Home
ಸುದ್ದಿಜಾಲ

Samsung: ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್‌ಫೋನ್‌ 50% ಡಿಸ್ಕೌಂಟ್‌ನಲ್ಲಿ ಲಭ್ಯ! ಅತ್ಯಾಕರ್ಷಕ ಕ್ಯಾಮೆರಾ!

ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ನಲ್ಲಿ ರಿಯಾಯಿತಿಗಳ ಸುರಿಮಳೆ ಅಗುತ್ತಿದೆ. ವಿವಿಧ ಜನಪ್ರಿಯ ಬ್ರ್ಯಾಂಡ್‌ನ ಸ್ಮಾರ್ಟ್‌ಫೋನ್‌ಗಳ ಮೇಲೆ ಕಂಡು ಕೇಳರಿಯದ ರೀತಿಯ ಡಿಸ್ಕೌಂಟ್‌ ನೀಡಲಾಗುತ್ತಿದೆ. ಇದರಲ್ಲಿ ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್‌ಗಳು ಸೇರಿರುವುದು ಅಚ್ಚರಿಯಾಗಿದೆ. ಅದರಲ್ಲೂ ಸ್ಯಾಮ್‌ಸಂಗ್‌ನ ಈ ಸ್ಮಾರ್ಟ್‌ಫೋನ್‌ ಮೇಲೆ ಬರೋಬ್ಬರಿ 50% ಡಿಸ್ಕೌಂಟ್‌ ನೀಡುತ್ತಿರುವುದು ಗ್ರಾಹಕರಿಗೆ ಅಚ್ಚರಿ ಮೂಡಿಸಿದೆ.

ಹೌದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ M04 ಸ್ಮಾರ್ಟ್‌ಫೋನ್‌ಗೆ (Samsung Galaxy M04)ಅಮೆಜಾನ್‌ ತಾಣದಲ್ಲಿ 50% ಡಿಸ್ಕೌಂಟ್‌ ಘೋಷಿಸಲಾಗಿದೆ. ಈ ಮೂಲಕ ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ ಸಿಕ್ಕಾಪಟ್ಟೆ ಸೌಂಡ್‌ ಮಾಡುತ್ತಿದೆ. ಸಂಕ್ರಾಂತಿಗೆ ಅತಿ ಕಡಿಮೆ ಬೆಲೆಗೆ ಅತ್ಯುತ್ತಮ ಸ್ಮಾರ್ಟ್‌ಫೋನ್‌ ಖರೀದಿಸಬೇಕೆಂದು ಕೊಂಡವರಿಗೆ ಇದು ಬೆಸ್ಟ್‌ ಟೈಂ ಆಗಿದೆ. ಹಾಗಾದ್ರೆ ಅಮೆಜಾನ್‌ ತಾಣದಲ್ಲಿ 50% ಡಿಸ್ಕೌಂಟ್‌ ಪಡೆದ ನಂತರ ಗ್ಯಾಲಕ್ಸಿ M04 ಫೋನ್‌ನ ಬೆಲೆ ಎಷ್ಟಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಸ್ಯಾಮ್‌ಸಂಗ್‌ನ ಈ ಫೋನ್‌ 50% ಡಿಸ್ಕೌಂಟ್‌ನಲ್ಲಿ ಲಭ್ಯ! ಅತ್ಯಾಕರ್ಷಕ ಕ್ಯಾಮೆರಾ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M04 ಡಿಸ್ಕೌಂಟ್‌ ಏನಿದೆ?
ಸ್ಯಾಮ್‌ಸಂಗ್‌ ಗ್ಯಾಲಕ್ಸಿ M04 ಸ್ಮಾರ್ಟ್‌ಫೋನಿನ 4GB RAM ಮತ್ತು 64GB ಸ್ಟೋರೇಜ್‌ ಅಯ್ಕೆಯು ಅಮೆಜಾನ್‌ ತಾಣದಲ್ಲಿ 11,999ರೂ ಬೆಲೆಗೆ ಪಟ್ಟಿ ಮಾಡಲಾಗಿದೆ. ಇದೀಗ 50% ಡಿಸ್ಕೌಂಟ್‌ ಪಡೆದುಕೊಂಡಿರುವುದರಿಂದ ಕೇವಲ 5,999ರೂ ಬೆಲೆಗೆ ಮಾರಾಟವಾಗುತ್ತಿದೆ. ಇದಲ್ಲದೆ ವಿವಿಧ ಬ್ಯಾಂಕ್‌ ಅಫರ್‌ಗಳ ಮೂಲಕ ಸ್ಮಾರ್ಟ್‌ಫೋನ್‌ನ ಬೆಲೆ ಇನ್ನಷ್ಟು ಕಡಿಮೆ ಆಗಲಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M04 ಫೀಚರ್ಸ್‌ ಹೇಗಿದೆ?
ಸ್ಯಾಮ್‌ಸಂಗ್‌ ಗ್ಯಾಲಕ್ಸಿ M04 ಸ್ಮಾರ್ಟ್‌ಫೋನ್‌ 6.5 ಇಂಚಿನ HD+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದಲ್ಲಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದ್ದು, 270 ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ಒಳಗೊಂಡಿದೆ. ಈ ಡಿಸ್‌ಪ್ಲೇಯು ವಾಟರ್‌ ಡ್ರಾಪ್‌ ಶೈಲಿಯ ನಾಚ್‌ ಅನ್ನು ಪಡೆದುಕೊಂಡಿದೆ.

