Subscribe to Gizbot

ಸೆಲ್ಫಿ ಫೋಟೋ ಕ್ಲಿಕ್ಕಿಸುತ್ತೆ ಈ ಕನ್ನಡಿ

Posted By:

ಸೆಲ್ಫಿ ಫೋಟೋ ತೆಗೆಯುವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಮುಂದುಗಡೆ ಹೆಚ್ಚಿನ ಮೆಗಾಪಿಕ್ಸೆಲ್‌‌ ಇರುವ ಸ್ಮಾರ್ಟ್‌‌ಫೋನ್‌‌‌ಗಳನ್ನು ಕಂಪೆನಿಗಳು ಬಿಡುಗಡೆ ಮಾಡಲು ಆರಂಭಿಸಿದೆ.ಈ ಮಧ್ಯೆ ಸೆಲ್ಫಿ ಫೋಟೋ ತೆಗೆಯಲು ಅಮೆರಿಕದ ಕಂಪೆನಿಯೊಂದು ಹೊಸ ಕನ್ನಡಿಯನ್ನು ತಯಾರಿಸಿದೆ.

ಈ ಕನ್ನಡಿ ಮುಂದೆ ನಿಗದಿ ಪಡಿಸಿದ ಜಾಗದಲ್ಲಿ ನಿಂತರೆ ಸಾಕು.ಕನ್ನಡಿ ನಿಂತಿರುವ ವ್ಯಕ್ತಿಯ ಸೆಲ್ಫಿ ಫೋಟೋವನ್ನು ತಾನಾಗಿಯೇ ಕ್ಲಿಕ್‌ ಮಾಡಿ ಟ್ವೀಟ್‌ ಮಾಡುತ್ತದೆ.

ಅಮೆರಿಕದ istrategylabs ಈ ಹೊಸ ಸೆಲ್ಫಿ ಕನ್ನಡಿಯನ್ನು ತಯಾರಿಸಿದೆ.ಬಾಕ್ಸ್‌ ನಂತಿರುವ ಕನ್ನಡಿ ಒಳಭಾಗದಲ್ಲಿ ಮ್ಯಾಕ್‌ ಮಿನಿ ಕಂಪ್ಯೂಟರ್‌ ಇರಿಸಿದ್ದು,ವೆಬ್‌ ಕ್ಯಾಮೆರಾ ಸೆಲ್ಫಿ ಫೋಟೋವನ್ನು ತೆಗೆಯುವಂತೆ ಇದನ್ನು ಅಭಿವೃದ್ಧಿ ಪಡಿಸಿದ್ದಾರೆ. ಬಾರ್‌ ರೆಸ್ಟೋರೆಂಟ್‌‌,ಪಾರ್ಟಿ ಹಾಲ್‌ನಲ್ಲಿ ಜನರಿಗೆ ಮತ್ತಷ್ಟು ಸಂತೋಷ ನೀಡಲು ಈ ಸೆಲ್ಫಿಕನ್ನಡಿಯನ್ನು ತಯಾರಿಸಿದ್ದೇವೆ ಎಂದು ಕಂಪೆನಿ ಹೇಳಿದೆ.

ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌.

<center><iframe width="100%" height="360" src="//www.youtube.com/embed/DuxFFDPN_EQ?feature=player_embedded" frameborder="0" allowfullscreen></iframe></center>

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot