ಡ್ರೈವಿಂಗ್ ಮಾಡುತ್ತಲೇ ಗೂಗಲ್ ಅಸಿಸ್ಟೆಂಟ್ ಬಳಸಲು ಜೆಬಿಎಲ್ ನ ಹೊಸ ಡಿವೈಸ್

|

ಒಂದು ವೇಳೆ ನೀವು ನಿಮ್ಮ ಕಾರನ್ನು ಆಂಡ್ರಾಯ್ಡ್ ಆಟೋ ಅಥವಾ ಕಾರ್ ಪ್ಲೇ ಬೆಂಬಲವಿಲ್ಲದೆ ಓಡಿಸುತ್ತಿದ್ದರೆ ಮತ್ತು ಕಾರಿನಲ್ಲಿ ಹಾಡನ್ನು ಡ್ರೈವಿಂಗ್ ಮಾಡುತ್ತಲೇ ಬದಲಿಸಲು ಅಥವಾ ಡೈರೆಕ್ಷನ್ ಕಂಡುಹಿಡಿಯಲು ಡ್ರೈವಿಂಗ್ ಮಾಡುತ್ತಲೇ ಸ್ಮಾರ್ಟ್ ಫೋನ್ ಬಳಕೆ ಮಾಡುವುದು ಅಸಾಧ್ಯವಾಗುತ್ತದೆ. ಇಂತಹ ಸಂದರ್ಬದಲ್ಲಿ ನಿಮಗೆ ಸಹಾಯ ಮಾಡುವುದಕ್ಕಾಗಿಯೇ ಜೆಬಿಎಲ್ ನಿಮಗೊಂದು ಸಿಹಿಸುದ್ದಿ ನೀಡುತ್ತಿದೆ.

ಬೆಲೆ ಎಷ್ಟು?

ಬೆಲೆ ಎಷ್ಟು?

ಜೆಬಿಎಲ್ ಲಿಂಕ್ ಡ್ರೈವ್ ನ್ನು ನಿಮ್ಮ ಆಂಡ್ರಾಯ್ಡ್ ಅಥವಾ ಐಓಎಸ್ ಎರಡೂ ಫಾರ್ಮೆಟ್ ನ ಸ್ಮಾರ್ಟ್ ಫೋನ್ ಜೊತೆಗೆ ಪೇರ್ ಮಾಡಿಕೊಳ್ಳಬಹುದು ಮತ್ತು ನಂತರ ಮ್ಯೂಸಿಕ್ ಕಂಟ್ರೋಲ್ ಮಾಡುವುದಕ್ಕೆ ಇದು ನೆರವಾಗುತ್ತದೆ ಅಥವಾ ಗೂಗಲ್ ಬಳಿ ಡೈರೆಕ್ಷನ್ ತೋರಿಸು ಎಂದು ಹೇಳುವುದಕ್ಕೆ ನೆರವಾಗುತ್ತದೆ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಈ ಆಕ್ಸಸರಿ ನಿಮ್ಮ ಕಾರಿನ ಹಳೆಯ ಸ್ಪೀಕರ್ ನ್ನು ಸ್ಮಾರ್ಟ್ ಸ್ಪೀಕರ್ ಆಗಿ ಬದಲಿಸುತ್ತದೆ. ಇನ್ನು ಜೆಬಿಎಲ್ ಸಂಸ್ಥೆಯ ಈ ಹೊಸ ಡಿವೈಸ್ ನ ಬೆಲೆ $59.95 ಭಾರತೀಯ ರುಪಾಯಿಗಳಲ್ಲಿ ಹೇಳುವುದಾದರೆ ಅಂದಾಜು Rs 4,200.

ಯಾವೆಲ್ಲ ಮಾಹಿತಿ ಪಡೆಯಬಹುದು?

ಯಾವೆಲ್ಲ ಮಾಹಿತಿ ಪಡೆಯಬಹುದು?

