Home
ಸುದ್ದಿಜಾಲ

ಬೆಂಕಿಯಿಂದ ಮೊಬೈಲ್‌ ಚಾರ್ಜ್‌ ಮಾಡಿ

By Ashwath

ಸ್ಮಾರ್ಟ್‌ಫೋನ್‌ ಟ್ಯಾಬ್ಲೆಟ್‌‌ಗಳ ಸಂಖ್ಯೆ ಹೆಚ್ಚಾದಂತೆ ಅದನ್ನು ಚಾರ್ಜ್‌ ಮಾಡುವುದೇ ದೊಡ್ಡ ಸಮಸ್ಯೆಯಾಗಲು ಆರಂಭವಾಗಿದೆ. ವಿದ್ಯುತ್‌ ಇರುವವರೆಗೆ ಇದರ ಬಳಕೆ ಸುಲಭ.ವಿದ್ಯುತ್‌ ಕೈ ಕೊಟ್ಟು ಬ್ಯಾಟರಿ ಖಾಲಿಯಾದರೆ ಇದರ ಕಷ್ಟ ಏನು ಎಂಬುದು ಈ ಪರಿಸ್ಥಿತಿಯನ್ನು ಅನುಭವಿಸಿದವರಿಗೆ ಗೊತ್ತಿರುತ್ತದೆ.

ಆದರೆ ಇನ್ನೂ ಮುಂದೆ ವಿದ್ಯುತ್‌ ಇಲ್ಲದೇ ಮೊಬೈಲ್‌ನ್ನು ಸುಲಭವಾಗಿ ಚಾರ್ಜ್‌ ಮಾಡಬಹುದು. ಅಮೆರಿಕದ ಕಂಪೆನಿಯೊಂದು ಬೆಂಕಿಯಿಂದ ಚಾರ್ಜ್‌ ಆಗುವ ಹೊಸ ಫ್ಲೇಮ್‌ಸ್ಟವರ್‌ (flamestower) ಹೆಸರಿನ ಮೊಬೈಲ್‌ ಚಾರ್ಜರ್‌ನ್ನು ಅಭಿವೃದ್ಧಿ ಪಡಿಸಿದೆ.ಅಭಿವೃದ್ಧಿ ಪಡಿಸಿದ್ದು ಮಾತ್ರವಲ್ಲದೇ ಈ ಚಾರ್ಜರ್‌ನ ಪ್ರಯೋಗದಲ್ಲೂ ಯಶಸ್ವಿಯಾಗಿದೆ.ಹೇಗೆ ಈ ಚಾರ್ಜರ್‌ನಲ್ಲಿ ವಿದ್ಯುತ್‌ ಉತ್ಪಾದನೆಯಾಗುತ್ತದೆ ಎನ್ನುವುದಕ್ಕೆ ಇಲ್ಲಿ ವಿವರ ಮತ್ತು ವಿಡಿಯೋವಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.

ಬೆಂಕಿಯಿಂದ ಮೊಬೈಲ್‌ ಚಾರ್ಜ್‌ ಮಾಡಿ

ಬೆಂಕಿಯಿಂದ ಮೊಬೈಲ್‌ ಚಾರ್ಜ್‌ ಮಾಡಿ


ಅಡುಗೆ ಮಾಡುವ ಸ್ಟೌ,ಕ್ಯಾಂಪ್‌ ಪೈರ್‌ ಅಥವಾ ತುರ್ತು ಸಂದರ್ಭದಲ್ಲಿ ಬಳಸುವ ಕ್ಯಾಂಡಲ್‌ನಿಂದ ಮೊಬೈಲ್‌ನ್ನು ಚಾರ್ಜ್‌ ಮಾಡಬಹುದಾಗಿದೆ

ಬೆಂಕಿಯಿಂದ ಮೊಬೈಲ್‌ ಚಾರ್ಜ್‌ ಮಾಡಿ

ಬೆಂಕಿಯಿಂದ ಮೊಬೈಲ್‌ ಚಾರ್ಜ್‌ ಮಾಡಿ

ನಿಮ್ಮ ಮನೆಯಲ್ಲಿರುವ ಮೊಬೈಲ್‌ ಒಂದು ಗಂಟೆ ಮೂವತ್ತು ನಿಮಿಷದಲ್ಲಿ ಫುಲ್‌ ಚಾರ್ಜ್‌ ಆಗುವುದಾದರೆ ಈ ಫ್ಲೇಮ್‌ಸ್ಟವರ್‌ನಲ್ಲಿ ಅದೇ ಮೊಬೈಲ್‌ ಪೂರ್ಣ‌ ಚಾರ್ಜ್‌ ಆಗಬೇಕಾದರೆ ಮೂರು ಗಂಟೆ ಬೇಕಾಗುತ್ತದೆ.

