪಡೆಯುವ ಆಸೆಗೆ ಬಲ ನೀಡದಂತಾಗಿದೆ.

ಸ್ಮಾರ್ಟ್‌ಫೋನ್‌

ತುಳಸಿ ಸ್ಮಾರ್ಟ್‌ಫೋನ್‌ ಪಡೆಯಲು ರಸ್ತೆ ಬದಿ ಮಾವಿನ ಹಣ್ಣು ಮಾರಾಟ ಮಾಡುತ್ತಿರುವ ವಿಷಯ ಸುದ್ದಿ ಮಾದ್ಯಮಗಳಲ್ಲಿ ವರದಿಯಾಗಿತ್ತು. ಈಕೆಯ ಪರಿಸ್ಥಿತಿಯನ್ನು ತಿಳಿದುಕೊಂಡ ನಂತರ, ಅಮಾಯಾ ಹೆಟೆ ಎಂಬ ಮುಂಬೈ ಉದ್ಯಮಿ ಸ್ಮಾರ್ಟ್‌ಫೋನ್ ಖರೀದಿಸಲು ಮತ್ತು ಆನ್‌ಲೈನ್ ತರಗತಿಗಳನ್ನು ಮುಂದುವರಿಸಲು ಸಹಾಯ ಮಾಡಲು ಮುಂದಾಗಿದ್ದಾರೆ. ಇದಕ್ಕಾಗಿ ಒಂದು ಡಜನ್‌ ಮಾವಿನ ಹಣ್ಣಿಗೆ 1.2 ಲಕ್ಷ ರೂ.ಗೆ ನೀಡಿದ್ದಾರೆ. ಅಲ್ಲದೆ ತುಳಸಿಗೆ 13,000 ರೂ ಮೌಲ್ಯದ ಮೊಬೈಲ್ ಫೋನ್ ಮತ್ತು ವರ್ಷಪೂರ್ತಿ ಇಂಟರ್ನೆಟ್ ರೀಚಾರ್ಜ್ ನೀಡಿದ್ದು, ಇದರಿಂದಾಗಿ ಹೆಣ್ಣು ಮಗುವಿನ ಶಿಕ್ಷಣದಲ್ಲಿ ಯಾವುದೇ ಅಡೆತಡೆಗಳು ಉಂಟಾಗುವುದಿಲ್ಲ ಎಂದು ಖಚಿತಪಡಿಸಿದ್ದಾರೆ.

Best Mobiles in India

English summary
An ‘uncle’ from Mumbai helped an 11-year-old girl from Jamshedpur to pursue her dreams of buying a smartphone and pursuing online classes. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X