ಟೆಕ್ ಲೋಕದಲ್ಲಿ ಮತ್ತೊಮ್ಮೆ ರಾರಾಜಿಸಿದ ಭಾರತ..! ಅಲೆಕ್ಸಾ ವಿಕಾಸದ ಹಿಂದಿದೆ ಭಾರತದ ಮೆದುಳು..!

  By Avinash
  |

  ಟ್ರಿಲಿಯನ್ ಡಾಲರ್ ಕ್ಲಬ್‌ಗೆ ಸೇರಿದ ವಿಶ್ವದ ಕೆಲವೇ ಕೆಲವು ಟೆಕ್ ಕಂಪನಿಗಳಲ್ಲಿ ಅಮೆಜಾನ್ ಕೂಡ ಒಂದು. ವಿಶ್ವದಲ್ಲಿ ಅಮೆಜಾನ್ ಹೆಸರು ಕೇಳದವರಿಲ್ಲ. ಇ-ಕಾಮರ್ಸ್‌ ದೈತ್ಯನಾಗಿರುವ ಅಮೇರಿಕಾ ಮೂಲದ ಅಮೆಜಾನ್‌ ಸಣ್ಣ ವಸ್ತುವಿನಿಂದಿಡಿದು ಬಾಹ್ಯಾಕಾಶಕ್ಕೂ ಟ್ರಿಪ್‌ ಕಳಿಸುವ ಸೇವೆಯವರೆಗೂ ತನ್ನ ಕಾರ್ಯವ್ಯಾಪ್ತಿ ಹೊಂದಿದೆ. ಇತ್ತಿಚೆಗೆ ಅಮೆಜಾನ್‌ ಹೆಸರನ್ನು ಜಾಸ್ತಿ ಕೇಳುವಂತೆ ಮಾಡಿದ್ದು, ಅಮೆಜಾನ್ ಪ್ರೈಮ್ ಮತ್ತು ಅಮೆಜಾನ್ ಅಲೆಕ್ಸಾ ಎಂಬ ಪದಗಳು ಎಂದರೆ ತಪ್ಪಲ್ಲ.

  ಅಮೆಜಾನ್‌ನ್ನು ಟೆಕ್ ಲೋಕದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿರುವಲ್ಲಿ ಪ್ರಮುಖವಾದ ಹೆಸರೆಂದರೆ ಅದು ಅಮೆಜಾನ್ ಅಲೆಕ್ಸಾ, ಗೂಗಲ್ ಅಸಿಸ್ಟಂಟ್ ಮತ್ತು ಆಪಲ್ ಸಿರಿಗೆ ಸ್ಪರ್ಧೆ ನೀಡಲು ಹೊರಬಂದ ಅಮೆಜಾನ್ ಅಲೆಕ್ಸಾ ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಸಿರಿ ಮತ್ತು ಅಸಿಸ್ಟಂಟ್‌ಗಿಂತ ಅಲೆಕ್ಸಾ ಹೆಚ್ಚು ಪ್ರಸಿದ್ಧಿಯಾಗುತ್ತಿದೆ. ಇಂತಹ ಅಲೆಕ್ಸಾ ಹಿಂದೆ ಯಾರಿದ್ದಾರೆ ಗೊತ್ತಾ..?

  ಟೆಕ್ ಲೋಕದಲ್ಲಿ ಮತ್ತೊಮ್ಮೆ ರಾರಾಜಿಸಿದ ಭಾರತ..! ಅಲೆಕ್ಸಾ ವಿಕಾಸದ ಹಿಂದೆ ಭಾರತ..!

  ಗೂಗಲ್ ಮತ್ತು ಆಪಲ್‌ ಎದುರು ಹಾಕಿಕೊಂಡು ಅಮೆಜಾನ್ ಹೊಸ ಉತ್ಪನ್ನ್ ತರುವುದರ ಹಿಂದೆ ಇದ್ದ ವಿಶ್ವಾಸ ಯಾರದ್ದು? ಎಂದರೆ. ಅಮೆಜಾನ್ ಹೇಳುವುದು ಭಾರತೀಯನ ಹೆಸರನ್ನು. ಹೌದು, ಅಮೆಜಾನ್‌ ಅಲೆಕ್ಸಾ ಹಿಂದೆ ಭಾರತೀಯನ ಮೆದುಳು ಕೆಲಸ ಮಾಡಿದೆ. ಹಾಗಿದ್ರೆ ಆ ಭಾರತೀಯ ಯಾರು? ಎಲ್ಲಿಯವರೂ? ಎಂಬುದನ್ನು ಮುಂದೆ ನೋಡಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ರೋಹಿತ್ ಪ್ರಸಾದ್‌