ಸ್ಯಾಮ್‌ಸಂಗ್‌ನ ಈ ಫೋನ್‌ 50% ಡಿಸ್ಕೌಂಟ್‌ನಲ್ಲಿ ಲಭ್ಯ! ಅತ್ಯಾಕರ್ಷಕ ಕ್ಯಾಮೆರಾ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M04 ಪ್ರೊಸೆಸರ್‌ ಯಾವುದು?
ಸ್ಯಾಮ್‌ಸಂಗ್‌ ಗ್ಯಾಲಕ್ಸಿ M04 ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್‌ ಹಿಲಿಯೋ P35 SoC ಪ್ರೊಸೆಸರ್ ವೇಗದೊಂದಿಗೆ ಕಾರ್ಯನಿರ್ವಹಿಸಲಿದೆ. ಇದು ಆಂಡ್ರಾಯ್ಡ್‌ 12 ನಲ್ಲಿ ಒಂದು UI 4.1 ಸ್ಕಿನ್ ಜೊತೆಗೆ ರನ್‌ ಆಗಲಿದೆ. ಹಾಗೆಯೇ 4GB RAM + 64GB ಸ್ಟೋರೇಜ್‌ ಹೊಂದಿದೆ. ಇದರಲ್ಲಿ RAM ಪ್ಲಸ್ ಫೀಚರ್ಸ್‌ ಸಹ ನೀಡಲಾಗಿದ್ದು, RAM ಅನ್ನು 8GB ವರೆಗೆ ವಿಸ್ತರಿಸಬಹುದು. ಇದಲ್ಲದೆ ಮೈಕ್ರೊ SD ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M04 ಕ್ಯಾಮೆರಾ ರಚನೆ
ಸ್ಯಾಮ್‌ಸಂಗ್‌ ಗ್ಯಾಲಕ್ಸಿ M04 ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಪಡೆದುಕೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಮತ್ತು ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ.

ಸ್ಯಾಮ್‌ಸಂಗ್‌ನ ಈ ಫೋನ್‌ 50% ಡಿಸ್ಕೌಂಟ್‌ನಲ್ಲಿ ಲಭ್ಯ! ಅತ್ಯಾಕರ್ಷಕ ಕ್ಯಾಮೆರಾ

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M04 ಬ್ಯಾಟರಿ ಮತ್ತು ಇತರೆ
ಸ್ಯಾಮ್‌ಸಂಗ್‌ ಗ್ಯಾಲಕ್ಸಿ M04 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಬ್ಲೂಟೂತ್‌, ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ ಬೆಂಬಲವನ್ನು ಪಡೆದಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M04 ಕಲರ್‌ ಆಯ್ಕೆ
ಸ್ಯಾಮ್‌ಸಂಗ್‌ ಗ್ಯಾಲಕ್ಸಿ M04 ಸ್ಮಾರ್ಟ್‌ಫೋನ್‌ನ 4GB RAM + 64GB ಸ್ಟೋರೇಜ್‌ ಆಯ್ಕೆಯು 50% ಡಿಸ್ಕೌಂಟ್‌ ಪಡೆದಿದೆ. ಇದು ಲೈಟ್‌ ಗ್ರೀನ್‌ ಕಲರ್‌ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ.

Best Mobiles in India

English summary
This Samsung smartphone is available at 50% discount! Amazing camera!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+