Home
ಸುದ್ದಿಜಾಲ

ಬಾತ್‌ರೂಂಗೆ ಮೊಬೈಲ್‌ ತೆಗೆದುಕೊಂಡು ಹೋಗುವ ಹೆಚ್ಚಿನ ಯುವಕರು ಇದನ್ನು ನೋಡುತ್ತಾರೆ!.ವರದಿ

ಕೈನಲ್ಲಿ ಫೋನ್‌ ಇಲ್ಲದೆ ಹೋದರೆ ಹೊರಗಡೆ ಹೋಗುವುದು ಕೂಡ ಅಸಾಧ್ಯ ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ಮೊಬೈಲ್‌ ಅನ್ನು ಎಲ್ಲೆಂದರಲ್ಲಿ ಬಳಸುವುದರಿಂದ ಆಗಬಹುದಾದ ಅನಾಹುತಗಳ ಬಗ್ಗೆ ನಮ್ಮ ಜನರಿಗೆ ಇನ್ನು ಕೂಡ ಅರಿವು ಬಂದಿಲ್ಲದಿರುವುದು ದುರ್ದೈವ. ಅದರಲ್ಲೂ ಶೌಚಾಲಯಕ್ಕೆ ಹೋದಾಗ ಸ್ಮಾರ್ಟ್‌ಫೋನ್‌ ಬಳಸುವರ ಪ್ರಮಾಣದ ಹೆಚ್ಚಾಗುತ್ತಲೇ ಇದೆ.

ಹೌದು, ಶೌಚಾಲಯಕ್ಕೆ ಹೋಗುವಾಗ ಸ್ಮಾರ್ಟ್‌ಫೋನ್‌ ತೆಗೆದುಕೊಂಡು ಹೋಗುವುದು ಉತ್ತಮ ಅಭ್ಯಾಸವಲ್ಲ. ಹಾಗಂತ ಹೇಳಿದ ಮಾತನ್ನು ಯಾರ್‌ ತಾನೇ ಕೇಳ್ತಾರೆ. ಆದರೆ ನೀವು ಶೌಚಾಲಯಕ್ಕೆ ಹೋಗುವಾಗ ಸ್ಮಾರ್ಟ್‌ಫೋನ್‌ ಬಳಸಿದರೆ ಅದು ನಿಮ್ಮ ಟಾಯ್ಲೆಟ್‌ ಸೀಟ್‌ಗಿಂತಲೂ ಹೆಚ್ಚು ಕೊಳಕಾಗಲಿದೆ ಅನ್ನೊದು ಶಾಕಿಂಗ್‌ ಸಂಗತಿ. ಇಂತಹ ಸಂಗತಿಯನ್ನು ಹೊಸ ಅಧ್ಯಯನ ತಂಡವೊಂದು ಬಹಿರಂಗಪಡಿಸಿದೆ. ಹಾಗಾದ್ರೆ ವಿಜ್ಞಾನಿಗಳು ನಡೆಸಿದ ಅಧ್ಯಯನ ವರದಿಯಲ್ಲಿರುವ ವಿಚಾರಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಬಾತ್‌ರೂಂಗೆ ಮೊಬೈಲ್‌ ತೆಗೆದುಕೊಂಡು ಹೋಗುವ ಹೆಚ್ಚಿನ ಯುವಕರು ಇದನ್ನು ನೋಡುತ್ತಾರೆ!

