ಕಂಪ್ಯೂಟರ್‌ಗೆ ಬರುತ್ತೆ ಶಂಕಾಸ್ಪದ ಮೇಲ್!..ಕ್ಲಿಕ್ ಮಾಡಿದರೆ ಏನಾಗುತ್ತೆ ಗೊತ್ತಾ?

|

ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ಗೆ ಯಾವುದಾದರೂ ಶಂಕಾಸ್ಪದ ಮೇಲ್ ಬಂದಿದ್ದರೆ ಯಾವುದೇ ಕಾರಣಕ್ಕೂ ತೆರೆಯುವ ಅಥವಾ ಅದರಲ್ಲಿರುವ ಯಾವುದೇ ಲಿಂಕ್ ಅನ್ನು ಕ್ಲಿಕ್ ಮಾಡುವ ಸಾಹಸಕ್ಕೆ ಕೈ ಹಾಕಲೇಬೇಡಿ. ಏಕೆಂದರೆ, ಅಪ್ಪಿತಪ್ಪಿ ನೀವು ಆ ಮೇಲ್ ಓಪನ್ ಮಾಡಿ ಮೇಲ್‌ನಲ್ಲಿ ನೀಡಿರುವ ಯಾವುದೇ ಒಂದು ಲಿಂಕ್ ಅನ್ನು ಕ್ಲಿಕ್ ಮಾಡಿದರೆ ನಿಮ್ಮ ಕಂಪ್ಯೂಟರ್​ನಲ್ಲಿರುವ ಎಲ್ಲ ದಾಖಲೆಗಳು ಲಾಕ್ ಆಗುತ್ತವೆ. ನೀವು ಅವುಗಳನ್ನು ಮತ್ತೆ ಪಡೆದುಕೊಳ್ಳಬೇಕೆಂದರೆ ಹ್ಯಾಕರ್‌ಗಳಿಗೆ ಭಾರಿ ಮೊತ್ತ ಪಾವತಿಸಬೇಕಾಗುತ್ತದೆ.

ಕಂಪ್ಯೂಟರ್ ಮತ್ತು ಮೊಬೈಲ್‌

ಹೌದು, ಕಂಪ್ಯೂಟರ್ ಮತ್ತು ಮೊಬೈಲ್‌ಗಳನ್ನು ಹ್ಯಾಕ್ ಮಾಡಿ ಅದರಲ್ಲಿರುವ ಫೋಟೋಗಳು, ವಿವಿಧ ದಾಖಲೆ, ಫೈಲ್​ಗಳನ್ನೇ ನಿಷ್ಕ್ರಿಯಗೊಳಿಸಿ ಬ್ಲಾಕ್​ವೆುೕಲ್ ಮಾಡುವ ಅಂತಾರಾಷ್ಟ್ರೀಯ ಖದೀಮರ ಜಾಲವೊಂದು ಸಕ್ರಿಯವಾಗಿದೆ. ಮಂಗಳೂರು ಮೂಲದ ಕೆಲ ವ್ಯಕ್ತಿಗಳ ಕಂಪ್ಯೂಟರ್ ಅನ್ನು ಇದೇ ರೀತಿಯಾಗಿ ಹ್ಯಾಕ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವುದು ಕಂಡುಬಂದಿದ್ದು, ನಿಮ್ಮ ಅಮೂಲ್ಯ ಕಡತಗಳನ್ನು ತೆರೆಯಲು ಸಾಧ್ಯವಾಗುತ್ತಿಲ್ಲವೇ?, ನಿಮಗೆ ಅವುಗಳು ವಾಪಸ್ ಬೇಕಾದಲ್ಲಿ ನಮಗೆ ಹಣ ಪಾವತಿಸಿ ಎಂದು ಹ್ಯಾಕರ್‌ಗಳು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ.

ಫೋಟೋಗಳನ್ನು ನೋಡುವಂತಿರಲಿಲ್ಲ.

ಕಂಪ್ಯೂಟರ್ ತೆರೆದರೆ ಎಲ್ಲ ಹಾರ್ಡ್​ಡ್ರೈವ್‌​ಗಳ ಅಸೋಸಿಯೇಶನ್ ಬದಲಾಗಿತ್ತು. ಫೈಲ್​ಗಳನ್ನು ಬಳಸಲಾಗುತ್ತಿರಲಿಲ್ಲ. ಫೋಟೋಗಳನ್ನು ನೋಡುವಂತಿರಲಿಲ್ಲ. ಎಷ್ಟೇ ಪ್ರಯತ್ನ ಮಾಡಿದರೂ ಅವುಗಳನ್ನು ತೆರೆಯಲು ಸಾಧ್ಯವಾಗಲಿಲ್ಲ. ನಂತರ ಡಾಟಾ ರಿಸ್ಟೋರ್ ಎನ್ನುವ ಇ-ಮೇಲ್ ಐಡಿಯ ಮೇಲ್​ನಲ್ಲಿ ‘ಚಿಂತಿಸಬೇಡಿ.. ನಿಮ್ಮೆಲ್ಲ ಕಡತಗಳನ್ನು ಮತ್ತೆ ಪಡೆಯಬಹುದು' ಎಂಬುದನ್ನು ನೋಡಿ ನಾನು ಹ್ಯಾಕ್ ಆಗಿರುವುದನ್ನು ಅರಿತೆ. ಕಂಪ್ಯೂಟರ್ ಹ್ಯಾಕ್ ಆಗುವ ಹಿಂದಿನ ದಿನದಂದು ಒಂದು ಇಮೇಲ್ ಕ್ಲಿಕ್ ಮಾಡಿದ್ದು ಇದಕ್ಕೆ ಕಾರಣ ಎಂದು ಸಂತ್ರಸ್ತರು ತಿಳಿಸಿದ್ದಾರೆ.

