ಈ ಗ್ರಾಮದ ಯುವಕರು ಪ್ರತಿದಿನ 2/3 ಲಕ್ಷ ವಂಚಿಸದೆ ಮನೆಗೆ ಹೋಗಲ್ವಂತೆ!!

|

ಅಮಾಯಕರಿಗೆ ಕರೆ ಮಾಡಿ ವಂಚನೆ ಮಾಡುವುದು ಈ ಊರಿನ ಬಹುತೇಕರ ಉದ್ಯೋಗವಾಗಿದ್ದು, ಅಲ್ಲಿನ ಯುವಕರು ಪ್ರತಿ ದಿನ ಕನಿಷ್ಠ 2ರಿಂದ 3 ಲಕ್ಷ ಇಲ್ಲದೆ ಮನೆಗೆ ಹೋಗುವುದಿಲ್ಲ ಎಂದು ಹೇಳಿದರೆ ನಿಮಗೆ ಆಶ್ಚರ್ಯವಾಗಬಹುದು. ಆದರೆ, ಇಂತಹದೊಂದು ಊರು ಭಾರತದಲ್ಲಿದೆ. ವಿಶ್ವ ಸೈಬರ್ ಅಪರಾಧಗಳಿಗೆ ನೈಜೀರಿಯ ವಿಶ್ವದ ರಾಜಧಾನಿಯಾಗಿದ್ದರೆ, ಆ ಒಂದು ಊರು ಭಾರತದ ಸೈಬರ್ ಅಪರಾಧಗಳ ರಾಜಧಾನಿ ಎಂದು ಸೈಬರ್ ಕ್ರೈಂ ವಿಭಾಗದ ಡಿವೈಎಸ್ಪಿ ಶರತ್ ಅವರು ಹೇಳಿದ್ದಾರೆ.

ಹೌದು, ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಮಹಿಳಾ ಸುರಕ್ಷತೆ ಕುರಿತು ಏರ್ಪಡಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಸೈಬರ್ ಸೆಕ್ಯೂರಿಟಿ ವಿಷಯ ಕುರಿತು ಮಾತನಾಡಿದ ಅವರು ಜಾರ್ಖಾಂಡ್ ರಾಜ್ಯದಲ್ಲಿರುವ ಜಮ್ತಾರ ಎಂಬ ಅತ್ಯಂತ ಕುಗ್ರಾಮ ಭಾರತದ ಸೈಬರ್ ಅಪರಾಧಗಳ ರಾಜಧಾನಿಯಾಗಿ ಬದಲಾವಣೆಯಾಗಿದೆ. ಆ ಊರಿನ ಬಹುತೇಕರ ಉದ್ಯೋಗ ವಂಚಿಸುವುದಾಗಿದ್ದು, ಅಲ್ಲಿನ ಯುವಕರು ಪ್ರತಿ ದಿನ ಕನಿಷ್ಠ 2ರಿಂದ 3 ಲಕ್ಷ ಇಲ್ಲದೆ ಮನೆಗೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.

ಈ ಗ್ರಾಮದ ಯುವಕರು ಪ್ರತಿದಿನ 2/3 ಲಕ್ಷ ವಂಚಿಸದೆ ಮನೆಗೆ ಹೋಗಲ್ವಂತೆ!!

ರಷ್ಯಾದಲ್ಲಿ ಕುಳಿತ ವ್ಯಕ್ತಿಯೋರ್ವ ಇಲ್ಲಿನ ದತ್ತಾಂಶ ಆಧರಿಸಿ ನಕಲಿ ಎಟಿಎಂ ಕಾರ್ಡ್‍ಗಳನ್ನು ಸೃಷ್ಟಿಸಿ ನೂರಾರು ಕೋಟಿ ಲಪಟಾಯಿಸಿದ್ದರು. ಈ ರೀತಿಯ ಅಪರಾಧಗಳು ದಿನಕ್ಕೆ ನೂರಾರು ನಡೆಯುತ್ತಿವೆ. ಜನ ಸಾಮಾನ್ಯರು ತಮಗೆ ಅರಿವಿಲ್ಲದಂತೆ ವಂಚನೆಗೊಳಗಾಗುತ್ತಾರೆ. ಹಾಗಾಗಿ, ಕೆಲ ವಿಷಯಗಳಲ್ಲಿ ಜನರು ಎಚ್ಚರವಾಗಿರಬೇಕು ಎಂದು ಹೇಳಿದ್ದಾರೆ. ಹಾಗಾದರೆ, ಸಾರ್ವಜನಿಕರಿಗೆ ಡಿವೈಎಸ್ಪಿ ಶರತ್ ಅವರು ಹೇಳಿದ ಎಚ್ಚರಿಕೆಗಳು ಯಾವುವು ಎಂಬುದನ್ನು ಮುಂದೆ ಓದಿರಿ.

ಒಟಿಪಿ ಸಂಖ್ಯೆ ಹೇಳಲೇಬೇಡಿ!

ಒಟಿಪಿ ಸಂಖ್ಯೆ ಹೇಳಲೇಬೇಡಿ!

ಸಾಮಾನ್ಯ ಜನರಿಗೆ ದಿನಕ್ಕೊಮ್ಮೆಯಾದರೂ ವೈಯಕ್ತಿಕ ಖಾತೆಗಳ ಒಟಿಪಿ ಹೇಳುವಂತೆ ಮತ್ತು ಎಟಿಎಂ ಕಾರ್ಡ್ ಬಗ್ಗೆ ಮಾಹಿತಿ ಹೇಳುವಂತೆ ಫೋನ್ ಕರೆಗಳು ಬರುತ್ತವೆ. ಯಾವುದೇ ಬ್ಯಾಂಕುಗಳು ಈ ರೀತಿಯ ಮಾಹಿತಿ ಕೇಳುವುದಿಲ್ಲ. ಕರೆ ಮಾಡಿದ ವಂಚಕರು ಅನಗತ್ಯವಾದ ಭಯ ಹುಟ್ಟಿಸಿ ಒಟಿಪಿ ಸಂಖ್ಯೆ ಹೇಳುವಂತೆ ಒತ್ತಾಯಿಸುತ್ತಾರೆ. ಸರಿಯಾದ ಮಾಹಿತಿ ಇಲ್ಲದವರು ಒಟಿಪಿಹೇಳಿದಾಕ್ಷಣ ಹಣ ಲಪಟಾಯಿಸುವುದು ಸೇರಿದಂತೆ ಹಲವಾರು ವಂಚನೆಗಳನ್ನು ಮಾಡುತ್ತಾರೆ.ಈ ಬಗ್ಗೆ ಎಚ್ಚರವಾಗಿರಿ ಎಂದು ಹೇಳಿದರು.

ಆನ್‌ಲೈನ್‍ನಲ್ಲಿ ಖಾಸಗಿ ಚಟುವಟಿಕೆ!

ಆನ್‌ಲೈನ್‍ನಲ್ಲಿ ಖಾಸಗಿ ಚಟುವಟಿಕೆ!

ಇನ್ನೂ ಕೆಲವರು ಕ್ಯಾಮೆರಾ ಇರುವ ಲ್ಯಾಪ್‌ಟಾಪ್‍ಅನ್ನು ಆನ್‌ಲೈನ್‍ನಲ್ಲಿಟ್ಟು ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿರುತ್ತಾರೆ. ಆ ಸಂದರ್ಭದಲ್ಲಿ ಹ್ಯಾಕರ್‍ಗಳು ನಿಮಗೇ ಗೊತ್ತಿಲ್ಲದಂತೆ ನಿಮ್ಮ ಲ್ಯಾಪ್‌ಟಾಪ್‌ಗೆ ನುಗ್ಗಿ ಅಲ್ಲಿ ಖಾಸಗಿಯಾಗಿ ನಡೆಯುವ ನಿಮ್ಮ ಎಲ್ಲಾ ಚಟುವಟಿಕೆಗಳ ಚಲನವಲನಗಳನ್ನು ರೆಕಾರ್ಡ್ ಮಾಡಿಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಮೊಬೈಲ್ ಮತ್ತು ಲ್ಯಾಪ್‌ಟಾಪ್‍ಗಳನ್ನು ಆನ್‌ಲೈನ್‍ನಲ್ಲಿಟ್ಟು ಖಾಸಗಿ ಚಟುವಟಿಕೆಗಳಲ್ಲಿ ತೊಡಗಬೇಡಿ ಎಂದು ಶರತ್ ಎಚ್ಚರಿಸಿದರು.

ಅಶ್ಲೀಲ ವೆಬ್‌ಸೈಟ್‌ಗಳು!

ಅಶ್ಲೀಲ ವೆಬ್‌ಸೈಟ್‌ಗಳು!

