Subscribe to Gizbot

ತೆಲುಗಿನ ಒಂದಕ್ಷರದಿಂದ ಕ್ರ್ಯಾಶ್ ಆಗುತ್ತಿವೆ ಎಲ್ಲಾ ಐಫೋನ್‌ಗಳು!!..ಏಕೆ ಗೊತ್ತಾ?

Written By:

ಜಗತ್ತಿನಲ್ಲಿಯೇ ಅತ್ಯಂತ ಹೆಸರುವಾಸಿ ಮೊಬೈಲ್ ಬ್ರ್ಯಾಂಡ್ ಕಂಪೆನಿ ಆಪಲ್‌ಗೆ ತೆಲುಗಿನ ಒಂದು ಅಕ್ಷರ ತಲೆನೋವಾಗಿ ಪರಿಣಮಿಸಿದೆ.! ತೆಲುಗಿನ ಒಂದು ಫಾಂಟ್ ಐಫೋನನ್ನೇ ಕ್ರ್ಯಾಶ್ ಮಾಡುತ್ತಿದ್ದು, ತೆಲುಗಿನ 'ಜ್ಞಾ' ಅಕ್ಷರ ಟೈಪ್ ಮಾಡಿದರೆ ಐಫೋನ್‌ನಲ್ಲಿನ ಆಪ್ಸ್ ಎಲ್ಲಾ ತನ್ನಷ್ಟಕ್ಕೆ ತಾನೆ ಕ್ರ್ಯಾಷ್ ಆಗುತ್ತಿವೆ.!!

ತೆಲುಗಿನ ಒಂದಕ್ಷರದಿಂದ ಕ್ರ್ಯಾಶ್ ಆಗುತ್ತಿವೆ ಎಲ್ಲಾ ಐಫೋನ್‌ಗಳು!!..ಏಕೆ ಗೊತ್ತಾ?

ಹೌದು, ನೀವು ನಂಬದಿದ್ದರೂ ಇದು ಸತ್ಯ.! ಐಫೋನಿನಲ್ಲಿನ ಬಗ್ ಕಾರಣದಿಂದ ತೆಲುಗು ಅಕ್ಷರ 'ಜ್ಞಾ' ಟೈಪ್ ಮಾಡಿದ ಕೂಡಲೆ ಆಪ್‌ಗಳು ಕ್ರ್ಯಾಶ್ ಆಗುತ್ತಿವೆ ಎಂದು ವರದಿಯಾಗಿದ್ದು, ಇಂತಹದೊಂದು ತೊಂದರೆಯನ್ನು ಇಟಲಿ ಮೂಲದ ಪ್ರೋಗ್ರಾಮರ್ ಓರ್ವ ಆಪಲ್ ಕಂಪೆನಿಯ ಗಮನಕ್ಕೆ ತಂದಿದ್ದಾರೆ.!! ಹಾಗಾದರೆ, ಏನಿದು ವರದಿ ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಜ್ಞಾತವಾಸಿ ಕಾರಣ!!

ಅಜ್ಞಾತವಾಸಿ ಕಾರಣ!!

ಇತ್ತೀಚೆಗೆ ಬಿಡುಗಡೆಯಾದ ತೆಲುಗು ಸಿನಿಮಾ 'ಅಜ್ಞಾತವಾಸಿ'ಯ ನಂತರ ಆಪಲ್ ಕಂಪೆನಿಗೆ ಇಂತಹ ತೊಂದರೆಯಾಗಿದೆ. ತೆಲುಗಿನ ಜನರು 'ಅಜ್ಞಾತವಾಸಿ' ಪದವನ್ನು ಟೈಪ್ ಮಾಡಲು ಪ್ರಯತ್ನಿಸಿದಾಗ 'ಜ್ಞಾ' ಟೈಪ್ ಮಾಡಿದ ಕೂಡಲೆ ಫೇಸ್‌ಬುಕ್, ಮೇಲೆ ಆಪ್‌ಗಳೆಲ್ಲವೂ ಕ್ರ್ಯಾಶ್ ಆಗುತ್ತಿದ್ದವು ಎನ್ನಲಾಗಿದೆ.!!

ಐಫೋನ್ ಆಪ್‌ಗಳು ಕ್ರ್ಯಾಶ್ ಆಗಿದ್ದೇಕೆ?

ಐಫೋನ್ ಆಪ್‌ಗಳು ಕ್ರ್ಯಾಶ್ ಆಗಿದ್ದೇಕೆ?

