Just In
Don't Miss
- News
ಅಮೆರಿಕಾದ ಪತ್ರಕರ್ತನ ಕೊಂದವರಿಗೆ ಪಾಕ್ ನಲ್ಲಿ ಬಿಡುಗಡೆ ಭಾಗ್ಯ!
- Sports
ಐಎಸ್ಎಲ್: ಬೆಂಗಳೂರು ಎಫ್ಸಿ vs ಹೈ್ರಾಬಾದ್ ಎಫ್ಸಿ, Live ಸ್ಕೋರ್
- Automobiles
ಅನಾವರಣವಾಯ್ತು ಪವರ್ಫುಲ್ ಬಿಎಂಡಬ್ಲ್ಯು ಎಂ5 ಸಿಎಸ್ ಕಾರು
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 28ರ ಚಿನ್ನ, ಬೆಳ್ಳಿ ದರ
- Lifestyle
ಶನಿ ಸಂಚಾರ 2021: ನಿಮ್ಮ ರಾಶಿಯ ಮೇಲೆ ವರ್ಷ ಪೂರ್ತಿ ಇರಲಿದೆ ಶನಿಯ ಪ್ರಭಾವ
- Movies
ಸುದೀಪ್ ಪುತ್ರಿಯ ಹಾಡು ವೈರಲ್: ಸಾನ್ವಿಯ ಸುಮಧುರ ಕಂಠಕ್ಕೆ ನಟ ಜೆಕೆ ಫಿದಾ
- Education
KVAFSU Bidar Recruitment 2021: 9 ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಈ ಟೀ ಶರ್ಟ್ ಬೆಲೆ ಕೇಳಿದರೆ ಮೂಗಿನ ಮೇಲೆ ಬೆರಳು ಇಡೋದು ಖಂಡಿತ..!
ಎಲ್ಲರಿಗೂ ಐಫೋನ್ 11ನ್ನು ಖರೀದಿಸಬೇಕು ಎಂಬ ಆಸೆ ಇರುತ್ತೆ. ಇದಕ್ಕಾಗಿ, ಜನ ತಮ್ಮ ಕಿಡ್ನಿಗಳನ್ನು ಮಾರಾಟ ಮಾಡಿರುವ ಉದಾಹರಣೆಗಳು ಕೂಡ ಜಗತ್ತಿನಲ್ಲಿವೆ. ಆದರೆ, ಈಗ ನಾವು ಹೇಳುತ್ತಿರುವ ಸುದ್ದಿ ಬೇರೆಯದ್ದೇ. ಇದನ್ನು ಕೇಳಿದರೆ ನೀವು ಒಂದು ಕ್ಷಣ ಹೌಹಾರುವುದಂತೂ ಖಂಡಿತ. ಹೌದು, ಜನಪ್ರಿಯ ಲೀಗ್ ಆಫ್ ಲೆಜೆಂಡ್ಸ್ ಫ್ಯಾನ್‌ಫೇರ್‌ನಲ್ಲಿ ಲೂಯಿ ವಿಟಾನ್ ಎಂಬಾತ ಗೇಮ್‌ನ ಒಂದು ಪಾತ್ರದಲ್ಲಿ ಟೀಶರ್ಟ್ ಒಂದನ್ನು ರೂಪಿಸಿದ್ದು, ಇದರ ಬೆಲೆ ಬರೋಬ್ಬರಿ 865 ಡಾಲರ್ ಎಂದರೆ ನಂಬಲೇಬೇಕು. ಈ ಸರಳವಾದ ಕಪ್ಪು ಟೀ ಶರ್ಟ್‌ಗೆ ಇಷ್ಟೊಂದು ಬೆಲೆಯಾ ಎಂದು ಯೋಚನೆ ಬಂದಾಗಲೇ, ಟಿ-ಶರ್ಟ್ ಈಗಾಗಲೇ ಔಟ್ ಆಫ್ ಸ್ಟಾಕ್ ಆಗಿದೆ.

ಚಾಂಪಿಯನ್ ಕಿಯಾನಾ
ಕಪ್ಪು ಬಣ್ಣದ ಶಾರ್ಟ್ ಸ್ಲೀವ್ ಟೀ ಶರ್ಟ್ ಮೇಲೆ ಲೀಗ್ ಆಫ್ ಲೆಜೆಂಡ್ಸ್ ಗೇಮ್‌ನ ಚಾಂಪಿಯನ್ ಕಿಯಾನಾ ಅವರ ಫೋಟೋವಿದೆ. ನಿಕೋಲಸ್ ಗೆಸ್ಕ್ವಿಯರ್ ಅವರ ಸೃಷ್ಟಿಗಳಿಂದ ಪ್ರೇರಿತವಾದ ವಿಶೇಷ "ಪ್ರೆಸ್ಟಿಜ್ ಸ್ಕಿನ್"ನಲ್ಲಿ ಮುದ್ರಿಸಲಾಗಿದೆ ಎಂದು ಬ್ರಾಂಡ್ ವಿವರಿಸುತ್ತದೆ.

