ಈ ಎಲೆಕ್ಟ್ರಿಕ್‌ ಟ್ರಕ್‌ಗೆ ರೀಚಾರ್ಜ್‌ ಅಗತ್ಯವೇ ಇಲ್ಲವಂತೆ..!

By Gizbot Bureau
|

ಜಾಗತಿಕ ಮಟ್ಟದಲ್ಲಿ ವಿದ್ಯುನ್ಮಾನ ವಾಹನಗಳ ಬಳಕೆ ಹೆಚ್ಚುತ್ತಿದ್ದು, ಎಲ್ಲಾ ರಾಷ್ಟ್ರಗಳು ಎಲೆಕ್ಟ್ರಿಕ್‌ ವಾಹನಗಳ ಬಳಕೆಯನ್ನು ಉತ್ತೇಜಿಸಲು ಕ್ರಮ ಕೈಗೊಳ್ಳುತ್ತಿವೆ. ವಾಹನ ತಯಾರಿಕಾ ಕಂಪನಿಗಳು ಸಹ ವಿದ್ಯುನ್ಮಾನ ವಾಹನಗಳ ತಯಾರಿಕೆಯಲ್ಲಿ ಹೆಚ್ಚಿನ ಉತ್ಸಾಹವನ್ನು ತೋರುತ್ತಿವೆ. ಇಷ್ಟೆಲ್ಲಾ ಪೀಠಿಕೆ ಏಕೆ ಎಂದರೆ..? ಈಗ ನಾವೇಳಲು ಹೊರಟಿರುವುದು ಕೂಡ ವಿದ್ಯುನ್ಮಾನ ವಾಹನದ ಬಗ್ಗೆಯೇ.

ಈ ಎಲೆಕ್ಟ್ರಿಕ್‌ ಟ್ರಕ್‌ಗೆ ರೀಚಾರ್ಜ್‌ ಅಗತ್ಯವೇ ಇಲ್ಲವಂತೆ..!

ಹೌದು, ಎಲೆಕ್ಟ್ರೋ ಡಂಪರ್ ಎಂಬ ಹೆಸರಿನಿಂದ ಕರೆಯಲ್ಪಡುವ ವಿದ್ಯುನ್ಮಾನ ವಾಹನ ವಿಶಿಷ್ಟ ಅಂಶಗಳನ್ನು ಒಳಗೊಂಡಿದೆ. 30 ಅಡಿ ಉದ್ದ, 14 ಅಡಿ ಅಗಲ, 14 ಅಡಿ ಎತ್ತರ ಮತ್ತು 45 ಟನ್ ತೂಕವಿರುವ ವಾಹನದ ಟೈರ್‌ಗಳು ಮನುಷ್ಯನಿಗಿಂತ ಎತ್ತರವಾಗಿವೆ. ಇಷ್ಟೆಲ್ಲಾ ಫೀಚರ್‌ ಇದ್ದರೂ ಈ ವಾಹನದ ಬೆಲೆ ಮಾತ್ರ ಸಣ್ಣ ಕಾರಿನ ದರದಷ್ಟು ಎಂದರೆ ನಂಬಲೇಬೇಕು. ಹೇಗಿದೆ ಎಲೆಕ್ಟ್ರಿಕ್ ಡಂಪರ್ ಮುಂದೆ ನೋಡಿ.

ಇಂಧನ ಉಳಿಕೆ

ಇಂಧನ ಉಳಿಕೆ

ನಿಮಗೆಲ್ಲಾ ಗೊತ್ತಿರುವಂತೆ ಎಲೆಕ್ಟ್ರಿಕ್ ವಾಹನಗಳಿಂದ ಇಂಧನ ಉಳಿಕೆಯಾಗುತ್ತದೆ. ಸ್ವಿಟ್ಜರ್‌ಲ್ಯಾಂಡ್‌ನ ಬೀಲ್‌ನಲ್ಲಿರುವ ಕ್ವಾರಿಯೊಂದರಲ್ಲಿ ಎಲೆಕ್ಟ್ರಿಕ್ ಡಂಪರ್‌ ಕಾರ್ಯನಿರ್ವಹಿಸುತ್ತಿದ್ದು, 65 ಟನ್‌ ತೂಕದ ಅದಿರನ್ನು ಸುಲಭವಾಗಿ ಸಾಗಿಸುತ್ತಿದೆ. ಸಾಮಾನ್ಯವಾಗಿ ಇಂತಹ ಟ್ರಕ್‌ಗಳು ವರ್ಷಕ್ಕೆ 83,000 ಲೀಟರ್ ಇಂಧನ ಬಳಸುತ್ತವೆ. ಆದರೆ, ಎಲೆಕ್ಟ್ರಿಕ್ ಡಂಪರ್‌ ಬ್ಯಾಟರಿಯಿಂದ ಚಲಿಸುವುದರಿಂದ ಭಾರೀ ಪ್ರಮಾಣದಲ್ಲಿ ಇಂಧನ ಉಳಿಸುತ್ತದೆ.

ಪರಿಸರ ಸ್ನೇಹಿ

ಪರಿಸರ ಸ್ನೇಹಿ

ಇನ್ನು, ದೊಡ್ಡ, ದೊಡ್ಡ ಟ್ರಕ್‌ಗಳು ವರ್ಷಕ್ಕೆ 200 ಟನ್ ಇಂಗಾಲದ ಡೈ ಆಕ್ಸೈಡ್‌ನ್ನು ಹೊರಹಾಕುತ್ತವೆ. ಪ್ರಪಂಚದಾದ್ಯಂತ ವಿವಿಧ ಕಲ್ಲಿದ್ದಲು ಗಣಿಗಳು, ಕಬ್ಬಿಣದ ಅದಿರು ಗಣಿಗಳು ಮತ್ತು ಕ್ವಾರಿಗಳಲ್ಲಿ ಬಳಸುತ್ತಿರುವ ಇಂತಹ ಟ್ರಕ್‌ಗಳಿಂದ ಪ್ರತಿವರ್ಷ ಸಾವಿರಾರು ಟನ್ CO2 ಉತ್ಪಾದನೆಯಾಗುತ್ತಿದ್ದು, ಪರಿಸರಕ್ಕೆ ಮಾರಕವಾಗುತ್ತಿದೆ. ಆದರೆ, ಎಲೆಕ್ಟ್ರೋ ಡಂಪರ್‌ನಿಂದ ಪರಿಸರಕ್ಕೆ ಯಾವುದೇ ಹಾನಿ ಇಲ್ಲದಿರುವುದರಿಂದ ಪರಿಸರ ಸ್ನೇಹಿ ಎನಿಸಿಕೊಂಡಿದೆ.

ಕಡಿಮೆ ವಿದ್ಯುತ್ ವೆಚ್ಚ

ಕಡಿಮೆ ವಿದ್ಯುತ್ ವೆಚ್ಚ

4.4 ಟನ್ ಬ್ಯಾಟರಿಯಿಂದ ಶಕ್ತಿಯುತವಾಗಿರುವ ಎಲೆಕ್ಟ್ರಿಕ್ ಡಂಪರ್‌, 600 ಕಿಲೋವ್ಯಾಟ್ ಬ್ಯಾಟರಿ ಸಾಮರ್ಥ್ಯ ಹೊಂದಿದೆ. ಭಾರತೀಯ ಮನೆಗಳಲ್ಲಿ ಸರಾಸರಿ ತಿಂಗಳಿಗೆ ಬಳಕೆಯಾಗುವ ವಿದ್ಯುತ್ 800 ಕಿ.ವ್ಯಾ. ಅದಕ್ಕಿಂತಲೂ ಕಡಿಮೆ ವಿದ್ಯುತ್‌ನ್ನು ಬಳಸುವುದರಿಂದ ಎಲೆಕ್ಟ್ರಿಕ್‌ ಡಂಪರ್‌ ಜನರನ್ನು ಆಕರ್ಷಿಸುತ್ತದೆ.

ಬ್ಯಾಟರಿ ರೀಚಾರ್ಜ್‌ ಅಗತ್ಯವಿಲ್ಲ

ಬ್ಯಾಟರಿ ರೀಚಾರ್ಜ್‌ ಅಗತ್ಯವಿಲ್ಲ

ಹೌದು, ಆಶ್ಚರ್ಯವೆನಿಸಿದರೂ, ಈ ಅಂಶ ಸತ್ಯ. ಎಲೆಕ್ಟ್ರಿಕ್‌ ಡಂಪರ್‌ನ್ನು ರೀಚಾರ್ಜ್‌ ಮಾಡುವ ಅಗತ್ಯವಿಲ್ಲ. 110 ಟನ್ ತೂಕದ ಈ ಟ್ರಕ್ ಟೆಸ್ಲಾ ಗಿಂತ ಹಸಿರು ಬಣ್ಣದ್ದಾಗಿದೆ. ವಾಸ್ತವವಾಗಿ ವಾಹನವು ಪ್ರತಿದಿನ 200 ಕಿಲೋವ್ಯಾಟ್ ಹೆಚ್ಚುವರಿ ಶಕ್ತಿಯನ್ನು ಉತ್ಪಾದಿಸುವುದರಿಂದ ಮರುಚಾರ್ಜ್‌ ಮಾಡುವ ಅಗತ್ಯತೆ ಕಂಡುಬರುವುದಿಲ್ಲ.

ತಂತ್ರಜ್ಞಾನ ಏನು ಅಂತೀರಾ..?

ತಂತ್ರಜ್ಞಾನ ಏನು ಅಂತೀರಾ..?

ಈ ವಾಹನದಲ್ಲಿ ಬಳಸಿರುವ ತಂತ್ರಜ್ಞಾನ ಯಾವುದು ಎಂದರೆ..? ಭೌತಶಾಸ್ತ್ರ ಎಂಬ ಸ್ಪಷ್ಟ ಉತ್ತರ ಸಿಗುತ್ತದೆ. ಟೆಸ್ಲಾ ಅಥವಾ ಎಲೆಕ್ಟ್ರೋ ಡಂಪರ್‌ನಂತಹ ಎಲೆಕ್ಟ್ರಿಕ್ ವಾಹನಗಳು ವಿದ್ಯುತ್ ಉತ್ಪಾದಿಸಲು ಮತ್ತು ಅವುಗಳ ಬ್ಯಾಟರಿಗಳನ್ನು ರೀಚಾರ್ಜ್ ಮಾಡುವುದನ್ನು ಪುನರುತ್ಪಾದಕ ಬ್ರೇಕಿಂಗ್ ಎನ್ನುತ್ತೇವೆ. ಪುನರುತ್ಪಾದಕ ಬ್ರೇಕಿಂಗ್ ಸಾಧನ ಶ್ರೇಣಿಯನ್ನು ವಿಸ್ತರಿಸಲು ಮಾತ್ರ ಸಹಾಯ ಮಾಡುತ್ತದೆ ಹೊರತು ಬ್ಯಾಟರಿಯನ್ನು ಸಂಪೂರ್ಣವಾಗಿ ರೀಚಾರ್ಜ್ ಮಾಡುವುದಿಲ್ಲ. ಎಲೆಕ್ಟ್ರಿಕ್ ವಾಹನದಲ್ಲಿ ವಿದ್ಯುತ್‌ನ್ನು ಬ್ಯಾಟರಿಯಲ್ಲಿ ಸಂಗ್ರಹಿಸಲಾಗಿದ್ದು, ವಿದ್ಯುತ್‌ ಮೋಟಾರ್‌ನಿಂದ ನೇರವಾಗಿ ಡ್ರೈವ್‌ಶಾಫ್ಟ್‌ ಮೂಲಕ ಚಕ್ರಗಳು ಚಲಿಸುತ್ತವೆ. ಚಕ್ರವನ್ನು ತಿರುಗಿಸಲು ಮೋಟಾರ್‌ ವಿದ್ಯುತ್ ತೆಗೆದುಕೊಂಡರೂ, ಶಾಫ್ಟ್ ಅನ್ನು ತಿರುಗಿಸುವುದರಿಂದ ವಿದ್ಯುತ್ ಉತ್ಪಾದಿಸಬಹುದಾಗಿದೆ.

ಬ್ರೇಕ್‌ ತಂತ್ರ

ಬ್ರೇಕ್‌ ತಂತ್ರ

ಎಲೆಕ್ಟ್ರೋ ಡಂಪರ್‌ನ "ಅನಿಯಮಿತ" ಶಕ್ತಿಯ ಮೂಲ ಕಾರ್ಯಕ್ಕೆ ವಿಶಿಷ್ಟವಾಗಿದೆ. ವಾಹನವು ಇಳಿಜಾರಿನಲ್ಲಿ ವೇಗವಾಗಿ ಬರುತ್ತಿರುತ್ತದೆ. ವಾಹನದ ವೇಗವನ್ನು ಕಡಿಮೆ ಮಾಡಲು ಬ್ರೇಕ್ ಹಾಕಬೇಕಾಗುತ್ತದೆ. ಈ ಬ್ರೇಕಿಂಗ್ ತಂತ್ರದಿಂದ ಹೆಚ್ಚಿನ ವಿದ್ಯುತ್ ಪುನರುತ್ಪಾದನೆ ಆಗುತ್ತದೆ. ಮತ್ತು ವಾಹನ ತುಂಬಾ ಭಾರವಾಗಿರುವುದು ಕೂಡ ಸಾಕಷ್ಟು ವಿದ್ಯುತ್ ಉತ್ಪಾದನೆಗೆ ನೆರವಾಗುತ್ತದೆ. ಭಾರ ಇಳಿಸಿದ ನಂತರ ಹೆಚ್ಚು ಹಗುರವಾದ ಎಲೆಕ್ಟ್ರೋ ಡಂಪರ್ ಬೆಟ್ಟದ ಕೆಳಗಿಳಿಯುವಾಗ ಗಳಿಸಿದ ಚಾರ್ಜ್ ಅನ್ನು ಬಳಸಿಕೊಂಡು ಬೆಟ್ಟದ ಮೇಲೆರುತ್ತದೆ. ಹಗುರವಾಗಿರುವುದರಿಂದ ಕಡಿಮೆ ವಿದ್ಯುತ್ ಅಗತ್ಯವಿರುತ್ತದೆ.

Best Mobiles in India

Read more about:
English summary
This Is The World's Largest Electric Vehicle

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X