ಇನ್ಸ್ಟಾಗ್ರಾಂ ಫೀಚರ್ ನೀಡುತ್ತಿದೆ ನೀವು ಕಳೆದ ಸಮಯ ಟ್ರಾಕ್ ಮಾಡುವ ಅವಕಾಶ..!

By GizBot Bureau
|

ಇತ್ತೀಚೆಗಷ್ಟೋ ಗೂಗಲ್ ಮತ್ತು ಆಪಲ್ ತಮ್ಮ ಹೊಸ OS ನಲ್ಲಿ ವ್ಯಕ್ತಿಯು ತನ್ನ ಫೋನ್ ನಲ್ಲಿ ಎಷ್ಟು ಸಮಯ ಕಳೆದಿದ್ದಾನೆ ಮತ್ತು ಆಪ್ ಗಳಲ್ಲಿ ಎಷ್ಟೆಷ್ಟು ಸಮಯ ವ್ಯಯಿಸಿದ್ದಾನೆ ಎಂಬುದನ್ನು ತೋರಿಸುವ ವೈಶಿಷ್ಟ್ಯವೊಂದನ್ನು ಸೇರಿಸಿದೆ. ಇದೇ ವೈಶಿಷ್ಟ್ಯವನ್ನು ಇನ್ಸ್ಟಾಗ್ರಾಂ ಕೂಡ ಸೇರಿಸಲು ಪ್ರಯತ್ನಿಸಿದೆ. ಇತ್ತೀಚಿನ ಮಾಹಿತಿ ಸೋರಿಕೆಯ ಪ್ರಕಾರ ಹೇಳುವುದೇ ಆದರೆ, ಫೇಸ್ಬುಕ್ ಮಾಲೀಕತ್ವದ ಫೋಟೋ ಮತ್ತು ವೀಡಿಯೋ ಶೇರಿಂಗ್ ಸೈಟ್ ಇನ್ಸ್ಟಾಗ್ರಾಂ ನಲ್ಲಿ “User Insight” ಅನ್ನುವ ಹೊಸ ವೈಶಿಷ್ಟ್ಯ ಸೇರಿಕೊಳ್ಳಲಿದೆ.

ಇದು ಬಳಕೆದಾರರಿಗೆ ತಾವು ಎಷ್ಟು ಸಮಯ ಇನ್ಸ್ಟಾಗ್ರಾಂನಲ್ಲಿ ಕಳೆದರು ಎಂಬ ಪ್ರತಿನಿತ್ಯದ ವರದಿಯನ್ನು ನೀಡಲಿದೆ. ಯುಟ್ಯೂಬ್ ನ Take a break”ರಿಮೈಂಡರ್ ನಂತೆಯೇ ಇದು ಕಾರ್ಯ ನಿರ್ವಹಿಸಲಿದೆ. ಇನ್ನೊಂದು ಕುತೂಹಲಕಾರಿ ವೈಶಿಷ್ಟ್ಯವೆಂದರೆ, ಬಳಕೆದಾರರಿಗಂ ನೋಟಿಫಿಕೇಷನ್ ಗಳನ್ನು ಲಿಮಿಟ್ ಮಾಡುವ ಅವಕಾಶ ಲಭ್ಯವಾಗಲಿದೆ ಮತ್ತು ಲಿಮಿಟೆಡ್ ನೋಟಿಫಿಕೇಷನ್ ಗಳ ನಂತರ ಆಪ್ ಯಾವುದೇ ನೋಟಿಫಿಕೇಷನ್ ಗಳನ್ನು ನಿಮಗೆ ಮತ್ತೆ ಕಳುಹಿಸುವುದಿಲ್ಲ.

ಇನ್ಸ್ಟಾಗ್ರಾಂ ಫೀಚರ್ ನೀಡುತ್ತಿದೆ ನೀವು ಕಳೆದ ಸಮಯ ಟ್ರಾಕ್ ಮಾಡುವ ಅವಕಾಶ..!

'User Insight’ ವೈಶಿಷ್ಟ್ಯವು ಪ್ರೊಫೈಲ್ ಪುಟಕ್ಕೆ ಹೊಂದಿಕೊಂಡಿರುತ್ತದೆ ಮತ್ತು ಹೊಸ ಹ್ಯಾಂಬರ್ಗರ್ ಐಕಾನ್ ಒಂದು ಇರಲಿದೆ. ಅಷ್ಟೇ ಅಲ್ಲ, ಇದು ನೀವು ಪ್ರೀ-ಸೆಟ್ ಮಾಡಿದ ಸಮಯವನ್ನೂ ಮೀರಿ ಇನ್ಸ್ಟಾಗ್ರಾಂ ಬಳಕೆ ಮಾಡುತ್ತಿದ್ದರೆ ನಿಮಗೆ ಎಚ್ಚರಿಕೆಯನ್ನೂ ನೀಡುತ್ತೆ. ಆದರೆ ಬಳಕೆದಾರರು ಇದರ ಸದುಪಯೋಗ ಪಡೆಯುತ್ತಾರೋ ಇಲ್ಲವೋ ತಿಳಿಯದು.. ಅದರಲ್ಲೂ ಸ್ಮಾರ್ಟ್ ಫೋನ್ ಗಳಿಗೆ ಒಗ್ಗಿಹೋಗಿರುವ ಬಳಕೆದಾರರು ಈ ವೈಶಿಷ್ಟ್ಯವನ್ನು ಎಷ್ಟು ಬಳಸಿಕೊಳ್ಳುತ್ತಾರೆ ಕಾದುನೋಡಬೇಕು.