ತೆಲುಗಿನ 'ಜ್ಞಾ' ಅಕ್ಷರ ಟೈಪ್ ಮಾಡಿದರೆ ಐಫೋನ್‌ನಲ್ಲಿನ ಆಪ್ಸ್ ಎಲ್ಲಾ ತನ್ನಷ್ಟಕ್ಕೆ ತಾನೆ ಕ್ರ್ಯಾಷ್ ಆಗುತ್ತಿವೆ. ಇದಕ್ಕೆ ಐಫೋನ್ ಐಓಎಸ್‌ನಲ್ಲಿ ಬಗ್ ಇರುವುದೇ ಕಾರಣ ಎಂದು ಇಟಲಿಯ ಪ್ರೋಗ್ರಾಮರ್ ಓರ್ವ ಕಂಡುಹಿಡಿದಿದ್ದಾರೆ. ಬಗ್ ಕಾರಣದಿಂದಲೇ ಆಪ್‌ಗಳೆಲ್ಲವೂ ಕ್ರ್ಯಾಶ್ ಆಗುತ್ತಿದ್ದವು ಎಂದು ಅವರು ಹೇಳಿದ್ದಾರೆ.!!

ಆಪಲ್ ಕಂಪೆನಿ ಗಮನಕ್ಕೆ!!

ಆಪಲ್ ಕಂಪೆನಿ ಗಮನಕ್ಕೆ!!

'ಜ್ಞಾ' ಅಕ್ಷರ ಟೈಪ್ ಮಾಡಿದರೆ ಐಫೋನ್‌ನಲ್ಲಿನ ಆಪ್ಸ್ ಎಲ್ಲಾ ತನ್ನಷ್ಟಕ್ಕೆ ತಾನೆ ಕ್ರ್ಯಾಷ್ ಆಗುತ್ತಿರುವ ಬಗ್ಗೆ ಆಪಲ್ ಕಂಪೆನಿ ಗಮನಕ್ಕೆ ತರಲಾಗಿದೆ. ಇಟಲಿ ಮೂಲದ ಪ್ರೋಗ್ರಾಮರ್ ಓರ್ವ ಆಪಲ್ ಕಂಪೆನಿಯ ಗಮನಕ್ಕೆ ತಂದಿದ್ದು, ಆಪಲ್ ಕಂಪೆನಿ ಕೂಡ ಇಂತದೊಂದು ಬಗ್ ಇರುವುದನ್ನು ಒಪ್ಪಿಕೊಂಡಿದೆ.!!

ಆಪಲ್ ಕಂಪೆನಿ ಹೇಳಿದ್ದೇನು?

ಆಪಲ್ ಕಂಪೆನಿ ಹೇಳಿದ್ದೇನು?

ಈ ತೊಂದರೆಯು ಆಪಲ್ ಕಂಪೆನಿಯ ಗಮನಕ್ಕೆ ಬಂದ ನಂತರ ಆಪಲ್ ಪ್ರತಿಕ್ರಿಯಿಸಿದೆ. ತನ್ನ ಐಓಎಸ್‌ನಲ್ಲಿ ಬಗ್ ಇದ್ದು, ಅದನ್ನು ಸರಿಪಡಿಸಲು ಶೀಘ್ರದಲ್ಲೇ ಪರಿಹಾರ ಕಂಡುಹಿಡಿಯುವುದಾಗಿ ಹೇಳಿದೆ. ಸದ್ಯಕ್ಕೆ ಬೀಟಾ ಆವೃತ್ತಿ ಬಳಸುತ್ತಿರುವವರಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದೆ.!!

'ಜ್ಞ' ಟೈಪಿಸುವುದು ಕಷ್ಟ!!

'ಜ್ಞ' ಟೈಪಿಸುವುದು ಕಷ್ಟ!!

'ಜ್ಞ' 'Gna' ಎಂಬ ಪದವನ್ನು ಒಂದು ಸಂಯುಕ್ತ ಅಕ್ಷರದಂತೆ ಟೈಪ್ ಮಾಡಲು ಸಾಧ್ಯವಿಲ್ಲ. ತೆಲುಗು ಅಕ್ಷರಶೈಲಿಯನ್ನು ಬಳಸಲು ಅಲ್ಲಿ ಹಲವಾರು ಕೀಲಿಗಳನ್ನು ಟೈಪ್ ಮಾಡಬೇಕು. j, z, aa ಎಂದು ಟೈಪಿಸಿದರೆ ಮಾತ್ರ 'ಜ್ಞ' ಮೂಡುತ್ತದೆ. ಹಾಗಾಗಿ, ಅದನ್ನು ಕೋಡಿಂಗ್ ಮಾಡಲಾಗುವುದು ಎಂದು ತೆಲಂಗಾಣ ವಿಶ್ವವಿದ್ಯಾಲಯದ ಪ್ರೊಫೆಸರ್ ಕೆ ಕನಕಯ್ಯ ಹೇಳಿದ್ದಾರೆ.!!

ಓದಿರಿ:ಗೂಗಲ್‌ನಲ್ಲಿ ನಿಮಗೆ ತಿಳಿಯದ ಮೋಜಿನ ವಿಷಯಗಳು ಇವು!..ಖಂಡಿತ ಆಶ್ಚರ್ಯ ಪಡ್ತೀರಾ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
A compound letter in the Telugu alphabet is causing iPhones to crash worldwide. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot