ಕಬ್ಬಿಣದ ತುಂಡನ್ನೇ ಐಫೋನ್‌ ಮಾಡಿದ್ದಾನೆ ಈತ!

By Vijeth Kumar Dn
|

1

1

1
2

2

2
3

3

3
4

4

4
5

5

5
6

6

6
7

7

7
8

8

8

ಮಾರುಕಟ್ಟೆ ಬಂದಂತಹ ನೂತನ ಗ್ಯಾಡ್ಜೆಟ್‌ಗಳನ್ನು ನಿಮ್ಮ ಬಂಧು ಮಿತ್ರರೋ ಅಥವಾ ಸಹವರ್ತಿಗಳೂ ಯಾರಾದೂ ಖರೀದಿಸಿ ತಂದು ನಿಮ್ಮ ಮುಂದೆ ಪೋಸ್‌ ಕೊಡುತ್ತಿದರೆ ಎಷ್ಟು ಸಂಕಟವಾಗುತ್ತದೆ ಅಲ್ಲವೆ? ಆದರೆ ಏನು ಮಾಡಡುವುದು ಅಂತಿಮವಾಗಿ ಅಷ್ಟು ದುಡ್ಡು ನಿಡಿ ಅದನ್ನು ಖರೀದಿಸುವುದಾದರೂ ಹೇಗೆ ಎಂದು ಆಲೋಚಿಸಿ ತೆಪ್ಪಗಾಗಿ ಬಿಡುತ್ತೇವೆ. ಇದೇರೀತಿ ಆಲೋಚಿಸಿದ ಚೀನಾ ಮೂಲದ ಆಪಲ್‌ ಅಭಿಮಾನಿಯೋರ್ವ ದುಬಾರಿ ಐಫೋನ್‌ 5 ಖರೀದಿಸಲು ಸಾಧ್ಯವಾಗಲ್ಲಿ ಎಂದು ಬೇಸರಗೊಳಗಾಗುವ ಬದಲಾಗಿ ಕೈಗೆ ಸಿಕ್ಕ ಕಬ್ಬಿಣದ ತುಂಡೊಂದನ್ನೇ ಐಫೋನ್‌ 5 ನ ತಲೆ ಮೇಲೆ ಹೊಡೆದಂತೆ ಕಾಣುವ ರೀತಿಯಲ್ಲಿ ಮಾರ್ಪಾಟು ಮಾಡುವ ಮೂಲಕ ತನ್ನದೇ ಹೋಮ್‌ ಮೇಡ್‌ ಐಫೋನ್‌ 5 ಸಿದ್ಧ ಪಡಿಸಿಕೊಂಡು ಜಂಭ ಹೊಡೆಯುತಿದ್ದಾನೆ.

ಅಂದಹಾಗೆ ಈತ ಸಿದ್ಧ ಪಡಿಸಿಕೊಂಡಿರು ಐಫೋನ್‌ 5 ನಿಜವಾದ ಐಫೋನ್‌ 5 ನಂತೆ ಕೆಲಸ ಮಾಡುವುದಿಲ್ಲಾ ಎನ್ನುವುದನ್ನು ಬಿಟ್ಟರೆ ನೋಡಲು ಥೇಟ್‌ ಐಫೋನ್‌ 5 ನಂತೆಯೇ ಕಾಣಿಸುತ್ತದೆ. 123.8 x 58.6 x 7.6 mm ಸುತ್ತಳತೆ ಹೊಂದಿರುವ ಒರಿಜಿನಲ್‌ ಐಫೋನ್‌ 5 ಸ್ಮಾರ್ಟ್‌ಫೋನ್‌ ಹೋಲುವ ಮಾದರಿ ಐಫೋನ್‌ 5 ಸಿದ್ಧಪಡಿಸಲು ಈತ 140mm ಉದ್ದ ಹಾಗೂ 60mm ಅಗಲ ಹಾಗೂ 6mm ದಪ್ಪ ಹೊಂದಿರುವ ಕಬ್ಬಿಣದ ತುಂಡೊಂದನ್ನು ತೆಗೆದುಕೊಂಡು ಮನೆಯಲ್ಲಿಯೇ ಹ್ಯಾಂಡ್‌ ಮೇಡ್‌ ಐಫೋನ್‌ ಸಿದ್ಧಪಡಿಸಿಕೊಂಡಿದ್ದಾನೆ.