ಐಫೋನ್ ಬೆಲೆಗಿಂತಲೂ ಹೆಚ್ಚು
ಐಫೋನ್ 11ನ ಆರಂಭಿಕ ಬೆಲೆ 699 ಡಾಲರ್ ಆಗಿದ್ದು, ಟಿ-ಶರ್ಟ್ ಬೆಲೆ 865 ಡಾಲರ್ ಆಗಿದೆ. ಕೆಲವು ಲೀಗ್ ಆಫ್ ಲೆಜೆಂಡ್ಸ್ ಅಭಿಮಾನಿಗಳು ಸಾಕಷ್ಟು ಹುಚ್ಚರಾಗಿದ್ದು, 865 ಡಾಲರ್ ಪಾವತಿ ಮಾಡುತ್ತಿದ್ದಾರೆ.

ಇತರೆ ಉತ್ಪನ್ನಗಳಿಗೂ ದುಬಾರಿ ದರ
ಬ್ರ್ಯಾಂಡೆಡ್ ವಿನ್ಯಾಸಿತ ಚರ್ಮ, ಟ್ರೋಫಿ ಕೇಸ್ ಜೊತೆಗೆ ಜಾಕೆಟ್ಸ್ ಮತ್ತು ಜೋಗರ್‌ಗಳಂತಹ ಇತರ ದುಬಾರಿ ಬಟ್ಟೆಗಳು ಕ್ರಮವಾಗಿ 2000 ಮತ್ತು 3000 ಡಾಲರ್‌ಗಿಂತ ಹೆಚ್ಚಾಗಿದ್ದು, ಕುತೂಹಲಕಾರಿ ಅಂಶ ಏನೇಂದರೆ ಜೋಗರ್‌ಗಳು ಮತ್ತು ಜಾಕೆಟ್‌ಗಳಿಗೂ ಹಾಗೂ ಗೇಮ್‌ಗೂ ಹೆಚ್ಚಿನ ಸಂಬಂಧವಿಲ್ಲ.

ಮುಂದಿನ ವರ್ಷ ಸ್ಮಾರ್ಟ್‌ಫೋನ್‌ಗೆ
ರಿಯೋಟ್ ಗೇಮ್ಸ್‌ನಿಂದ ಅಭಿವೃದ್ಧಿಯಾಗಿರುವ ಲೀಗ್ ಆಫ್ ಲೆಜೆಂಡ್ಸ್ ಗೇಮ್ ಮುಂದಿನ ವರ್ಷ ಹತ್ತನೇ ವಾರ್ಷಿಕೋತ್ಸವ ಆಚರಿಸಿಕೊಳ್ಳಲಿದೆ. ಇದಕ್ಕಾಗಿ ಐಒಎಸ್ ಮತ್ತು ಆಂಡ್ರಾಯ್ಡ್ ಎರಡರಲ್ಲೂ ಲೀಗ್ ಆಫ್ ಲೆಜೆಂಡ್ಸ್ ಕಾಣಿಸಿಕೊಳ್ಳುವುದು ದೃಢಪಡಿಸಿದೆ. ಇದನ್ನು ‘ಲೀಗ್ ಆಫ್ ಲೆಜೆಂಡ್ಸ್: ವೈಲ್ಡ್ ರಿಫ್ಟ್' ಎಂದು ಹೆಸರಿಸಲಾಗುತ್ತದೆ.

ಮಲ್ಟಿಪ್ಲೇಯರ್ ಆನ್‌ಲೈನ್ ಬ್ಯಾಟಲ್ ಅರೆನಾ
ಮಲ್ಟಿಪ್ಲೇಯರ್ ಆನ್‌ಲೈನ್ ಬ್ಯಾಟಲ್ ಅರೆನಾ (ಮೊಬಾ) ಆಟದ ಜೊತೆ ಹೊಸ ಆಟ ಮುಖ್ಯ ಆಟಕ್ಕೆ ಹೋಲುತ್ತದೆ.ಫ್ರ್ಯಾಂಚೈಸ್ ಅನ್ನು ಮೊಬೈಲ್ ಪ್ಲಾಟ್‌ಫಾರ್ಮ್‌ಗೆ ಪೋರ್ಟ್ ಮಾಡಲಾಗುತ್ತಿರುವುದರಿಂದ, ಗೇಮ್‌ಪ್ಲೇಗೆ ಕೆಲವು ಟ್ವೀಕ್‌ಗಳು ಸಹ ಬರಲಿವೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190