ಆನ್‌ಲೈನಿನಲ್ಲಿ 'ಆಧಾರ್ ಕಾರ್ಡ್‌' ವಿಳಾಸ ಬದಲಿಸುವುದು ಹೇಗೆ?..ಫುಲ್ ಡೀಟೇಲ್ಸ್!

|

ಆಧಾರ್ ಕಾರ್ಡ್‌ನಲ್ಲಿ ನಿಮ್ಮ ಹೆಸರು, ಲಿಂಗ, ಮೊಬೈಲ್‌ ಸಂಖ್ಯೆ, ಜನ್ಮ ದಿನಾಂಕ, ಇ-ಮೇಲ್‌ ಹಾಗೂ ಬೆರಳಿನ ಗುರುತು, ಭಾವಚಿತ್ರ ಇತ್ಯಾದಿ ಬಯೋಮೆಟ್ರಿಕ್ ವಿವರಗಳ ಬದಲಾವಣೆಗೆ ನೀವು ಆಧಾರ್ ಸೇವಾ ಕೇಂದ್ರಗಳಿಗೆ ತೆರಳಲೇಬೇಕು. ಆದರೆ, ಆಧಾರ್ ಕಾರ್ಡ್‌ನಲ್ಲಿ ವಿಳಾಸವನ್ನು ಬದಲಿಸಲು ಮಾತ್ರ ಆಧಾರ್ ಕೇಂದ್ರಕ್ಕೇ ಹೋಗಬೇಕಿಲ್ಲ. ಏಕೆಂದರೆ, ನೀವೆಲ್ಲೇ ಇದ್ದರೂ ಮೊಬೈಲ್‌, ಲ್ಯಾಪ್‌ಟಾಪ್‌, ಡೆಸ್ಕ್‌ ಟಾಪ್‌ ಕಂಪ್ಯೂಟರ್‌ ಸಹಾಯದಿಂದ ಆನ್‌ಲೈನ್‌ ಮೂಲಕ ಆಧಾರ್ ವಿಳಾಸವನ್ನು ಸುಲಭವಾಗಿ ಬದಲಿಸಬಹುದು.

ಆನ್‌ಲೈನಿನಲ್ಲಿ 'ಆಧಾರ್ ಕಾರ್ಡ್‌' ವಿಳಾಸ ಬದಲಿಸುವುದು ಹೇಗೆ?..ಫುಲ್ ಡೀಟೇಲ್ಸ್!

ಹೌದು, ಜನರು ನಾನಾ ಕಾರಣಗಳಿಗೋಸ್ಕರ ತಮ್ಮ ವಾಸ್ತವ್ಯವನ್ನು ಬದಲಿಸುವುದು ಸಾಮಾನ್ಯ ಸಂಗತಿ. ಇಂಥಹ ಸಂದರ್ಭದಲ್ಲಿ ಆಧಾರ್ ಕಾರ್ಡ್‌ನಲ್ಲಿ ವಿಳಾಸವನ್ನು ಬದಲಿಸಲು ಆಧಾರ್ ಕೇಂದ್ರಕ್ಕೇ ಹೋಗಬೇಕಿಲ್ಲ. ಆಧಾರ್ ಸೇವೆ ನೀಡುವ ಕೇಂದ್ರಗಳಲ್ಲಿ ಟೋಕನ್‌ ತೆಗೆದುಕೊಂಡು ಗಂಟೆಗಟ್ಟಲೆ ಕಾದು ನಿಲ್ಲಬೇಕಾದ ಅಗತ್ಯ ಇಲ್ಲ. ಏಕೆಂದರೆ, ಕೇವಲ ಸಮಯದಲ್ಲಿ ನೀವು ಪ್ರಸ್ತುತ ಎಲ್ಲಿ ವಾಸವಿರುತ್ತಿರೋ ಅಲ್ಲಿಯ ವಿಳಾಸವನ್ನು ನಿಮ್ಮ ಆಧಾರ್ ಕಾರ್ಡ್‌ನೊಳಗೆ ಸುಲಭವಾಗಿ ಮತ್ತು ಉಚಿತವಾಗಿ ಸೇರಿಸಿಬಿಡಬಹುದು.