  ವಿಶ್ವದ ಅತಿ ಶ್ರೀಮಂತ ಜೆಫ್ ಬೆಜೋಸ್ ಮಾಲೀಕತ್ವದ ಅಮೆಜಾನ್ 2014ರಲ್ಲಿ ಅಲೆಕ್ಸಾ ಉತ್ಪನ್ನವನ್ನು ಘೋಷಣೆ ಮಾಡಿತು. ಈ ವಾಯ್ಸ್‌ ಅಸಿಸ್ಟಂಟ್‌ಗೆ ಭಾರತದ ನಂಟು ಬಹಳಷ್ಟು ದೊಡ್ಡದಾಗಿಯೇ ಇದೆ. ಅಲೆಕ್ಸಾ ವಾಯ್ಸ್‌ ಅಸಿಸ್ಟಂಟ್ ಉತ್ಪನ್ನದ ಯೋಜನೆಯ ಮುಂದಾಳತ್ವವನ್ನು ಭಾರತೀಯನಾದ ರೋಹಿತ್ ಪ್ರಸಾದ್‌ ವಹಿಸಿದ್ದರು. ಈ ರೋಹಿತ್ ಪ್ರಸಾದ್‌ ಎಂಬ ವ್ಯಕ್ತಿಯೇ ಅಲೆಕ್ಸಾ ಹಿಂದಿರುವ ಮೆದುಳು ಎನ್ನಬಹುದು.

  ರಾಂಚಿ ಮೂಲದ ರೋಹಿತ್

  ಕಳೆದ 5 ವರ್ಷಗಳಿಂದ ವಿಕಾಸ ಕಾಣುತ್ತಿರುವ ಅಲೆಕ್ಸಾದ ಮುಖ್ಯಸ್ಥರಾಗಿರುವ ರೋಹಿತ್ ಜಾರ್ಖಂಡ್‌ನ ರಾಂಚಿ ಮೂಲದ ಇಂಜಿನಿಯರ್ ಆಗಿದ್ದಾರೆ. ಕಳೆದ ವರ್ಷ ಮಾರುಕಟ್ಟೆ ಪ್ರವೇಶಿಸಿದ ಅಲೆಕ್ಸಾ ಸರ್ಚ್‌ ಇಂಜಿನ್ ದೈತ್ಯ ಗೂಗಲ್‌ ಒಡೆತನದ ಗೂಗಲ್‌ ಅಸಿಸ್ಟಂಟ್‌ನ್ನು ಹಿಂದಿಕ್ಕಿರುವುದು ರೋಚಕ ಪಯಣವಾಗಿದೆ.

  ರೋಹಿತ್ ಜತೆ ಟೋನಿ ರೀಡ್‌ ಬೆಂಬಲ

  ಅಮೆಜಾನ್ ಅಲೆಕ್ಸಾ ಪಯಣದಲ್ಲಿ ರೋಹಿತ್ ಪ್ರಸಾದ್ ಒಬ್ಬರೇ ಇದ್ದಿಲ್ಲ. ರೋಹಿತ್ ಜತೆಗೆ ಟೋನಿ ರೀಡ್ ಎಂಬುವವರು ಸಹ ಇದ್ದರು. ಇಬ್ಬರು ಜತೆಗೂಡಿ ಅಮೆಜಾನ್‌ನಲ್ಲಿ ಗ್ರಾಹಕ ಅನುಭವದ ಕುರಿತು ನಿರ್ದಿಷ್ಟ ಕೆಲಸ ಮಾಡಿ ಅಮೆಜಾನ್ ಅಲೆಕ್ಸಾವನ್ನು ಯಶಸ್ವಿಗೊಳಿಸಿದರು.

  ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಮಾಸ್ಟರ್ ಪದವಿ

  ರೋಹಿತ್ ಪ್ರಸಾದ್ ರಾಂಚಿಯ ಡಿಎವಿ ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ ಮುಗಿಸಿ, ಮೆಸ್ರಾದ ಬಿರ್ಲಾ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರ್ ಪದವಿಯನ್ನು ಮುಗಿಸಿದರು. 1997ರಲ್ಲಿ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಷನ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ಇವರು ಇಲಿಯನ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಮಾಸ್ಟರ್ ಪದವಿ ಪಡೆದಿದ್ದಾರೆ.