ಅರ್ಧ ಬಿಟ್ ಕಾಯಿನ್

ಹ್ಯಾಕ್ ಮಾಡಿರುವ ಖದೀಮದಾರರು ಅರ್ಧ ಬಿಟ್ ಕಾಯಿನ್ (490 ಡಾಲರ್ ಮೌಲ್ಯ) ಪಾವತಿಸಿದರೆ ಕಡತ ಮರಳಿ ಪಡೆಯಲು ಬೇಕಾದ ಡಿಕ್ರಿಪ್ಶನ್ ಟೂಲ್ ಕಳುಹಿಸುತ್ತೇವೆ ಎಂದು ಬೇಡಿಕೆ ಇಟ್ಟಿದ್ದಾರೆ. ಬಿಟ್ ಕಾಯಿನ್ ಇಲ್ಲದಿದ್ದರೆ ಅದನ್ನು ಪಡೆಯುವ ಬಗೆ ಹೇಗೆ ಎಂಬುದನ್ನೂ ಮೇಲ್​ನಲ್ಲೇ ವಿವರಿಸಿದ್ದಾರೆ. ಹಣ ವರ್ಗಾವಣೆಯಾದ ಬಳಿಕ ಎನ್ಕ್ರಿಪ್ಟ್ ಆದ ಕಡತವನ್ನು (ಮತ್ತೆ ಬಳಸುವಂತೆ ಮಾಡುವ ಸಾಫ್ಟ್​ವೇರ್ ಲಿಂಕ್ ಕಳುಹಿಸಿಕೊಡುತ್ತಾರಂತೆ. ಇದನ್ನು ಖಚಿತಪಡಿಸಲು ಒಂದರೆಡು ದಾಖಲೆಗಳನ್ನು ತೆರೆದು ಸಾಬೀತುಪಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

 ಎನ್ಕ್ರಿಪ್ಟ್

ಇದೊಂದು ಹ್ಯಾಕಿಂಗ್ ವಿಧಾನವಾಗಿದ್ದು, ದೂರದಲ್ಲೆಲ್ಲೋ ಕುಳಿತು ನಿಮ್ಮ ಕಂಪ್ಯೂಟರ್​ಗೆ ನಿಗೂಢ ಸಾಫ್ಟ್ ವೇರ್ ಕಳಿಸಿ ನಿಮ್ಮ ಕಡತಗಳನ್ನು ಎನ್ಕ್ರಿಪ್ಟ್ ಮಾಡಿ ಸರಿಪಡಿಸಲು ಹಣಕ್ಕಾಗಿ ಬ್ಲಾಕ್​ವೆುೕಲ್ ಮಾಡುತ್ತಾರೆ. ಇದಕ್ಕೆ ಆನ್‌ಲೈನ್ ಕ್ರಿಪ್ಟೊ ಕರೆನ್ಸಿ ಬಿಟ್​ಕಾಯಿನ್​ನಂಥ ಮೂಲಕವೇ ಹಣ ಪಾವತಿಸುವಂತೆ ಒತ್ತಾಯಿಸಲಾಗುತ್ತದೆ. ಬಿಟ್ ಕಾಯಿನ್ ಪಡೆಯುವ ಬಗ್ಗೆಯೂ ಅವರೇ ತಿಳಿಸುತ್ತಾರೆ. ಹಣ ವರ್ಗಾವಣೆಯಾದ ಬಳಿಕವೂ ನಿಮ್ಮ ಸಮಸ್ಯೆಯನ್ನು ಅರಿತು ಅವರು ಮತ್ತಷ್ಟು ಹಣಕ್ಕೆ ಬೇಡಿಕೆ ಇಡಬಹುದು ಎನ್ನುತ್ತಾರೆ ಟೆಕ್ ತಜ್ಞರು. ಹಾಗಾಗಿ, ನೀವು ಎಚ್ಚರವಾಗಿರಿ.

Best Mobiles in India

English summary
Be aware of malicious software that you download onto your computer by clicking on infected pop-up advertisements, websites or email attachments.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X