ಕಬ್ಬಿಣದ ಸಲಾಕೆಯ ಮೇಲೆ ನಿಜವಾದ ಐಫೋನ್‌ 5 ನ ವಿನ್ಯಾಸವನ್ನು ಪೆನ್ಸಿಲ್‌ನಿಂದ ಮಾರ್ಕ್‌ ಮಾಡಿ ನಂತರ ಅದೇ ಅಳತೆಗೆ ಕತ್ತರಿಸಿ ಕೋನಗಳನ್ನು ನಯಗೊಳಿಸಿ ಪಾಲಿಷ್‌ ಮಾಡಿದ್ದಾನೆ. ನಂತರ ಅದನ್ನು ಪೇಯಿಂಟ್‌ ಮಾಡುವ ಬದಲಾಗಿ ಕೆಲ ರಾಸಾಯನಿಕ ದ್ರವಗಳನ್ನು ಬಳಸಿ ಹೊಳೆಯುವಂತೆ ಮಾಡಿದ್ದಾನೆ. ನಂತರ ಫೈನಲ್‌ ಟಚ್‌ ಎಂಬಂತೆ ಹೊರ ವಿನ್ಯಾಸಗಳನ್ನು ಮಾಡಿ ನಿಜವಾದ ದರ್ಶಕದಂತೆ ಕಾಣುವಂತೆ ಸ್ಟಿಕ್ಕರ್‌ ಅಂಟಿಸಿಬಿಟ್ಟಿದ್ದಾನೆ. ಇಷ್ಟೆಲ್ಲಾ ಮಾಡಿದ್ದಾಯಿತು ಆದರೆ ಐಫೋನ್‌ 5 ನ ಲೋಗೋ ಹೇಗೆ ಮಾಡಿದ ಅಂತ ತಲೆ ಕೆಡಿಸಿಕೊಳ್ಳುತ್ತಿದ್ದೀರಾ? ಇದಕ್ಕಾಗಿ ಆತ ಬೇರೇನು ಸರ್ಕಸ್‌ ಮಾಡಿಲ್ಲ ಪೆನ್ಸಿಲ್‌ ತೆಗೆದುಕೊಂಡು ಆಪಲ್‌ ಲೋಗೋನಂತೆ ಚಿತ್ರ ಬಿಡಿಸಿಬಿಟ್ಟಿದ್ದಾನೆ ಅಷ್ಟೇ.

ಒಟ್ಟಾರೆ ಮಾಡೋದಕ್ಕೇ ಬೇರೇನು ಕೆಲ್ಸಾ ಇಲ್ಲದೇ ಇದ್ದಾಗ ನಿಮ್ಮ ಬಳಿ ಬಿಡುವಿನ ಸಮಯ ಹೆಚ್ಚಿಗೆ ಇದ್ದಾಗ ಇಂತಹ ಸಾಹಸಗಳನ್ನು ನೀವೂಕೂಡಾ ಮಾಡಿ ನೋಡಬಹುದಾಗಿದೆ ಏನಂತೀರ? ಏನೇ ಆಗಲಿ ತಗಡಿನ ತುಂಡೊಂದನ್ನು ಐಫೋನ್‌ 5 ನಂತೆ ಮಾಡಿರುವುದು ಒಂದು ರೀತಿಯ ಸಾಧನೆಯೇ ಎಂದರೆ ತಪ್ಪಾಗಲಾರದು. ಅಂದಹಾಗೆ ಈತ ಸೃಷ್ಟಿಸಿರುವ ಐಫೋನ್‌ 5 ಮಾದರಿಯ ಫೋಟೋಗಳನ್ನು ಗ್ಯಾಲರಿಯಲ್ಲಿ ನೀಡಲಾಗಿದೆ ನೋಡಿ ಆನಂದಿಸಿ.

ವಿಶ್ವದ ಮೊದಲ ಗೊಲ್ಡ್‌ ಪ್ಲೇಟೆಡ್‌ ಐಫೋನ್‌ 5 ಬಂದಿದೆ

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X