ನಾವು ಮೊದಲಿದ್ದ ಸ್ಥಳವನ್ನು ಬಿಟ್ಟು ಬೇರೆ ನಗರಕ್ಕೆ ವಲಸೆ ಬಂದಿದ್ದೇವೆ. ನಮ್ಮ ಆಧಾರ್ ವಿಳಾಸವನ್ನು ಬದಲಿಸುವುದು ಹೇಗೆ ಎಂದು ಹಲವರು ಮಾಹಿತಿ ಕೇಳಿದ್ದರು. ಹಾಗಾಗಿ, ಇಂದಿನ ಲೇಖನದಲ್ಲಿ ಆಧಾರ್ ವಿಳಾಸವನ್ನು ಆನ್‌ಲೈನ್‌ ಮೂಲಕ ನೀವೇ ಬದಲಾವಣೆ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ. ಹಾಗಾದರೆ, ಸ್ವತಃ ನೀವೇ ಆಧಾರ್ ವಿಳಾಸವನ್ನು ಪರಿಷ್ಕರಿಸಿ, ನಮೂದಿಸಿದ ವಿಳಾಸಕ್ಕೆ ಅಂಚೆ ಮೂಲಕ ಪರಿಷ್ಕೃತ ಕಾರ್ಡ್‌ ತಲುಪುವಂತೆ ಮಾಡಿಕೊಳ್ಲುವುದು ಹೇಗೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಆಧಾರ್ ವಿಳಾಸ ಪರಿಷ್ಕರಣೆ ಹಂತಗಳು

ಆಧಾರ್ ವಿಳಾಸ ಪರಿಷ್ಕರಣೆ ಹಂತಗಳು

ನೀವು ಆನ್‌ಲೈನಿನಲ್ಲಿ ಆಧಾರ್ ಕಾರ್ಡ್‌ನಲ್ಲಿ ವಿಳಾಸವನ್ನು ಬದಲಿಸುವ ಮೊದಲು ಕೆಲ ಮಾಹಿತಿಗಳನ್ನು ತಿಳಿದಿರಬೇಕು. ಆಧಾರ್ ಕಾರ್ಡ್ ವಿಳಾಸವನ್ನು ಬದಲಿಸಲು ಕೆಲವೊಂದು ದಾಖಲೆಗಳು ಮತ್ತು ಮೊಬೈಲ್ ಸಂಪರ್ಕ ಇರುವುದು ಕಡ್ಡಾಯ. ಒಂದು ವೇಳೆ ನಿಮ್ಮ ಹೆಸರಿನಲ್ಲಿ ವಿಳಾಸದ ದೃಢೀಕರಣಕ್ಕಾಗಿ ಯಾವುದೇ ಒಂದು ದಾಖಲೆ ಕೂಡ ಇಲ್ಲದಿದ್ದರೂ ಸಹ ನೀವು ಚಿಂತಿಸಬೇಕಿಲ್ಲ. ದೃಢೀಕರಣ ಪತ್ರ ಪ್ರಕ್ರಿಯೆ ವಿಳಾಸ ಬದಲಿಸಬಹುದು

ನಿಮಗೆ ಅಗತ್ಯವಿರುವ ದಾಖಲೆಗಳು

ನಿಮಗೆ ಅಗತ್ಯವಿರುವ ದಾಖಲೆಗಳು

ಆಧಾರ್ ಕಾರ್ಡ್‌ ವಿಳಾಸವನ್ನು ಬದಲಿಸುವ ಸಲುವಾಗಿ 25ಕ್ಕೂ ಹೆಚ್ಚು ದಾಖಲೆಗಳಲ್ಲಿ ಯಾವುದಾದರೂ ಒಂದು ದಾಖಲೆ ಇದ್ದರೂ ಸಾಕಾಗುತ್ತದೆ. ರೇಷನ್ ಕಾರ್ಡ್‌, ಬ್ಯಾಂಕ್‌ ಸ್ಟೇಟ್‌ಮೆಂಟ್‌, ಪಾಸ್‌ಪೋರ್ಟ್‌, ಗುರುತಿನ ಚೀಟಿ, ಡ್ರೈವಿಂಗ್ ಲೈಸನ್ಸ್‌, ಇತ್ತೀಚಿನ ವಿದ್ಯುತ್‌ ಬಿಲ್‌, ಇತ್ತೀಚಿನ ಅಡುಗೆ ಅನಿಲ ಸಂಪರ್ಕಬಿಲ್, ನೀರಿನ ಬಿಲ್‌, ನರೇಗಾ ಜಾಬ್ ಕಾರ್ಡ್‌, ಇನ್ಷೂರೆನ್ಸ್ ಪಾಲಿಸಿ ಮತ್ತು ಕಿಸಾನ್ ಪಾಸ್‌ಬುಕ್‌ ದಾಖಲೆಗಳಲ್ಲಿ ಒಂದು ದಾಖಲೆ ಬೇಕಿರುತ್ತದೆ.

