ಭಾರತದ ಈ IT ಕಂಪನಿ ತನ್ನ ನೌಕರರಿಗೆ ರೂ.50 ಲಕ್ಷ ಟೆಸ್ಲಾ ಕಾರನ್ನು ಫ್ರೀಯಾಗಿ ನೀಡ್ತಿದೆ..!
ಕಂಪನಿಗಳು ಉತ್ತಮವಾಗಿ ಕೆಲಸ ಮಾಡಿದ ನೌಕರರಿಗೆ ಇನ್ಸೆಂಟಿವ್ ಹೆಸರಿನಲ್ಲಿ ಹಣ ಸೇರಿದಂತೆ ಇತರೆ ವಸ್ತುಗಳನ್ನು ಬಹುಮಾನವಾಗಿ ನೀಡುವುದನ್ನು ಕಂಡಿರಬಹುದು. ಆದರೆ ಭಾರತೀಯ ಮೂಲದ ಐಟಿ ಕಂಪನಿಯೊಂದು ತನ್ನ ಉತ್ತಮ ನೌಕರರಿಗೆ ಜಾಗತಿಕವಾಗಿ ಸದ್ದು ಮಾಡುತ್ತಿರುವ ಐಷಾರಾಮಿ ಬ್ಯಾಟರಿ ಚಾಲಿತ ಕಾರು ಟೆಸ್ಲಾವನ್ನು ಉಚಿತವಾಗಿ ಕೊಡುಗೆಯಾಗಿ ನೀಡುತ್ತಿದೆ. ಈ ಮೂಲಕ ಜಾಗತಿಕವಾಗಿ ಸುದ್ದಿಯಾಗಿದೆ.

ರೋಬೊಕ್ಸ್ ಮತ್ತು ಆಟೋ ಮೋಷನ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾರತೀಯ ಮೂಲಕದ ಐಟಿ ಕಂಪನಿ ಎಂಪಸಿಸ್, ತನ್ನ ನೌಕರರಿಗೆ ಇನ್ಸೆಂಟಿವ್ ಮಾದರಿಯಲ್ಲಿ ಟೆಸ್ಲಾ ಕಾರನ್ನು ಉಡುಗೊರೆಯಾಗಿ ನೀಡಲು ಮುಂದಾಗಿದೆ. ಇದರಿಂದಾಗಿ ನೌಕರರು ಉತ್ತಮವಾಗಿ ಪ್ರದರ್ಶನವನ್ನು ನೀಡಲಿದೆ ಎಂಬುದು ಕಂಪನಿಯ ಆಶಯವಾಗಿದೆ.

ವೇಗದ ಅಭಿವೃದ್ದಿ:
ಕಂಪನಿಯಲ್ಲಿ ಯಾರು ವೇಗವಾಗಿ ಡೆವಲಪ್ ಆಗುತ್ತಾರೆಯೋ ಅವರಿಗೆ ಕಂಪನಿಯೂ ಟೆಸ್ಲಾ ಕಾರನ್ನು ಉಚಿತವಾಗಿ ನೀಡಲಿದೆ ಎಂದು ಎಂಪಸಿಸ್ ಕಂಪನಿಯ CEO ನಿತಿನ್ ರಾಕೇಶ್ ತಿಳಿಸಿದ್ದಾರೆ. ಈ ಮೂಲಕ ತಮ್ಮ ಕಂಪನಿಯ ನೌಕರರು ಉತ್ತಮವಾಗಿ ಕಾರ್ಯನಿರ್ವಹಿಸಿ ತಾವು ಬೆಳೆಯಲು ಮತ್ತು ಕಂಪನಿಯನ್ನು ಬೆಳೆಸಲು ಸಹಾಯವಾಗುತ್ತದೆ ಎಂದಿದ್ದಾರೆ.


ರೂ.50 ಲಕ್ಷ ಕಾರ್:
ಎಂಪಸಿಸ್ ಕಂಪನಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದರಿಗೆ ಕಂಪನಿ ಕಡೆಯಿಂದ ಟೆಸ್ಲಾದ ಆಂಭಿಕ ಹಂತದ ರೂ.50 ಮೌಲ್ಯದ ಬ್ಯಾಟರಿ ಚಾಲಿತ ಕಾರನ್ನು ಉಚಿತವಾಗಿ ನೀಡಲಿದೆ ಎನ್ನಲಾಗಿದೆ. ಇದರಿಂದಾಗಿ ನೌಕರರಿಗೆ ಕಾರಿನ ಆಸೆ ಕೆಲಸ ಮಾಡುವಂತೆ ಮಾಡಲಿದೆ.

ಇನ್ನು ಇದೆ:
ಇದಲ್ಲದೆ ಉತ್ತಮ ನೌಕರರಿಗೆ ಕೇವಲ ಕಾರು ಮಾತ್ರವಲ್ಲ, ಎರಡು ದಿನಗಳ ಕಾಲ ಟೆಸ್ಲಾ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ತಿಳಿಯುವ ಅವಕಾಶವನ್ನು ಮಾಡಿಕೊಡಲಾಗುತ್ತಿದೆ. ಇದರೊಂದಿಗೆ ಅಲ್ಲಿಯೇ ಕಾರು ಸಹ ಉಚಿತವಾಗಿ ದೊರೆಯಲಿದೆ ಎನ್ನಲಾಗಿದೆ.

ಇನ್ಸೆಂಟಿವ್:
ಎಲ್ಲಾ ಕಂಪನಿಗಳು ತಮ್ಮ ನೌಕರರು ಉತ್ತಮವಾಗಿ ಕಾರ್ಯನಿರ್ವಹಿಸಲಿ ಎನ್ನುವ ಕಾರಣಕ್ಕಾಗಿ aಇನ್ಸೆಂಟಿವ್ಸ್ ಅನ್ನು ನೀಡುತ್ತಾರೆ. ಮಾರ್ಕೆಟಿಂಗ್ ವಿಭಾಗದಲ್ಲಿ ಇದನ್ನು ಹೆಚ್ಚಾಗಿ ಕಾಣಬಹುದಾಗಿದೆ. ಆದರೆ ಇದುವರೆಗೂ ಯಾರು ಸಹ ಈ ಮಾದರಿಯಲ್ಲಿ ದುಬಾರಿ ಕಾರ್ ನೀಡಿಲ್ಲ ಎನ್ನಲಾಗಿದೆ.


Click it and Unblock the Notifications