ಆದರೆ, ಇದು ಇನ್ನು ಮುಂದೆ ಭವಿಷ್ಯದಲ್ಲಿ ಹೆಚ್ಚಿನ ಆಪ್ ಗಳಲ್ಲಿ ಇಂತಹ ಎಚ್ಚರಿಕೆ ಗಂಟೆ ಬರಲು ಕಾರಣವಾಗಬಹುದು ಎಂಬುದರಲ್ಲಿ ಸಂದೇಹವಿಲ್ಲ. ಇದಕ್ಕೆ ಸಂಬಂಧಿಸಿಯೇ ಪ್ರಸ್ತಾಪಿಸುವುದಾದರೆ, I/O 2018 ನಲ್ಲಿ, ಗೂಗಲ್ “Digital Wellbeing” ಬಗ್ಗೆ ಮುತುವರ್ಜಿ ತೆಗೆದುಕೊಂಡಿದೆ, ಮತ್ತು ಆ ಮೂಲಕ ಸ್ಮಾರ್ಟ್ ಫೋನ್ ಎಡಿಕ್ಷನ್ ಗೆ ಒಳಗಾಗಿರುವ ಬಳಕೆದಾರರನ್ನು ಅದರಿಂದ ತಪ್ಪಿಸುವ ಪ್ರಯತ್ನ ನಡೆಸುತ್ತಿದೆ. ಇದರ ಭಾಗವೆಂಬಂತೆ ಗೂಗಲ್ ಡ್ಯಾಷ್ ಬೋರ್ಡ್, ಆಪ್ ಟೈಮರ್, ಡು ನಾಟ್ ಡಿಸ್ಟರ್ಬ್ ಮತ್ತು ವಿಂಡ್ ಡೌನ್ ವೈಶಿಷ್ಟ್ಯತೆಗಳನ್ನು ಸೇರಿಸಿದೆ. ಇದೆಲ್ಲವೂ ಮುಂದಿನ ಮೊಬೈಲ್ ಗಳಲ್ಲೂ ಇರಲಿದೆ.

ಇನ್ಸ್ಟಾಗ್ರಾಂ ಫೀಚರ್ ನೀಡುತ್ತಿದೆ ನೀವು ಕಳೆದ ಸಮಯ ಟ್ರಾಕ್ ಮಾಡುವ ಅವಕಾಶ..!

ಗೂಗಲ್ ತನ್ನ ಈ ವೈಶಿಷ್ಟ್ಯದ ಬಗ್ಗೆ ಹೀಗೆ ಹೇಳುತ್ತದೆ. “ಪ್ರತಿಯೊಬ್ಬರಿಗೂ ನಿಜವಾಗಿಯೂ ಸಹಾಯಕವಾಗುವ ತಂತ್ರಜ್ಞಾನವನ್ನು ರಚಿಸುವುದಕ್ಕೆ ನಾವು ಬದ್ಧರಾಗಿದ್ದೇವೆ. ನಾವು ಉಪಕರಣಗಳು ಮತ್ತು ವೈಶಿಷ್ಟ್ಯಗಳನ್ನು ರಚಿಸಿ ಅವರು ತಂತ್ರಜ್ಞಾನವನ್ನು ಹೆಚ್ಚು ಅರ್ಥೈಸಿಕೊಳ್ಳುವಂತೆ ಮಾಡಿದ್ದೇವೆ. ಆದರೆ ಯಾವುದು ಬಹಳ ಮುಖ್ಯ ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು. ಯಾವಾಗ ಅಗತ್ಯವಿಲ್ಲವೋ ಆಗ ಇದರ ಸಂಪರ್ಕದಿಂದ ಮುಕ್ತರಾಗಬೇಕು.ಒಂದು ಇಡೀ ಕುಟುಂಬವೂ ಆರೋಗ್ಯಕರವಾದ ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಜೀವನ ಅಂದರೆ ತಂತ್ರಜ್ಞಾನವಲ್ಲ, ತಂತ್ರಜ್ಞಾನ ಜೀವನದ ಒಂದು ಭಾಗವಷ್ಟೇ..”

Best Mobiles in India

Read more about:
English summary
this Instagram feature will allow you to track how much time you spend using the app each day. To know more this visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X