2019 ರ ಸಿಇಎಸ್ ನಲ್ಲಿ ಇದನ್ನು ಬಿಡುಗಡೆಗೊಳಿಸಲಾಗಿದ್ದು ಜೆಬಿಎಲ್ ಲಿಂಕ್ ಡ್ರೈವ್ ಹೇ ಗೂಗಲ್ ವಾಯ್ಸ್ ಕಮಾಂಡ್ ಬಳಸಿ ಇದನ್ನು ಆಪರೇಟ್ ಮಾಡಬಹುದು ಮತ್ತು ದಾರಿ ತೋರಿಸುವುದಕ್ಕೆ, ಟ್ರಾಫಿಕ್ ಕಂಡೀಷನ್ ತಿಳಿಸುವುದಕ್ಕೆ, ಹವಾಮಾನ ತಿಳಿಸುವುದಕ್ಕೆ ಅಥವಾ ಕ್ಯಾಲೆಂಡರ್ ಅಪ್ ಡೇಟ್ ತಿಳಿಸುವಂತೆ ಇತ್ಯಾದಿ ಇನ್ನೂ ಹಲವು ಕೆಲಸಗಳನ್ನು ಕಾರಿನಲ್ಲಿ ಡ್ರೈವಿಂಗ್ ಮಾಡುತ್ತಲೇ ಸ್ಮಾರ್ಟ್ ಫೋನ್ ಅನ್ ಲಾಕ್ ಮಾಡದೆಯೇ ಮಾಡಿಕೊಳ್ಳುವುದಕ್ಕೆ ಇದು ನೆರವು ನೀಡುತ್ತದೆ.

ನಾಯ್ಸ್ ಕ್ಯಾನ್ಸಲೇಷನ್ :

ನಾಯ್ಸ್ ಕ್ಯಾನ್ಸಲೇಷನ್ :

ಜೆಬಿಎಲ್ ಲಿಂಕ್ ಡ್ರೈವ್ ಡಿವೈಸ್ ಡುಯಲ್ ನಾಯ್ಸ್ ಕ್ಯಾನ್ಸಲೇಷನ್ ಮೈಕ್ರೋಫೋನ್ ಗಳಿಂದ ಸುಭದ್ರವಾಗಿದ್ದು ಇದು ಹೊರಗಿನ ಇತರೆ ಧ್ವನಿಯನ್ನು ಉದಾಹರಣೆಗೆ ಗಾಳಿ, ಇಂಜಿನ್ ಸ್ಥಳಗಳು ಮತ್ತು ಇತ್ಯಾದಿ ಡ್ರೈವಿಂಗ್ ಶಬ್ದದ ಕಿರಿಕಿರಿಗಳು, ರೋಡಿನ ಇತರೆ ಶಬ್ದಮಾಲಿನ್ಯಗಳು ವಾಯ್ಸ್ ಕಮಾಂಡ್ ಗೆ ತೊಂದರೆ ಉಂಟುಮಾಡದಂತೆ ನೋಡಿಕೊಳ್ಳುತ್ತದೆ.

ಬಾರ್ಗ್ಗಿಂಗ್ ತಂತ್ರಜ್ಞಾನ:

ಬಾರ್ಗ್ಗಿಂಗ್ ತಂತ್ರಜ್ಞಾನ:

ಇದನ್ನು ರೇಡಿಯೋ ಬಾರ್ಗ್ಗಿಂಗ್ ತಂತ್ರಜ್ಞಾನದಿಂದ ಪ್ರೋಗ್ರಾಮಿಂಗ್ ಮಾಡಲಾಗಿದ್ದು , ಚಾಲಕರು ರೇಡಿಯೋ ಆಲಿಸುತ್ತಿದ್ದು ಯಾವುದೇ ಆಂಡ್ರಾಯ್ಡ್ ಧ್ವನಿ ಕಮಾಂಡ್ ಗಳನ್ನು ಹೇ ಗೂಗಲ್ ಬಳಸಿ ಹೇಳಿದಾಗ ರೇಡಿಯೋ ಸ್ಥಬ್ಧವಾಗುತ್ತದೆ. ಒಮ್ಮೆ ರಿಕ್ವೆಸ್ಟ್ ಅಂತಿಮಗೊಂಡನಂತರ ರೇಡಿಯೋ ಪುನಃ ಪ್ರಾರಂಭವಾಗುತ್ತದೆ. ಈ ವೈಶಿಷ್ಟ್ಯತೆಯು ಇನ್ ಕಮ್ಮಿಂಗ್ ಕರೆಗಳು ಬಂದಾಗಲೂ ಕೂಡ ಕೆಲಸ ಮಾಡುತ್ತದೆ. ಹ್ಯಾಂಡ್ಸ್ ಫ್ರೀ ಆಗಿ ಚಾಲನೆ ಮಾಡುತ್ತಾ ಕರೆಗಳನ್ನು ಸ್ವೀಕರಿಸಲು ಇದು ನೆರವು ನೀಡುತ್ತದೆ.

ಸಾಕೆಟ್ ಎಷ್ಟಿರಬೇಕು?

ಸಾಕೆಟ್ ಎಷ್ಟಿರಬೇಕು?

ಜೆಬಿಎಲ್ ಲಿಂಕ್ ಡ್ರೈವ್ ನ್ನು ಸೆಟ್ ಅಪ್ ಮಾಡಲು 12v ಸಾಕೆಟ್ ಗೆ ಡ್ರೈವರ್ ಈ ಡಿವೈಸ್ ನ್ನು ಕಾರಿನಲ್ಲಿ ಪ್ಲಗ್ ಇನ್ ಮಾಡಬೇಕಾಗುತ್ತದೆ. ಅಥವಾ ಸಹಾಯಕ ಔಟ್ ಲೆಟ್ ಗೂ ಪ್ಲಗ್ ಇನ್ ಮಾಡಬಹುದು. ಐಓಎಸ್ ಅಥವಾ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಗೂಗಲ್ ಆಪ್ ಇನ್ಸ್ಟಾಲ್ ಆಗಿರಬೇಕು ಮತ್ತು ಪೇರ್ ಮಾಡಬೇಕು.

 ಕನೆಕ್ಷನ್ ಹೇಗೆ?

ಕನೆಕ್ಷನ್ ಹೇಗೆ?

ಯಾವ ವೆಹಿಕಲ್ ನಲ್ಲಿ ಬಿಲ್ಟ್ ಇನ್ ಬ್ಲೂಟೂತ್ ಇರುತ್ತದೆಯೋ ಜೆಬಿಎಲ್ ಲಿಂಕ್ ಡ್ರೈವ್ ಸ್ಮಾರ್ಟ್ ಫೋನ್ ಮತ್ತು ಕಾರಿನ ಸ್ಟೀರಿಯೋ ಸಿಸ್ಟಮ್ ಎರಡರಲ್ಲೂ ಸಿನ್ಕ್ರನೈಜ್ ಆಗುತ್ತದೆ. ಯಾವ ಕಾರಿನಲ್ಲಿ ಬ್ಲೂಟೂತ್ ಕನೆಕ್ಷನ್ ಇರುವುದಿಲ್ಲವೋ ಅಂತಹ ಕಾರಿನಲ್ಲಿ ಲಿಂಕ್ ಡ್ರೈವ್ ನ್ನು ಸಹಾಯಕ ಔಟ್ ಲೆಟ್ ಬಳಸಿ ಪ್ರಸ್ತುತ ಇರುವ ಸ್ಪೀಕರ್ ಗಳೊಂದಿಗೆ ಕನೆಕ್ಷನ್ ಮಾಡಿಕೊಳ್ಳಬಹುದು.

Best Mobiles in India

Read more about:
English summary
This JBL device adds Google Assistant to your dumb car

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X