Home
ಸುದ್ದಿಜಾಲ

ಲೋಕಸಭಾ ಎಲೆಕ್ಷನ್ 2019 ರ ಪ್ರಯುಕ್ತ ಸುಳ್ಳು ಸುದ್ದಿ ಹರಡುವಿಕೆಯನ್ನು ಫೇಸ್ ಬುಕ್ ಹೇಗೆ ತಡೆಯುತ್ತಿದೆ ಗೊತ್ತಾ?

By Gizbot Bureau

ಲೋಕಸಭೆ ಎಲೆಕ್ಷನ್ 2019 ಎಪ್ರಿಲ್ 11 ರಿಂದ ಭಾರತದಲ್ಲಿ ಆರಂಭವಾಗುತ್ತಿದೆ. ಈ ನಿಟ್ಟಿನಲ್ಲಿ ತನ್ನ ಫ್ಲ್ಯಾಟ್ ಫಾರ್ಮ್ ನಲ್ಲಿ ಯಾವುದೇ ರೀತಿಯ ಫೇಕ್ ಸುದ್ದಿಗಳು ಅಥವಾ ಸುಳ್ಳು ಸುದ್ದಿಗಳು ದೇಶದಲ್ಲಿ ಹರಡದಂತೆ ತಡೆಯುವುದಕ್ಕೆ ಫೇಸ್ ಬುಕ್ ಮುಂದಾಗಿದೆ. ಅದರಲ್ಲಿ ಪ್ರಮುಖವಾಗಿ ಫೇಕ್ ಅಕೌಂಟ್ ಗಳನ್ನು ಬ್ಲಾಕ್ ಮಾಡುವುದು ಸೇರಿದಂತೆ ಥರ್ಡ್ ಪಾರ್ಟಿ ಫ್ಯಾಕ್ಟ್ ಚೆಕ್ಕರ್ಸ್ ಗಳಿಂದ ನಿಜವಾದ ಮತ್ತು ಅರ್ಥಪೂರ್ಣವಾಗಿರುವ ಸುದ್ದಿಗಳನ್ನು ಮಾತ್ರವೇ ಬಳಕೆದಾರರ ಫೀಡ್ ನಲ್ಲಿ ಇರುವಂತೆ ನೋಡಿಕೊಳ್ಳಲಾಗುತ್ತಿದೆ.

ಸುಳ್ಳು ಸುದ್ದಿಗಳಿಗೆ ಕಡಿವಾಣ:

ಸುಳ್ಳು ಸುದ್ದಿಗಳಿಗೆ ಕಡಿವಾಣ:

ಎಪಿಯ ವರದಿಯ ಅನುಸಾರ ಸಾಮಾಜಿಕ ಜಾಲತಾಣ ಫೇಸ್ ಬುಕ್ ಇಂಡಿಯನ್ ಮೀಡಿಯಾ ಆರ್ಗನೈಸೇಷನ್ ಗಳ ಜೊತೆಗೆ ಕೈಜೋಡಿಸಿದ್ದು ಕೆಲವು ಪ್ರಾದೇಶಿಕ ಭಾಷೆಗಳು ಸೇರಿದಂತೆ ಇಂಗ್ಲೀಷ್ ಮತ್ತು ಹಿಂದಿ ಭಾಷೆಗಳಲ್ಲಿ ಹರಡಲಾಗುವ ಫೇಕ್ ಸುದ್ದಿಗಳಿಗೆ ಕಡಿವಾಣ ಹಾಕುವುದಕ್ಕೆ ಮುಂದಾಗುತ್ತಿದೆ.

ಫೇಕ್ ನ್ಯೂಸ್ ಗಳ ಅಪಿಯರೆನ್ಸ್ ಕಟ್:

ಫೇಕ್ ನ್ಯೂಸ್ ಗಳ ಅಪಿಯರೆನ್ಸ್ ಕಟ್:

ವರದಿಯು ತಿಳಿಸುವಂತೆ ಫ್ಯಾಕ್ಟ್ ಚೆಕ್ಕರ್ ಗಳಿಂದ ಯಾವುದೇ ಸ್ಟೋರಿಯು ಫ್ಲ್ಯಾಗ್ಡ್ ಆದರೆ ಅದನ್ನು ಪ್ರತಿಯೊಬ್ಬ ಬಳಕೆದಾರರ ನ್ಯೂಸ್ ಫೀಡ್ ನಿಂದ 80%ದ ವರೆಗೆ ಅಪಿಯರೆನ್ಸ್ ನ್ನು ಕಡಿತಗೊಳಿಸಲಾಗುತ್ತಿದೆಯಂತೆ.

ಸುರಕ್ಷತೆಗೆ ಒತ್ತು ನೀಡಿದ ಫೇಸ್ ಬುಕ್:

ಸುರಕ್ಷತೆಗೆ ಒತ್ತು ನೀಡಿದ ಫೇಸ್ ಬುಕ್:

ಕೆಟ್ಟ ಚಟುವಟಿಕೆಗಳು ಫೇಸ್ ಬುಕ್ ನಲ್ಲಿ ಎಲೆಕ್ಷನ್ ಪ್ರಯುಕ್ತ ನಡೆಯದಿರುವಂತೆ ನೋಡಿಕೊಳ್ಳುವುದಕ್ಕೆ ನಾವು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ ಎಂದು ಫೇಸ್ ಬುಕ್ ನ ಪ್ರೊಡಕ್ಟ್ ಮ್ಯಾನೇಜ್ ಮೆಂಟ್ ನ ಸಿವಿಕ್ ಇಂಟಿಗ್ರಿಟಿ ವಿಭಾಗದ ಡೈರೆಕ್ಟರ್ ಆಗಿರುವ ಸಮಿಧ್ ಚಕ್ರಬರ್ತಿ ತಿಳಿಸಿದ್ದಾರೆ. ಅಷ್ಟೇ ಅಲ್ಲ ಫೇಸ್ ಬುಕ್ ನಲ್ಲಿ ಒಟ್ಟಾರೆ ಕೆಲಸ ಮಾಡುತ್ತಿರುವ ಶೇಕಡಾ ಮಂದಿಯನ್ನು ಮೂರು ಪಟ್ಟು ಅಧಿಕಗೊಳಿಸಲಾಗಿದ್ದು ಭದ್ರತೆ ಮತ್ತುಸುರಕ್ಷತೆ ಕಾಪಾಡಲು 30,000 ಜನರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಭಾರತದ ಒಟ್ಟಾರೆ 1/3 ಭಾಗದ ಮತದಾರರು ಫೇಸ್ ಬುಕ್ ನಲ್ಲಿದ್ದಾರೆ:

ಭಾರತದ ಒಟ್ಟಾರೆ 1/3 ಭಾಗದ ಮತದಾರರು ಫೇಸ್ ಬುಕ್ ನಲ್ಲಿದ್ದಾರೆ:

ಜಗತ್ತಿನಲ್ಲೇ ಅತೀ ಹೆಚ್ಚು ಫೇಸ್ ಬುಕ್ ಬಳಕೆದಾರರು ಭಾರತದಲ್ಲಿದ್ದಾರೆ ಮತ್ತು 300 ಮಿಲಿಯನ್ ಮಂದಿ ಆನ್ ಲೈನ್ ಇರುತ್ತಾರೆ.2019 ರ ಎಲೆಕ್ಷನ್ ನಲ್ಲಿ ಓಟ್ ಮಾಡುವ ಒಟ್ಟಾರೆ ಮಂದಿಯ ಮೂರರ ಒಂದು ಭಾಗ ಫೇಸ್ ಬುಕ್ ನಲ್ಲಿ ಇದ್ದಾರೆ. ಹಾಗಾಗಿ ಫೇಸ್ ಬುಕ್ ಹೆಗಲ ಮೇಲೆ ಬಹುದೊಡ್ಡ ಜವಾಬ್ದಾರಿ ಇದೆ. ಅದರಲ್ಲೂ ಸುಳ್ಳು ಸುದ್ದಿಗಳ ವಿಚಾರದಲ್ಲಿ ಫೇಸ್ ಬುಕ್ ಬಹಳಷ್ಟು ಜಾಗೃತೆ ವಹಿಸಬೇಕಾಗಿರುವ ಅಗತ್ಯವಿದೆ.ಆದರೆ ಈ ನಿಟ್ಟಿನಲ್ಲಿ ಫೇಸ್ ಬುಕ್ ಕೂಡ ಬಹಳ ಶ್ರಮವಹಿಸುತ್ತಿದೆ ಮತ್ತು ಕಳೆದ ಎರಡು ವರ್ಷಗಳಲ್ಲಿ ಊಹಿಸಲು ಅಸಾಧ್ಯವೆಂಬಂತೆ ಕೆಲವು ಕ್ರಮಗಳನ್ನು ಕೈಗೊಂಡಿದ್ದು ಚುನಾವಣೆಗೆ ಫೇಸ್ ಬುಕ್ ಕೂಡ ಸನ್ನದ್ಧವಾಗಿದೆ.

ಅಭ್ಯರ್ಥಿಗಳಿಗೆ ವೀಡಿಯೋ ಹಾಕಲು ಅವಕಾಶ:

ಅಭ್ಯರ್ಥಿಗಳಿಗೆ ವೀಡಿಯೋ ಹಾಕಲು ಅವಕಾಶ:

ಫೇಸ್ ನ್ಯೂಸ್ ಗಳ ತಡೆಗೆ ಒಂದೆಡೆ ಫೇಸ್ ಬುಕ್ ಕ್ರಮ ತೆಗೆದುಕೊಳ್ಳುತ್ತಿದ್ದರೆ ಇನ್ನೊಂದು ಕಡೆ ಲೋಕಸಭಾ ಎಲೆಕ್ಷನ್ ನಲ್ಲಿ ಸ್ಪರ್ಧಿಸುತ್ತಿರುವ ಕ್ಯಾಂಡಿಡೇಟ್ ಗಳಿಗೆ 20 ಸೆಕೆಂಡ್ ಗಳ ವೀಡಿಯೋವನ್ನು ತಮ್ಮ ಮೆಸೇಜ್ ನೊಂದಿಗೆ ಪೋಸ್ಟ್ ಮಾಡುವುದಕ್ಕೆ ಭಾರತದಲ್ಲಿ ಫೇಸ್ ಬುಕ್ ಅವಕಾಶವನ್ನು ನೀಡುತ್ತಿದೆ.

ಫೇಸ್ ಬುಕ್ ನಲ್ಲಿ ಜಾಹೀರಾತು:

ಫೇಸ್ ಬುಕ್ ನಲ್ಲಿ ಜಾಹೀರಾತು:

ತಮ್ಮ ಕ್ಷೇತ್ರದ ಆಧಾರದಲ್ಲಿ ಬಳಕೆದಾರರ ನ್ಯೂಸ್ ಫೀಡ್ ನಲ್ಲಿ ಈ ವೀಡಿಯೋಗಳು ಕಾಣಿಸುತ್ತದೆ. ಜೊತೆಗೆ ಕಂಪೆನಿಯು "ಪೈಡ್ ಬೈ ಫಾರ್" ಲೇಬಲ್ ನ್ನು ಕೂಡ ಪರಿಚಯಿಸಿದ್ದು ಇದರಲ್ಲಿ ಪಾವತಿ ಮಾಡಿದ ಜಾಹೀರಾತುದಾರರು ತಮ್ಮ ಜಾಹೀರಾತುಗಳನ್ನು ಮಾರ್ಕ್ ಮಾಡಬಹುದಾಗಿದೆ. ಅಷ್ಟೇ ಅಲ್ಲ ಜಾಹೀರಾತು ಲೈಬ್ರರಿಯನ್ನು ಕೂಡ ಪರಿಚಯಿಸಿದ್ದು ದೇಶದಲ್ಲಿರುವ ರಾಜಕೀಯ ಸಂಬಂಧಿ ಜಾಹೀರಾತುಗಳ ವಿವರಣೆಯನ್ನು ಇದು ನೀಡುತ್ತದೆ.

Best Mobiles in India

English summary
This is how Facebook is limiting fake news in India ahead of Lok Sabha elections 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+