ನಾರ್ಡ್‌ವಿಪಿಎನ್‌ ನಡೆಸಿರುವ ಅಧ್ಯಯನದ ಪ್ರಕಾರ ಶೌಚಾಲಯಕ್ಕೆ ಹೋಗುವ 10 ಜನರಲ್ಲಿ ಆರು ಜನರು ಮೊಬೈಲ್‌ ಬಳಸುವುದು ಸಾಮಾನ್ಯವಾಗಿದೆ. ಅದರಲ್ಲೂ ವಿಶೇಷವಾಗಿ ಯುವಕರು ಹೆಚ್ಚಿನ ಪ್ರಮಾಣದಲ್ಲಿ ಮೊಬೈಲ್‌ ಅನ್ನು ಶೌಚಾಲಯಕ್ಕೆ ಹೋದಾಗ ತೆಗೆದುಕೊಂಡು ಹೋಗುತ್ತಾರೆ. ಇನ್ನು ಈ ಅಧ್ಯಯನದಲ್ಲಿ ಭಾಗವಹಿಸಿದ ಜನರಲ್ಲಿ ಶೇಕಡ 61.6 ರಷ್ಟು ಮಂದಿ ಶೌಚಾಲಯಕ್ಕೆ ಹೋಗುವಾಗ ಮೊಬೈಲ್‌ನಲ್ಲಿ ಫೇಸ್‌ಬುಕ್, ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಅನ್ನು ಪರಿಶೀಲಿಸುವುದಾಗಿ ಹೇಳಿದ್ದಾರೆ.

ಇದಲ್ಲದೆ 33.9% ಮಂದಿ ಮಾತ್ರ ವಾಶ್‌ರೂಂ ನಲ್ಲಿರುವಾಗ ಟಾಯ್ಲೆಟ್‌ ಸೀಟ್‌ ಮೇಲೆ ಕುಳಿತು ಪ್ರಸ್ತುತ ವಿದ್ಯಮಾನಗಳ ಬಗ್ಗೆ ಅಪ್ಡೇಟ್‌ ತಿಳಿಯಲು ಪ್ರಯತ್ನಿಸುತ್ತಾರಂತೆ. ಅಷ್ಟೇ ಅಲ್ಲ 24.5% ರಷ್ಟು ಮಂದಿ ತಮ್ಮ ಪ್ರೀತಿಪಾತ್ರರಿಗೆ ಸಂದೇಶ ಕಳುಹಿಸಲು ಶೌಚಾಲಯದಲ್ಲಿ ಮೊಬೈಲ್‌ ಬಳಸುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಈ ಅಭ್ಯಾಸ ಎಷ್ಟರ ಮಟ್ಟಿಗೆ ಕೆಟ್ಟದು ಅಂದರೆ ನಿಮ್ಮ ಟಾಯ್ಲೆಟ್‌ ಸೀಟ್‌ಗಿಂತ ಹೆಚ್ಚು ಕೊಳಕು ಎಂದು ಅಧ್ಯಯನ ತಂಡ ಅಭಿಪ್ರಾಯಪಟ್ಟಿದೆ.

ಶೌಚಾಲಯದಲ್ಲಿ ಮೊಬೈಲ್‌ ಬಳಕೆ ಮಾಡುವುದು ನಿಮ್ಮ ಆರೋಗ್ಯದ ಮೇಲೆ ತೀವ್ರ ಪರಿಣಾಮಗಳನ್ನು ಉಂಟುಮಾಡಲಿದೆ. ಯಾಹೂ ಲೈಫ್ ಯುಕೆ ಜೊತೆಗಿನ ಸಂವಾದದಲ್ಲಿ ಸೋಂಕು ನಿಯಂತ್ರಣ ತಜ್ಞರಾದ ಡಾ. ಹಗ್ ಹೇಡನ್ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲ ಟಾಯ್ಲೆಟ್ ಸೀಟ್‌ಗಳಿಗಿಂತ ಹತ್ತು ಪಟ್ಟು ಹೆಚ್ಚು ಸೂಕ್ಷ್ಮಾಣುಗಳನ್ನು ಸ್ಮಾರ್ಟ್‌ಫೋನ್‌ಗಳು ಆಶ್ರಯಿಸುತ್ತವೆ ಎಂದು ಹೇಳಿದ್ದಾರೆ. ಮೊಬೈಲ್‌ ಬಳಸುವಾಗ ಸ್ಮಾರ್ಟ್‌ಫೋನ್‌ ಸ್ಕ್ರೀನ್‌ಮೇಲೆ ಟಚ್‌ ಮಾಡಿದಾಗ ಹೆಚ್ಚಿನ ಸೂಕ್ಷ್ಮಾಣುಗಳು ಸೇರಿಕೊಳ್ಳುತ್ತವೆ ಎಂದಿದ್ದಾರೆ.