ಬೆಂಕಿಯಿಂದ ಮೊಬೈಲ್‌ ಚಾರ್ಜ್‌ ಮಾಡಿ

ಬೆಂಕಿಯಿಂದ ಮೊಬೈಲ್‌ ಚಾರ್ಜ್‌ ಮಾಡಿ


ಫ್ಲೇಮ್‌ಸ್ಟವರ್‌ ಚಾರ್ಜ‌ರ್‌ನ ಬ್ಲೇಡ್‌ಗೆ ಬೆಂಕಿ ತಗಲಿದಾಗ ಉಷ್ಣ ವಿದ್ಯುತ್‌‌ ಥರ್ಮಲ್‌ಎಲೆಕ್ಟ್ರಿಕ್‌ ಜನರೇಟರ್‌ (Thermoelectric Generator) ಆಗಿ ಪರಿವರ್ತ‌ನೆಯಾಗುತ್ತದೆ. ಈಗ ಈ ಥರ್ಮಲ್‌ಎಲೆಕ್ಟ್ರಿಕ್‌ ಜನರೇಟರ್‌ ಬ್ಲೇಡ್‌‌ನ ಮೇಲಿರುವ ನೀರಿಗೆ ಸಂಪರ್ಕಿಸುವ ಒಂದು ಭಾಗ ಬಿಸಿಯಾಗುತ್ತದೆ. ಇನ್ನೊಂದು ಭಾಗ ತಂಪಾಗುತ್ತದೆ. ತಾಪಮಾನ ವ್ಯತ್ಯಾಸಕ್ಕೆ ಅನುಗುಣವಾಗಿ ಈ ಚಾರ್ಜರ್‌ ವಿದ್ಯುತ್ ಉತ್ಪಾದಿಸುತ್ತದೆ.

ಬೆಂಕಿಯಿಂದ ಮೊಬೈಲ್‌ ಚಾರ್ಜ್‌ ಮಾಡಿ

ಬೆಂಕಿಯಿಂದ ಮೊಬೈಲ್‌ ಚಾರ್ಜ್‌ ಮಾಡಿ


ಈ ಚಾರ್ಜರ್‌ನಲ್ಲಿ ಯಾವ ಪರಿಸ್ಥಿತಿಯಲ್ಲೂ ಬೇಕಾದರೂ ಚಾರ್ಜ್‌ ಮಾಡಬಹುದು. ಕಡಿಮೆ ಭಾರವನ್ನು ಹೊಂದಿರುವುದರಿಂದ ಹೊರಗೆ ಅಥವಾ ಒಳಗಡೆ ಚಾರ್ಜ್‌ ಮಾಡಬಹುದಾಗಿದೆ.

ಬೆಂಕಿಯಿಂದ ಮೊಬೈಲ್‌ ಚಾರ್ಜ್‌ ಮಾಡಿ

ಬೆಂಕಿಯಿಂದ ಮೊಬೈಲ್‌ ಚಾರ್ಜ್‌ ಮಾಡಿ


ಜನರೇಟರ್‌ನ್ನು ತಂಪಾಗಿಸಲು ನೀರನ್ನು ಇಲ್ಲಿ ಬಳಸಲಾಗಿದೆ.ನೀರು ಬಿಸಿಯಾದಲ್ಲಿ ಒಂದು ಗಂಟೆಗೆ ಒಮ್ಮೆ ನೀರನ್ನು ಬದಲಾಯಿಸಬೇಕಾಗುತ್ತದೆ.

ಬೆಂಕಿಯಿಂದ ಮೊಬೈಲ್‌ ಚಾರ್ಜ್‌ ಮಾಡಿ

ಬೆಂಕಿಯಿಂದ ಮೊಬೈಲ್‌ ಚಾರ್ಜ್‌ ಮಾಡಿ

ಫ್ಲೇಮ್‌ಸ್ಟವರ್‌ 7.5 ಇಂಚು ಉದ್ದ 2.25 ಇಂಚು ಅಗಲವಿದೆ.

ಬೆಂಕಿಯಿಂದ ಮೊಬೈಲ್‌ ಚಾರ್ಜ್‌ ಮಾಡಿ

ವಿಡಿಯೋ ವೀಕ್ಷಿಸಿ

ಮಾಹಿತಿ:www.flamestower.com

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+