  2013ರಲ್ಲಿ ಅಮೆಜಾನ್ ಸೇರಿದ ರೋಹಿತ್

  ಸ್ಪೀಚ್‌ ರೆಕಾಗ್ನೈಸ್ ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿದ್ದ ರೋಹಿತ್ ಬಿಎನ್‌ಎನ್‌ ಟೆಕ್ನಾಲಜಿಸ್‌ನಲ್ಲಿ 14 ವರ್ಷ ಕಾರ್ಯನಿರ್ವಹಿಸಿ ಅನುಭವ ಪಡೆದು 2013ರಲ್ಲಿ ಅಮೆಜಾನ್‌ಗೆ ಸೇರುತ್ತಾರೆ. ಅಲೆಕ್ಸಾದ ಅಭಿವೃದ್ಧಿಗಾಗಿ ತಮ್ಮ ಕೌಶಲ್ಯ ಪ್ರದರ್ಶಿಸಿದ ರೋಹಿತ್ ಎರಡು ವರ್ಷಗಳ ನಂತರ ಅಲೆಕ್ಸಾ ಯೋಜನರಯ ಮುಖ್ಯಸ್ಥರಾದರು.

  ಸ್ಟಾರ್ ಟ್ರೆಕ್ ಯುಗ

  ರೋಹಿತ್ ಪ್ರಸಾದ್ ಆಂಗ್ಲ ವೆಬ್‌ಸೈಟ್‌ ಒಂದಕ್ಕೆ ಕೊಟ್ಟ ಸಂದರ್ಶನದಲ್ಲಿ ಸ್ಟಾರ್‌ ಟ್ರೆಕ್‌ ಎಂಬ ಪದವನ್ನು ಬಳಸಿದ್ದು, ನಾವು ಸ್ಟಾರ್ ಟ್ರೆಕ್ ಯುಗದಲ್ಲಿ ಬೆಳೆದಿದ್ದೇವೆ, ಅದು ನಮಗೆ ಸ್ಫೂರ್ತಿಯಾಗಿದೆ" ಎಂದು ಉತ್ಸಾಹದಿಂದ ಹೇಳಿದ್ದಾರೆ.

  ಟ್ರೆಂಡ್ ಆಗುತ್ತಿದೆ ವಾಯ್ಸ್‌ ರೆಕಾಗ್ನೈಷನ್

  ಇತ್ತೀಚೆಗೆ ಧ್ವನಿ ಗುರುತಿಸುವಿಕೆ, ವಾಯ್ಸ್‌ ಅಸಿಸ್ಟಂಟ್‌ಗಳು ಟ್ರೆಂಡ್ ಆಗುತ್ತಿವೆ. ಇನ್ನು ಮುಂದೆ ಜಗತ್ತು ಧ್ವನಿ ಸ್ನೇಹಿ ಪರಿಸರದೊಂದಿಗೆ ಗುರುತಿಸಿಕೊಳ್ಳುತ್ತದೆ. ಅದಕ್ಕಾಗಿ ಇಂತಹ ತಂತ್ರಜ್ಞಾನ ಉಪಯುಕ್ತವಾಗಿದ್ದು, ಜನ ಆಕರ್ಷಿತರಾಗುತ್ತಿದ್ದಾರೆ.

  ಟೆಕ್ ಲೋಕದಲ್ಲಿ ಮತ್ತೊಮ್ಮೆ ರಾರಾಜಿಸಿದ ಭಾರತ

  ಇತ್ತೀಚೆಗೆ ಭಾರತದ ಹೆಸರು ಟೆಕ್ ಲೋಕದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿದೆ. ಪ್ರಮುಖ ಟೆಕ್ ಕಂಪನಿಗಳ ಸಿಇಒಗಳೆಲ್ಲ ಭಾರತದ ಸಂಜಾತರೇ ಎನ್ನುವುದು ವಿಶೇಷ. ಈಗ ಅಲೆಕ್ಸಾವನ್ನು ವಿಶ್ವಕ್ಕೆ ಕೊಡುಗೆ ನೀಡುವಲ್ಲಿ ಭಾರತೀಯನ ಕೊಡುಗೆ ಇರುವುದಕ್ಕೆ ಇಂಡಿಯಾದ ಹೆಸರು ಮತ್ತೊಂದು ಬಾರಿ ಟೆಕ್ ಲೋಕದಲ್ಲಿ ರಾರಾಜಿಸುತ್ತಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  This Indian is the Brain Behind Amazon’s Voice Assistant Alexa. To know more this visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more