ಇದರೊಂದಿಗೆ ಮೊಬೈಲ್ ಫೋನ್‌ಗಳನ್ನು ಶೌಚಾಲಯದಲ್ಲಿ ಬಳಸುವಾಗ ಬರುವ ರೋಗಕಾರಕಗಳನ್ನು ಸ್ಟ್ಯಾಫಿಲೋಕೊಕಸ್ ಎಂದು ವರದಿ ಹೇಳಿದೆ. ಈ ರೋಗಕಾರಕಗಳು ಮೂತ್ರದ ಸೋಂಕಿನಿಂದ ಹಿಡಿದು ಉಸಿರಾಟ ಮತ್ತು ಚರ್ಮದ ಸೋಂಕಿನವರೆಗೆ ವಿವಿಧ ಆರೋಗ್ಯ ತೊಡಕುಗಳನ್ನು ಉಂಟುಮಾಡಬಹುದು ಎಂದು ಹೇಳಲಾಗಿದೆ. ಇದಲ್ಲದೆ ವಾಶ್‌ರೂಮ್‌ನಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಬಳಸುವುದು ನಿಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ವರದಿಯಾಗಿದೆ.

ಬಾತ್‌ರೂಂಗೆ ಮೊಬೈಲ್‌ ತೆಗೆದುಕೊಂಡು ಹೋಗುವ ಹೆಚ್ಚಿನ ಯುವಕರು ಇದನ್ನು ನೋಡುತ್ತಾರೆ!

ಇದೇ ಕಾರಣಕ್ಕೆ ಮೊಬೈಲ್‌ ಅನ್ನು ಶೌಚಾಲಯದಲ್ಲಿ ಬಳಸುವುದು ಸೂಕ್ತವಲ್ಲ ಎಂದು ವರದಿಯಲ್ಲಿ ಹೇಳಿದೆ. ಅದರಲ್ಲೂ ಹೆಚ್ಚಿನ ಯುವಕರು ಮೊಬೈಲ್‌ ಅನ್ನು ಶೌಚಾಲಯ ಸಮಯದಲ್ಲಿ ಬಳಸುತ್ತಿರುವುದು ನಿಜಕ್ಕೂ ಕೂಡ ಅಪಾಯಕಾರಿ ಎಂದು ಹೇಳಲಾಗಿದೆ. ನೀವು ಮನರಂಜನೆಗಾಗಿ ಮೊಬೈಲ್‌ ಅನ್ನು ಶೌಚಾಲಯದಲ್ಲಿ ಬಳಸಿದರೆ ಅದು ನಿಮ್ಮ ಆರೋಗ್ಯವನ್ನು ಹಾಳು ಮಾಡಲಿದೆ. ಶೌಚಾಲಯದಲ್ಲಿರುವ ಸೂಕ್ಷ್ಮಾಣುಗಳಿಗೆ ಮೊಬೈಲ್‌ ಸ್ಕ್ರೀನ್‌ಗಿಂತ ಉತ್ತಮ ಜಾಗ ಮತ್ತೊಂದಿಲ್ಲ. ಆದರಿಂದ ನೀವು ಮೊಬೈಲ್‌ ಅನ್ನು ಶೌಚಾಲಯದಲ್ಲಿ ಬಳಸಿದರೆ ಅದು ಟಾಯ್ಲೆಟ್‌ ಸೀಟ್‌ಗಿಂತ ಕೊಳಕು ಆಗಿರಲಿದೆ ಎಂದು ವರದಿಯಾಗಿದೆ.

Best Mobiles in India

English summary
This habit could prove Your smartphone might be dirtier than a toilet seat: Report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+