ದೇಶದಲ್ಲಿ ಆನ್‌ಲೈನ್ ಬಳಕೆದಾರರ ಸಂಖ್ಯೆ ಈಗ ತುಂಬಾ ಹೆಚ್ಚಾಗಿದೆ. ಅದರಲ್ಲೂ ಸಾಮಾನ್ಯ ವೆಬ್‌ಸೈಟ್‌ಗಳಿಗಿಂತಲೂ ಅಶ್ಲೀಲ ವೆಬ್‌ಸೈಟ್‌ಗಳ ವೀಕ್ಷಣೆ ಹೆಚ್ಚಾಗುತ್ತಿದೆ. ಇದರ ಬಗ್ಗೆ ಸಾರ್ವಜನಿಕರು ಸ್ವಯಂ ನಿಯಂತ್ರಣ ಇರಿಸಿಕೊಳ್ಳುವುದು ಸೂಕ್ತ. ಅಶ್ಲೀಲ ವೆಬ್‌ಸೈಟ್‌ಗಳ ವೀಕ್ಷಣೆಯಿಂದ ಸೈಬರ್ ವಂಚನೆ ಗಾಳಕ್ಕೆ ಬಹುಬೇಗ ಬೀಳಬಹುದು. ಅಲ್ಲಿ ವಂಚನೆಯ ಮಹಾ ಜಾಲವೇ ಇದೆ ಎಂದು ಹೇಳಿದರು.

ಆನ್‌ಲೈನ್ ವಹಿವಾಟು

ಆನ್‌ಲೈನ್ ವಹಿವಾಟು

ಆನ್‍ಲೈನ್ ವಹಿವಾಟು ಬಹುತೇಕ ಅಸುರಕ್ಷಿತವಾಗಿರುವುದರಿಂದ ಸೈಬರ್ ಅಪರಾಧಗಳು ದಿನಕ್ಕೆ ನೂರಾರು ನಡೆಯುತ್ತಿವೆ. ಜನ ಸಾಮಾನ್ಯರು ತಮಗೆ ಅರಿವಿಲ್ಲದಂತೆ ಇಲ್ಲಿ ವಂಚನೆಗೊಳಗಾಗುತ್ತಾರೆ. ಹಾಗಾಗಿ,ಪ್ರತಿ ಕ್ಷಣ ಆನ್‌ಲೈನ್ ವಹಿವಾಟು ನಡೆಸುವವರು ಎಚ್ಚರಿಕೆಯಿಂದ ಇರಬೇಕು. ಇತ್ತೀಚಿಗೆ ಚಿಪ್ ಆಧಾರಿತ ಎಟಿಎಂಗಳನ್ನು ನಿರ್ಮಿಸಲಾಗಿದೆ. ಇದುದ್ದರಲ್ಲಿ ಅವು ಸ್ವಲ್ಪ ಸುಕ್ಷಿತವಾಗಿದ್ದು, ಗ್ರಾಹಕರು ಹೆಚ್ಚಾಗಿ ಅವುಗಳನ್ನು ಬಳಸುವುದು ಸೂಕ್ತ ಎಂದು ಹೇಳಿದರು.

ಎಚ್ಚರ ತಪ್ಪಿದರೆ ಅಪಾಯ!

ಎಚ್ಚರ ತಪ್ಪಿದರೆ ಅಪಾಯ!

ಈ ಹಿಂದೆ ನೈಜೀರಿಯಾ ಪ್ರಜೆಗಳು ಬೆಂಗಳೂರಿನ ಪ್ರತಿಷ್ಠಿತ ರಸ್ತೆಗಳಲ್ಲಿ ಸಂಚರಿಸಿ ಅಲ್ಲಿರುವ ಎಟಿಎಂಗಳಿಗೆ ಎಟಿಎಂ ಕಾರ್ಡ್‍ಗಳ ದತ್ತಾಂಶ ಸಂಗ್ರಹಿಸುವ ಸಲಕರಣೆಗಳನ್ನು ಅಳವಡಿಸಿದ್ದರು. ಸಂಜೆ ಆ ಸಲಕರಣೆಗಳನ್ನು ವಾಪಸ್ ತೆಗೆದುಕೊಂಡು ಎಲ್ಲಾ ದತ್ತಾಂಶವನ್ನು ರಷ್ಯಾದ ವ್ಯಕ್ತಿಗೆ ಇ- ಮೇಲ್ ಮೂಲಕ ಕಳುಹಿಸಿದ್ದರು.ರಷ್ಯಾದಲ್ಲಿ ಕುಳಿತ ವ್ಯಕ್ತಿ ಈ ದತ್ತಾಂಶ ಆಧರಿಸಿ ನಕಲಿ ಎಟಿಎಂ ಕಾರ್ಡ್‍ಗಳನ್ನು ಸೃಷ್ಟಿಸಿ ನೂರಾರು ಕೋಟಿ ಲಪಟಾಯಿಸಿದ್ದರು. ಇಂತಹುಗಳ ಬಗ್ಗೆ ಎಚ್ಚರ ಎಂದು ಹೇಳಿದರು.

Most Read Articles
Best Mobiles in India

English summary
In a major revelation, Jamtara in Jharkhand has been identified as a newcyber hub for crime. More than fifty per cent of cyber. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more