ಒಂದು ಕಟ್ಟಡದಿಂದ ಮತ್ತೊಂದು ಕಟ್ಟಡಕ್ಕೆ ರಕ್ತದ ಮಾದರಿಯನ್ನು ಡ್ರೋಣ್ ಬಳಸಿ ಕಳಿಸುತ್ತಿರುವ ಆಸ್ಪತ್ರೆ

By Gizbot Bureau
|

ಆಕ್ಸಿಡೆಂಟ್ ಆದಾಗ ಡ್ರೋಣ್ ಬಳಸಿ ಪ್ರಥಮಾ ಚಿಕಿತ್ಸಾ ಕಿಟ್ ಕಳುಹಿಸುವ ವ್ಯವಸ್ಥೆಯ ಬಗ್ಗೆ ನಾವು ಈಗಾಗಲೇ ಕೇಳಿದ್ದೇವೆ. ಇದೀಗ ಡ್ರೋಣ್ ಗಳಲ್ಲಿ ಸಾಕಷ್ಟು ಆವಿಷ್ಕಾರಗಳು ನಡೆಯುತ್ತಿದೆ ಎಂಬುದು ನಿಮಗೂ ತಿಳಿದಿರುವ ಸಂಗತಿಯೇ.

ಆಸ್ಪತ್ರೆಯಲ್ಲಿ ಡ್ರೋಣ್ ಬಳಕೆ:

ಆಸ್ಪತ್ರೆಯಲ್ಲಿ ಡ್ರೋಣ್ ಬಳಕೆ:

ಇದೀಗ ಆಸ್ಪತ್ರೆಯೊಂದು ಡ್ರೋಣ್ ಬಳಸಿ ಒಂದು ಬಿಲ್ಡಿಂಗ್ ನಿಂದ ಇನ್ನೊಂದು ಬಿಲ್ಡಿಂಗ್ ರಕ್ತದ ಮಾದರಿಯನ್ನು ಕಳುಹಿಸುವುದಕ್ಕೆ ಮುಂದಾಗಿದೆ. ಹೌದು ನಾರ್ತ್ ಕೆರೋಲಿನಾದ ಆಸ್ಪತ್ರೆಯ ಕ್ಯಾಂಪಸ್ ನಲ್ಲಿ ರಕ್ತದ ಮಾದರಿಗಳನ್ನು ಹಾರುವ ಡ್ರೋಣ್ ಮೂಲಕ ಕಳುಹಿಸಲಾಗುತ್ತದೆ.ವ್ಯಾಪಾರ ಮತ್ತು ಆರೋಗ್ಯದಲ್ಲಿ ಹೆಚ್ಚಿನ ಆವಿಷ್ಕಾರಗಳ ಮುಂದುವರಿದ ಭಾಗ ಇದಾಗಿದೆ.

ಇದೇ ಮೊದಲ ಬಾರಿಗೆ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ರಾಲಿಘಟ್ಟದ ವೇಕ್ಮೆಡ್ ಬಿಲ್ಡಿಂಗ್ ಗಳ ನಡುವೆ ಇಂತಹ ಪ್ರಯೋಗಕ್ಕೆ ಮುಂದಾಗಿದೆ. ಡ್ರೋಣ್ ತಯಾರಿಕಾ ಸಂಸ್ಥೆ ಮ್ಯಾಟರ್ನೆಟ್ ಮತ್ತು ಯುಪಿಎಸ್ ಹೇಳುವಂತೆ ಇದೇ ಮೊದಲ ಬಾರಿಗೆ ಡ್ರೋಣ್ ಗಳು ಈ ರೀತಿಯ ವಸ್ತುಗಳು ಹೊತ್ತಯ್ಯಲು ಅನುಮತಿಸಲಾಗಿದೆ. ಆಸ್ಪತ್ರೆ ಜೊತೆಗೆ ಈ ಕಂಪೆನಿಯು ಕೈಜೋಡಿಸಿದೆ.

ಅಧ್ಯಕ್ಷರ ಹೇಳಿಕೆ:

ಅಧ್ಯಕ್ಷರ ಹೇಳಿಕೆ:

ಇದೊಂದು ಐತಿಹಾಸಿಕ ಕ್ಷಣ ಮತ್ತು ಟರ್ನಿಂಗ್ ಪಾಯಿಂಟ್ ಯಾಕೆಂದರೆ ಇದೇ ಮೊದಲ ಬಾರಿಗೆ ಎಫ್ಎಎ(ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್) ದಿನನಿತ್ಯದ ಆಸ್ಪತ್ರೆಯ ಕೆಲಸಕ್ಕೆ ಡ್ರೋಣ್ ಬಳಕೆಗೆ ಅನುಮತಿಸಿದೆ ಎಂದು ಯುಪಿಎಸ್ ನ ಉಪಾಧ್ಯಕ್ಷರಾಗಿರುವ ಬಾಲಾ ಗಣೇಶ್ ತಿಳಿಸಿದ್ದಾರೆ.

ಮೊದಲ ಬಾರಿಗೆ ಅನುಮತಿ:p

ಮೊದಲ ಬಾರಿಗೆ ಅನುಮತಿ:p

ಎಫ್ಎಎ ಕೂಡ ಇದೇ ಮೊದಲ ಬಾರಿಗೆ ನಿತ್ಯದ ಕೆಲಸಕ್ಕೆ ಮತ್ತು ವಾಣಿಜ್ಯ ಪ್ಯಾಕೇಜ್ ವಿತರಣೆಗೆ ಡ್ರೋಣ್ ಬಳಕೆಯನ್ನು ಅನುಮತಿಸಿರುವುದು ಎಂಬುದಾಗಿ ತಿಳಿಸಿದೆ. ಡ್ರೋಣ್ ಗಳನ್ನು ರೆವೆನ್ಯೂ ಫ್ಲ್ಯೈಟ್ಸ್ ಎಂದು ಕರೆಯಲಾಗುತ್ತದೆ. ಇತರರು ಸಣ್ಣ ಪ್ರಮಾಣದ ವಿತರಣೆಗೆ ಮತ್ತು ಪ್ರದರ್ಶನಕ್ಕಷ್ಟೇ ಡ್ರೋಣ್ ಬಳಕೆ ಮಾಡಿದ್ದಾರೆ. ಆದರೆ ಇದೀಗ ಪ್ರಾಯೋಗಿಕವಾಗಿ ಅಲ್ಲ ಬದಲಾಗಿ ನಿತ್ಯದ ಬಳಕೆಗೆ ಡ್ರೋಣ್ ನ್ನು ಆಸ್ಪತ್ರೆಯಲ್ಲಿ ಬಳಕೆ ಮಾಡಲಾಗುತ್ತದೆ.

ಎಷ್ಟು ದಿನ ಕೆಲಸ?

ಎಷ್ಟು ದಿನ ಕೆಲಸ?

ವೇಕ್ ಮೆಡ್ ಕಾರ್ಯವು ವಾರದಲ್ಲಿ ಐದು ದಿನ, ದಿನಕ್ಕೆ ಕನಿಷ್ಟ 6 ಬಾರಿಯಾದರೂ ರೋಗಿಗಳ ಮೆಡಿಕಲ್ ಸ್ಯಾಂಪಲ್ ನ್ನು 1/3 ಮೈಲ್(.5 ಕಿಲೋಮೀಟರ್) ಮೆಡಿಕಲ್ ಪಾರ್ಕ್ ನಿಂದ ಪ್ರಮುಖ ಆಸ್ಪತ್ರೆಯ ಕಟ್ಟಡದ ಲ್ಯಾಬ್ ಟೆಸ್ಟಿಂಗ್ ಗೆ ತೆರಳುತ್ತದೆ ಎಂದು ಮ್ಯಾಟರ್ ನೆಟ್ ನ ಸಿಇಓ ಆಗಿರುವ ಆಂಡ್ರ್ಯೂಸ್ ರಾಪ್ಟಾಪೌಲೋಸ್ ತಿಳಿಸಿದ್ದಾರೆ.

ಹೇಗೆ ಕಾರ್ಯ?

ಹೇಗೆ ಕಾರ್ಯ?

ಭದ್ರತಾ ಬಾಕ್ಸ್ ನಲ್ಲಿ ರಕ್ತದ ಮಾದರಿಯನ್ನು ಹಾಕಲಾಗುತ್ತದೆ ಮತ್ತು ಡ್ರೋಣಿನ ಲಾಂಚ್ ಪ್ಯಾಡ್ ಇದನ್ನು ಹಿಡಿದುಕೊಳ್ಳುತ್ತದೆ ಮತ್ತು ಅಲ್ಲಿಂದ ಮತ್ತೊಂದು ಬಿಲ್ಡಿಂಗ್ ಗೆ ಹಾರುತ್ತದೆ. ಇವುಗಳು ಯಾವುದೇ ಆಸ್ಪತ್ರೆಯ ಇತರೆ ವ್ಯಕ್ತಿಗಳಿಗೆ ತೊಂದರೆ ನೀಡದೇ ಅವರಿಗಿಂತ ಮೇಲೆ ಹಾರುತ್ತದೆ.

ಸಮಯ ಕಡಿತಗೊಳಿಸುವ ಉದ್ದೇಶ:

ಸಮಯ ಕಡಿತಗೊಳಿಸುವ ಉದ್ದೇಶ:

ಸಮಯದ ಸೂಕ್ಷ್ಮತೆಯನ್ನು ಹೊಂದಿರುವ ಸ್ಯಾಂಪಲ್ ಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸುವುದಕ್ಕೆ ಸಮಯವನ್ನು ಕಡಿತಗೊಳಿಸುವ ಪ್ರಮುಖ ಉದ್ದೇಶವನ್ನು ಇವುಗಳು ಹೊಂದಿದೆ.

ಆರೋಗ್ಯದ ವಿಚಾರದಲ್ಲಿ ಇದು ಸಾಕಷ್ಟು ಲಾಭಗಳನ್ನು ನೀಡುತ್ತದೆ. ಆರೋಗ್ಯದ ವಿಚಾರದಲ್ಲ ವೇಗವು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಎಷ್ಟೋ ಸಲ ರೋಗಿಗಳಿಗೆ ವೇಗವಾಗಿ ಚಿಕಿತ್ಸೆ ದೊರೆತರೆ ಅವರು ಗುಣವಾಗುವ ಸಾಧ್ಯತೆ ಅಧಿಕವಾಗಿರುತ್ತದೆ.

ಇತರೆ ಆಸ್ಪತ್ರೆಗಳಲ್ಲೂ ಡ್ರೋಣ್ ಬಳಸುವ ಪ್ಲಾನ್:

ಇತರೆ ಆಸ್ಪತ್ರೆಗಳಲ್ಲೂ ಡ್ರೋಣ್ ಬಳಸುವ ಪ್ಲಾನ್:

ಮುಂದಿನ ದಿನಗಳಲ್ಲಿ ಕೇವಲ ರಕ್ತದ ಸ್ಯಾಂಪಲ್ ಗೆ ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಕೊಲೆಸ್ಟ್ರಾಲ್ ನ ಫಲಿತಾಂಶಗಳು ಸೇರಿದಂತೆ ಇತರೆ ಪರೀಕ್ಷೆಗಳಲ್ಲೂ ಕೂಡ ಇದನ್ನು ಬಳಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2019 ರ ಅಂತ್ಯದೊಳಗೆ ಇನ್ನು ಕೆಲವು ಆಸ್ಪತ್ರೆಗಳಲ್ಲಿ ಈ ಡ್ರೋಣ್ ಗಳನ್ನು ಬಳಸಲು ನಿರ್ಧರಿಸಲಾಗಿದೆ.

ಇತರೆ ಯೋಜನೆ ಮತ್ತು ಹಿನ್ನಡೆಗಳು:

ಇತರೆ ಯೋಜನೆ ಮತ್ತು ಹಿನ್ನಡೆಗಳು:

ಹಳ್ಳಿಗಳಲ್ಲಿ ಹೋಮ್ ಡೆಲಿವರಿ ಇಲ್ಲದ ಪ್ರದೇಶಗಳಲ್ಲಿ ಇವುಗಳನ್ನು ಬಳಸುವ ಉದ್ದೇಶವೂ ಇದೆ. ಆದರೆ ಎಲ್ಲಾ ರೀತಿಯ ಮೆಡಿಕಲ್ ವಸ್ತುಗಳನ್ನು ಡ್ರೋಣ್ ಮೂಲಕ ಎಲ್ಲಾ ಪ್ರದೇಶಗಳಲ್ಲೂ ಕೊಂಡೊಯ್ಯುವುದಕ್ಕೆ ಅವಕಾಶ ನೀಡುವುದು ಬಹುಶ್ಯಃ ಅನುಮಾನ. ಯಾಕೆಂದರೆ ಔಷಧೀಯ ವಸ್ತುಗಳನ್ನು ಮಾರಕವಾಗಿರುವ ಕೆಲವು ಅಂಶಗಳೂ ಇರುತ್ತದೆ. ಒಂದು ವೇಳೆ ಡ್ರೋಣ್ ಗಳ ಚಲಿಸುವಿಕೆಯಲ್ಲಿ ತೊಂದರೆಯಾಗಿ ಔಷಧಗಳು ಕೆಟ್ಟ ಪರಿಣಾಮವನ್ನುಂಟು ಮಾಡಬಹುದು ಎಂಬುದು ಇದರ ಹಿಂದಿರುವ ಉದ್ದೇಶ. ಕಡಿಮೆ ಖರ್ಚಿನಲ್ಲಿ ಸಾಗಾಟ ನಡೆಸಬಹುದು ಎಂಬುದೇನೋ ನಿಜ. ಆದರೆ ಅದರ ಹಿಂದಿರುವ ತಾಂತ್ರಿಕ ಮತ್ತು ಇತರೆ ಲೋಪದೋಷಗಳ ಬಗ್ಗೆಯೂ ಯೋಚಿಸಬೇಕಾಗಿದೆ.

Most Read Articles
Best Mobiles in India

Read more about:
English summary
This hospital to use drones to fly blood samples between buildings

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X