ಮೊಬೈಲ್‌ ಸಂಖ್ಯೆ ನೋಂದಣಿ ಕಡ್ಡಾಯ

ಮೊಬೈಲ್‌ ಸಂಖ್ಯೆ ನೋಂದಣಿ ಕಡ್ಡಾಯ

ನೀವು ಆಧಾರ್ ಕಾರ್ಡ್‌ ವಿಳಾಸವನ್ನು ಬದಲಿಸಲು ನಿಮ್ಮ ಆಧಾರ್ ಕಾರ್ಡ್‌ಗೆ ನೀವು ಪ್ರಸ್ತುತ ಬಳಸುತ್ತಿರುವ ಮೊಬೈಲ್‌ ಸಂಖ್ಯೆ ನೋಂದಣಿಯಾಗಿರಬೇಕು. ಹೀಗಿದ್ದರೆ ಮಾತ್ರ ನೀವು ಆನ್‌ಲೈನ್‌ ಮೂಲಕ ಆಧಾರ್ ವಿಳಾಸವನ್ನು ಪರಿಷ್ಕರಣೆ ಮಾಡಲು ಸಾಧ್ಯವಿದೆ. ಇಲ್ಲದಿದ್ದರೆ, ನೀವು ಆಧಾರ್ ಸೇವೆ ಒದಗಿಸುವ ಕೇಂದ್ರಕ್ಕೆ ತೆರಳಿ ಮೊಬೈಲ್‌ ಸಂಖ್ಯೆಯನ್ನು ನೋಂದಣಿ ಮಾಡಿಸಿಕೊಳ್ಳಬೇಕಾಗುತ್ತದೆ ಎಂಬುದನ್ನು ತಿಳಿದಿರಿ.

ವಿಳಾಸ ಬದಲಾವಣೆ ಹೀಗೆ: ಹಂತ 1

ವಿಳಾಸ ಬದಲಾವಣೆ ಹೀಗೆ: ಹಂತ 1

1. ಆಧಾರ್‌ ವೆಬ್‌ಸೈಟ್‌ https://uidai.gov.in ನಲ್ಲಿ ಲಾಗಿನ್‌ ಆಗಿ.
2. ಮೈ ಆಧಾರ್ ಕ್ಲಿಕ್ಕಿಸಿ-ಅಪ್‌ಡೇಟ್‌ ಯುವರ್ ಅಡ್ರೆಸ್‌ಗೆ ತೆರಳಿ.
3. ಅಪ್‌ಡೇಟ್‌ ಯುವರ್‌ ಅಡ್ರೆಸ್‌ ಪುಟದಲ್ಲಿ ನಿಮಗೆ ಬೇಕಾದ ಎಲ್ಲ ವಿವರಗಳು ಲಭ್ಯ.
4. ಪ್ರೊಸೀಡ್ ಟು ಅಪ್‌ಡೇಟ್‌ ಅಡ್ರೆಸ್‌ ಕ್ಲಿಕ್ಕಿಸಿ
5. 12 ಅಂಕಿಗಳ ಆಧಾರ್ ಸಂಖ್ಯೆ, ಕ್ಯಾಪ್ಚಾ ವೆರಿಫಿಕೇಶನ್ ಆದ ನಂತರ ನಿಮ್ಮ ಮೊಬೈಲ್‌ಗೆ ಒಟಿಪಿ ಬರುತ್ತದೆ. ಅದನ್ನೂ ನಮೂದಿಸಿ.

ವಿಳಾಸ ಬದಲಾವಣೆ ಹೀಗೆ: ಹಂತ 2

ವಿಳಾಸ ಬದಲಾವಣೆ ಹೀಗೆ: ಹಂತ 2

6. ವಿಳಾಸದ ವಿವರಗಳನ್ನು ಭರ್ತಿಗೊಳಿಸಿರಿ. ಸಂಬಂಧಿಸಿದ ದಾಖಲೆಯ ಮೂಲಪ್ರತಿಯನ್ನು ಮೊದಲೇ ಸ್ಕ್ಯಾ‌ನ್‌ ಮಾಡಿ ಅಪ್‌ಲೋಡ್‌ ಮಾಡಿ.
7. ವಿವರಗಳನ್ನು ಸಲ್ಲಿಸಿದ ನಂತರ ನಿಮ್ಮ ಮೊಬೈಲ್‌ಗೆ 'ಅಪ್‌ಡೇಟ್‌ ರಿಕ್ವೆಸ್ಟ್ ನಂಬರ್‌' ಬರುತ್ತದೆ.
8. ಅಪ್ರೂವ್ ಆದ ಬಳಿಕ ಹಾಗೂ ಪರಿಷ್ಕರಣೆ ಆದ ನಂತರ ಕೂಡ ಮೊಬೈಲ್‌ಗೆ ಮೆಸೇಜ್ ಬರುತ್ತದೆ.
9. ಆನ್‌ಲೈನ್‌ ಮೂಲಕ ಇ ಆಧಾರ್ ಅನ್ನು ಡೌನ್‌ಲೋಡ್‌ ಮಾಡಬಹುದು.
10. ಕೆಲ ದಿನಗಳಲ್ಲಿ ಅಂಚೆ ಮೂಲಕ ಪರಿಷ್ಕೃತ ಆಧಾರ್‌ ಕಾರ್ಡ್‌ ನಿಮ್ಮ ಕೈ ಸೇರುತ್ತದೆ.

ಹೆಸರಿನಲ್ಲಿ ವಿಳಾಸದ ದಾಖಲೆ ಇಲ್ಲದಿದ್ದರೆ?

ಹೆಸರಿನಲ್ಲಿ ವಿಳಾಸದ ದಾಖಲೆ ಇಲ್ಲದಿದ್ದರೆ?

ನಿಮ್ಮ ಹೆಸರಿನಲ್ಲಿ ವಿಳಾಸದ ದೃಢೀಕರಣಕ್ಕಾಗಿ ಯಾವುದೇ ಒಂದು ದಾಖಲೆ ಕೂಡ ಇಲ್ಲದಿದ್ದರೂ ಸಹ ಚಿಂತಿಸಬೇಕಿಲ್ಲ. ನೀವು ವಾಸ್ತವ್ಯದಲ್ಲಿರುವ ಮನೆ ಮಾಲೀಕರಿಂದ ದೃಢೀಕರಣ ಪತ್ರ ಪಡೆಯಬಹುದು. ಅವರಿಂದ ಒಪ್ಪಿಗೆ ಪಡೆದ ನಂತರ ಯುಐಡಿಎಐ ವೆಬ್‌ ಸೈಟ್‌ಗೆ ತೆರಳಿ 'ವಿಳಾಸ ದೃಢೀಕರಣ ಪತ್ರ' ಸೃಷ್ಟಿಸಬಹುದು. ಯುಐಡಿಎಐ ವೆಬ್‌ಸೈಟ್‌ಗೆ ಹೋಗಿ ಅಡ್ರೆಸ್‌ ವ್ಯಾಲಿಡೇಶನ್ ಲೆಟರ್‌ ಪ್ರಕ್ರಿಯೆ ಆರಂಭಿಸಿದ ನಂತರ ವಿಳಾಸ ದೃಢೀಕರಣ ಮಾಡುವವರ ವಿಳಾಸಕ್ಕೆ ರಹಸ್ಯ ಕೋಡ್‌ ರವಾನೆಯಾಗುತ್ತದೆ. ದೃಢೀಕರಣ ಮಾಡುವವರು ಅಂಚೆ ಮೂಲಕ ವಿಳಾಸ ದೃಢೀರಣ ಪತ್ರ ಪಡೆದ ನಂತರ ಮತ್ತೆ ವೆಬ್‌ಸೈಟ್‌ಗೆ ಲಾಗಿನ್‌ ಆಗಿ ರಹಸ್ಯ ಕೋಡ್‌ ಅನ್ನು ನಮೂದಿಸಿ ವಿಳಾಸವನ್ನು ಪರಿಷ್ಕರಿಸಬಹುದು.

Best Mobiles in India

Read more about:
English summary
I do not have any document proof of my address. Can I still update my Aadhaar address?. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X